Hyundai India apology ಬಾಯ್‌ಕಾಟ್ ಟ್ರೆಂಡಿಂಗ್ ಬೆನ್ನಲ್ಲೇ ಕ್ಷಮೆ ಕೇಳಿದ ಹ್ಯುಂಡೈ ಇಂಡಿಯಾ!

By Suvarna NewsFirst Published Feb 6, 2022, 11:30 PM IST
Highlights
  • ಕಾಶ್ಮೀರ ಪ್ರತ್ಯೇಕತೆ ಬೆಂಬಲಿಸಿದ ಕಾರಣಕ್ಕೆ ಬಾಯ್‌ಕಾಟ್ ಹ್ಯುಂಡೈ ಟ್ರೆಂಡಿಂಗ್
  • ಟೀಕೆ, ಆಕ್ರೋಶ ಹೆಚ್ಚಾದಂತೆ ಸ್ಪಷ್ಟನೆ ನೀಡಿದ ಹ್ಯುಂಡೈ ಇಂಡಿಯಾ
  • ಭಾರತ ಎರಡನೇ ತವರು, ರಾಷ್ಟ್ರೀಯತೆಯನ್ನು ಗೌರವಿಸುತ್ತದೆ ಎಂದ ಹುಂಡ್ಯೈ
     

ನವದೆಹಲಿ(ಫೆ.06): ಕಾಶ್ಮೀರ ಪ್ರತ್ಯೇತಕತೆ ವಿಚಾರವಾಗಿ ಹೊತ್ತಿಕೊಂಡ ಟ್ವಿಟರ್ ಬೆಂಕಿಯಿಂದ ಇದೀಗ ಹ್ಯುಂಡೈ ಇಂಡಿಯಾ ಕ್ಷಮೆ(Hyundai India apology letter) ಕೇಳಿದೆ. ಪಾಕಿಸ್ತಾನ(Pakistan) ಹ್ಯುಂಡೈ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಶ್ಮೀರ ಪ್ರತ್ಯೇಕಿಸುವ(Kashmir) ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಲಾಗಿತ್ತು. ಈ ಕುರಿತು ಹ್ಯುಂಡೈ ಇಂಡಿಯಾ ನಿಲುವ ಕೇಳಿದ ಭಾರತೀಯರ ಖಾತೆಗಳನ್ನು ಟ್ವಿಟರ್ ಬ್ಲಾಕ್ ಮಾಡಿತ್ತು. ಹೀಗಾಗಿ ಹ್ಯುಂಡೈ ಕಾರುಗಳನ್ನು ಬಹಿಷ್ಕರಿಸಿ(Boycott Hyundai) ಎಂಬ ಅಭಿಯಾನ ಇಂದು ಟ್ವಿಟರ್‌ನಲ್ಲಿ ಭಾರಿ ಟ್ರೆಂಡ್ ಆಗಿತ್ತು. ಈ ಟ್ರೆಂಡಿಂಗ್ ಗಂಭೀರತೆ ಅರಿತ ಹ್ಯುಂಡೈ ಇಂಡಿಯಾ ಇದೀಗ  ಕ್ಷಮೆ ಕೇಳಿದೆ.

ಟ್ವಿಟರ್ ಮೂಲಕ ಹ್ಯುಂಡೈ ಇಂಡಿಯಾ ಕ್ಷಮೆ ಕೇಳಿದೆ.  ಹ್ಯುಂಡೈ ಮೋಟಾರ್ ಕಳೆದ 25 ವರ್ಷಗಳಿಂದ ಭಾರತದಲ್ಲಿ(India) ಕಾರ್ಯನಿರ್ವಹಿಸುತ್ತಿದೆ. ನಾವು ರಾಷ್ಟ್ರೀಯತೆಯನ್ನು ಗೌರವಿಸುವ(respecting nationalism) ಬಲವಾದ ನೀತಿ ಹೊಂದಿದ್ದೇವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಪೋಸ್ಟ್ ಹಾಗೂ ಚಟುವಟಿಕೆ ನಮ್ಮ ಬದ್ಧತೆಗೆ ವಿರುದ್ಧವಾಗಿದೆ. ಹ್ಯುಂಡೈ ಕಂಪನಿಗೆ ಭಾರತ ಎರಡನೇ ತವರು ನೆರವಾಗಿದೆ. ಹೀಗಾಗಿ ಸೂಕ್ಷ್ಮವಲಯದ ಕುರಿತ ಇಲ್ಲ ಸಲ್ಲದ ಮಾತಿಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದ್ದೇವೆ. ಅಂತಹ ಯಾವುದೇ ಮಾತು, ಹೇಳಿಕೆಯನ್ನು ಹ್ಯುಂಡೈ ಇಂಡಿಯಾ ಬಲವಾಗಿ ಖಂಡಿಸುತ್ತದೆ. ನಮ್ಮ ಬದ್ಧತೆಯ ಪ್ರಕಾರ ಭಾರತ ಹಾಗೂ ಭಾರತೀಯರ ಏಳಿಗೆಗಾಗಿ ಹ್ಯುಂಡೈ ಇಂಡಿಯಾ ಶ್ರಮ ಮುಂದುವರಿಸಲಿದೆ ಎಂದು ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದೆ. 

Latest Videos

#BoycottHyundai ಕಾಶ್ಮೀರ ಪ್ರತ್ಯೇಕಿಸುವ ಕುರಿತು ಹ್ಯುಂಡೈ ಟ್ವೀಟ್, ಪ್ರಶ್ನಿಸಿದ ಭಾರತೀಯರ ಖಾತೆ ಬ್ಲಾಕ್!

ಭಾರತದ ಸೌರ್ವಭೌಮತೆಗೆ ಧಕ್ಕೆ ತರುವ, ಭಾರತದ ರಾಷ್ಟ್ರೀಯತೆ, ಐಕ್ಯತೆ, ಇಲ್ಲಿನ ಭಾಷೆ, ಸಂಸ್ಕೃತಿಗೆ ಧಕ್ಕೆ ತರುವ ಯಾವುದೇ ವಿಚಾರವನ್ನು ಭಾರತೀಯರು ಸಹಿಸುವುದಿಲ್ಲ ಅನ್ನೋದು ಮತ್ತೆ ಸಾಬೀತಾಗಿದೆ.  ಬಾಯ್‌ಕಾಟ್ ಚೀನಾ ಉತ್ಪನ್ನ ಯಾವ ಮಟ್ಟಿಗೆ ಭಾರತದಲ್ಲಿ ಸಂಚಲನ ಮೂಡಿಸಿತ್ತು ಅನ್ನೋ ಅರಿವು ಹಾಗೂ ಚೀನಾಗಾದ ನಷ್ಟದ ಕುರಿತು ಬಹುತೇಕ ಎಲ್ಲಾ ಕಂಪನಿಗಳಿಗೆ ತಿಳಿದೆ. ಹೀಗಾಗಿ ಹ್ಯುಂಡೈ ಮೇಲಿನ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಹ್ಯುಂಡೈ  ಕ್ಷಮೆ ಕೇಳಿ ಪ್ರಕರಣ ತಣ್ಣಗಾಗಿಸಿದೆ

 

Official Statement from Hyundai Motor India Ltd. pic.twitter.com/dDsdFXbaOd

— Hyundai India (@HyundaiIndia)

ಹ್ಯುಂಡೈ ಕ್ಷಮೆ ಕೇಳಲು ಕಾರಣವೇನು? ಏನಿದು ಪ್ರಕರಣ?
ಭಾರತದಲ್ಲಿ ದಿಢೀರ್ ಹ್ಯುಂಡೈ ಕಾರು ಬಹಿಷ್ಕರಿಸಿ ಅಭಿಯಾನ ಟ್ವಿಟರ್‌ನಲ್ಲಿ ಭಾರಿ ಟ್ರೆಂಡ್ ಆಗಿದೆ. ಹ್ಯುಂಡೈ ವಿರುದ್ಧ ಭಾರತೀಯರು ಆಕ್ರೋಶ, ಟೀಕೆಗಳನ್ನು ವ್ಯಕ್ತಪಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲು ಆರಂಭಿಸಿದ್ದಾರೆ. ಇದಕ್ಕೆ  ಕಾರಣ ಕಾಶ್ಮೀರ ಪ್ರತ್ಯೇಕತೆಯ ಕೂಗು ಹಾಗೂ ಹ್ಯುಂಡೈ ನಿಲುವಾಗಿತ್ತು. 

'Boycott Amazon': ತ್ರಿವರ್ಣ ಧ್ವಜಕ್ಕೆ ಅವಮಾನ : ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೆಝಾನ್!

ಫೆಬ್ರವರಿ 5ನೇ ತಾರೀಖನ್ನು ಪಾಕಿಸ್ತಾನ ಕಾಶ್ಮೀರ ದಿನ(kashmir solidarity day) ಎಂದು ಆಚರಿಸುತ್ತದೆ. ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದೆ, ಇದರ ವಿಮೋಚನೆ ಅಗತ್ಯ. ಇದಕ್ಕಾಗಿ ಪಾಕಿಸ್ತಾನ ಕಾಶ್ಮೀರ ದಿನ ಎಂದು ಆಚರಿಸಿ ಭಾರತವನ್ನು ಕೆಣಕುವ ಹಾಗೂ ಎಚ್ಚರಿಸುವ ಕೆಲಸ ಪ್ರತಿ ವರ್ಷ ಮಾಡುತ್ತಿದೆ. ಇದಕ್ಕೆ ತುಪ್ಪ ಸುರಿಯಲು ಪಾಕಿಸ್ತಾನ ಹ್ಯುಂಡೈ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕಿಸುವ ಹಾಗೂ ಭಾರತದ ವಿರುದ್ಧದ ಹೋರಾಟ ಬೆಂಬಿಲಿಸಿ ಟ್ವೀಟ್ ಮಾಡಿದೆ. ಕಾಶ್ಮೀರ ಪ್ರತ್ಯೇಕಿಸುವಲ್ಲಿ ಹೋರಾಟ ಮಾಡಿದ ನಮ್ಮ ಕಾಶ್ಮೀರಿ ಸಹೋದರರನ್ನು ಸ್ಮರಿಸೋಣ, ಮುಂದಿನ ಹೋರಾಟವನ್ನು ಬೆಂಬಲಿಸೋಣ ಎಂದು ಟ್ವೀಟ್ ಮಾಡಿದೆ. ಈ ಟ್ವೀಟ್ ಜೊತೆಗೆ ದಾಲ್ ಸರೋವರದ ಫೋಟೋ ಹಾಕಿ ಕಾಶ್ಮೀರಕ್ಕೆ ಮುಳ್ಳಿನ ಬೇಲಿ ಹಾಕಿದ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಈ ಮೂಲಕ ಕಾಶ್ಮೀರವನ್ನು ಮುಕ್ತಿಗೊಳಿಸೋಣ ಎಂದು ಹ್ಯುಂಡೈ ಪಾಕಿಸ್ತಾನ ಟ್ವೀಟ್ ಮಾಡಿದೆ.

ಹೊಸ ಜಾಹೀರಾತಿನಲ್ಲಿ ಹಿಂದೂ, ಮುಸ್ಲಿಂ ದಂಪತಿ: #BoycottTanishq ಈಗ ಟಾಪ್ ಟ್ರೆಂಡಿಂಗ್!

ಈ ಟ್ವೀಟ್ ಗಮನಿಸಿದ ಭಾರತೀಯರು ತಕ್ಷಣ ಹ್ಯುಂಡೈ ಗ್ಲೋಬಲ್ ಹಾಗೂ ಹ್ಯುಂಡೈ ಇಂಡಿಯಾ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಇದೇ ವೇಳೆ ಟ್ವೀಟ್ ಕುರಿತು ಹ್ಯುಂಡೈ ಇಂಡಿಯಾ ನಿಲುವೇನು? ಪಾಕ್ ಟ್ವೀಟ್ ಖಂಡಿಸುತ್ತೀರಾ ಎಂದು ಹಲವರು ಪ್ರಶ್ನಿಸಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡಿದ ಹ್ಯುಂಡೈ ಇಂಡಿಯಾ ಪ್ರಶ್ನಿಸಿದ ನೆಟ್ಟಿಗರ ಖಾತೆಯನ್ನೇ ಬ್ಲಾಕ್ ಮಾಡಿದೆ. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಹ್ಯುಂಡೈ ಕಾರು ಬಹಿಷ್ಕರಿಸಿ ಅಭಿಯಾನ ಆರಂಭಗೊಂಡಿತು.

ದಿನವಿಡಿ ಬಾಯ್‌ಕಾಟ್ ಹ್ಯುಂಡೈ ಭಾರಿ ಸಂಚಲನ ಮೂಡಿಸಿತ್ತು. ಟ್ವಿಟರ್ ಟ್ರೆಂಡಿಂಗ್‌ ಪಟ್ಟಿಯಲ್ಲಿ ಟಾಪರ್ ಆಗಿ ಕಾಣಿಸಿಕೊಂಡ ಬಾಯ್‌ಕಾಟ್ ಹ್ಯುಂಡೈ ಅಭಿಯಾನಕ್ಕೆ ಹ್ಯುಂಡೈ ಇಂಡಿಯಾ ಬೆಚ್ಚಿ ಬಿದ್ದಿತು. ಈ ಅಭಿಯಾನದ ಪರಿಣಾಮ ಹಾಗೂ ಗಂಭೀರತೆ ಅರಿತ ಹ್ಯುಂಡೈ ಇದೀಗ ಕ್ಷಮೆ ಕೇಳಿದೆ.
 

click me!