ಮುಂಬೈ(ಫೆ.05): ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ(Mukesh Amabani) ಬಳಿ ಹಲವು ಐಷಾರಾಮಿ ಕಾರುಗಳಿವೆ(Luxury Cars). ಅಂಬಾನಿ ಕಾರು ಸಂಗ್ರಹ ನೋಡಿದ್ದ ಮುಂಬೈ ಇಂಡಿಯನ್ಸ್(Mumbai Indians) ಆಟಗಾರರೇ ದಂಗಾಗಿ ಹೋಗಿದ್ದರು. ಅಷ್ಟು ಐಷಾರಾಮಿ ಕಾರುಗಳು ಅಂಬಾನಿ ಬಳಿ ಇದೆ. ಇತ್ತೀಚೆಗೆ ಕ್ಯಾಡಿಲಾಕ್ ಎಸ್ಕಲೇಡ್(cadillac escalade) ಕಾರು ಖರೀದಿಸಿದ್ದ ಮುಕೇಶ್ ಅಂಬಾನಿ ಇದೀಗ ವಿಶ್ವದ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಕಾರು ರೋಲ್ಸ್ ರಾಯ್ಸ್ ಕಲ್ಲಿನಾನ್(Rolls Royce Cullinan)ಕಾರನ್ನು ಖರೀದಿಸಿದ್ದಾರೆ.
ಮುಕೇಶ್ ಅಂಬಾನಿ ಖರೀದಿಸಿದ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು RIL ಕಂಪನಿ ಅಡಿ ರಿಜಿಸ್ಟ್ರೇಶನ್ ಮಾಡಲಾಗಿದೆ. ಜನವರಿ 31 ರಂದು ನೂತನ ಕಾರು ದಕ್ಷಿಣ ಮುಂಬೈನ RTO ಕಚೇರಿಯಲ್ಲಿ ರಿಜಿಸ್ಟ್ರೇಶನ್ ಮಾಡಲಾಗಿದೆ. ಅಂಬಾನಿ ಖರೀದಿಸಿದ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನ ಬೆಲೆ 13.14 ಕೋಟಿ(most expensive car) ರೂಪಾಯಿ.
undefined
Mukesh Ambani luxury Car: ಅಪರೂಪದ ಕ್ಯಾಡಿಲಾಕ್ ಎಸ್ಕಲೇಟ್ ಎಸ್‌ಯುವಿ ಖರೀದಿಸಿದ ಅಂಬಾನಿ!
2018ರಲ್ಲಿ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರನ್ನು ಬಿಡುಗಡೆ ಮಾಡಲಾಗಿತ್ತು. ಈ ಕಾರಿನ ಆರಂಭಿಕ ಬೆಲೆ 6.95 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಅಂಬಾನಿ ಖರೀದಿಸಿರುವ ಕಲ್ಲಿನಾನ್ ಕಾರನ್ನು ಅಗತ್ಯಕ್ಕೆ ತಕ್ಕಂತೆ ಮಾಡಿಫಿಕೇಶನ್ ಮಾಡಲಾಗಿದೆ. ಈ ಮಾಡಿಫಿಕೇಶನ್‌ನಿಂದ ಅಂಬಾನಿ ಖರೀದಿಸಿದ ಕಾರಿನ ಬೆಲೆ 13.15 ಕೋಟಿಗೆ ಏರಿಕೆಯಾಗಿದೆ.
ಆರ್‌ಟಿಒ ಮೂಲಗಳ ಪ್ರಕಾರ ದೇಶದಲ್ಲಿ ಖರೀದಿಸಿದ ಅತ್ಯಂತ ದುಬಾರಿ ಕಾರು ಇದಾಗಿದೆ. ಈ ಕಾರಿಗೆ ಅಂಬಾನಿ ಒನ್ ಟೈಮ್ ತೆರಿಗೆ 20 ಲಕ್ಷ ರೂಪಾಯಿ ಕಟ್ಟಿದ್ದಾರೆ. ಈ ತೆರಿಗೆ ಅವಧಿ 30 ಜನವರಿ, 2037ರ ವರೆಗೆ ಇರಲಿದೆ. ಈ ಕಾರಿಗೆ ಹೆಚ್ಚುವರಿಯಾಗಿ ರೋಡ್ ಸೇಫ್ಟಿ ತೆರಿಗೆ ಎಂದು 40,000 ರೂಪಾಯಿ ಕಟ್ಟಲಾಗಿದೆ.
ಅಂಬಾನಿ ಮನೆ ಸೇರಿದ ಫೆರಾರಿ ಹಾಗೂ ಮೆಕ್ಲೆರೆನ್ ಸೂಪರ್ ಕಾರು!
VIP ನಂಬರ್‌ಗಾಗಿ 12 ಲಕ್ಷ ರೂ
ರೋಲ್ಸ್ ರಾಯ್ಸ್ ಕಲ್ಲಿನಾನ್ ಖರೀದಿಸಿದ ಮುಕೇಶ್ ಅಂಬಾನಿ ವಿಐಪಿ ನಂಬರ್‌ಗಾಗಿ ಬರೋಬ್ಬರಿಿ 12 ಲಕ್ಷ ರೂಪಾಯಿ ಆರ್‌ಟಿಒ ಕಚೇರಿಗೆ ಪಾವತಿಸಿದ್ದಾರೆ. ಅಂಬಾನಿ ಕಲ್ಲಿನಾನ್ ಕಾರು 0001 ನಂಬರ್‌ನಲ್ಲಿ ಅಂತ್ಯಗೊಳ್ಳಲಿದೆ. ಸಾಮಾನ್ಯವಾಗಿ ವಿಐಪಿ ನಂಬರ್‌ಗೆ 4 ಲಕ್ಷ ರೂಪಾಯಿ ನೀಡಿದರೆ ಸಾಕು. ಆದರೆ ಅಂಬಾನಿ ಬೇಡಿಕೆ ಇಟ್ಟ ನಂಬರ್ ಈಗಾಗಲೇ ನೀಡಲಾಗಿತ್ತು. ಹೀಗಾಗಿ ಹೊಸ ಸೀರಿಸ್ ಆರಂಭಿಸಿ ಆಂಬಾನಿಗೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರಕ್ಕೆ 12 ಲಕ್ಷ ರೂಪಾಯಿ ಪಾವತಿಸಿದ್ದಾರೆ.
ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಎಲ್ಲಾ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ಹಾಗೂ ಯಾವುದೇ ರಸ್ತೆಗಳಲ್ಲಿ ಅದೇ ಅರಾಮದಾಯಕ ಪ್ರಯಾಣ ಒದಗಿಸಲಿದೆ. ಹೀಗಾಗಿ ಎಲ್ಲಾ ರಸ್ತೆಗಳಿಗೆ ಹೊಂದಿಕೊಳ್ಳುವ ರೋಲ್ಸ್ ರಾಯ್ಸ್ ಕಂಪನಿಯ ಮೊದಲ ಕಾರಾಗಿದೆ. SUV ಕಾರು ಇದಾಗಿದ್ದು, 12 ಸಿಲಿಂಡರ್ ಹೊಂದಿದೆ. 564 BHP ಪವರ್ ಹೊಂದಿರುವ ಈ ಕಾರು ಅತ್ಯಂತ ದಕ್ಷ ಎಂಜಿನ್ ಹೊಂದಿದೆ.
ಕಳೆದ ವಾರ ಮುಕೇಶ್ ಅಂಬಾನಿ ಕ್ಯಾಡಿಲಾಕ್ ಎಸ್ಕಲೇಡ್ SUV ಕಾರು ಖರೀದಿಸಿದ್ದಾರೆ. ಇದರ ಎಕ್ಸ್‌ಶೋ ರೂಂ ಬೆಲೆ 81 ಲಕ್ಷ ರೂಪಾಯಿಯಿಂದ 1.23 ಕೋಟಿ ರೂಪಾಯಿ. ಇನ್ನು 2021ರಲ್ಲಿ ಅಂಬಾನಿ ಲೆಕ್ಸಾಸ್‌ನ ಎರಡು ಐಷಾರಾಮಿ ಕಾರು ಖರೀದಿಸಿದ್ದರು. ಅಂಬಾನಿ ಕಾರು ಸಂಗ್ರಹದಲ್ಲಿ ಬೆಂಟ್ಲಿ ಬೆಂಟಿಯಾಗ್ ಸೇರಿದಂತೆ ವಿಶ್ವದ ಅತ್ಯಂತ ದುಬಾರಿ ಕಾರುಗಳಿವೆ. ಸಿಂಪಲ್ ಆಗಿ ಹೇಳಬೇಕೆಂದರೆ ಅಂಬಾನಿಗೆ ಬೆಂಗಾವಲು ವಾಹನವಾಗಿ ಸುರಕ್ಷತೆ ನೀಡಲು ಪೊಲೀಸರಿಗೆ ರೇಂಜ್ ರೋವರ್ ಕಾರು ನೀಡಲಾಗಿದೆ. ಹೀಗಾಗಿ ಅಂಬಾನಿ ಎಷ್ಟು ಐಷಾರಾಮಿ ಕಾರು ಇಟ್ಟುಕೊಂಡಿದ್ದಾರೆ ಅನ್ನೋದನ್ನು ನೀವು ಊಹಿಸಿಕೊಳ್ಳಬುಹುದು.