402 ಕೋಟಿ ರೂ GST ಪಾವತಿಸಲು Zomatoಗೆ ನೋಟಿಸ್, ಕಂಪನಿ ಉತ್ತರಕ್ಕೆ ಅಧಿಕಾರಿಗಳೇ ಕನ್ಫ್ಯೂಸ್!

By Suvarna NewsFirst Published Dec 28, 2023, 3:06 PM IST
Highlights

ಝೋಮ್ಯಾಟೋ ಫುಡ್ ಡೆಲಿವರಿ ಕಂಪನಿಗೆ GST ನಿರ್ದೇಶನಾಲಯ ಶಾಕ್ ನೀಡಿದೆ. ಬರೋಬ್ಬರಿ 402 ಕೋಟಿ ರೂಪಾಯಿ ತೆರಗಿ ಬಾಕಿ ಉಳಿಸಿಕೊಂಡಿದ್ದೀರಿ. ಇದರ ಬಡ್ಡಿ, ಪೆನಾಲ್ಟಿ ಸೇರಿ ತಕ್ಷಣವೇ ಪಾವತಿಸುವಂತೆ ನೋಟಿಸ್ ನೀಡಿದೆ. ಆದರೆ ಈ ನೋಟಿಸ್‌ಗೆ ಝೊಮ್ಯಾಟೋ ಉತ್ತರ ನೀಡಿದ್ದು, ಅಧಿಕಾರಿಗಳು ಕನ್ಫ್ಯೂಸ್ ಆಗಿದ್ದಾರೆ.

ನವದೆಹಲಿ(ಡಿ.28) ಫುಡ್ ಡೆಲಿವರಿ ಆ್ಯಪ್‌ಗಳು ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಈ ಪೈಕಿ ಝೋಮ್ಯಾಟೋ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇದೀಗ ಝೋಮ್ಯಾಟೋಗೆ ಜಿಎಸ್‌ಟಿ ನಿರ್ದೇಶನಾಲಯ ಶಾಕ್ ನೀಡಿದೆ. ಬರೋಬ್ಬರಿ 402 ಕೋಟಿ ರೂಪಾಯಿ ಜಿಎಸ್‌ಟಿ ಬಾಕಿ ಉಳಿಸಿಕೊಂಡಿದ್ದು, ತಕ್ಷಣವೇ ಬಡ್ಡಿ, ಪೆನಾಲ್ಟಿ ಸಹಿತ ಪಾವತಿಸುವಂತೆ ನೋಟಿಸ್‌ನಲ್ಲಿ ಸೂಚಿಸಿದೆ. ಆದರೆ ಈ ನೋಟಿಸ್‌ಗೆ ಝೋಮ್ಯಾಟೋ ಉತ್ತರ ನೀಡಿದೆ. ನಾವು ಯಾವುದೇ ಜಿಎಸ್‌ಟಿ ಬಾಕಿ ಉಳಿಸಿಕೊಂಡಿಲ್ಲ ಎಂದಿದೆ. ಇದಕ್ಕೆ ಸ್ಪಷ್ಟನೆಯನ್ನೂ ನೀಡಿದೆ.

ಗುರುಗ್ರಾಂ ಮೂಲದ ಝೋಮ್ಯಾಟೋ ಕಂಪನಿಗೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (GST) ನಿರ್ದೇಶನಾಲಯ ನೋಟಿಸ್ ನೀಡಿದೆ. ಝೋಮ್ಯಾಟೋ ಸಂಸ್ಥೆ ಆಹಾರ ಡೆಲವರಿ ಮಾಡಲು ಗ್ರಾಹಕರಿಗೆ ಚಾರ್ಜಸ್ ವಿಧಿಸುತ್ತಿದೆ. ಇದರ ಜಿಎಸ್‌ಟಿ ಪಾವತಿಸಬೇಕಿದೆ. 402 ಕೋಟಿ ರೂಪಾಯಿ ಕಂಪನಿ ಬಾಕಿ ಉಳಿಸಿಕೊಂಡಿದೆ. ಅಕ್ಟೋಬರಿ 29, 2019ರಿಂದ ಮಾರ್ಚ್ 31, 2022ರ ವರೆಗೆ ಝೋಮ್ಯಾಟೋ ಕಂಪನಿ ಡೆಲವರಿ ಚಾರ್ಜಸ್ ಮೇಲಿನ 402 ಕೋಟಿ ರೂಪಾಯಿ ಜಿಎಸ್‌ಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

Zomato Trend 2023: ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರ ಬಿರಿಯಾನಿ, ಎರಡನೇ ಸ್ಥಾನದಲ್ಲಿರೋದು ಯಾವ್ದು?

ಈ ನೋಟಿಸ್‌ಗೆ ಝೋಮ್ಯಾಟೋ ಇದೀಗ ಉತ್ತರ ನೀಡಿದೆ. ಝೋಮ್ಯಾಟೋ ಸಂಸ್ಥೆ ಆಹಾರ ಅಥವಾ ಉತ್ಪನ್ನವನ್ನು ಗ್ರಾಹಕರ ಬಳಿಗೆ ತಲುಪಿಸಲು ಡೆಲಿವರಿ ಚಾರ್ಜಸ್ ಮಾಡುತ್ತದೆ. ಝೋಮ್ಯಾಟೋ ಉತ್ಪನ್ನಗಳನ್ನು ಡೆಲಿವರಿ ಮಾಡಲು ಪಾಲುದಾರಿಕೆ ಪಡೆದಿರುವವರ ಪರವಾಗಿ ಕಂಪನಿ ಚಾರ್ಜಸ್ ಹಾಕುತ್ತದೆ. ಈ ಡೆಲಿವರಿ ಚಾರ್ಜಸ್, ಉತ್ಪನ್ನವನ್ನು ಡೆಲಿವರಿ ಪಾಲುದಾರರು ಗ್ರಾಹಕರ ಬಳಿ ತಲುಪಿಸಲು ಹಾಕಿರುವ ಚಾರ್ಜಸ್, ಇದು ಝೋಮ್ಯಾಟೋದ ಚಾರ್ಜಸ್ ಅಲ್ಲ ಎಂದು ಸ್ಪಷ್ಟನೆ ನೀಡಿದೆ.

ಡೆಲಿವರಿ ಪಾಲುದಾರರು ಝೋಮ್ಯಾಟೋ ಜೊತೆ ಒಪ್ಪಂದ ಮಾಡಿಕೊಳ್ಳುವಾಗ ಈ ಕುರಿತ ಕರಾರು ಪತ್ರಕ್ಕೆ ಸಹಿ ಹಾಕಿದ್ದಾರೆ. ಡೆಲಿವರಿ ಪಾರ್ಟ್ನರ್ ಪರವಾಗಿ ಜೋಮ್ಯಾಟೋ ಡೆಲಿವರಿ ಚಾರ್ಜಸ್ ವಿಧಿಸುತ್ತದೆ. ಆದರೆ ಇದರ ಹಣ ಸಂಪೂರ್ಣವಾಗಿ ಡೆಲಿವರಿ ಪಾಲುದಾರರಿಗೆ ಸೇರಿದೆ. ಜೋಮ್ಯಾಟೋಗೆ ಸೇರಿಲ್ಲ ಎಂದು ಸ್ಪಷ್ಟನೆ ನೀಡಿದೆ. 

ಝೊಮ್ಯಾಟೋ, ಸ್ವಿಗ್ಗಿಗೆ ಜಿಎಸ್‌ಟಿ ಶಾಕ್‌: ತಲಾ 500 ಕೋಟಿ ನೀಡುವಂತೆ ನೋಟಿಸ್‌ ಪಡೆದ ಆನ್‌ಲೈನ್‌ ಆಹಾರ ವಿತರಕರು!

ಇತ್ತೀಚೆಗಷ್ಟೆ ಜಿಎಸ್‌ಟಿ ನಿರ್ದೇಶನಾಲಯ ಸ್ವಿಗ್ಗಿ ಆ್ಯಪ್‌ಗೂ ಜಿಎಸ್‌ಟಿ ಪಾವತಿಸುವಂತೆ ನೋಟಿಸ್ ನೀಡಿತ್ತು. ಜೋಮ್ಯಾಟೋ ಹಾಗೂ ಸ್ವಿಗ್ಗಿ ಎರಡೂ ಸಂಸ್ಥೆಗಳು ವಕೀಲರ ಬಳಿ ಮುಂದಿನ ಕಾನೂನು ಹೋರಾಟದ ಕುರಿತು ಚರ್ಚಿಸಿದೆ. ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ ಉತ್ತರ, ದಾಖಲೆಗಳ ಕುರಿತು ಚರ್ಚಿಸಿದೆ. 

click me!