
ನವದೆಹಲಿ (ಅ.10) ಹೊಸ ಉದ್ಯಮ ಆರಂಭಿಸಲು ಪ್ಲಾನ್ ಮಾಡಿದ್ದೀರಾ? ಹೆಸರು ಏನು ಇಡಲಿ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಇಂಗ್ಲೀಷ್‌ನ ಝೆಡ್ (Z) ಅಕ್ಷರದಿಂದ ಆರಂಭವಾಗುವ ಹೆಸರಿಡಿ. ಈ ಹೆಸರಿಟ್ಟ ಬಹುತೇಕ ಎಲ್ಲಾ ಕಂಪನಿಗಳು ಯಶಸ್ವಿಯಾಗಿದೆ. ಭಾರತೀಯ ಉದ್ಯಮಿಗಳು ಇದೀಗ ಹುಡುಕಿ ಹುಡುಕಿ ತಮ್ಮ ಕಂಪನಿಗಳ ಹೆಸರನ್ನು ಝೆಡ್ ಅಕ್ಷರದಿಂದಲೇ ಆರಂಭವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಹಲವರು ಭಾರತದಲ್ಲಿ ಯಶಸ್ಸು ಎ ಅಕ್ಷರದಿಂದ ಆರಂಭವಾಗುವುದಿಲ್ಲ ಝೆಡ್ ಅಕ್ಷರದಿಂದ ಆರಂಭವಾಗುತ್ತದೆ ಎಂಬ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಝೆಡ್‌ನಿಂದ ಆರಂಭಗೊಂಡು ಯಶಸ್ಸಿನಲ್ಲಿರುವ ಕೆಲ ಕಂಪನಿಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಇದಕ್ಕೂ ಹೊರತಾಗಿ ಹಲವು ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ. ನಿತಿನ್ ಕಾಮತ್ ಹಾಗೂ ನಿಖಿಲ್ ಕಾಮತ್ ಆರಂಭಿಸಿದ ಝಿರೋದ ಸಂಸ್ಥೆ ಇದೀಗ ಅತೀ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಭಾರತದ ಶ್ರೀಮಂತ ಯುವ ಉದ್ಯಮಗಳ ಪಟ್ಟಿಯಲ್ಲಿ ನಿಖಿಲ್ ಕಾಮತ್ ಹಾಗೂ ನಿತಿನ್ ಕಾಮತ್ ಸ್ಥಾನ ಪಡೆದಿದ್ದಾರೆ. ಝೋಹೋ ಕಂಪನಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಅಮೆರಿಕದಲ್ಲಿ ಹೆಚ್1 ಬಿ ವೀಸಾ ನೀತಿ ಜಾರಿ ಬಳಿಕ ಝೋಹೋ ಕಂಪನಿ ಭಾರತದಲ್ಲಿ ತನ್ನ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತರಿಸಿದೆ. ಅತೀ ದೊಡ್ಡ ಸಾಫ್ಟ್‌ವೇರ್ ಕಂಪನಿಯಾಗಿರುವ ಝೋಹೋ ಭಾರತೀಯ ಝೋಹೋ ಇಮೇಲ್ ಸೇರಿದಂತೆ ಹಲವು ಸೇವೆ ಹೊಂದಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತನ್ನ ಇಮೇಲ್‌ನ್ನು ಗೂಗಲ್‌ನ ಜಿಮೇಲ್‌ನಿಂದ ಝೋಗೋ ವರ್ಗಾಯಿಸಿದ್ದಾರೆ.
ಝೋಮ್ಯಾಟೋ ಭಾರತದ ಫುಡ್ ಡೆಲಿವರಿಯಲ್ಲಿ ಮಾಡಿದ ಕ್ರಾಂತಿಯನ್ನು ಪರಿಗಣಿಸಲೇ ಬೇಕು. ಇಡೀ ದೇಶದಲ್ಲಿ ಝೋಮ್ಯಾಟೋ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರತಿ ದಿನ ಕೋಟಿ ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದೆ. ಭಾರತದಲ್ಲಿ ಫುಡ್ ಡೆಲಿವರಿ ಸರ್ವೀಸ್ ಹೆಮ್ಮರವಾಗಿ ಬೆಳೆದು ನಿಂತಿದೆ. ಹಲವು ಪ್ರತಿಸ್ಪರ್ಧಿಗಳಿದ್ದರೂ ಝೋಮ್ಯಾಟೋ ತನ್ನದೇ ಆದ ಛಾಪು ಮೂಡಿಸಿದೆ. ಇತ್ತ ಟಾಟಾ ಮಾಲೀಕತ್ವದ ಝುಡಿಯೋ ಕೂಡ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಮಳಿಗೆಗಳ ವಿಸ್ತರಣೆಯಾಗುತ್ತಿದೆ. ಝುಡಿಯೋ ಇದೀಗ ಬಹುತೇಕರ ನೆಚ್ಚಿನ ಶಾಪಿಂಗ್ ಸೆಂಟರ್ ಆಗಿ ಹೊರಹೊಮ್ಮಿದೆ.
ಭಾರತೀಯ ಹಲವು ಉದ್ಯಮಿಗಳು ತಮ್ಮ ಕಂಪಮಿಗಳ ಹೆಸರನ್ನು ಝೆಡ್ ಅಕ್ಷರದಿಂದ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಇದರಲ್ಲೂ ಝೆಡ್ ಒ (ZO) ಹಾಗೂ ಝೆಡ್ಇ (ZE) ಅಕ್ಷರಗಳಿಂದ ಆರಂಭವಾಗುವ ಹೆಸರು ಆದಾಯದ ಜೊತೆಗೆ ಖ್ಯಾತಿಯನ್ನು ತಂದುಕೊಡುತ್ತಿದೆ. ಇದರ ಹಿಂದಿನ ಜ್ಯೋತಿಷ್ಯ, ಸಂಖ್ಯಾಶಾಸ್ತ್ರಗಳ ಕುರಿತು ಸ್ಪಷ್ಟತೆ ಇಲ್ಲ. ಆದರೆ ಝೆಡ್ ಅಕ್ಷರದಿಂದ ಆರಂಭವಾಗುವ ಹಸೆರು ಭಿನ್ನವಾಗಿರುತ್ತದೆ ಹಾಗೂ ಹೆಚ್ಚು ಬಳಕೆಯಾಗಿರುವುದಿಲ್ಲ. ಸರ್ಚ್ ವಿಸಿಬಿಲಿಟಿ ಹೆಚ್ಚಿರುತ್ತದೆ. ಇಷ್ಟೇ ಅಲ್ಲ ಝೆನ್ ಜಿ ಕಿಡ್‌ಗೆ ಝೆಡ್ ಹೆಚ್ಚು ಆಪ್ತವಾಗುವಂತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಭಾರತದಲ್ಲಿ ಎಲ್ಲಾ ಹೆಸರಿನ ಕಂಪನಿಗಳು ಯಶಸ್ಸು ಸಾಧಿಸಿದೆ. ಎ ನಿಂದ ಝೆಡ್ ವರೆಗೂ ಯಶಸ್ಸಿ ಕಂಪನಿಗಳಿವೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ ಅದಾನಿ ಗ್ರೂಪ್, ಏರ್‌ಟೆಲ್, ಆದಿತ್ಯ ಬಿರ್ಲಾ ಗ್ರೂಪ್, ಅಮೂಲ್, ಆ್ಯಕ್ಸಿಸ್ ಬ್ಯಾಂಕ್, ಅಶೋಕ್ ಲೈಲಾಂಡ್ ಸೇರಿದಂತೆ ಎ ಅಕ್ಷರದಲ್ಲಿ ಯಶಸ್ಸು ಕಂಡ ಕಂಪನಿಗಳ ಲಿಸ್ಟ್ ಹೆಚ್ಚಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.