Breaking: ಬಂತಲ್ಲ ಶುಭ ಶುಕ್ರವಾರ, ಭಾರೀ ದರ ಇಳಿಕೆ ಕಂಡ ಚಿನ್ನ!

Published : Oct 10, 2025, 10:10 AM IST
Gold Price Slumps

ಸಾರಾಂಶ

Gold Price Slumps Major Drop ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಮೇಲೆ 1860 ರೂ. ಕಡಿಮೆಯಾಗಿದೆ. ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿದ್ದ ಚಿನ್ನದ ದರದಲ್ಲಿ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಬೆಂಗಳೂರು (ಅ.10): ಚಿನ್ನದ ಬೆಲೆಯಲ್ಲಿ ಇಂದು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಮೇಲೆ 1860 ರೂಪಾಯಿ ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ ಇದರ ಬೆಲೆ 1,22,290 ರೂಪಾಯಿಗೆ ಇಳಿದಿದೆ. ಕಳೆದ ಕೆಲವು ತಿಂಗಳುಗಳಿಂದ ಜೆಟ್‌ ವೇಗದಲ್ಲಿ ಸಾಗುತ್ತಿದ್ದ ಆಆಭರಣ ಚಿನ್ನದ ಬೆಲೆಯಲ್ಲಿ ಒಂದೇ ದಿನ ಇಷ್ಟು ಪ್ರಮಾಣದಲ್ಲಿ ಇಳಿಕೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 1700 ರೂಪಾಯಿ ಇಳಿಕೆಯಾಗಿ 1, 12,100ಕ್ಕೆ ತಲುಪಿದೆ.

ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ದರದಲ್ಲಿ ರಿಕೆಯಾಗಿ ಒಂದು ಲಕ್ಷದ ಗಡಿ ದಾಟಿತ್ತು. ಒಂದು ಲಕ್ಷದ ಗಡಿ ದಾಟಿಬಿಟ್ಟಿದ್ಯಲ್ಲ ಎಂದು ಅಚ್ಚರಿ ಪಡುವ ಹೊತ್ತಿಗೆ ಇದರ ಬೆಲೆ 1.24 ಲಕ್ಷ ರೂಪಾಯಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಮಾಡಿತ್ತು. ಇಂಥ ಹೊತ್ತಿನಲ್ಲಿ ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಕಡಿಮೆ ಆಗಿರುವುದು ಚಿನ್ನ ಖರೀದಿದಾರರ ನಿರೀಕ್ಷೆಯನ್ನು ಹೆಚ್ಚಿಸಿದೆ. ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿತ್ತು. ಆದರೆ, ಒಂದೇ ದಿನ ಈ ಪ್ರಮಾಣದಲ್ಲಿ ಚಿನ್ನದ ದರ ಕುಸಿತಕ್ಕೆ ಕಾರಣವೇನು ಅನ್ನೋದು ತಿಳಿಸುಬಂದಿಲ್ಲ.

ಚಿನ್ನದ ಬೆಲೆ ಬಹುತೇಕ ಭಾರತೀಯ ಷೇರು ಮಾರುಕಟ್ಟೆ ಮೇಲೆ ಅವಲಂಬಿತವಾಗಿದೆ. ಅಮೆರಿಕಾದ ತೆರಿಗೆ ನೀತಿಯಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಹಳ ಏರಿಳಿತವಾಗುತ್ತಿದ್ದು, ಮಾರುಕಟ್ಟೆ ಕುಸಿತ ಕಾಣುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.

ಚಿನ್ನದ ದರ ಇಂದು ಹೇಗಿದೆ

ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ಗುರುವಾರಕ್ಕಿಂತ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ..

24 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 12,229 ರೂಪಾಯಿ (ನಿನ್ನೆಗಿಂತ 186 ರೂಪಾಯಿ ಇಳಿಕೆ)

8 ಗ್ರಾಂ ಚಿನ್ನದ ದರ 97,832 ರೂಪಾಯಿ ( ನಿನ್ನೆಗಿಂತ 1488 ರೂಪಾಯಿ ಇಳಿಕೆ)

10 ಗ್ರಾಂ ಚಿನ್ನದ ದರ 1,22,290 ರೂಪಾಯಿ (ನಿನ್ನೆಗಿಂತ 1860 ರೂಪಾಯಿ ಇಳಿಕೆ)

100 ಗ್ರಾಂ ಚಿನ್ನದ ದರ 12,22,900 ರೂಪಾಯಿ (ನಿನ್ನೆಗಿಂತ 18,600 ರೂಪಾಯಿ ಇಳಿಕೆ)

22 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 11,210 ರೂಪಾಯಿ (ನಿನ್ನೆಗಿಂತ 170 ರೂಪಾಯಿ ಇಳಿಕೆ)

8 ಗ್ರಾಂ ಚಿನ್ನದ ದರ 89,680 ರೂಪಾಯಿ (ನಿನ್ನೆಗಿಂತ 1360 ರೂಪಾಯಿ ಇಳಿಕೆ)

10 ಗ್ರಾಂ ಚಿನ್ನದ ದರ 1,12,100 ರೂಪಾಯಿ (ನಿನ್ನೆಗಿಂತ 1700 ರೂಪಾಯಿ ಇಳಿಕೆ)

100 ಗ್ರಾಂ ಚಿನ್ನದ ದರ 11,21,000 ರೂಪಾಯಿ (ನಿನ್ನೆಗಿಂತ 17000 ರೂಪಾಯಿ ಇಳಿಕೆ)

18 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 9172 ರೂಪಾಯಿ (ನಿನ್ನೆಗಿಂತ 139 ರೂಪಾಯಿ ಇಳಿಕೆ)

8 ಗ್ರಾಂ ಚಿನ್ನದ ದರ 73,376 ರೂಪಾಯಿ (ನಿನ್ನೆಗಿಂತ 1112 ರೂಪಾಯಿ ಇಳಿಕೆ)

10 ಗ್ರಾಂ ಚಿನ್ನದ ದರ 91,720 ರೂಪಾಯಿ (ನಿನ್ನೆಗಿಂತ 1390 ರೂಪಾಯಿ ಇಳಿಕೆ)

100 ಗ್ರಾಂ ಚಿನ್ನದ ದರ 9,17,200 ರೂಪಾಯಿ (ನಿನ್ನೆಗಿಂತ 13,900 ರೂಪಾಯಿ ಇಳಿಕೆ)

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Udyami Vokkaliga Expo 2026: ಸಾಲ ಕೊಡುವ ಮುನ್ನ ಹುಷಾರ್, ನಿಮ್ಮ ನೆರಳನ್ನೂ ನಂಬಬೇಡಿ: ಡಿಕೆಶಿ ಲೈಫ್ ಲೆಸನ್
ಕುಟುಂಬದ ಕಂಪೆನಿ, ಆಸ್ತಿ ತ್ಯಜಿಸಿ ಪ್ರೀತಿ ಆಯ್ಕೆ, ಮದುವೆಯಾಗಿ ₹3000 ಕೋಟಿ ಉದ್ಯಮ ಕಟ್ಟಿದ ಸಾಹಸಿ