
ಭಾರತ ಹಾಗೂ ಅಮೆರಿಕಾ ನಡುವಣ ವ್ಯಾಪಾರ ಒಪ್ಪಂದದ ನಂತರ ಅಮೆರಿಕಾದ ಹಲವು ವಸ್ತುಗಳಿಗೆ ಭಾರತದಲ್ಲಿ ಶೂನ್ಯ ತೆರಿಗೆ ವಿಧಿಸಲಾಗುತ್ತಿದೆ. ಅಂದರೆ ಅಮೆರಿಕಾದಿಂದ ಭಾರತಕ್ಕೆ ಆಮದು ಆಗುವ ಪ್ರಮುಖ ಸರಕುಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ, ಹಾಗೆಯೇ ಭಾರತದ ಕೆಲ ಸರಕುಗಳಿಗೂ ಅಮೆರಿಕಾದಲ್ಲಿ ಶೂನ್ಯ ತೆರಿಗೆ ವಿಧಿಸಲಾಗಿದೆ. ಕೇಂದ್ರ ವ್ಯಾಣಿಜ್ಯ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ಭಾರತ ಹಾಗೂ ಅಮೆರಿಕಾ ನಡುವಣ ವ್ಯಾಪಾರ ಒಪ್ಪಂದದ(India–US trade agreement) ನಂತರ ಅಮೆರಿಕಾದ ಯಾವ ವಸ್ತುಗಳಿಗೆಲ್ಲಾ ಭಾರತದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ ಎಂಬ ಮಾಹಿತಿಯನ್ನು ಇಂದು ನೀಡಿದ್ದಾರೆ. ಕೆಲವು ಮದ್ಯದ ಪಾನೀಯಗಳು(ಸಾರಾಯಿ) ಕಾಸ್ಮೆಟಿಕ್ಸ್‌ಗಳು ಹಾಗೂ ಕೆಲ ವೈದ್ಯಕೀಯ ಸಂಬಂಧಿ ಯಂತ್ರಗಳಿಗೆ ಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಡಿಯಲ್ಲಿ ಘೋಷಿಸಲಾದ ಕೆಲ ವಿವರಗಳನ್ನು ಇಂದು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಶ್ಲಾಘಿಸಿದ್ದಾರೆ. ಎರಡು ಮಹಾ ಆರ್ಥಿಕತೆಗಳ ನಡುವಿನ ವ್ಯಾಪಾರ ಒಪ್ಪಂದದಡಿಯಲ್ಲಿ, ಹಲವಾರು ಅಮೇರಿಕನ್ ಉತ್ಪನ್ನಗಳು ಭಾರತದಲ್ಲಿ ಶೂನ್ಯ ಸುಂಕವನ್ನು ಹೊಂದುತ್ತವೆ ಎಂದು ಗೋಯಲ್ ತಿಳಿಸಿದ್ದಾರೆ.
ಆಲ್ಕೊಹಾಲ್‌ಯುಕ್ತ ಅಂದರೆ ಮದ್ಯಮಿಶ್ರಿತ ಪಾನೀಯಗಳು, ಸೌಂದರ್ಯವರ್ಧಕಗಳು ಮತ್ತು ವೈದ್ಯಕೀಯ ಸಾಧನಗಳು ಸೇರಿದಂತೆ ಅಮೆರಿಕಾದ ಹಲವಾರು ಉತ್ಪನ್ನಗಳು ಶೂನ್ಯ ಸುಂಕವನ್ನು ಹೊಂದಲಿವೆ. ಈ ಉತ್ಪನ್ನಗಳು ಬಂದಾಗ, ಸ್ಪರ್ಧೆ ಇರುತ್ತದೆ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳು ಸಿಗುತ್ತವೆ, ಉತ್ಪನ್ನವು ಅಗ್ಗವಾಗಿ ಉಳಿಯುತ್ತದೆ ಮತ್ತು ಮಾರುಕಟ್ಟೆಯಲ್ಲಿ ದಕ್ಷತೆ ಇರುತ್ತದೆ ಎಂದು ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಹಾಗೆಯೇ ಈ ಒಪ್ಪಂದದ ಅಡಿ ಭಾರತದ ಕೆಲವು ಆಟೋಮೊಬೈಲ್ ಮತ್ತು ವಿಮಾನ ಭಾಗಗಳು ಸುಂಕವಿಲ್ಲದೇ ಅಮೆರಿಕಾವನ್ನು ಪ್ರವೇಶಿಸಲಿವೆ ಎಂದು ಗೋಯಲ್ ಮಾಹಿತಿ ನೀಡಿದರು.
ಸುಂಕರಹಿತವಾಗಿ ಸಿಗುವ ಅಮೆರಿಕಾದ ಉತ್ಪನ್ನಗಳು
ಸೂಕ್ಷ್ಮದರ್ಶಕಗಳಂತಹ ಕೆಲವು ವೈದ್ಯಕೀಯ ಸಾಧನಗಳಿಗೆ ಭಾರತದಲ್ಲಿ ಸುಂಕ ಕಡಿತಗೊಳಿಸಲಾಗಿದೆ. ದೇಶೀಯ ಹಿತಾಸಕ್ತಿಗಳನ್ನು ರಕ್ಷಿಸುವಾಗ ವ್ಯಾಪಾರವನ್ನು ಸಮತೋಲನಗೊಳಿಸಲು ಈ ಉತ್ಪನ್ನಗಳಿಗೆ ಕನಿಷ್ಠ ಆಮದು ಬೆಲೆಯನ್ನು ನಿಗದಿಪಡಿಸಲಾಗಿದೆ ಎಂದು ಗೋಯಲ್ ಹೇಳಿದ್ದಾರೆ.
ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆಯೂ ಶೂನ್ಯ ಸುಂಕ
ಹಾಗೆಯೇ ನಮ್ಮ ರಫ್ತುದಾರರು ಅಮೆರಿಕಾಗೆ ಕಳುಹಿಸುವ ಹಲವಾರು ವಸ್ತುಗಳಿವೆ ಸುಂಕ ಕಡಿತಗೊಳಿಸಲಾಗಿದೆ. ಉದಾಹರಣೆಗೆ ಭಾರತದಿಂದ ರಫ್ತಾಗುವ ರತ್ನಗಳು ಮತ್ತು ವಜ್ರಗಳಿಗೆ ಶೂನ್ಯ ಸುಂಕ ವಿಧಿಸಲಾಗಿದೆ. ಭಾರತದಿಂದ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಲಾಗುವ ಔಷಧೀಯ ಉತ್ಪನ್ನಗಳಿಗೂ ಯಾವುದೇ ಸುಂಕ ಇರುವುದಿಲ್ಲ, ಭಾರತದಿಂದ ಅಮೆರಿಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡುವ ಸ್ಮಾರ್ಟ್‌ಫೋನ್‌ಗಳಿಗೂ ಸುಂಕ ಕಡಿತಗೊಳಿಸಲಾಗಿದೆ. ಈ ರೀತಿಯಾಗಿ, ಭವಿಷ್ಯದಲ್ಲಿ ಸುಂಕ ಇಲ್ಲದೇ ಹಲವು ವಸ್ತುಗಳು ಅಮೆರಿಕಾಗೆ ರಫ್ತು ಆಗಲಿದೆ ಎಂದು ಗೋಯಲ್ ಹೇಳಿದರು.
ಇದನ್ನೂ ಓದಿ: ಮತ್ತೆ ವೈರಲ್ ಆಯ್ತು ಕೇಂದ್ರ ಸಚಿವ ಹಾಗೂ ಸಂಸದೆಯ ವೀಡಿಯೋ: ಮದ್ವೆಯಾಗುವಂತೆ ಸಲಹೆ ನೀಡಿದ ನೆಟ್ಟಿಗರು
ಕೃಷಿ ವಲಯದಲ್ಲೂ ಸಹ ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡಲಾಗುವ ಅನೇಕ ವಸ್ತುಗಳಿವೆ, ಅವುಗಳ ಮೇಲೆ ಶೂನ್ಯ ಪರಸ್ಪರ ಸುಂಕವನ್ನು ಅನ್ವಯಿಸಲಾಗುತ್ತದೆ. ಅಂದರೆ ಹೆಚ್ಚುವರಿ ಸುಂಕ ಶೂನ್ಯವಾಗಿರುತ್ತದೆ. ಉದಾಹರಣೆಗೆ, ಮಸಾಲೆಗಳು, ಚಹಾ, ಕಾಫಿ ಮತ್ತು ಅವುಗಳಿಂದ ತಯಾರಿಸಿದ ಉತ್ಪನ್ನಗಳು, ತೆಂಗಿನಕಾಯಿ ಮತ್ತು ತೆಂಗಿನ ಎಣ್ಣೆ, ತರಕಾರಿ ಮೇಣ, ಅಡಿಕೆ, ಬ್ರೆಜಿಲ್ ಬೀಜ, ಗೋಡಂಬಿ ಮತ್ತು ಚೆಸ್ಟ್ನಟ್. ಅನೇಕ ಹಣ್ಣುಗಳು ಮತ್ತು ತರಕಾರಿಗಳು ಈ ಶೂನ್ಯ ಸುಂಕ ಪಟ್ಟಿಯಲ್ಲಿವೆ ಎಂದು ಗೋಯಲ್ ಹೇಳಿದ್ದಾರೆ.
ಇದನ್ನೂ ಓದಿ: ಸದಾ ಸಿಡುಕುವ ಜಯಾ ಬಚ್ಚನ್‌ಗೆ ಬಾಲಿವುಡ್ ಡ್ರಾಮಾ ಕ್ವೀನ್ ನೀಡಿದ ಬಿಟ್ಟಿ ಸಲಹೆಗೆ ನೆಟ್ಟಿಗರ ಶಹಭಾಷ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.