Telecom: ಜಿಯೋಗೆ ಬಿಗ್‌ ಶಾಕ್ ಕೊಟ್ಟು ಯುಟ್ಯೂಬ್ ಜೊತೆ ಏರ್‌ಟೆಲ್ ಮಹತ್ವದ ಒಪ್ಪಂದ

Published : Oct 24, 2026, 09:43 AM IST
Airtel Youtube

ಸಾರಾಂಶ

ಏರ್‌ಟೆಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಜಾಹೀರಾತು ಮುಕ್ತ ಯೂಟ್ಯೂಬ್ ಪ್ರೀಮಿಯಂ ಸೇವೆ ನೀಡಲು ಒಪ್ಪಂದ ಮಾಡಿಕೊಂಡಿದೆ. ಒಟಿಟಿ ಟಾಪ್-ಅಪ್ ಮೂಲಕ 30 ಜಿಬಿ ಡೇಟಾ ಮತ್ತು 18ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಜೊತೆಗೆ ಈ ಸೌಲಭ್ಯ ಲಭ್ಯವಿದೆ. ಗ್ರಾಹಕರು ಏರ್‌ಟೆಲ್ ಆ್ಯಪ್ ಮೂಲಕ ಇದನ್ನು ಸಕ್ರಿಯಗೊಳಿಸಬಹುದು.

ಬೆಂಗಳೂರು: ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಅತ್ಯುತ್ತಮ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆಯಾದ ಏರ್‌ಟೆಲ್, ಜನಪ್ರಿಯ ವಿಡಿಯೋ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಜತೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದ ಮುಖಾಂತರ ಪ್ರೀಪೇಯ್ಡ್ ಬಳಕೆದಾರರಿಗೆ ಯೂಟ್ಯೂಬ್ ಪ್ರೀಮಿಯಂ ಸೇವೆಯನ್ನು ಸಂಸ್ಥೆ ಲಭ್ಯವಾಗಿಸಿದೆ.

ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಸೌಲಭ್ಯ

ಇಂದಿನ ಗ್ರಾಹಕರಿಗೆ ಮೊಬೈಲ್ ಡೇಟಾ ಕೇವಲ ಸಂಪರ್ಕಕ್ಕೆ ಮಾತ್ರ ಸೀಮಿತವಾಗಿಲ್ಲ, ಸಿನಿಮಾ-ಧಾರಾವಾಹಿಗಳ ವೀಕ್ಷಣೆ, ಕಂಟೆಂಟ್ ಕ್ರಿಯೇಟರ್‌ಗಳ ಫಾಲೋ, ಸಂಗೀತ ಆಲಿಸುವಿಕೆ ಸೇರಿದಂತೆ ಡಿಜಿಟಲ್ ಮನರಂಜನೆಗೆ ಮುಖ್ಯ ಮಾಧ್ಯಮವಾಗಿದೆ. ಗ್ರಾಹಕರ ಈ ಬದಲಾದ ಅಗತ್ಯಕ್ಕೆ ಪೂರಕವಾಗಿ ಏರ್‌ಟೆಲ್ ಈ ಹೊಸ ಕೊಡುಗೆ ತಂದಿದೆ. ಇದರ ಅಡಿಯಲ್ಲಿ ಗ್ರಾಹಕರು ಶಾರ್ಟ್ಸ್ ಸೇರಿದಂತೆ ಯಾವುದೇ ಜಾಹೀರಾತುಗಳ ತಡೆ ಇಲ್ಲದೆ ಯೂಟ್ಯೂಬ್ ವೀಕ್ಷಿಸಬಹುದು. ಜತೆಗೆ ಹಿನ್ನೆಲೆ ಪ್ಲೇಬ್ಯಾಕ್, ಆಫ್‌ಲೈನ್ ಡೌನ್‌ಲೋಡ್ ಹಾಗೂ ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಸೌಲಭ್ಯಗಳು ದೊರೆಯಲಿವೆ.

₹200 ಒಟಿಟಿ ಟಾಪ್-ಅಪ್

ಈಗಾಗಲೇ ಚಾಲ್ತಿಯಲ್ಲಿರುವ ಏರ್‌ಟೆಲ್‌ನ ₹200 ಒಟಿಟಿ ಟಾಪ್-ಅಪ್ (30 ಜಿಬಿ ಹೆಚ್ಚುವರಿ ಡೇಟಾ ಜತೆಗೆ) ಪ್ಯಾಕ್‌ಗೆ ಯೂಟ್ಯೂಬ್ ಪ್ರೀಮಿಯಂ ಸೇರ್ಪಡೆಯಾಗಿದೆ. ಈ ಪ್ಯಾಕ್‌ನಲ್ಲಿ ಪ್ರೈಮ್ ವಿಡಿಯೋ, ಜಿಯೋಹಾಟ್‌ಸ್ಟಾರ್, ಜೀ5 ಪ್ರೀಮಿಯಂ, ಸೋನಿಲೀವ್ ಸೇರಿದಂತೆ ಒಟ್ಟು 18ಕ್ಕೂ ಅಧಿಕ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳು ದೊರೆಯುತ್ತಿವೆ.

28 ದಿನಗಳ ಮಾನ್ಯತೆ ಹೊಂದಿರುವ ಪ್ಲಾನ್

ಯಾವುದೇ ಸಕ್ರಿಯ ಪ್ರೀಪೇಯ್ಡ್ ಯೋಜನೆ ಹೊಂದಿರುವ ಏರ್‌ಟೆಲ್ ಬಳಕೆದಾರರು ಈ ಟಾಪ್-ಅಪ್ ಪಡೆಯಬಹುದಾಗಿದೆ. ರೀಚಾರ್ಜ್ ಮಾಡಿದ ಬಳಿಕ ಏರ್‌ಟೆಲ್ ಆ್ಯಪ್‌ನ ರಿವಾರ್ಡ್ಸ್ ಆ್ಯಂಡ್ ಒಟಿಟಿಸ್ ವಿಭಾಗದ ಮೂಲಕ ಯೂಟ್ಯೂಬ್ ಪ್ರೀಮಿಯಂ ಸೌಲಭ್ಯವನ್ನು ಸಕ್ರಿಯಗೊಳಿಸಿಕೊಳ್ಳಬಹುದು. 28 ದಿನಗಳ ಮಾನ್ಯತೆ ಹೊಂದಿರುವ ಈ ಯೋಜನೆಯ ಅವಧಿ ಮುಗಿದ ನಂತರ, ಗ್ರಾಹಕರು ಪುನಃ ಟಾಪ್-ಅಪ್ ಖರೀದಿಸಿ ಸೇವೆಯನ್ನು ಮುಂದುವರಿಸಬಹುದಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold and Silver price today: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಬೆಂಗಳೂರಲ್ಲಿ ಇಂದಿನ ದರ ಎಷ್ಟು?
ಕಾರು ಅಪಘಾತದ ನಂತರ ಇನ್ಮುಂದೆ ಏನೂ ಮುಚ್ಚಿಡಲು ಸಾಧ್ಯವಿಲ್ಲ: ಸತ್ಯ ಬಯಲು ಮಾಡಲಿದೆ ವಾಹನಗಳ ಬ್ಲ್ಯಾಕ್ ಬಾಕ್ಸ್!