
Jio Platforms IPO Day 2 Highlights: ರಿಲಯನ್ಸ್ ಕಂಪನಿಯ ಜಿಯೋ ಪ್ಲಾಟ್‌ಫಾರ್ಮ್ಸ್ ಲಿ.(JPL)ನ ಐಪಿಒ ಷೇರು ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಾರುಕಟ್ಟೆಗೆ ಬಿಡುಗಡೆಯಾದ ಕೇವಲ 100 ನಿಮಿಷಗಳಲ್ಲೇ ಜಿಯೋಪ್ಲಾಟ್‌ಫಾರ್ಮ್ಸ್ ಲಿ. ಐಪಿಒ ಸಂಪೂರ್ಣಾಗಿ ಸಬ್‌ಸ್ಕೈಬ್ (ಚಂದಾದಾರಿಕೆ) ಆಗುವ ಮೂಲಕ ಹೊಸ ದಾಖಲೆ ಬರೆದಿದೆ.
ರಿಲಯನ್ಸ್ ಸಂಸ್ಥೆಯ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒಗೆ ಎರಡನೇ ದಿನವಾದ ಗುರುವಾರವೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿಲ್ಲರೆ ಹೂಡಿಕೆದಾರರ ಕೋಟಾವು ಬೆಳಗ್ಗೆ 10.45ರ ವೇಳೆಗೆ ಪೂರ್ಣ ಭರ್ತಿಯಾಗಿದೆ.
ಒಟ್ಟಾರೆ ಈ ಐಪಿಒಗೆ ಸುಮಾರು 5 ಪಟ್ಟು ಬಿಡ್ ಸಲ್ಲಿಕೆಯಾಗಿದೆ. ಈ ಮೂಲಕ 30,213 ಕೋಟಿ ರು. ಮೌಲ್ಯದ ಈ ಐಪಿಒಗೆ 3.60 ಲಕ್ಷ ಕೋಟಿ ರು.ಗೂ ಹೆಚ್ಚಿನ ಬಿಡ್ ಬಂದಿದೆ. ಈ ಐಪಿಒ ಮೇಲಿನ ಬಿಡ್ಡಿಂಗ್ ಅವಧಿ ಶುಕ್ರವಾರ ಮುಕ್ತಾಯವಾಗಲಿದೆ. ಅ.28ಕ್ಕೆ ಷೇರು ಲಿಸ್ಟ್ ಆಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.