ನೀನು ಮತ್ತು ನಾನು, ಸ್ವಿಗ್ಗಿ ಷೇರುಪೇಟೆ ಪ್ರವೇಶವನ್ನು ವಿನೂತನವಾಗಿ ಸ್ವಾಗತಿಸಿದ ಜೊಮ್ಯಾಟೋ!

Published : Nov 13, 2024, 03:33 PM ISTUpdated : Nov 13, 2024, 05:00 PM IST
ನೀನು ಮತ್ತು ನಾನು, ಸ್ವಿಗ್ಗಿ ಷೇರುಪೇಟೆ ಪ್ರವೇಶವನ್ನು ವಿನೂತನವಾಗಿ ಸ್ವಾಗತಿಸಿದ ಜೊಮ್ಯಾಟೋ!

ಸಾರಾಂಶ

ಫುಡ್ ಡೆಲಿವರಿ ಜೊಮ್ಯಾಟೋ ಷೇರುಮಾರುಕಟ್ಟೆ ಪ್ರವೇಶಿಸಿದೆ. ಆದರೆ ಸ್ವಿಗ್ಗಿ ಪ್ರತಿಸ್ಪರ್ಧಿ ಜೋಮ್ಯಾಟೋ ವಿನೂತನವಾಗಿ ಸ್ವಾಗತಕೋರಿದೆ. ಜೊಮ್ಯಾಟೋ ಸ್ಪೋರ್ಟೀವ್ ಸ್ಪಿರಿಟ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಮುಂಬೈ(ನ.13) ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ ಐಪಿಒ ಲಿಸ್ಟಿಂಗ್ ಆಗಿ ಇದೀಗ ಷೇರುಮಾರುಕಟ್ಟೆ ಪ್ರವೇಶಿಸಿದೆ. ಬುಧವಾರ ಬೆಳಗ್ಗೆ ಬಿಎಸ್ಇ ಹಾಗೂ ಎನ್‌ಎಸ್ಇನಲ್ಲಿ ಪಟ್ಟಿಯಾಗಿದೆ. ಸ್ವಿಗ್ಗಿಯನ್ನು ಬಿಗ್ರೂಪ್ ಆಫ್ ಸೆಕ್ಯೂರಿಟೀಸ್ ಭಾಗವಾಗಿ ಷೇರುಮಾರುಕಟ್ಟೆಯಲ್ಲಿ ಟ್ರೇಡಿಂಗ್‌ಗೆ ಅನುಮತಿಸಿದೆ. ಇದು ಸ್ವಿಗ್ಗಿಯ ಮಹತ್ವದ ಮೈಲಿಗಲ್ಲು.  ಸ್ವಿಗ್ಗಿಯ ಈ ಮಹತ್ವದ ಘಟ್ಟವನ್ನು ನೇರ ಪ್ರತಿಸ್ಪರ್ಧಿ ಜೊಮ್ಯಾಟೋ ವಿನೂತನವಾಗಿ ಸ್ವಾಗತಿಸಿದೆ. ಜೊಮ್ಯಾಟೋ ಐಪಿಒ ಲಿಸ್ಟಿಂಗ್ ಪಡೆದು ಈಗಾಗಲೇ ಷೇರು ಮಾರುಕಟ್ಟೆಯಲ್ಲಿ ಹೆಜ್ಜೆ ಆರಂಬಿಸಿದೆ. ಇದೀಗ ಸ್ವಿಗ್ಗಿ ಕೂಡ ಷೇರುಮಾರುಕಟ್ಟೆಯಲ್ಲಿ ಜೊತೆಯಾಗಿದೆ. ಹೀಗಾಗಿ ಆನ್ ಗ್ರೌಂಡ್ ಪ್ರತಿಸ್ಪರ್ಧಿಗಳಾಗಿದ್ದರೂ, ಷೇರುಮಾರುಕಟ್ಟೆಯಲ್ಲಿ ಸ್ವಿಗ್ಗಿಯನ್ನು ಜೋಮ್ಯಾಟೋ ಆತ್ಮೀಯವಾಗಿ ಸ್ವಾಗತಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೊಮ್ಯಾಟೋ ನೀನು ಮತ್ತು ನಾನು. ಈ ಸುಂದರ ಜಗತ್ತಿನಲ್ಲಿ ಎಂದಿದೆ. ಜೊತೆಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಕಚೇರಿ ಮುಂಭಾಗದಲ್ಲಿ ಸ್ವಿಗ್ಗಿ ಹಾಗೂ ಜೋಮ್ಯಾಟೋ ಡೆಲಿವರಿ ಎಜೆಂಟ್ ನಿಂತು ವೀಕ್ಷಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿಗೆ.ಸ್ಟಾಕ್ ಎಕ್ಸ್‌ಚೇಂಜ್ ಬೋರ್ಡ್‌ನಲ್ಲಿ ಸ್ವಿಗ್ಗಿ ಲಿಸ್ಟೆಡ್ ಸೂಚನ ಫಲಕವನ್ನು ಹಾಕಿರುವ ಫೋಟೋವನ್ನು ಹಾಕಲಾಗಿದೆ.

ಎಕ್ಸ್ ಬಳಕೆದಾರನ ಸಲಹೆಗೆ ಜೊಮ್ಯಾಟೋ ಸಿಇಒ ಫುಲ್ ಖುಷ್, ಭರ್ಜರಿ ಉದ್ಯೋಗದ ಆಫರ್!

ಸ್ವಿಗ್ಗಿ ಹಾಗೂ ಜೊಮ್ಯಾಟೋ ಎರಡು ಕೂಡ ಫುಡ್ ಡೆಲಿವರಿ ಸಂಸ್ಥೆ. ಆದರೆ ಎರಡು ಸಂಸ್ಥೆ ನಡುವಿನ ಪೈಪೋಟಿ ಸ್ಪರ್ಧಾತ್ಮಕವಾಗಿದೆ ಹಾಗೂ ಉತ್ತಮ ಮನೋಭಾವದಿಂದ ಕೂಡಿದೆ ಅನ್ನೋದು ಈ ಟ್ವೀಟ್ ಸಾಬೀತುಪಡಿಸುತ್ತಿದೆ. ಇದೇ ವೇಳೆ ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್, ಸ್ವಿಗ್ಗಿ ಷೇರುಮಾರುಕಟ್ಟೆಯಲ್ಲಿನ ಆರಂಭಕ್ಕ ಶುಭಕೋರಿದ್ದಾರೆ. 

 

;

 

ಇಂದು ಬೆಳಗ್ಗೆ ಸ್ವಿಗ್ಗಿ ಷೇರುಗಳು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ(NSE) 442.35ರೂಪಾಯಿಗೆ ಟ್ರೇಡಿಂಗ್ ಆರಂಭಿಸಿದೆ. 420 ರೂಪಾಯಿಯಿಂದ ಆರಂಭಗೊಂಡ ಟ್ರೇಡ್442.35 ರೂಪಾಯಿ ವರೆಗೆ ತಲುಪಿತ್ತು.ಐಪಿಒ ಬೆಲೆ 390 ರೂಪಾಯಿ. ಒಪಿಒ ಬೆಲೆಯನ್ನು ಪ್ರತಿ ಷೇರಿಗೆ 370 ರಿಂದ 390 ರೂಪಾಯಿಗೆ ನಿಗಧಿ ಮಾಡಲಾಗಿತ್ತು.  ಇತ್ತೀಚೆಗೆಷ್ಟೇ ಸ್ವಿಗ್ಗಿ ಒಪಿಒ ಆಗಿ ಲಿಸ್ಟ್ ಆಗಿತ್ತು. 

ನವೆಂಬರ್ 11ರಂದು ಲಿಸ್ಟ್ ಆಗಿದ್ದ ಸ್ವಿಗ್ಗಿ ಅರ್ಹ ಹಾಗೂ ಸೂಕ್ತ ಟ್ರೇಡ್ ಬಿಡ್ಡಿಂಗ್‌ದಾರರ ಡಿಮ್ಯಾಟ್ ಖಾತೆಗೆ ಒಪಿಒ ಹಂಚಿಕೆಯಾಗಲಿದೆ. ನವೆಂಬರ್ 12ರಂದು ಷೇರುದಾರರಿಗೆ ಲಿಸ್ಟ್ ಆಗಿತ್ತು. ಇಂದು ಅಂದರೆ ನವೆಂಬರ್ 13ರಂದ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿಯಾಗಿದೆ. ಸ್ವಿಗ್ಗಿ ಷೇರುಮಾರುಕಟ್ಟೆ ಪ್ರವೇಶದಿಂದ ಸ್ವಿಗ್ಗಿಯ ಪ್ರಮುಕ 500 ಉದ್ಯೋಗಿಗಳು ಸುಮಾರು 1 ಕೋಟಿ ರೂಪಾಯಿ ಪಡೆಯಲಿದ್ದಾರೆ. ಈ ಮೂಲಕ ಸ್ವಿಗ್ಗಿಯ 500 ಉದ್ಯೋಗಿಗಳು ಕೋಟ್ಯಾಧೀಶರಾಗಿದ್ದಾರೆ. ಸ್ವಿಗ್ಗಿಯ 5,000 ಸಿಬ್ಬಂಧಿಗಳ ಪೈಕಿ ಒಟ್ಟು 9,000 ರೂಪಾಯಿ ಮೌಲ್ಯದ ಷೇರುಗಳಿವೆ.

ಜೊಮ್ಯಾಟೋ ಟ್ವೀಟ್ ಮಾಡಿ ಸ್ವಾಗತಿಸಿದ ರೀತಿಯನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಅದೆಷ್ಟೇ ಪೈಪೋಟಿ ಇದ್ದರೂ ಈ ರೀತಿಯ ಸ್ಪರ್ಧೆ ನೋಡಲು ಬಯಸುತ್ತಿದ್ದೇವೆ ಎಂದು ಹಲವರು ಮಚ್ಚುಗೆ ಸೂಚಿಸಿದ್ದಾರೆ. ಆದರೆ ಮತ್ತೆ ಕೆಲವರು ಪ್ಲಾಟ್‌ಫಾರ್ಮ್ ಶುಲ್ಕ ಸೇರಿದಂತೆ ಎಲ್ಲಾ ಶುಲ್ಕ ವಿಧಿಸಿ ಇದೀಗ ಇಬ್ಬರೂ ಷೇರುಮಾರುಕಟ್ಟೆಯಲ್ಲಿ ಪಯಣ ಆರಂಭಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಜೋಮ್ಯಾಟೋ ಏಳನೀರು ಮಾರಿದರೆ ಬೆಲೆ ಎಷ್ಟು? ಗ್ರಾಹಕನಿಗೆ ವಿಧಿಸುವ ಚಾರ್ಜಸ್ ಕುರಿತ ಟ್ರೋಲ್!
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!