ಈತ ವಿಶ್ವದ 5ನೇ ಶ್ರೀಮಂತ, ಆದರೂ ಅಂಬಾನಿಗೆ ಪ್ರತಿ ತಿಂಗಳು ಪಾವತಿಸುತ್ತಾರೆ 40 ಲಕ್ಷ ರೂ

By Chethan Kumar  |  First Published Jan 5, 2025, 8:19 PM IST

ಮುಕೇಶ್ ಅಂಬಾನಿ ಪ್ರತಿ ದಿನ ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಾರೆ. ರಿಲಯನ್ಸ್ ಗ್ರೂಪ್ ಉದ್ಯಮ, ಜಿಯೋ ಸೇರಿದಂತೆ ಹಲವು ಉದ್ಯಮಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಉದ್ಯಮಿ ಮುಕೇಶ್ ಅಂಬಾನಿಗಿಂತ ಶ್ರೀಮಂತ. ಆದರೆ ಪ್ರತಿ ತಿಂಗಳು ಈ ಉದ್ಯಮಿ ಮುಕೇಶ್ ಅಂಬಾನಿಗೆ 40 ಲಕ್ಷ ರೂಪಾಯಿ ಪಾವತಿಸುತ್ತಿದ್ದಾರೆ.
 


ಮುಂಬೈ(ಜ.05) ಮುಕೇಶ್ ಅಂಬಾನಿಯ ಎಲ್ಲಾ ಉದ್ಯಮಗಳು ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಿದೆ. ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ. ಅಂಬಾನಿಯ ಆದಾಯ ಮೂಲಗಳು ಹಲವಿದೆ. ಇದರ ನಡುವೆ ಕೆಲ ಕುತೂಹಲಕಾರಿ ಸಂಗತಿಗಳು ಬಯಲಾಗಿದೆ.  ವಿಶೇಷ ಅಂದರೆ ಮುಕೇಶ್ ಅಂಬಾನಿಗಿಂತ ಶ್ರೀಮಂತ, ವಿಶ್ವದ 5ನೇ ಶ್ರೀಮಂತ ಅನ್ನೋ ಹಗ್ಗಳಿಕೆಗೆ ಪಾತ್ರರಾಗಿರುವ ಬೆರ್ನಾರ್ಡ್ ಅರ್ನಾಲ್ಟ್ ಪ್ರತಿ ತಿಂಗಳು ಮುಕೇಶ್ ಅಂಬಾನಿಗೆ 40 ಲಕ್ಷ ರೂಪಾಯಿ ಪಾವತಿಸುತ್ತಾರೆ. ಹಾಗಂತ ಅಂಬಾನಿ ಬೆರ್ನಾರ್ಡ್ ಅರ್ನಾಲ್ಟ್ ಕಂಪನಿಗಳಲ್ಲಿ ಯಾವುದೇ ಪಾಲುದಾರಿಕೆ ಹೊಂದಿಲ್ಲ. 

ಜಗತ್ತಿನ ಅತೀ ದುಬಾರಿ ಲೂಯಿಸ್ ವಿಟ್ಟನ್ ಫ್ಯಾಶನ್ ಬ್ರ್ಯಾಂಡ್ ಕಂಪನಿಯ ಸಿಇಒ ಬೆರ್ನಾರ್ಡ್ ಅರ್ನಾಲ್ಟ್. ಈ ಉದ್ಯಮಿ ಆಸ್ತಿ 161.2 ಬಿಲಿಯನ್ ಅಮೆರಿಕನ್ ಡಾಲರ್. ಇನ್ನು ಮುಕೇಶ್ ಅಂಬಾನಿ ಒಟ್ಟು ಆಸ್ತಿ ಮೌಲ್ಯ ಸರಿಸುಮಾರು 96.6 ಬಿಲಿಯನ್ ಅಮೆರಿಕನ್ ಡಾಲರ್. ಅಂಬಾನಿಗಿಂತ ಶ್ರೀಮಂತ ಅರ್ನಾಲ್ಡ್ ಪ್ರತಿ ತಿಂಗಳು ಅಂಬಾನಿಗೆ 40 ಲಕ್ಷ ರೂಪಾಯಿ ಪಾವತಿಸುತ್ತಿರುವುದೇಕೆ?

Tap to resize

Latest Videos

ಎಲ್ಲಾ ದಾಖಲೆ ಮುರಿದ ಅನಂತ್ ಅಂಬಾನಿ, ವಿಶ್ವದ ಅತೀ ದುಬಾರಿ ವಾಚ್ ಖರೀದಿ!

ಲೂಯಿಸ್ ವಿಟ್ಟನ್ ಪೇರೆಂಟ್ ಕಂಪನಿ ಎಲ್‌ವಿಎಂಹೆಚ್ ಮೊಯಿಟ್ ಹೆನೆಸ್ಸಿ. ಇದರ ಅಡಿ ಲೂಯಿಸ್ ವಿಟ್ಟನ್, ಟಿಫಾನಿ ಅಂಡ್ ಕೋ, ಡಿವೋರ್ ಗಿವೆಂಚಿ, ಬಲ್ಗಾರಿ ಸೇರಿದಂತ ಹಲವು ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ. ಇದರೆಲ್ಲದರ ಸಿಇಒಒ ಬೆರ್ನಾರ್ಡ್ ಅರ್ನಾಲ್ಟ್. ಜಗತ್ತಿನ ಅತ್ಯಂತ ದುಬಾರಿ ಫ್ಯಾಶನ್ ಬ್ರ್ಯಾಂಡ್ ಆಗಿರುವ ಲೂಯಿಸ್ ವಿಟ್ಟನ್ ಮಳಿಗೆಯೊಂದು ಮುಕೇಶ್ ಅಂಬಾನಿ ಮಾಲೀಕತ್ವದ ಅತ್ಯಂತ ದುಬಾರಿ ಶಾಪಿಂಗ್ ಮಾಲ್ ಜಿಯೋ ವರ್ಲ್ಡ್ ಪ್ಲಾಜದಲ್ಲಿದೆ. 7,365 ಚದರ ಅಡಿ ವಿಸ್ತೀರ್ಣದ ಈ ಮಳಿಗೆಗೆ ಬೆರ್ನಾರ್ಡ್ ಅರ್ನಾಲ್ಟ್ ಪ್ರತಿ ತಿಂಗಳು 40 ಲಕ್ಷ ರೂಪಾಯಿ ಬಾಡಿಗೆಯನ್ನು ಮುಕೇಶ್ ಅಂಬಾನಿಗೆ ಪಾವತಿಸುತ್ತಿದ್ದಾರೆ.

2023ರಲ್ಲಿ ಜಿಯೋ ವರ್ಲ್ಡ್ ಪ್ಲಾಜಾ ಐಷಾರಾಮಿ ಶಾಪಿಂಗ್ ಮಾಲ್ ಆರಂಭಗೊಂಡಿತ್ತು. ಇದು ಭಾರತದ ಹಾಗೂ ವಿಶ್ವದ ಅತ್ಯಂತ ದುಬಾರಿ ಶಾಪಿಂಗ್ ಮಾಲ್‌ಗಳಲ್ಲಿ ಸ್ಥಾನ ಪಡೆದಿದೆ. ನವೆಂಬರ್ 1, 2023ರಿಂದ ಬೆರ್ನಾರ್ಡ್ ಅರ್ನಾಲ್ಟ್ ತಮ್ಮ ಲೂಯಿಸ್ ವಿಟ್ಟನ್ ಮಳಿಗೆ ಬಾಡಿಗೆಯನ್ನು ಪಾವತಿಸುತ್ತಿದ್ದಾರೆ. ಪ್ರತಿ ತಿಂಗಳು 40.5 ಲಕ್ಷ ರೂಪಾಯಿ ಬಾಡಿಗೆಯನ್ನು ಮುಕೇಶ್ ಅಂಬಾನಿಗೆ ಪಾವತಿಸುತ್ತಾರೆ.

ಮುಂಬೈನ ಬಾಂದ್ರಾ ಕುರ್ಲ್ ಕಾಂಪ್ಲೆಕ್ಸ್‌ನಲ್ಲಿರುವ ಈ ಜಿಯೋ ವರ್ಲ್ಡ್ ಪ್ಲಾಜಾ ವಿಶ್ವದ ಅತೀ ದುಬಾರಿ ಶಾಪಿಂಗ್ ಮಾಲ್‌ಗಳಲ್ಲಿ ಒಂದು. ಈ ಶಾಪಿಂಗ್ ಮಾಲ್‌ನಲ್ಲಿ ವಿಶ್ವದ ಅತೀ ದುಬಾರಿ ಬ್ರ್ಯಾಂಡ್ ಕಂಪನಿಗಳ ಮಳಿಗೆಗಳಿವೆ. ಫ್ಯಾಶನ್, ವಾಚ್, ಜ್ಯೂವೆಲ್ಲರಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಮಳಿಗೆಗಳಿವೆ. ಎಲ್ಲವೂ ವಿಶ್ವದ ಅತ್ಯಂತ ದುಬಾರಿ ಹಾಗೂ ಪ್ರಿಮಿಯರ್ ಬ್ರ್ಯಾಂಡ್ ಉತ್ಪನ್ನಗಳಾಗಿದೆ. 

ಇದೇ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಎಲ್‌ವಿಎಂಹೆಚ್ ಮೊಯಿಟ್ ಹೆನೆಸ್ಸಿ ಕಂಪನಿಯ ಅಡಿಯಲ್ಲಿರುವ ಡಿಯೋರ್ ಮಳಿಗೆ ಕೂಡ ಇದೆ. ಈ ಮಿಳೆಗೆ ಪ್ರತಿ ತಿಂಗಳು 21.56 ಲಕ್ಷ ರೂಪಾಯಿ ಬಾಡಿಗೆಯನ್ನು ಪಾವತಿಸುತ್ತಿದೆ. ಗುಕ್ಕಿ, ಕಾರ್ಟಿಯರ್, ರಿಮೋವಾ. ಬರ್ಬೆರಿ ಸೇರಿದಂತೆ ವಿಶ್ವದ ಪ್ರಸಿದ್ಧ ಬ್ರ್ಯಾಂಡ್ ಮಳಿಗೆಗಳು ಜಿಯೋ ವರ್ಲ್ಡ್ ಪ್ಲಾಜಾದಲ್ಲಿದೆ. ಜಿಯೋ ವರ್ಲ್ಡ್ ಪ್ಲಾಜಾದಲ್ಲಿರುವ ಎಲ್ಲಾ ಮಳಿಗೆಗಳು 20 ರಿಂದ 40 ಲಕ್ಷ ರೂಪಾಯಿವರೆಗೆ ಬಾಡಿಗೆ ಪಾವತಿಸುತ್ತಿದೆ. ಕೇವಲ ಜಿಯೋ ವರ್ಲ್ಡ್ ಪ್ಲಾಜಾದಿಂದ ಮುಕೇಶ್ ಅಂಬಾನಿಗೆ ಪ್ರತಿ ತಿಂಗಳು ಕೋಟಿ ಕೋಟಿ ರೂಪಾಯಿ ಬಾಡಿಗೆ ಬರುತ್ತಿದೆ. ಇದು ಒಂದೇ ಕಟ್ಟದಿಂದ ಗರಿಷ್ಠ ಬಾಡಿಗೆ ಪಡೆಯುತ್ತಿರುವ ಉದ್ಯಮಿಗಳಲ್ಲಿ ಮುಕೇಶ್ ಅಂಬಾನಿ ಮುಂಚೂಣಿಯಲ್ಲಿದ್ದಾರೆ. ಇಷ್ಟೇ ಅಲಲ್ ಹಲವು ದಾಖಲೆಯನ್ನು ಬರೆದಿದ್ದಾರೆ.

ಅಂದು ತಂದೆ ಜೊತೆ ಉಸ್ತುವಾರಿ, 25 ವರ್ಷ ಬಳಿಕ ಹೊಸ ಮೈಲಿಗಲ್ಲು ಸ್ಥಾಪಿಸಿದ ಮುಕೇಶ್ ಅಂಬಾನಿ!

click me!