ರೈತರೇ ಅಪ್ಪಿ ತಪ್ಪಿಯೂ ಈ 2 ತಪ್ಪುಗಳನ್ನ ಮಾಡಬೇಡಿ; ಇಲ್ಲವಾದ್ರೆ ಸರ್ಕಾರದ ಹಣ ಬರಲ್ಲ

Published : Jan 05, 2025, 05:04 PM IST
ರೈತರೇ ಅಪ್ಪಿ ತಪ್ಪಿಯೂ ಈ 2 ತಪ್ಪುಗಳನ್ನ ಮಾಡಬೇಡಿ; ಇಲ್ಲವಾದ್ರೆ ಸರ್ಕಾರದ ಹಣ ಬರಲ್ಲ

ಸಾರಾಂಶ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ಪಡೆಯುತ್ತಿರುವ ರೈತರು ಕೆಲವು ಮುಖ್ಯ ಕೆಲಸಗಳನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ನಿಮ್ಮಿಂದ ತಪ್ಪಾದ್ರೆ  ಸರ್ಕಾರದಿಂದ ಬರೋ ಹಣ ಸ್ಥಗಿತಗೊಳ್ಳುವ ಸಾಧ್ಯತೆಗಳಿರುತ್ತವೆ. 

ನವದೆಹಲಿ: ಕೇಂದ್ರ ಸರ್ಕಾರ ದೇಶದ ಅನ್ನದಾತರಿಗಾಗಿ ಹಲವು ಯೋಜನೆಗಳನ್ನು ತಂದಿದೆ. ಯೋಜನೆಗಳ ಜೊತೆಯಲ್ಲಿ ಕೃಷಿ ಉಪಕರಣ, ರಸಗೊಬ್ಬರ ಖರೀದಿಯಲ್ಲಿಯೂ ಕೇಂದ್ರ ಸರ್ಕಾರದಿಂದ  ಸಬ್ಸಿಡಿಯೂ ದೊರೆಯುತ್ತದೆ. ಕೃಷಿ ಹೊಂಡ ನಿರ್ಮಾಣ, ಯಂತ್ರೋಪಕರಣಗಳ ಖರೀದಿಗೆ ಸರ್ಕಾರದಿಂದ ಆರ್ಥಿಕ ನೆರವು ಸಿಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದಿಂದ ರೈತರಿಗೆ ಕಂತುಗಳಲ್ಲಿ 2 ಸಾವಿರ ರೂಪಾಯಿ ನೀಡಲಾಗುತ್ತಿದೆ. ಈ ಯೋಜನೆಯ ಫಲಾನುಭವಿಗಳಾಗಿದ್ರೆ ಈ ಮೂರು ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಒಂದು ವೇಳೆ ನಿಮ್ಮಿಂದ ತಪ್ಪಾದ್ರೆ  ಸರ್ಕಾರದಿಂದ ಬರೋ ಹಣ ಸ್ಥಗಿತಗೊಳ್ಳುವ ಸಾಧ್ಯತೆಗಳಿರುತ್ತವೆ. 

ದೇಶದ ಶೇ.50ರಷ್ಟು ಜನರು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಕಳೆದ  ನಾಲ್ಕೈದು ವರ್ಷಗಳಿಂದ ಕೃಷಿಯತ್ತ ಯುವ ಸಮುದಾಯ ಆಕರ್ಷಿತರಾಗಿದ್ದು, ಆಧುನಿಕ ಮತ್ತು ವೈಜ್ಞಾನಿಕ ವಿಧಾನದ  ಮೂಲಕ ವ್ಯವಸಾಯ ಮಾಡುತ್ತಿದ್ದಾರೆ. ಆದ್ರೆ ಕೆಲವು ಪ್ರದೇಶಗಳಲ್ಲಿ ಬರಗಾಲ, ಅತೀವೃಷ್ಠಿಯಿಂದಾಗಿ ರೈತರು ಬೆಳೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ರೈತರ ಸಹಾಯಕ್ಕೆ ಸರ್ಕಾರಗಳು ಬರುತ್ತವೆ. ಇನ್ನು ಅನೇಕರು ಕಡಿಮೆ ಜಮೀನಿನಲ್ಲಿಯೇ ಕೃಷಿ ಮಾಡಿ, ಕೆಲವೊಮ್ಮೆ ನಷ್ಟಕ್ಕೆ ಒಳಗಾಗುತ್ತಾರೆ. ಇದಕ್ಕಾಗಿ ಕೇಂದ್ರ  ಸರ್ಕಾರ 2019ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಪ್ರಾರಂಭಿಸಿತು. 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ದೇಶದ ಅರ್ಹ ಫಲಾನುಭವಿ ರೈತರಿಗೆ ಪ್ರತಿವರ್ಷ 6 ಸಾವಿರ ರೂಪಾಯಿಯನ್ನು 3 ಕಂತುಗಳಲ್ಲಿ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತದೆ. ಇದುವರೆಗೆ ಒಟ್ಟು 13 ಕೋಟಿಗೂ ಹೆಚ್ಚು ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದು,  ಸರ್ಕಾರ ಒಟ್ಟು 18 ಕಂತುಗಳನ್ನು ಪಾವತಿಸಿದೆ. ಈ ಯೋಜನೆಯಡಿ ಹಣ ಪಡೆಯುತ್ತಿರೋ ರೈತರು ಎರಡು ಕೆಲಸಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಆದ್ರೆ ನಿರ್ಲಕ್ಷ್ಯದಿಂದ ಈ ತಪ್ಪು ಮಾಡಿದ್ರೆ ಹಣ ಜಮೆ ಬರೋದು ಸ್ಥಗಿತಗೊಳ್ಳಲಿದೆ.  

ಇದನ್ನೂ ಓದಿ:ರೈತರಿಗೆ ಯಾವೆಲ್ಲಾ ವಸ್ತುಗಳ ಮೇಲೆ ಸಬ್ಸಿಡಿ ಸಿಗುತ್ತೆ? ಹೊಸ ವರ್ಷಕ್ಕೆ ಭಾರತ ಸರ್ಕಾರದಿಂದ ಸಿಕ್ಕಿದೆ ಸ್ಪೆಷಲ್ ಗಿಫ್ಟ್

ರೈತರು ಮಾಡಬೇಕಾದ ಕೆಲಸಗಳು
1.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಆರ್ಥಿಕ ನೆರವು ಪಡೆದುಕೊಳ್ಳುವ ರೈತರು ಬ್ಯಾಂಕ್ ಖಾತೆಯಲ್ಲಿನ ಡಿಬಿಟಿ (ಡೈರೆಕ್ಡ್ ಬೆನೆಫಿಟ್ ಟ್ರಾನ್ಸ್‌ಫರ್) ಆಯ್ಕೆಯನ್ನು ಆನ್ ಮಾಡಬೇಕು. ಯಾಕೆಂದ್ರೆ ಸರ್ಕಾರ ಡಿಬಿಟಿ ಮೂಲಕವೇ  ಹಣ ವರ್ಗಾಯಿಸುತ್ತದೆ. ಒಂದು ವೇಳೆ ಡಿಬಿಟಿ ಆಯ್ಕೆ ಆಫ್ ಆಗಿದ್ದರೆ ಹಣ ಜಮೆ ಆಗಲ್ಲ.

2.ಮತ್ತೊಂದು ಪ್ರಮುಖ ವಿಷಯ ಫಲಾನುಭವಿ ರೈತರಿಗೆ ಇ-ಕೆವೈಸಿ ಪೂರ್ಣ ಮಾಡುತ್ತೇವೆ ಸೂಚನೆ ಮಾಡಲಾಗಿದೆ. ಆದ್ರೂ ಕೆಲವರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದ ರೈತರ ಖಾತೆಗೆ ಹಣ ಜಮೆ ಆಗಲ್ಲ.

ಇದನ್ನೂ ಓದಿ: PM Kisan: ರೈತರೇ ಪಿಎಂ ಕಿಸಾನ್ ಹಣ ಬಂದಿಲ್ಲವೇ? ಏನು ಮಾಡಬೇಕು? ಇಲ್ಲಿದೆ ಪರಿಹಾರ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜನವರಿಯಿಂದ ಬದಲಾಗಲಿದೆ ನಿಮ್ಮ ದೈನಂದಿನ ಬದುಕು: ಹೊಸ ನಿಯಮ, ಮಹತ್ವದ ಬದಲಾವಣೆ
ವರ್ಷದ ಮೊದಲ ದಿನವೇ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಶಾಕ್ ನೀಡಿದ LPG ಸಿಲಿಂಡರ್