ವರ್ಕ್ ಫ್ರಂ ಹೋಂ ಎಫೆಕ್ಟ್: ಈ ಬಾರಿ ನಿಮಗೆ ಹೆಚ್ಚು ತೆರಿಗೆ!| ಪ್ರಯಾಣ, ಮನೆ ಬಾಡಿಗೆ, ವರ್ಕ್ ಫ್ರಂ ಹೋಂ ಭತ್ಯೆಗೆ ತೆರಿಗೆ ಬೀಳುವ ಸಾಧ್ಯತೆ
ನವದೆಹಲಿ(ಆ.18): ಕೊರೋನಾ ವೈರಸ್‌ನಿಂದಾಗಿ ವರ್ಕ್ ಫ್ರಂ ಹೋಂ ಹೆಚ್ಚಳವಾಗಿರುವುದರಿಂದ ದೇಶಾದ್ಯಂತ ಬಹಳಷ್ಟುನೌಕರಸ್ಥರು ಹೆಚ್ಚು ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ. ಅವರಿಗೆ ಪ್ರಯಾಣದ ವೆಚ್ಚ, ಮನೆ ಬಾಡಿಗೆ ಹಾಗೂ ಹೊರಗೆ ಊಟ-ತಿಂಡಿ ಮಾಡುವುದರ ಖರ್ಚು ಉಳಿಯುತ್ತಿದೆ. ಜೊತೆಗೆ ಹಲವಾರು ಕಂಪನಿಗಳು ವರ್ಕ್ ಫ್ರಂ ಹೋಂ ಭತ್ಯೆಯನ್ನೂ ನೀಡುತ್ತಿವೆ. ಆದರೆ, ಇದೇ ಕಾರಣಕ್ಕೆ ಈ ವರ್ಷ ನೌಕರಸ್ಥರು ಪಾವತಿಸಬೇಕಾದ ಆದಾಯ ತೆರಿಗೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತೆರಿಗೆ ತಜ್ಞರು ಹೇಳುತ್ತಿದ್ದಾರೆ.
ತೆರಿಗೆ ರಿಟರ್ನ್ಸ್‌ನಲ್ಲಿ ದೊಡ್ಡ ವ್ಯವಹಾರ ತಿಳಿಸಬೇಕಾಗಿಲ್ಲ!
undefined
ನೌಕರರು ಕಚೇರಿಗೆ ಹೋಗಿ-ಬಂದು ಮಾಡುವುದು ಕಡಿಮೆಯಾಗಿರುವುದರಿಂದ ಪ್ರಯಾಣ ಭತ್ಯೆ ಉಳಿತಾಯವಾಗುತ್ತಿದೆ. ಆದರೆ, ಈ ಭತ್ಯೆ ಖರ್ಚಾಗಿದ್ದರೆ ಮಾತ್ರ ತೆರಿಗೆ ವಿನಾಯ್ತಿ ಸಿಗುತ್ತಿತ್ತು. ಈಗ ಪ್ರಯಾಣ ಭತ್ಯೆ ಖರ್ಚಾಗದೆ ಇರುವುದರಿಂದ ಅದರ ವೆಚ್ಚವನ್ನು ತೆರಿಗೆ ರಿಟನ್ಸ್‌ರ್ ಸಲ್ಲಿಸುವಾಗ ತೋರಿಸಲು ಸಾಧ್ಯವಿಲ್ಲ. ಹಾಗೆಯೇ, ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ)ಗೂ ಈ ಬಾರಿಗೆ ತೆರಿಗೆ ಪಾವತಿಸಬೇಕಾಗಿ ಬರುವ ಸಾಧ್ಯತೆಯಿದೆ. ಏಕೆಂದರೆ ಬಹಳಷ್ಟುನೌಕರರು ನಗರ ಪ್ರದೇಶದಲ್ಲಿರುವ ಬಾಡಿಗೆ ಮನೆ ಖಾಲಿ ಮಾಡಿ ಹಳ್ಳಿಗಳಲ್ಲಿರುವ ಸ್ವಂತ ಮನೆಗೆ ತೆರಳಿ ಅಲ್ಲಿಂದಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರು ಮನೆ ಬಾಡಿಗೆ ಪಾವತಿಸುತ್ತಿಲ್ಲವಾದ ಕಾರಣ ಮನೆ ಬಾಡಿಗೆ ಭತ್ಯೆಗೂ ತೆರಿಗೆ ಕಟ್ಟಬೇಕಾಗುತ್ತದೆ.
ಮದ್ಯಪ್ರಿಯರಿಗಾಗಿ ಹಿಪ್ ಬಾರ್ ತೆರೆದ ಫ್ಲಿಪ್ ಕಾರ್ಟ್.. ಆನ್‌ಲೈನ್‌ನಲ್ಲೇ ಎಣ್ಣೆ!
ಮೂರನೆಯದಾಗಿ, ರಜೆ ಪ್ರಯಾಣ ಭತ್ಯೆಗೂ ತೆರಿಗೆ ಕಟ್ಟಬೇಕಾಗಿ ಬರಬಹುದು. ಏಕೆಂದರೆ ಕೊರೋನಾ ಇರುವುದರಿಂದ ಯಾರೂ ರಜೆಯಲ್ಲಿ ಪ್ರವಾಸಕ್ಕೆ ಹೋಗುತ್ತಿಲ್ಲ. ಹೀಗಾಗಿ ಅದರ ಬಿಲ್ ತೋರಿಸಿ ತೆರಿಗೆ ವಿನಾಯ್ತಿ ಪಡೆಯಲು ಸಾಧ್ಯವಿಲ್ಲ. ನಾಲ್ಕನೆಯದಾಗಿ, ಸಾಕಷ್ಟುಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಅನುಕೂಲ ಮಾಡಿಕೊಡಲು ಇಂಟರ್ನೆಟ್ ಬಿಲ್, ವಿದ್ಯುತ್ ಶುಲ್ಕ, ಲ್ಯಾಪ್‌ಟಾಪ್ ಖರೀದಿಗೆ ಹಣ, ಪೀಠೋಪಕರಣ ಕೊಳ್ಳಲು ಹೀಗೆ ವರ್ಕ್ ಫ್ರಂ ಹೋಂ ಭತ್ಯೆ ನೀಡುತ್ತಿವೆ. ಇದಕ್ಕೆ ಬಿಲ್ ನೀಡಬೇಕಾದ ಅಗತ್ಯವಿಲ್ಲದೆ ಇದ್ದರೆ ನೌಕರರ ಆದಾಯದ ಭಾಗವಾಗಿ ಇದಕ್ಕೂ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.