ಜಗತ್ತಿನ ಅತಿ ಶ್ರೀಮಂತ ಬಿಲ್ ಗೇಟ್ಸ್‌ಗೆ ಓರ್ವನ ಮೇಲೆ ಹೊಟ್ಟೆಕಿಚ್ಚಿದ್ದರೆ ಅದು ಆ್ಯಪಲ್ ಕಂಪನಿಯ ಸಹಸಂಸ್ಥಾಪಕ ಸ್ಟೀವ್ ಜಾಬ್ಸ್ ಮೇಲೆ. ಈ ಬಗ್ಗೆ ಅವರೇ ಹೇಳಿದ್ದಾರೆ ಕೇಳಿ...
ಶತ್ರುಗಳಾಗಿ ಕಾಣುತ್ತಿದ್ದವರು, ನಿಧಾನವಾಗಿ ಪರಸ್ಪರ ಗೌರವ ಹೊಂದಿ, ಬಳಿಕ ಗೆಳೆಯರಾದ ಅಪರೂಪದ ಸಂಬಂಧ ತಂತ್ರಜ್ಞಾನ ಲೋಕದ ದಿಗ್ಗಜರಾದ ಬಿಲ್ ಗೇಟ್ಸ್ ಹಾಗೂ ಸ್ಟೀವ್ ಜಾಬ್ಸ್ ನಡುವಿನದು. ಕೆಲವೊಮ್ಮೆ ಸ್ಪರ್ಧೆ ಹಾಗೂ ಸ್ನೇಹ ಒಟ್ಟೊಟ್ಟಿಗೆ ಸಾಗಿದರೆ ಮತ್ತೆ ಕೆಲವೊಮ್ಮೆ ಸ್ಪರ್ಧಾತ್ಮಕ ಹಗೆತನವೇ ಮೇಲುಗೈ ಸಾಧಿಸುತ್ತಿತ್ತು.
80ರ ದಶಕಾರಂಭದಲ್ಲಿ ಗೇಟ್ಸ್ ಮೈಕ್ರೋಸಾಫ್ಟ್ ಹುಟ್ಟುಹಾಕುತ್ತಿದ್ದ ಸಮಯದಲ್ಲೇ ಜಾಬ್ಸ್ ಆ್ಯಪಲ್ ಸೆಟಪ್‌ನಲ್ಲಿ ತೊಡಗಿದ್ದರು. ಹೀಗಾಗಿ, ಔದ್ಯಮಿಕ ರಂಗದಲ್ಲಿ ಅವರಿಬ್ಬರ ನಡುವೆ ಸ್ಪರ್ಧೆ, ಹಗೆತನ ಹುಟ್ಟಿದ್ದು ಸಹಜವೇ. ಆರಂಭದಲ್ಲಿ ಗೆಳೆತನವೇ ಇತ್ತು. ಕೆಲವೇ ವರ್ಷಗಳಲ್ಲಿ ಅದು ಹಗೆಯಾಗಿ ಬದಲಾಯ್ತು. ಆ್ಯಪಲ್‌ನ ಐಡಿಯಾಗಳನ್ನು ಗೇಟ್ಸ್ ಕದಿಯುತ್ತಿದ್ದಾರೆಂದು ಸ್ಟೀವ್ ಆರೋಪ ಮಾಡಿದ ಮೇಲೆ ಇಬ್ಬರ ನಡುವೆ ಮಾತಿನ ಸಮರ ಜೋರಾಗಿಯೇ ಇತ್ತು.
undefined
ಸ್ಟೀವ್ ಜಾಬ್ಸ್ ಒಮ್ಮೆ ಬಿಲ್ ಗೇಟ್ಸ್‌ರ ಅಭಿರುಚಿ ಹಾಗೂ ಕಲ್ಪನೆಯನ್ನು ಅವಮಾನ ಮಾಡಿದ್ದರೆ, ಗೇಟ್ಸ್ ಸಹ ಸ್ಟೀವ್ ಒಬ್ಬ ವಿಚಿತ್ರ ಎಡವಟ್ಟಿನಿಂದ ಹುಟ್ಟಿದ ಮನುಷ್ಯ ಎಂದು ಹಂಗಿಸಿದ್ದರು. ಸುಮಾರು 30 ವರ್ಷಗಳ ಕಾಲ ಇಬ್ಬರೂ ಒಬ್ಬರನ್ನೊಬ್ಬರು ಸಾರ್ವಜನಿಕವಾಗಿ ಕೆಣಕುತ್ತಿದ್ದರು. ಆತನಿಗೆ ಟೆಕ್ನಾಲಜಿಯೇ ಗೊತ್ತಿಲ್ಲ, ಅವನೊಬ್ಬ ಸೇಲ್ಸ್‌ಮ್ಯಾನ್ ಅಷ್ಟೇ ಎಂದು ಜಾಬ್ಸ್ ಎಂದರೆ, ಮೈಕ್ರೋಸಾಫ್ಟ್ ಕಳಪೆ, ಗೇಟ್ಸ್‌ಗೆ ಕಲ್ಪನಾಶಕ್ತಿ ಇಲ್ಲ, ಹಾಗಾಗಿಯೇ ಅವರು ಇತ್ತೀಚೆಗೆ ದಾನಧರ್ಮಗಳ ಕಡೆ ಮನಸ್ಸು ಮಾಡಿದ್ದಾರೆ ಎಂದು ಸ್ಟೀವ್ ಹೇಳುತ್ತಿದ್ದರು.
ಆದರೆ, 9 ವರ್ಷಗಳ ಹಿಂದೆ ಆ್ಯಪಲ್ ಸಹಸಂಸ್ಥಾಪಕ ಸ್ಟೀವ್ ಜಾಬ್ಸ್ ನಿಧನ ಹೊಂದಿದ ಬಳಿಕ ಬಿಲ್ ಗೇಟ್ಸ್ ಸ್ಟೀವ್‌ನನ್ನು ಹೊಗಳುತ್ತಿದ್ದಾರೆ. ಆ ನಂತರದಲ್ಲಿ ಅವರಿಬ್ಬರ ಸಂಬಂಧದ ಕುರಿತ ವಿಷಯಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಕೂಡಾ ಆ್ಯಪಲ್ ಸಿಇಒ ಬಗ್ಗೆ ಕೆಲವು ಮಾತನಾಡಿದ್ದಾರೆ ಬಿಲ್ ಗೇಟ್ಸ್. ಅದರಲ್ಲಿ ಶ್ಲಾಘನೆಯ ಜೊತೆಗೆ ಕೆಲ ಅಚ್ಚರಿಯ ಸೀಕ್ರೆಟ್‌ಗಳನ್ನೂ ಹೇಳಿದ್ದಾರೆ.
ಈ ಜಾಗತಿಕ ಬಿಸ್ನೆಸ್ ದಿಗ್ಗಜ ಸ್ಟೀವ್ ಜಾಬ್ಸ್ ಬಗ್ಗೆ ಹೇಳಿರುವುದೇನು ಓದಿ...
ಸಾಮಾನ್ಯವಾಗಿ ಒಂದೇ ಸ್ಫರ್ಧಾತ್ಮಕ ಜಗತ್ತಿನಲ್ಲಿರುವವರು ಮತ್ತೊಬ್ಬರನ್ನು ಹೊಗಳುವುದು ಅಪರೂಪ. ಹಾಗೆ ಹೊಗಳಲು ದೊಡ್ಡತನ ಬೇಕು. ಇನ್ನು ಮೊದಲಿಂದಲೂ ಒಬ್ಬರನ್ನು ತೆಗಳಿಕೊಂಡು ಬಂದ ಮೇಲೆ ಮತ್ತೆ ಅವರನ್ನು ಹೊಗಳಬೇಕೆಂದರೆ ಖಂಡಿತಾ ಅದು ಅಸಾಮಾನ್ಯ ವಿಷಯವೇ. ಹೀಗೆ ಬಿಲ್ ಗೇಟ್ಸ್, ಸ್ಟೀವ್‌ನ ಕುರಿತು ಹೊಗಳಿದ್ದು ಅದೇ ಕಾರಣಕ್ಕೆ ಆಸಕ್ತಿ ಕೆರಳಿಸುತ್ತದೆ.
ಜಾಬ್ಸ್ ಒಬ್ಬ ಅಸಾಮಾನ್ಯ ಜೀನಿಯಸ್ ಎಂದು ಹೊಗಳಿರುವ ಅವರು, ಆತನ ಬಗ್ಗೆ ತಮಗೆ ಹೊಟ್ಟೆಕಿಚ್ಚಿತ್ತು ಎಂದೂ ಒಪ್ಪಿಕೊಳ್ಳುವ ಔದಾರ್ಯ ತೋರಿದ್ದಾರೆ.
'ಜಾಬ್ಸ್ ಒಬ್ಬ ಜೀನಿಯಸ್. ಆತ ಆ್ಯಪಲ್‌ಗೆ ಹಿಂದಿರುಗಿದ ಮೇಲೆ ಏನೇನು ಮಾಡಿದ ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಆತನ ಹೊರತಾಗಿ ಇನ್ಯಾರೇ ಆ ಸ್ಥಾನದಲ್ಲಿದ್ದರೂ ಆತ ಮಾಡಿದ್ದನ್ನು ಮಾಡಲು ಸಾಧ್ಯವಿರಲಿಲ್ಲ. ನಾನು ಕೂಡಾ ಅಂಥ ಸಾಧನೆ ಮಾಡಲಾಗುತ್ತಿರಲಿಲ್ಲ' ಎಂದು ಗೇಟ್ಸ್ ಹೊಗಳಿದ್ದಾರೆ.
ಜಾಬ್ಸ್ ಒಬ್ಬ ಮಾಂತ್ರಿಕ
ಜನರನ್ನು ಪ್ರೇರೇಪಿಸುವ ವಿಷಯದಲ್ಲಿ ಜಾಬ್ಸ್ ಓರ್ವ ಮಾಂತ್ರಿಕನಾಗಿದ್ದ. ಆತನ ಈ ಗುಣದ ಬಗ್ಗೆ ನನಗೆ ಹೊಟ್ಟೆಕಿಚ್ಚಾಗುತ್ತಿತ್ತು ಎಂದು ತಮಾಷೆಯಾಗಿ ಹೇಳಿದ್ದಾರೆ. ಇಷ್ಟಕ್ಕೂ ಜಾಬ್ಸ್‌ನ ಯಶಸ್ಸಿನ ಬಗ್ಗೆ ಹೆಮ್ಮೆ ಹೊಂದಿರುವ ಅವರ ಆತನ ಚರಿಶ್ಮಾ ತಮ್ಮಲ್ಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಇದಕ್ಕೂ ಮುಂಚಿನ ಕೆಲ ಸಂದರ್ಶನಗಳಲ್ಲಿ ಕೂಡಾ ಸ್ಟೀವ್ ಜಾಬ್ಸ್ ಗೇಟ್ಸ್‌ನ್ನು ಹೊಗಳಿದ್ದರು. ಪ್ರತಿಭೆಗಳನ್ನು ಗುರುತಿಸಿ ಹೆಕ್ಕುವಲ್ಲಿ ಜಾಬ್ಸ್‌ಗೆ ಮತ್ತೊಬ್ಬರು ಸರಿಸಾಟಿಯಿಲ್ಲ. ವಿನ್ಯಾಸದ ಕುರಿತ ಆತನ ಜ್ಞಾನ ಅದ್ಭುತವಾಗಿತ್ತು ಎಂದಿದ್ದರು. ಅಷ್ಟೇ ಅಲ್ಲ, ಜಾಬ್ ಬಂದು ಉಳಿಸದಿದ್ದರೆ, ಆ್ಯಪಲ್ ಕಂಪನಿ ಸಾವಿನ ಹಾದಿಯಲ್ಲಿತ್ತು ಎಂದೂ ಹೇಳಿದ್ದರು.
ಜಿಗುಟು ಸ್ಟೀವ್
ಹಲವಾರು ಜನ ಸ್ಟೀವ್‌ನ ಕೆಟ್ಟ ಗುಣಗಳನ್ನು ಅನುಕರಿಸಲು ಬಯಸುತ್ತಾರೆ ಹಾಗೂ ಆತ ಕೂಡಾ ಕೆಲವೊಮ್ಮೆ ಹಠಮಾರಿಯಾಗುತ್ತಿದ್ದ. ಆದರೆ, ಆ ಜಿಗುಟುತನದ ಜೊತೆಗೇ ಆತ ಅದ್ಭುತವಾದ ಸಕಾರಾತ್ಮಕ ಸಂಗತಿಗಳನ್ನು ತಂದ ಎನ್ನುತ್ತಾರೆ ಗೇಟ್ಸ್.
ಆತನೊಬ್ಬ ಅದ್ಭುತ ನಾಯಕ. ಆ್ಯಪಲ್‌ಗೆ 1997ರಲ್ಲಿ ಮರಳಿದ ಮೇಲೆ ಐಫೋನ್, ಐಪಾಡ್, ಐಮ್ಯಾಕ್ ಎಂದು ಹೊಸತನ್ನು ತರುತ್ತಲೇ ಹೋದ. ಆತ ಮಾಡಿದ್ದನ್ನು ಇನ್ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಇದಿಷ್ಟೇ ಅಲ್ಲ, ಸಾರ್ವಜನಿಕವಾಗಿ ಮಾತನಾಡಬೇಕೆಂದರೆ ನಿರರ್ಗಳವಾಗಿ ಮಾತು ಹರಿಸುತ್ತಿದ್ದ ವಾಗ್ಮಿ ಎಂದು ಮೆಚ್ಚುಗೆಕಣ್ಣುಗಳಲ್ಲಿ ನುಡಿಯುತ್ತಾರೆ.
ಹವಾಮಾನ ಬದಲಾವಣೆಗೆ ಕೊರೋನಾಗಿಂತ ಡೇಂಜರಸ್: ಬಿಲ್ ಗೇಟ್ಸ್