ಪೆಟ್ರೋಲ್‌ ಬೆಲೆ ಮತ್ತೆ ಏರಿಕೆ: ಪ್ರೀಮಿಯಂ ದರ 100ರ ಸನಿಹಕ್ಕೆ

By Kannadaprabha NewsFirst Published Aug 28, 2020, 1:59 PM IST
Highlights

ಕೊರೋನಾ ಕಡೆ ಕೊರೋನಾ ಭೀತಿಯಾದರೆ ಮತ್ತೊಂದೆಡೆ ವಾಹನ ಸವಾರರ ಪಾಲಿಗೆ ಪೆಟ್ರೋಲ್ ಬಿಸಿ ತುಪ್ಪವಾಗಿ ಪರಿಣಮಿಸಿದೆ. ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಹೆಚ್ಚುತ್ತಲೇ ಸಾಗುತ್ತಿದೆ. ಇಂದಿನ ದರವೆಷ್ಟು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ನವದೆಹಲಿ(ಆ.28): ಪೆಟ್ರೋಲ್‌ ದರ ಮತ್ತೊಮ್ಮೆ ಗಗನಮುಖಿ ಆಗಿದೆ. ಕಳೆದ 12 ದಿನಗಳ ಅಂತರದಲ್ಲಿ 10 ಬಾರಿ ಪೆಟ್ರೋಲ್‌ ದರ ಏರಿಕೆ ಕಂಡಿದೆ. 

ಆದರೆ, ಈ ಅವಧಿಯಲ್ಲಿ ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಗುರುವಾರ ಪೆಟ್ರೋಲ್‌ ದರವನ್ನು 10 ಪೈಸೆ ಏರಿಕೆ ಮಾಡಲಾಗಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ 81.73 ರು. ಆಗಿತ್ತು. ಇಂದು ರಾಷ್ಟ್ರರಾಜಧಾನಿಯಲ್ಲಿ ಮತ್ತೆ 11 ಪೈಸೆ ಏರಿಕೆಯಾಗುವುದರೊಂದಿಗೆ ಲೀಟರ್ ಪೆಟ್ರೋಲ್ ಬೆಲೆ 81.94 ಪೈಸೆಗಳಾಗಿವೆ.

ಇದೇ ವೇಳೆ ಗುರುವಾರ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 84.49 ರು.ಗೆ ತಲುಪಿತ್ತು. ಇಂದು ಮತ್ತೆ 11 ಪೈಸೆ ಏರಿಕೆಯಾಗುವುದರೊಂದಿಗೆ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್‌ಗೆ 84.60 ಪೈಸೆ ಆಗಿದೆ.

2,000 ರೂಪಾಯಿ ನೋಟಿನ ಕತೆ ಏನು? RBI ವಾರ್ಷಿಕ ವರದಿ ಬಿಡುಗಡೆ!

ಆ.16ರಿಂದ ಪೆಟ್ರೋಲ್‌ ದರ ಏರಿಕೆ ಆಗುತ್ತಿದ್ದು, ಕಳೆದ 12 ದಿನಗಳ ಅಂತರದಲ್ಲಿ 1.40 ರು. ಏರಿಕೆ ದಾಖಲಿಸಿದೆ. ಕಳೆದ 6 ದಿನಗಳಿಂದ ಪೆಟ್ರೋಲ್‌ ನಿರಂತರ ಏರಿಕೆ ಕಾಣುತ್ತಿದೆ. ಇದೇ ವೇಳೆ ಶೆಲ್‌ ಪೆಟ್ರೋಲ್‌ ಪಂಪ್‌ನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 89.90 ರು. ಆಗಿದ್ದರೆ ಪ್ರೀಮಿಯಂ ಪೆಟ್ರೋಲ್‌ ನೂರರ ಗಡಿಗೆ ಸಮೀಪಿಸಿದ್ದು, ಲೀಟರ್‌ಗೆ 98.95 ರು. ಆಗಿದೆ.

click me!