Free Treatment Hospitals: ಆಸ್ಪತ್ರೆಗೆ ದಾಖಲಾಗೋ ಮುನ್ನ ಇದನ್ನು ಚೆಕ್ ಮಾಡಿದ್ರೆ ಉಳಿಯುತ್ತೆ ಹಾಸ್ಪಿಟಲ್ ಬಿಲ್

Published : Feb 02, 2026, 11:11 AM IST
Ayushman Bharat Yojana

ಸಾರಾಂಶ

ಈಗಿನ ದಿನಗಳಲ್ಲಿ ಹಾಸ್ಪಿಟಲ್ ಬಿಲ್ ನೋಡಿದ್ರೆ ಹಾರ್ಟ್ ಅಟ್ಯಾಕ್ ಆಗುತ್ತೆ. ಸಣ್ಣ ಚಿಕಿತ್ಸೆಗೂ ದೊಡ್ಡ ಮೊತ್ತ ಖರ್ಚಾಗ್ತಿದೆ. ಆಸ್ಪತ್ರೆ ಬಿಲ್ ಉಳಿಯಬೇಕು ಅಂದ್ರೆ ಹಾಸ್ಪಿಟಲ್ ಗೆ ಎಂಟ್ರಿ ಆಗೋ ಮೊದಲು ಇದ್ರ ಬಗ್ಗೆ ಮಾಹಿತಿ ಇಟ್ಕೊಳ್ಬೇಕು. 

ಆಸ್ಪತ್ರೆಗೆ ಹೋದ್ರೆ ಹಣ ನೀರಿನಂತೆ ಖರ್ಚಾಗುತ್ತೆ. ಇದೇ ಭಯದಲ್ಲಿ ಅನೇಕರು ಆಸ್ಪತ್ರೆ ಮೆಟ್ಟಿಲೇರಲು ಭಯಪಡ್ತಾರೆ. ಲಕ್ಷಾಂತರ ಬಡ ಕುಟುಂಬಗಳಿಗೆ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆ (Ayushman Bharat Yojana) ನೆರವಾಗಿದೆ. ಸರ್ಕಾರವು ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ವಾರ್ಷಿಕವಾಗಿ 5 ಲಕ್ಷ ರೂಪಾಯಿವರೆಗೆ ಉಚಿತ ನಗದು ರಹಿತ ಚಿಕಿತ್ಸೆ ನೀಡುತ್ತಿದೆ. ಬಹುತೇಕರಿಗೆ ಯಾವ ಆಸ್ಪತ್ರೆಯಲ್ಲಿ ಆಯುಷ್ಮಾನ್ ಕಾರ್ಡ್ ಬಳಕೆ ಮಾಡ್ಬಹುದು ಎನ್ನುವ ಜ್ಞಾನವಿಲ್ಲ. ಇದ್ರಿಂದಾಗಿ ಸರ್ಕಾದ ಕಾರ್ಡ್ ಕೈನಲ್ಲಿದ್ರೂ ಯೋಜನೆ ಲಾಭ ಪಡೆಯಲು ಸಾಧ್ಯ ಆಗ್ತಿಲ್ಲ.

ಆಯುಷ್ಮಾನ್ ಕಾರ್ಡ್ ಬಗ್ಗೆ ಮಾಹಿತಿ ಇರಲಿ

ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುವ ಮುನ್ನ ಆ ಆಸ್ಪತ್ರೆಯನ್ನು ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸೇರಿಸಲಾಗಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಪರಿಶೀಲಿಸಬೇಕು. ಇದನ್ನು ಚೆಕ್ ಮಾಡೋದು ಸುಲಭ. ಸರ್ಕಾರ ಇದಕ್ಕಾಗಿ ಆನ್ಲೈನ್ ಮತ್ತು ಆಫ್ಲೈನ್ ವಿಧಾನಗಳನ್ನು ಒದಗಿಸಿದೆ. ಮನೆಯಲ್ಲೇ ನೀವು ಇದನ್ನು ಪತ್ತೆ ಮಾಡ್ಬಹುದು. ಆಯುಷ್ಮಾನ್ ಕಾರ್ಡ್ ಹೊಂದಿದ್ದು, ಸೂಕ್ತ ಆಸ್ಪತ್ರೆಗೆ ದಾಖಲಾದ್ರೆ ನಿಮ್ಮ ಹಣ ಉಳಿಯುತ್ತದೆ. ಸರ್ಕಾರಿ ಯೋಜನೆ ಲಾಭವನ್ನು ನೀವು ಸಂಪೂರ್ಣ ಪಡೆಯಬಹುದಾಗಿದೆ.

ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಯಾರಿಗೇನು ಲಾಭ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ಆಯುಷ್ಮಾನ್ ಕಾರ್ಡ್‌ ಗೆ ಯಾವ ಆಸ್ಪತ್ರೆಗಳು ಮಾನ್ಯ ?

ಆಯುಷ್ಮಾನ್ ಯೋಜನೆಯಡಿಯಲ್ಲಿ ಅನೇಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಸೇರಿಸಲಾಗಿದೆ. ಇವುಗಳನ್ನು ಎಂಪನೆಲ್ಡ್ ಆಸ್ಪತ್ರೆಗಳು ಎಂದು ಕರೆಯಲಾಗುತ್ತದೆ. ಈ ಆಸ್ಪತ್ರೆಗಳಲ್ಲಿ ನಿಮ್ಮ ಆಯುಷ್ಮಾನ್ ಕಾರ್ಡ್ ಅನ್ನು ತೋರಿಸುವುದರಿಂದ ಪ್ಯಾಕೇಜ್ ಪ್ರಕಾರ ನಗದು ರಹಿತ ಚಿಕಿತ್ಸೆಯನ್ನು ನೀಡಲಾಗುತ್ತದೆ, ಇದರಲ್ಲಿ ಶಸ್ತ್ರಚಿಕಿತ್ಸೆ, ಔಷಧಿಗಳು, ಪರೀಕ್ಷೆಗಳು ಮತ್ತು ಆಸ್ಪತ್ರೆಗೆ ದಾಖಲಾಗುವ ವೆಚ್ಚ ಸೇರಿರುತ್ತದೆ.

ಪ್ರತಿಯೊಂದು ರಾಜ್ಯವು ಅಂತಹ ಆಸ್ಪತ್ರೆಗಳ ಪ್ರತ್ಯೇಕ ಪಟ್ಟಿಯನ್ನು ಹೊಂದಿದೆ. ಅದನ್ನು ನಿರಂತರವಾಗಿ ನವೀಕರಿಸಲಾಗುತ್ತದೆ. ಈ ಪಟ್ಟಿಯಲ್ಲಿ ಪ್ರಮುಖ ನಗರಗಳಲ್ಲಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳು ಸೇರಿವೆ.

ನೀವು ಆಯುಷ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಆಸ್ಪತ್ರೆಯನ್ನು ಹುಡುಕಬಹುದು. ಇದನ್ನು ಮಾಡಲು, ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಿ: https://hospitals.pmjay.gov.in/Search/empnlWorkFlow.htm?actionFlag=ViewRegisteredHosptlsNew. ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ ಮತ್ತು ಆಸ್ಪತ್ರೆಯ ಹೆಸರನ್ನು ಹಾಕ್ತಿದ್ದಂತೆ, ಆ ಆಸ್ಪತ್ರೆ ಆಯುಷ್ಮಾನ್ ಭಾರತ್ ಯೋಜನೆ ಅಡಿ ಬಂದಿದ್ಯಾ ಇಲ್ವಾ ಎಂಬುದು ಗೊತ್ತಾಗುತ್ತದೆ.

ದುಬಾರಿ ಕ್ಯಾನ್ಸರ್ ಔಷಧಿಗಳಿನ್ನು ಕೊಂಚ ಅಗ್ಗ - ರೋಗಿಗಳಿಗೆ ರಿಲೀಫ್‌

ಒಂದ್ವೇಳೆ ಆನ್ಲೈನ್ ನಲ್ಲಿ ನಿಮಗೆ ಮಾಹಿತಿ ಸಿಗ್ತಿಲ್ಲ ಎಂದಾದ್ರೆ ಅಥವಾ ಆನ್ಲೈನ್ ಬಳಕೆ ತಿಳಿದಿಲ್ಲ ಎನ್ನುವವರು ಈ ಮಾಹಿತಿಯು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಆರೋಗ್ಯ ಸ್ವಾಸ್ಥ್ಯ ಕೇಂದ್ರದಿಂದ ಪಡೆಯಬಹುದು. ಆಯುಷ್ಮಾನ್ ಡೆಸ್ಕ್ ಬಳಿ ಕಾರ್ಡ್ ತೋರಿಸಿ ನೀವು ಮಾಹಿತಿ ಪಡೆಯಬಹುದು. ನಿಮ್ಮ ಬಳಿ ಆಯುಷ್ಮಾನ್ ಭಾರತ್ ಕಾರ್ಡ್ ಇದ್ದಲ್ಲಿ ಅಗತ್ಯವಾಗಿ ಅದ್ರ ಬಗ್ಗೆ ಮಾಹಿತಿ ತಿಳಿದಿರಿ. ಮೊದಲೇ ಆಸ್ಪತ್ರೆ ಬಗ್ಗೆ ಮಾಹಿತಿ ಇದ್ದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸಹಾಯಕಾರಿ. ಆಸ್ಪತ್ರೆಗೆ ದಾಖಲಾದ್ಮೇಲೆ ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಚಿಂತಿಸುವ ಅಗತ್ಯವಿರೋದಿಲ್ಲ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 23, 2018 ರಂದು ಜಾರ್ಖಂಡ್ನ ರಾಂಚಿಯಲ್ಲಿ ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಪ್ರಾರಂಭಿಸಿದರು. ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಫಲಾನುಭವಿಗಳು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಆಸ್ಪತ್ರೆಗೆ ದಾಖಲಾಗಬಹುದು ಮತ್ತು ಚಿಕಿತ್ಸೆ ಪಡೆಯಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಕೇಂದ್ರ ಬಜೆಟ್‌ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮಹಾ ಕುಸಿತ; ಕಳೆದ ನಾಲ್ಕು ದಿನದ ಚಿನ್ನದ ಬೆಲೆಯ ಟ್ರ್ಯಾಕ್ ರೆಕಾರ್ಡ್ ಇಲ್ಲಿದೆ
ಟ್ರಂಪ್ ತೆರಿಗೆ ಶಾಕ್‌ನಿಂದ ಭಾರತಕ್ಕೆ ನಿರ್ಮಲಾ ರಕ್ಷಣೆ