ಭಾರತೀಯರ ಬಳಿ ಹಣವಿಲ್ವಾ? ಖರ್ಚು ನೋಡಿದ್ರೆ ಹಾಗನ್ನಿಸಲ್ವಲ್ಲ!

By Suvarna News  |  First Published Apr 19, 2024, 3:51 PM IST

ಭಾರತೀಯರು ಬಡವರು.. ಅವರ ಬಳಿ ಸಾಕಷ್ಟು ಹಣವಿಲ್ಲ.. ಐಷಾರಾಮಿ ಜೀವನ ನಡೆಸೋರ ಸಂಖ್ಯೆ ಕಡಿಮೆ ಎಂಬೆಲ್ಲ ಕಲ್ಪನೆ ಇದೆ. ಆದ್ರೆ ಕೆಲ ವರದಿಗಳು ಇದು ಸುಳ್ಳು ಎನ್ನುತ್ತಿದೆ. ಭಾರತೀಯರು ಹಣ ಎಷ್ಟೇ ಸಂಪಾದನೆ ಮಾಡ್ಲಿ ಖರ್ಚು ಮಾಡೋದ್ರಲ್ಲಿ ಸದಾ ಮುಂದಿದ್ದಾರೆ.
 


ಭಾರತದಲ್ಲಿ ಯಾರ ಬಳಿ ಹೋದ್ರೂ ಅವರ ಬಾಯಿಂದ ಬರುವ ಒಂದೇ ಮಾತು ನಮ್ಮ ಬಳಿ ಹಣವಿಲ್ಲ ಅನ್ನೋದು. ಖರ್ಚು ಜಾಸ್ತಿಯಾಗಿದೆ, ಸಂಬಳ ಸಾಲ್ತಿಲ್ಲ. ಸಾಲ ತೀರಿಸೋಕೆ ಆಗ್ತಿಲ್ಲ..ಹೀಗೆ ಒಂದಾದ ಮೇಲೆ ಒಂದು ಖರ್ಚಿನ ಪಟ್ಟಿ ನೀಡುವ ಜನರೇ ನಮ್ಮಲ್ಲಿದ್ದಾರೆ. ಹಣವಿಲ್ಲ ಎನ್ನುವ ಕಾರಣಕ್ಕೆ ಅವರು ಹೊಟೇಲ್‌ಗೆ ಹೋಗೋದಾಗ್ಲಿ, ಸಿನಿಮಾ ನೋಡೋದಾಗ್ಲಿ ನಿಲ್ಲಿಸಿಲ್ಲ. ಅಚ್ಚರಿ ಅಂದ್ರೆ ಪ್ರತಿಯೊಂದೂ ಹೊಟೇಲ್ ಸದಾ ಜನರಿಂದ ತುಂಬಿರುತ್ತದೆ. ಕೆಲವು ಚಿನ್ನದಂಗಡಿಯಲ್ಲಿ ಮಹಿಳೆಯರು ಸದಾ ಇರ್ತಾರೆ. ಅಷ್ಟೇ ಅಲ್ಲ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಹಾಗಿದ್ರೆ ಭಾರತೀಯರು ಹಣವಿಲ್ಲ ಅನ್ನೋದು ಸುಳ್ಳೆಂದಾಯ್ತು. ಅದೇನೇ ಇರಲಿ, ಭಾರತೀಯರು ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೆ, ಯಾವುದಕ್ಕೆ ಹೆಚ್ಚು ಹಣ ಖರ್ಚು ಮಾಡ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ರೇಜ್ ಅಪೇ ಹೆಸರಿನ ಹಣಕಾಸು ಕಂಪನಿ ಈ ಬಗ್ಗೆ ಸಮೀಕ್ಷೆ ನಡೆಸಿದೆ. ವಾರ್ಷಿಕವಾಗಿ ಜನರು ಯಾವ ಕ್ಷೇತ್ರದಲ್ಲಿ ಹೆಚ್ಚು ಹಣ ಖರ್ಚು ಮಾಡಿದ್ದಾರೆ ಎಂಬುದನ್ನು ನಮ್ಮ ಮುಂದಿಟ್ಟಿದೆ.

ಭಾರತ (India) ದ ಪ್ರಮುಖ ಹಣಕಾಸು ಕಂಪನಿಯಲ್ಲಿ ರೇಜ್ ಅಪೇ (Razorpay)  ಒಂದು. ಅದು ಏಪ್ರಿಲ್ 1, 2023 ರಿಂದ ಮಾರ್ಚ್ 31, 2024 ರವರೆಗಿನ ಡೇಟಾ (data) ವನ್ನು ಪರಿಶೀಲಿಸಿದೆ. ಈ ಸಮಯದಲ್ಲಿ ನಡೆದ ಶತಕೋಟಿಗೂ ಹೆಚ್ಚು ವಹಿವಾಟು ಆಧರಿಸಿ ಈ ವರದಿಯನ್ನು ರೇಜ್ ಅಪೇ ಸಿದ್ಧಪಡಿಸಿದೆ. 

Tap to resize

Latest Videos

ಅಬ್ಬಬ್ಬಾ..ಅಂಬಾನಿ ಫ್ಯಾಮಿಲಿ ಪ್ರಯಾಣಿಸೋ ಬಾಂಬ್ ಪ್ರೂಫ್‌ ಕಾರು ಬೆಲೆ ಇಷ್ಟೊಂದಾ?

ಈ ಕ್ಷೇತ್ರದಲ್ಲಿ ಹೆಚ್ಚು ಖರ್ಚು ಮಾಡಿದ ಭಾರತೀಯರು : 
ಸಿನಿಮಾ ಮೇಲೆ ಪ್ರೀತಿ :
ರೇಜ್ ಅಪೇ ವರದಿ ಪ್ರಕಾರ, ಹಿಂದಿನ ವರ್ಷ ಭಾರತೀಯರು ಮಲ್ಟಿಪ್ಲೆಕ್ಸ್ (Multiplex) ನಲ್ಲಿ ಸಿನಿಮಾ ವೀಕ್ಷಣೆ ಮಾಡಲು ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದಾರೆ. 2022ಕ್ಕೆ ಹೋಲಿಕೆ ಮಾಡಿದ್ರೆ 2023ರಲ್ಲಿ ಮಲ್ಟಿಪ್ಲೆಕ್ಸ್ ವಹಿವಾಟಿನಲ್ಲಿ ಶೇಕಡಾ 42ರಷ್ಟು ಹೆಚ್ಚಳವಾಗಿದೆ. ಶಾರುಖ್ ಖಾನ್ ಅಭಿನಯದ ಜವಾನ್ ಹಾಗೂ ಓಪನ್ ಹೈಮರ್ ಚಿತ್ರದ ಕೊಡುಗೆ ಹೆಚ್ಚಿದೆ. ಟಿಕೆಟ್ ಏಜೆನ್ಸಿ ಮಾರಾಟದಲ್ಲೂ ಹೆಚ್ಚಳ ಕಂಡು ಬಂದಿದ್ದು, 2.5 ಪಟ್ಟು ಹೆಚ್ಚಳ ಕಂಡು ಬಂದಿದೆ.

ಊಟದಲ್ಲೂ ಹಿಂದೆ ಬಿದ್ದಿಲ್ಲ ಭಾರತೀಯರು : ಭಾರತೀಊಯರು ಆಹಾರ ಪ್ರಿಯರು. ಇದ್ರಲ್ಲಿ ಎರಡು ಮಾತಿಲ್ಲ. ಆನ್ಲೈನ್ ಫ್ಲಾಟ್ಫಾರ್ಮ್ ಮೂಲಕ ಆಹಾರ ಆರ್ಡರ್ ಮಾಡುವವರ ಸಂಖ್ಯೆ 2022ಕ್ಕೆ ಹೋಲಿಕೆ ಮಾಡಿದ್ರೆ 2023ರಲ್ಲಿ ದ್ವಿಗುಣವಾಗಿದೆ. ಹಾಗಂತ ರೆಸ್ಟೋರೆಂಟ್ ನಲ್ಲಿ ಆಹಾರ ಸೇವನೆ ಮಾಡುವವರ ಸಂಖ್ಯೆ ಏನೂ ಕಡಿಮೆ ಆಗಿಲ್ಲ. ರೆಸ್ಟೋರೆಂಟ್ ನಲ್ಲಿ ತಿನ್ನುವವರ ಸಂಖ್ಯೆ ಶೇಕಡಾ 60ರಷ್ಟು ಹೆಚ್ಚಾಗಿದೆ. 

ಚಿನ್ನದ ಮೇಲೆ ಹೂಡಿಕೆ (Gold Investment) : ಭಾರತೀಯರು ಅಂದ್ಮೇಲೆ ಚಿನ್ನ ಇರ್ಲೇಬೇಕು. ಇದನ್ನು ಅತ್ಯಂತ ಸುರಕ್ಷಿತ ಉಳಿತಾಯ ಎಂದೇ ಇಲ್ಲಿನ ಜನರು ಭಾವಿಸಿದ್ದಾರೆ. ದೀಪಾವಳಿ ಹಾಗೂ ಧನ್ತೇರಸ್ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆ 2022ಕ್ಕಿಂತ 9 ಪಟ್ಟು ಹೆಚ್ಚಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. 

ಪೇಟಿಎಂ ಪೇ ಬಳಕೆದಾರರ ಗಮನಕ್ಕೆ, ಗ್ರಾಹಕರಿಗೆ ಹೊಸ ಯುಪಿಐ ಹ್ಯಾಂಡಲ್ಸ್ ನೀಡಲು ಪ್ರಾರಂಭಿಸಿದ ಸಂಸ್ಥೆ

ಷೇರು ಮಾರುಕಟ್ಟೆ (Stock Exchange) : ಭಾರತೀಯರ ಆಲೋಚನೆಯಲ್ಲಿ ಸಾಕಷ್ಟು ಬದಲಾವಣೆ ಆಗ್ತಿದೆ. ಷೇರು ಮಾರುಕಟ್ಟೆಗೆ ಹಣ ಹೂಡುವವರ ಸಂಖ್ಯೆ ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಹವ್ಯಾಸ, ಸಂತೋಷಕ್ಕೆ ಹಣ ಖರ್ಚು ಮಾಡುವವರಿಗಿಂತ ಹೂಡಿಕೆ, ಉಳಿತಾಯದ ದೃಷ್ಟಿಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದೆ. 2022ಕ್ಕೆ ಹೋಲಿಕೆ ಮಾಡಿದ್ರೆ 2023ರಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಶೇಕೆಡಾ 86ರಷ್ಟು ಹೆಚ್ಚಳವಾಗಿದೆ. ಇಷ್ಟೇ ಅಲ್ಲ ವ್ಯಾಪಾರ ವಲಯದಲ್ಲೂ ಜನರು ಚುರುಕಾಗಿದ್ದು, ವ್ಯಾಪಾರ ವಲಯದಲ್ಲೂ ಹೂಡಿಕೆ ಶೇಕಡಾ 62ರಷ್ಟು ಹೆಚ್ಚಾಗಿದೆ.

click me!