ಭಾರತದ ಶ್ರೀಮಂತ ಉದ್ಯಮಿಗಳು ಯಾವ ನಗರದಲ್ಲಿ ನೆಲೆಸಿದ್ದಾರೆ? ಅವರ ಐಷಾರಾಮಿ ಮನೆಗಳು ಹೇಗಿವೆ? ಇಲ್ಲಿದೆ ಮಾಹಿತಿ

By Suvarna News  |  First Published Feb 28, 2023, 1:21 PM IST

ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಬಹುತೇಕರು ಮುಂಬೈನಲ್ಲಿ ನೆಲೆಸಿದ್ದಾರೆ. ಇನ್ನೂ ಕೆಲವರು ಬೆಂಗಳೂರು ಸೇರಿದಂತೆ ದೇಶದ ಇತರ ಪ್ರಮುಖ ನಗರಗಳಲ್ಲಿ ನೆಲೆಸಿದ್ದಾರೆ. ಹಾಗಾದ್ರೆ ಭಾರತದ ಶ್ರೀಮಂತ ಉದ್ಯಮಿಗಳು ಯಾವ ಪ್ರದೇಶಗಳಲ್ಲಿ ನೆಲೆಸಿದ್ದಾರೆ? ಅವರ ಐಷಾರಾಮಿ ಮನೆಗಳು ಹೇಗಿವೆ? ಇಲ್ಲಿದೆ ಮಾಹಿತಿ. 
 


Business Desk:ಮನೆ ಖರೀದಿಸುವಾಗ ನಾವು ಮೊದಲು ನೋಡುವುದು ಅದು ಯಾವ ಪ್ರದೇಶದಲ್ಲಿದೆ ಅನ್ನೋದನ್ನು. ಮನೆಯ ಸುತ್ತಮುತ್ತ ಯಾವೆಲ್ಲ ಸೌಲಭ್ಯಗಳಿವೆ. ಸೂಪರ್ ಮಾರ್ಕೆಟ್, ಮೆಟ್ರೋ ರೈಲ್ವೆ ಸ್ಟೇಷನ್ ಅಥವಾ ಬಸ್ ನಿಲ್ದಾಣ, ಶಾಲೆ, ಆಸ್ಪತ್ರೆ ಹೀಗೆ ಅಗತ್ಯ ಸೌಲಭ್ಯಗಳು ಹತ್ತಿರದಲ್ಲೇ ಇದ್ರೆ ಹೆಚ್ಚು ಅನುಕೂಲ ಎಂಬ ಭಾವನೆ ಇದ್ದೇಇರುತ್ತದೆ. ಹಾಗೆಯೇ ಆ ಪ್ರದೇಶದಲ್ಲಿ ನಮ್ಮ ಅಂತಸ್ತು, ಗುಣಗಳಿಗೆ ಸರಿಹೊಂದುವ ಜನರು ವಾಸಿಸುತ್ತಿದ್ದಾರೆಯೇ ಎಂಬುದನ್ನು ಕೂಡ ಗಮನಿಸುತ್ತೇವೆ. ಎಲ್ಲ ಸೌಲಭ್ಯಗಳನ್ನು ಹೊಂದಿರುವ ಐಷಾರಾಮಿ ಪ್ರದೇಶದಲ್ಲಿ ವಾಸಿಸಬೇಕು ಎಂಬುದು ಬಹುತೇಕರ ಕನಸಾಗಿರುತ್ತದೆ. ಸಾಮಾನ್ಯ ವರ್ಗದ ಜನರೇ ಈ ರೀತಿ ಯೋಚಿಸುವಾಗ ಕೋಟ್ಯಂತರ ರೂ. ಆದಾಯ ಹೊಂದಿರುವ ಶ್ರೀಮಂತ ಜನರು ಮನೆ ಖರೀದಿಸುವ ಮುನ್ನ ಹೇಗೆಲ್ಲ ಯೋಚಿಸಬಹುದು? ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಬಹುತೇಕರು ಮುಂಬೈನಲ್ಲಿ ಐಷಾರಾಮಿ ಮನೆಗಳನ್ನು ಹೊಂದಿರೋದು ಎಲ್ಲರಿಗೂ ಗೊತ್ತೇ ಇದೆ. ಇನ್ನೂ ಕೆಲವರು ಬೆಂಗಳೂರು ಸೇರಿದಂತೆ ದೇಶದ ಇತರ ಪ್ರಮುಖ ನಗರಗಳ ಐಷಾರಾಮಿ ಪ್ರದೇಶದಲ್ಲಿ ಮನೆ ಹೊಂದಿದ್ದಾರೆ. ಹಾಗಾದ್ರೆ ಶ್ರೀಮಂತ ಉದ್ಯಮಿಗಳು ವಾಸಿಸುವ ದೇಶದ ಅತ್ಯಂತ ದುಬಾರಿ ಪ್ರದೇಶಗಳು ಯಾವುವು? ಇಲ್ಲಿದೆ ಮಾಹಿತಿ.

ಆಂಟಿಲಿಯಾ-ಮುಖೇಶ್ ಅಂಬಾನಿ
ಭಾರತದಲ್ಲಿ ಶ್ರೀಮಂತರು ಎಂದ ತಕ್ಷಣ ಮೊದಲಿಗೆ ನೆನಪಾಗೋದೇ ಅಂಬಾನಿ ಕುಟುಂಬ. ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಇವರು ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ 27 ಅಂತಸ್ತಿನ ಐಷಾರಾಮಿ ಮನೆ 'ಆಂಟಿಲಿಯಾ'ದಲ್ಲಿ ವಾಸಿಸುತ್ತಾರೆ. ಸುಮಾರು 4 ಲಕ್ಷ ಚದರ ಅಡಿಗಳಲ್ಲಿ 'ಆಂಟಿಲಿಯಾ' ನಿರ್ಮಿಸಲಾಗಿದೆ. ಈ ಮನೆಯನ್ನು 200 ಮಿಲಿಯನ್ ಡಾಲರ್ ಅಂದರೆ ಸುಮಾರು 11 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಂಟಿಲಿಯಾ ತೆರೆದ ಆಕಾಶ ಮತ್ತು ಅರೇಬಿಯನ್ ಸಮುದ್ರದ ಅತ್ಯಂತ ಸುಂದರವಾದ ನೋಟವನ್ನು ಹೊಂದಿದೆ. ಆಂಟಿಲಿಯಾದಲ್ಲಿ ದೇವಾಲಯ, ಥಿಯೇಟರ್, ಬಾರ್, ಮೂರು ಹೆಲಿಪ್ಯಾಡ್‌ ಸೇರಿದಂತೆ ಅನೇಕ ವಿಶ್ವ ದರ್ಜೆ ಸೌಲಭ್ಯಗಳಿವೆ.

Tap to resize

Latest Videos

ಅಮೆರಿಕದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ ಜಯಶ್ರೀ ಉಲ್ಲಾಳ್, 18 ಸಾವಿರ ಕೋಟಿ ರೂ. ಒಡತಿಯಾಗಿದ್ದು ಹೇಗೆ?

ಕೊಲಬ-ರತನ್ ಟಾಟಾ
ಭಾರತದ ಜನಪ್ರಿಯ ಉದ್ಯಮಿ ರತನ್ ಟಾಟಾ ಕೂಡ ಮುಂಬೈನಲ್ಲಿ ನೆಲೆಸಿದ್ದಾರೆ. ಕೊಲಬದಲ್ಲಿರುವ ರತನ್ ಟಾಟಾ ಅವರ ಬಿಳಿ ಬಣ್ಣದ ಮನೆ ಕಲಾತ್ಮಕತೆಗೆ ಹಿಡಿದ ಕೈಗನ್ನಡಿಯಾಗಿದೆ. 150 ಕೋಟಿ ರೂ. ಮೌಲ್ಯದ ಈ ಬಂಗಲೆಯನ್ನು ಅರಬ್ಬಿ ಸಮುದ್ರ ಕಾಣಿಸುವಂತೆ ನಿರ್ಮಿಸಲಾಗಿದೆ. ಹೀಗಾಗಿ ಈ ಮನೆಯಿಂದ ಸಮುದ್ರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಏಳು ಅಂತಸ್ತಿನ ಈ ಮನೆಯ ವಿಸ್ತೀರ್ಣ 15,000 ಚದರ ಅಡಿ. ಇನ್ನು ಈ ಮನೆಯ ಕೊನೆಯ ಮಹಡಿಯಲ್ಲಿ ದೊಡ್ಡ ವಾಟರ್ ಫೂಲ್ ಇದೆ. ಇನ್ನೊಂದು ಸ್ವಿಮ್ಮಿಂಗ್ ಫೂಲ್, ಸನ್ ಡೆಕ್, ಮೂವೀ ರೂಮ್ ಹಾಗೂ 10 ವಾಹನಗಳ ಪಾರ್ಕಿಂಗ್ ಪ್ರದೇಶ ಈ ಮನೆಯ ವಿಶೇಷತೆಗಳು. ಇದು ಮುಂಬೈನ ದುಬಾರಿ ಬಂಗಲೆಗಳಲ್ಲಿ ಒಂದು.

ಗೌತಮ್ ಅದಾನಿ
ಅದಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗೌತಮ್ ಅದಾನಿ ಅಹಮದಾಬಾದ್ ನಲ್ಲಿ ಮನೆ ಹೊಂದಿದ್ದು, ದೆಹಲಿಯಲ್ಲಿ ಕೂಡ ಐಷಾರಾಮಿ ಮನೆ ಖರೀದಿಸಿದ್ದಾರೆ. ಈ ಮನೆಯನ್ನು ಸುಮಾರು 3.4 ಎಕರೆಯಲ್ಲಿ ನಿರ್ಮಿಸಲಾಗಿದೆ. ಇದರ ಮೌಲ್ಯ 400 ಕೋಟಿ ರೂ. ಇದ್ದು, ಈ ಭವ್ಯವಾದ ಮನೆಯ ಒಳಗೆ ಮಹಾರಾಜರಂತಹ ಸೌಲಭ್ಯಗಳಿವೆ. 

ಕಾಮತ್ ರೆಸಿಡೆನ್ಸಿ -ಕಿಂಗ್ ಫಿಶರ್ ಟವರ್ಸ್, ಬೆಂಗಳೂರು
ಝೆರೋಧ (Zerodha) ಹಾಗೂ ಟ್ರೂ ಬೀಕನ್ (True Beacon) ಸಹಸಂಸ್ಥಾಪಕ ನಿಖಿಲ್ ಕಾಮತ್ ಬೆಂಗಳೂರಿನ ಕಿಂಗ್ ಫಿಶರ್ ಟವರ್ ನಲ್ಲಿ ವಾಸಿಸುತ್ತಾರೆ. ಇದು 34 ಅಂತಸ್ತಿನ ಐಷಾರಾಮಿ ಕಟ್ಟಡವಾಗಿದೆ. ಈ ಕಟ್ಟಡದ ಕೊನೆಯ ಎರಡು ಅಂತಸ್ತುಗಳು ವಿಜಯ್ ಮಲ್ಯ ಅವರ ಒಡೆತನದಲ್ಲಿವೆ.

ಅದಾರ್  ಪೂನಾವಾಲಾ
ವಿಶ್ವದ ಅತೀದೊಡ್ಡ ಲಸಿಕೆ ಉತ್ಪಾದನಾ ಕಂಪನಿ  ಸಿರಂ ಇನ್ ಸ್ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲಾ ಅವರು ಮುಂಬೈನ ಸಲ್ಸಿಬುರೆ ಪಾರ್ಕ್ ನಲ್ಲಿ 22 ಎಕರೆ ಪ್ರದೇಶದಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಈ ಮನೆಯ ಒಳಾಂಗಣ ವಿನ್ಯಾಸ ಸರಳವಾಗಿದ್ದು, ಯುರೋಪಿಯನ್ ಟಚ್ ಹೊಂದಿದೆ. 

ಕುಮಾರ್ ಮಂಗಲಂ ಬಿರ್ಲಾ
ಮಲಬಾರ್ ಹಿಲ್ ನಲ್ಲಿ ಉದ್ಯಮಿ ಅರುಣ್ ಎಂ ಜಟಿಯಾ ಹಾಗೂ ಶ್ಯಾಮ್ ಎಂ ಜಟಿಯಾ ಅವರಿಂದ ಬಿಲಿಯನೇರ್ ಕುಮಾರ್ ಮಂಗಲಂ ಬಿರ್ಲಾ ಮನೆಯೊಂದನ್ನು ಖರೀದಿಸಿದ್ದಾರೆ. ಈ ಮನೆಯ ಮೌಲ್ಯ 425 ಕೋಟಿ ರೂ. ಈ ಮನೆ 2,926 ಚದರ ಅಡಿ ವಿಸ್ತೀರ್ಣ ಹೊಂದಿದೆ. 

ಭಾರತೀಯ ಶ್ರೀಮಂತರು ಭಾರತ ಪೌರತ್ವ ತ್ಯಜಿಸ್ತಿರೋದು ಯಾಕೆ ಗೊತ್ತಾ?

ಆನಂದ್ ಮಹೀಂದ್ರಾ
ಉದ್ಯಮಿ ಆನಂದ್ ಮಹೀಂದ್ರಾ ಕೂಡ ಮುಂಬೈ ಮಲಬಾರ್ ಹಿಲ್ ಬಳಿಯೇ ಗುಲಿಸ್ತಾನ್ ಎಂಬ ಹೆಸರಿನ ಮನೆಯಲ್ಲಿ ವಾಸಿಸುತ್ತಾರೆ. ಈ ಮನೆ ಮೂರು ಅಂತಸ್ತಿನದ್ದಾಗಿದ್ದು, 13,000 ಚದರ ಅಡಿ ವಿಸ್ತೀರ್ಣ ಹೊಂದಿದೆ. 
 

click me!