Bhima Jewellers: ಭೀಮಾ ಕಳೆದು ಹೋಗಿದ್ದಾನೆ, ಹುಡುಕಾಟಕ್ಕೆ ನೆರವಾಗುತ್ತಿರುವ ಅಭಿಮಾನಿಗಳು!

By Reshma RaoFirst Published Feb 28, 2023, 11:25 AM IST
Highlights

ಎಲ್ಲರ ನೆಚ್ಚಿನ ಪುಟ್ಟ ಬಾಲಕ ಭೀಮಾ ಕಳೆದು ಹೋಗಿದ್ದಾನೆ. ಆತನನ್ನು ಹುಡುಕಲು ಅಭಿಮಾನಿಗಳು ಇನ್ನಿಲ್ಲದಂತೆ ನೆರವಾಗುತ್ತಿದ್ದಾರೆ. ಈ ಭೀಮನ ಪರಂಪರೆ ಎಂಥದ್ದು ಗೊತ್ತಾ? ನಂಬಿಕೆ, ಪ್ರೀತಿಯನ್ನೇ ಬಂಡವಾಳವಾಗಿಸಿಕೊಂಡ ಭೀಮ ಅಡಗಿದ್ದೆಲ್ಲಿ?

ಕಣ್ಣಾಮುಚ್ಚಾಲೆ ಆಟ ಯಾರಿಗೆ ತಾನೇ ಇಷ್ಟವಿಲ್ಲ? ಅದರಲ್ಲೂ ಮಕ್ಕಳ ನೆಚ್ಚಿನ ಆಟವಿದು. ಆದರೆ, ಈ ಬಾರಿ ಯಾಕೋ ಆಟ ವಿಕೋಪಕ್ಕೆ ಹೋದಂತಿದೆ.. ಭೀಮಾ ಈ ಆಟವನ್ನು ಬಹಳ ಗಂಭೀರವಾಗಿ ಪರಿಗಣಿಸಿಬಿಟ್ಟಿದ್ದಾನೆ. ಹೌದು, ಭೀಮಾ ಅಡಗಲು ಹೋದವನು ಕಾಣೆಯಾಗಿದ್ದಾನೆ, ಮತ್ತು ಜನರೆಲ್ಲರೂ ತಮ್ಮ ನೆಚ್ಚಿನ ಪುಟಾಣಿಯ ಹುಡುಕಾಟದಲ್ಲಿ ತೊಡಗಿದ್ದಾರೆ. 

ಅರೆ, ಯಾವ ಭೀಮನ ಬಗ್ಗೆ ಹೇಳುತ್ತಿರುವುದೆಂದು ಗೊಂದಲಗೊಂಡಿದ್ದೀರಾ? ಭೀಮಾ ಜ್ಯುವೆಲ್ಲರ್ಸ್‌ನ ಗ್ರಾಹಕರೆಲ್ಲರಿಗೂ ಈ ಭೀಮಾ ಚಿರಪರಿಚಿತ. ಆಗಾಗ ಅತ ಗ್ರಾಹಕರ ಮನೆಗೂ ಹೋಗಲು ಆಸಕ್ತಿ ತೋರುತ್ತಾನೆ. ಈ ಮುಂಚೆ ಭೀಮಾದ ಗ್ರಾಹಕಿ ಲಕ್ಷ್ಮೀ ಮೆನನ್ ಮನೆಗೆ ಭೇಟಿ ಇಟ್ಟಾಗ ಭೀಮಾ ಕಡೆಯದಾಗಿ ಕಂಡಿದ್ದು. ಲಕ್ಷ್ಮೀ ಆತನಿಗೆ ಟೀ ಕೊಟ್ಟು, ಆತನ ಜೊತೆ ರೀಲ್ಸ್ ಮಾಡಬೇಕೆಂದು ರೆಡಿಯಾಗಿ ಬರಲು ಒಳ ಹೋದರು. ಅವರು ಹೊರ ಬರುವಷ್ಟರಲ್ಲಿ ಭೀಮಾ ನಾಪತ್ತೆಯಾಗಿದ್ದಾನೆ. ಲಕ್ಷ್ಮೀ ಹಾಗೂ ಅವರ ಮಗಳು ತನ್ವೀಗೆ ಈ ಕೆಲ ಕ್ಷಣಗಳಲ್ಲಿ ಆತ ಕಳೆದು ಹೋದದ್ದು ಎಲ್ಲಿಗೆ, ಹೇಗೆ ನಾಪತ್ತೆಯಾದ ಎಂಬುದೇ ಅರ್ಥವಾಗುತ್ತಿಲ್ಲ. 

ಭೀಮಾ ನಾಪತ್ತೆಯಾಗಿರುವ ಸುದ್ದಿ ಎಲ್ಲೆಡೆ ಹಬ್ಬುತ್ತಿರುವ ಮಧ್ಯೆಯೇ, ಆತ ಮತ್ತೊಬ್ಬ ಗ್ರಾಹಕಿ ಕಣ್ಮಣಿ ಎಂಬ ಹುಡುಗಿಗೆ ಅವಳ ಕಳೆದು ಹೋದ ರಿಂಗ್ ಹುಡುಕಿ ಕೊಟ್ಟು ಹೋದ ಎಂಬ ಸುದ್ದಿಯೂ ಬಂದಿದೆ. ಆ ಉಂಗುರವನ್ನು ಭೀಮಾದಿಂದಲೇ ಕೊಳ್ಳಲಾಗಿತ್ತು. ಅವಳು ತನ್ನಜ್ಜನಿಗೆ ಭೀಮಾ ಬಾಲಕ ಬಂದು ತನ್ನ ಕಳೆದು ಹೋದ ಉಂಗುರ ಕೊಟ್ಟ ಬಗ್ಗೆ ಹೇಳಿದಳು. ಆಕೆಗೆ ಭೀಮನ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಆದರೆ, ವಿಷಯ ಕೇಳುತ್ತಿದ್ದಂತೆ ಅವಳಜ್ಜ ಭೀಮನ ಹಿನ್ನೆಲೆ ಹಾಗೂ ಆತನ ಪರಂಪರೆ ಎಂಥದು ಎಂಬುದನ್ನು ವಿವರಿಸಿದರು. 

ಆರ್ ಬಿಐ ಹಳೆಯ 5ರೂ. ನಾಣ್ಯ ಸ್ಥಗಿತಗೊಳಿಸಿದ್ದು ಏಕೆ? ಇದರ ಹಿಂದಿದೆ ಬಾಂಗ್ಲಾದೇಶೀಯರ ಕೈವಾಡ!

ಸಣ್ಣ ನಗರ ಆಲಪ್ಪುಳದಲ್ಲಿ ಬೆಳ್ಳಿಯ ಅಂಗಡಿಯಾಗಿ ಪ್ರಾರಂಭವಾದ ಭೀಮಾ ಜ್ಯುವೆಲ್ಲರ್ಸ್ ವಿನಮ್ರ ಆರಂಭವನ್ನು ಹೊಂದಿದೆ. ಉಡುಪಿಯ ಕುಪ್ಪಣ್ಣ ಭಟ್ಟರು ಮತ್ತು ಪತ್ನಿ ಮಹಾಲಕ್ಷ್ಮೀಯ ಮೂರನೇ ಮಗನಾಗಿ ಜನಿಸಿದವನೇ ಲಕ್ಷ್ಮೀ ನಾರಾಯಣ್. ತಂದೆಯ ಅಕಾಲಿಕ ಮರಣದ ಬಳಿಕ ಕುಟುಂಬವು ಸಾಕಷ್ಟು ಆರ್ಥಿಕ ಸಂಕಷ್ಟಗಳನ್ನೆದುರಿಸತೊಡಗಿತು. ಆಗ ಲಕ್ಷ್ಮೀ ನಾರಾಯಣ ತನ್ನ ಹಸಿವನ್ನು ನೀಗಿಸಲು ಅನ್ನಕ್ಕೆ ಮಜ್ಜಿಗೆ ಕಲಸಿ ತಿನ್ನುತ್ತಿದ್ದನು. ಅದನ್ನು ನೋಡಿದ ಮನೆಯವರೆಲ್ಲ ಆತನನ್ನು ಭೀಮ ಎಂದು ಕರೆದರು. ಆತ ತನ್ನ ಭಾವನೊಂದಿಗೆ ಅಲೆಪ್ಪಿಗೆ ಬಂದು ಅಲ್ಲಿಯೇ ಬೆಳೆದ. 
ಯುವಕನಾಗಿದ್ದ ಆತ ಭೀಮಾ ಭಟ್ಟರು ಎಂದೇ ಆ ಭಾಗದಲ್ಲಿ ಪರಿಚಿತನಾಗಿದ್ದ. ಅವನಲ್ಲಿ ಬೆಳ್ಳಿಯ ಉದ್ಯಮ ಮಾಡುವ ಕನಸು ಹುಟ್ಟಿಕೊಂಡಿತು. ನಂತರ ಆತ ತನ್ನ ಪತ್ನಿಯ ಗೆಜ್ಜೆಗಳನ್ನು ಮಾರಿ ಬಂದ ಹಣದಿಂದ ಬೆಳ್ಳಿ ಪಾತ್ರೆಗಳ ಅಂಗಡಿ ತೆರೆದ. 
ಭೀಮನು ಮಾರಾಟ ಮಾಡಿದ ಉತ್ಪನ್ನಗಳ ಸೌಂದರ್ಯ ಮತ್ತು ಶುದ್ಧತೆ ಬಹಳ ಪ್ರಸಿದ್ಧವಾಯಿತು. ಗುಣಮಟ್ಟದಲ್ಲಿ ಭೀಮ ಎಂದಿಗೂ ರಾಜಿ ಮಾಡಿಕೊಳ್ಳದ ಕಾರಣ ಹಾಗೂ ಅತಿ ಕಡಿಮೆ ಲಾಭಕ್ಕೆ ಮಾರುತ್ತಿದ್ದ ಕಾರಣ ಆತನ ವ್ಯಾಪಾರ ಯಶಸ್ಸನ್ನು ಗಳಿಸಿತು. ಇದು ಭೀಮಾ ಪರಂಪರೆಯ ಪ್ರಾರಂಭವಾಗಿದೆ. ನಂತರದ ವರ್ಷಗಳಲ್ಲಿ ಭೀಮಾ ಎಂಬುದು ಬ್ರ್ಯಾಂಡ್ ಆಗಿ ಬೆಳೆದು ಜನಪ್ರಿಯವಾಯಿತು.

Gold Silver Price Today: ಆಭರಣ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌; ದುಬಾರಿಯಾಯ್ತು ಚಿನ್ನ, ಬೆಳ್ಳಿ ದರ

ನಂತರ ಭೀಮಾ ಭಟ್ಟರು ಕೇರಳದಲ್ಲಿ ಚಿನ್ನಾಭರಣ ವ್ಯಾಪಾರ ಆರಂಭಿಸಿದರು. ಅವರು ಯಾವಾಗಲೂ ತಮ್ಮ ಗ್ರಾಹಕರೊಂದಿಗೆ ಅತ್ಯುತ್ತಮ ಸಂಬಂಧ ನಿರ್ವಹಿಸಿದರು. ಉದ್ಯಮದಲ್ಲಿ ಅವರು ತೋರುತ್ತಿದ್ದ ಪ್ರಾಮಾಣಿಕತೆ ಮತ್ತು ಬದ್ಧತೆ ಅವರನ್ನು ಉಳಿದ ಉದ್ಯಮಿಗಳ ನಡುವೆ ವಿಭಿನ್ನವಾಗಿ ನಿಲ್ಲಿಸಿತು. ಭೀಮ ಭಟ್ಟರಿಗೆ, ವ್ಯವಹಾರವು ಕೇವಲ ಹಣದ ವಿನಿಮಯವಲ್ಲ, ಬದಲಿಗೆ ಅದು ಪ್ರೀತಿ, ನಂಬಿಕೆಯ ವಿನಿಮಯವನಾಗಿತ್ತು. ಈಗಲೂ ಕೂಡಾ ಭೀಮ ಭಟ್ಟರು ಹಾಕಿದ ಅದೇ ದಾರಿಯಲ್ಲಿ ಭೀಮಾ ಜ್ಯುವೆಲ್ಲರ್ಸ್ ಸಾಗುತ್ತಿದೆ. ವ್ಯವಹಾರ ಆರಂಭಿಸಿ 97 ವರ್ಷಗಳನ್ನು ಆಚರಿಸುತ್ತಿರುವ ಭೀಮಾ, ಈಗ 50 ಶೋರೂಮ್‌ಗಳೊಂದಿಗೆ ರಾಷ್ಟ್ರದಾದ್ಯಂತ ಹರಡಿಕೊಂಡಿದೆ ಮತ್ತು ಗ್ರಾಹಕರ ಮನಸ್ಸಿನಲ್ಲಿ ಬ್ರಾಂಡ್ ಹೆಸರು ಕೆತ್ತಲಾಗಿದೆ.
 

click me!