ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ಇದೀಗ ಬರೋಬ್ಬರಿ 65,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಈ ಮೂಲಕ 2.5 ಲಕ್ಷ ಉದ್ಯೋಗ ಸೃಷ್ಟಿಸುತ್ತಿದೆ. ಯಾವ ರಾಜ್ಯದಲ್ಲಿ ಅಂಬಾನಿ ಹೂಡಿಕೆ ಮಾಡುತ್ತಿದ್ದಾರೆ?
ಮುಂಬೈ(ನ.12) ರಿಲಯನ್ಸ್ ಗ್ರೂಪ್ ಚೇರ್ಮೆನ್ ಮುಕೇಶ್ ಅಂಬಾನಿ ಇದೀಗ ಉದ್ಯಮ ಸಾಮ್ರಾಜ್ಯ ವಿಸ್ತರಿಸುತ್ತಿದ್ದಾರೆ. ಎನರ್ಜಿ ಸೆಕ್ಟರ್‌ನಲ್ಲಿ ಅತೀ ದೊಡ್ಡ ಹೂಡಿಕೆ ಮೂಲಕ ಮುಕೇಶ್ ಅಂಬಾನಿ ಹೊಸ ಕ್ರಾಂತಿ ಮಾಡಲು ಸಜ್ಜಾಗಿದ್ದಾರೆ. ಮುಕೇಶ್ ಅಂಬಾನಿ ಬರೋಬ್ಬರಿ 65,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ. ಇದು ಗುಜರಾತ್ ರಾಜ್ಯದಿಂದ ಹೊರಗೆ ರಿಲಯನ್ಸ್ ಮಾಡುತ್ತಿರುವ ಅತೀ ದೊಡ್ಡ ಹೂಡಿಕೆ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಉದ್ಯಮದಿಂದ 2.5 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ. ಅಷ್ಟಕ್ಕೂ ರಿಲಯನ್ಸ್ ಹೂಡಿಕೆ ಮಾಡುತ್ತಿರುವುದು ನಮ್ಮ ಪಕ್ಕದ ರಾಜ್ಯ ಆಂಧ್ರ ಪ್ರದೇಶದಲ್ಲಿ.
ಆಂಧ್ರ ಪ್ರದೇಶದಲ್ಲ ಮುಕೇಶ್ ಅಂಬಾನಿ 500 ಕಂಪ್ರೆಸ್ಡ್ ಬಯೋಗ್ಯಾಸ್ ಪ್ಲಾಂಟ್ ಆರಂಭಿಸುತ್ತಿದ್ದಾರೆ. ಮುಂದಿನ 5 ವರ್ಷದಲಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರಿಲಯನ್ಸ್ ಕ್ಲೀನ್ ಎನರ್ಜಿ ಯೋಜನೆಯಡಿ ಹೂಡಿಕೆ ಮಾಡಲಾಗುತ್ತಿದೆ. ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಈ ಯೋಜನೆ ಹಾಗೂ ಉದ್ಯಮ ಮುನ್ನಡೆಸುತ್ತಿದ್ದಾರೆ. ಬರೋಬ್ಬರಿ 130 ಏಕರೆ ಪ್ರದೇಶದಲ್ಲಿ ಈ ಉದ್ಯಮ ಆರಂಭಗೊಳ್ಳುತ್ತಿದೆ. ಆಂಧ್ರ ಪ್ರದೇಶ ಐಟಿ ಸಚಿವ ನಾರಾ ಲೋಕೇಶ್ ಹಾಗೂ ಮುಕೇಶ್ ಅಂಬಾನಿ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಈ ಮೂಲಕ ಮಹತ್ವದ ಒಪ್ಪಂದಕ್ಕೆ ರಿಲಯನ್ಸ್ ಹಾಗೂ ಆಂಧ್ರ ಪ್ರದೇಶ ಒಪ್ಪಿಕೊಂಡಿದೆ. ಈ ಕುರಿತು MoUಗೆ ಸಹಿ ಹಾಕಿದೆ.
ಸುಪ್ರೀಂ ಕೋರ್ಟ್ ಆದೇಶದಿಂದ ಮುಕೇಶ್ ಅಂಬಾನಿ ನಿರಾಳ, ದುಬಾರಿ ದಂಡಕ್ಕೆ ಬ್ರೇಕ್!
ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಉದ್ಯಮ ಆರಂಭಿಸಲು ಅತೀ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಕಡಿಮೆ ತೆರೆಗೆ, ಸ್ಥಳವಕಾಶ, ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಸರ್ಕಾರಗಳು ನೀಡುತ್ತಿದೆ. ಹೀಗಾಗಿ ಕಳೆದ 10 ವರ್ಷದಲ್ಲಿ ಕರ್ನಾಟಕ ಸೇರಬೇಕಿದ್ದ ಹಲವು ಹೂಡಿಕೆಗಳು ಆಂಧ್ರ ಹಾಗೂ ತೆಲಂಗಾಣ ಪಾಲಾಗಿದೆ. ಇದೀಗ ರಿಲಯನ್ಸ್ ಗ್ರೂಪ್‌ನ ಅತೀ ದೊಡ್ಡ ಹೂಡಿಕೆಯೂ ಆಂಧ್ರ ಪ್ರದೇಶದ ಪಾಲಾಗಿದೆ. ಡಿಸೆಂಬರ್ 28ಕ್ಕೆ ರಿಲಯನ್ಸ್ ಹೊಸ ಯೋಜನೆ ಶಿಲನ್ಯಾಸ ನಡೆಯಲಿದೆ ಎಂದು ಸಚಿವ ನಾರಾ ಲೋಕೇಶ್ ಹೇಳಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಈಗಾಗಲೇ ಭೂಮಿ ಗುರುತಿಸಿದೆ. ಈ ಭೂಮಿಗೆ ರಿಲಯನ್ಸ್ ಕೂಡ ಗ್ರೀನ್ ಸಿಗ್ನಲ್ ನೀಡಿದೆ.
ಹಾಗಂತ ರಿಲಯನ್ಸ್ ಎನರ್ಜಿ ಕಂಪನಿಯ ಹೊಸ ಉದ್ಯಮ ಇದಲ್ಲ. ಈಗಾಗಲೇ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಮೊದಲ ಕಂಪ್ರೆಸ್ಡೆಡ್ ಬಯೋ ಗ್ಯಾಸ್ ಪ್ಲಾಂಟ್ ಆರಂಭಿಸಿದೆ. ವಿವಿಧ ರಾಜ್ಯಗಳಲ್ಲಿ ಬಯೋ ಗ್ಯಾಸ್ ಪ್ಲಾಂಟ್ ಆರಂಭಿಸಲು ರಿಲಯನ್ಸ್ ಯೋಜನೆ ಹಾಕಿಕೊಂಡಿದೆ. ಈ ಪೈಕಿ 500 ಬಯೋ ಗ್ಯಾಸ್ ಪ್ಲಾಂಟ್ ಇದೀಗ ಆಂಧ್ರ ಪ್ರದೇಶದಲ್ಲೇ ತಲೆ ಎತ್ತಲಿದೆ. ಇನ್ನು ಇತರ ರಾಜ್ಯಗಳಲ್ಲಿ ಒಟ್ಟು 100 ಬಯೋ ಗ್ಯಾಸ್ ಪ್ಲಾಂಟ್ ಆರಂಭಗೊಳ್ಳಲಿದೆ.
ಭಾರತದಲ್ಲಿ ಗರಿಷ್ಠ ದಾನ ಮಾಡಿದವರ ಪಟ್ಟಿ ಬಿಡುಗಡೆ, ಮೊದಲ ಸ್ಥಾನದಲ್ಲಿ ಶಿವ್ ನಾಡರ್!