ನಾಳೆ ಮಾರುಕಟ್ಟೆಯಲ್ಲಿ ಲಿಸ್ಟ್‌ ಆಗಲಿದೆ Swiggy, ಕೋಟ್ಯಧಿಪತಿಗಳಾಗಲಿದ್ದಾರೆ 500 ಮಂದಿ!

By Santosh Naik  |  First Published Nov 12, 2024, 7:17 PM IST

ನವೆಂಬರ್‌ 13ಕ್ಕೆ ದೇಶದ ಪ್ರಮುಖ ಆನ್‌ಲೈನ್‌ ಫುಡ್‌ ಅಗ್ರಿಗೇಟರ್‌ ಅಪ್ಲಿಕೇಶನ್‌ ಆಗಿರುವ ಸ್ವಿಗ್ಗಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಆಗಲಿದ್ದು, ಕನಿಷ್ಠ 500 ಮಂದಿ 1 ಕೋಟಿ ರೂಪಾಯಿ ಸಂಪಾದನೆ ಮಾಡುವ ಮೂಲಕ ಕೋಟ್ಯಧಿಪತಿಗಳಾಗಲಿದ್ದಾರೆ.


ಬೆಂಗಳೂರು (ನ.12): ಭಾರತದ ಪ್ರಮುಖ ಆನ್‌ಲೈನ್‌ ಫುಡ್‌ ಡೆಲಿವರಿ ಅಗ್ರಿಗೇಟರ್‌ ಆಗಿರುವ ಸ್ವಿಗ್ಗಿ ಈ ತಿಂಗಳ ಆರಂಭದಲ್ಲಿ ತನ್ನ ಐಪಿಒ ರಿಲೀಸ್‌ ಮಾಡಿತ್ತು. ನಾಳೆ ಅಂದರೆ ನವೆಂಬರ್‌ 13 ರಂದು ಸ್ವಿಗ್ಗಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್‌ ಆಗಲಿದೆ. ಲಿಸ್ಟಿಂಗ್‌ ಆದ ಬೆನ್ನಲ್ಲಿಯೇ ಸುಮಾರು 500 ಸ್ವಿಗ್ಗಿ ಉದ್ಯೋಗಿಗಳು ಕನಿಷ್ಠ 1 ಕೋಟಿ ರೂಪಾಯಿ ಸಂಪಾದನೆ ಮಾಡುವ ಮೂಲಕ ಕೋಟ್ಯಧಿಪತಿಗಳಾಗಲಿದ್ದಾರೆ ಎಂದು ವರದಿಯಾಗಿದೆ. ಸ್ವಿಗ್ಗಿ ಐಪಿಒ ಇತ್ತೀಚಿನ ವರ್ಷಗಳಲ್ಲಿ ಭಾರತದ ಅತೀದೊಡ್ಡ ಐಪಿಒಗಳಲ್ಲಿ ಒಂದಾಗಿದೆ. ಹಲವಾರು ವರ್ಷಗಳಿಂದ ಕಂಪನಿಯ ಏಳುಬೀಳುಗಳಲ್ಲಿ ಒಂದಾಗಿರುವ 5 ಸಾವಿರ ಉದ್ಯೋಗಿಗಳ ಪಾಲಿಗೆ 9 ಸಾವಿರ ಕೋಟಿ ರೂಪಾಯಿಯನ್ನು ಈ ಐಪಿಒ ಹಸ್ತಾಂತರ ಮಾಡಲಿದೆ.

ಸ್ವಿಗ್ಗಿ ಐಪಿಒ ವೇಳೆ ಎಂಪ್ಲಾಯ್‌ ಸ್ಟಾಕ್‌ ಆಪ್ಶನ್‌ (ಇಎಸ್‌ಓಪಿ) ಪೇಔಟ್‌ ಅನ್ನು ನೀಡಿತ್ತು. ಭಾರತದ ಸ್ಟಾರ್ಟ್‌ಅಪ್‌ ವಲಯದಲ್ಲಿ ಇಂಥವು ಬಹಳ ಅಪರೂಪ. Swiggy ಗಿಂತ ಮೊದಲು, ಫ್ಲಿಪ್‌ಕಾರ್ಟ್ ಇದೇ ರೀತಿಯ ಪೇಔಟ್‌ ನಡೆಸಿತ್ತು. ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿನ ಅತಿದೊಡ್ಡ ಸಂಪತ್ತು ಸೃಷ್ಟಿ ಡ್ರೈವ್‌ಗಳಲ್ಲಿ ಒಂದಾಗಿರುವ ತನ್ನ ಪ್ರಸ್ತುತ ಮತ್ತು ಮಾಜಿ ಉದ್ಯೋಗಿಗಳಿಗೆ $1.4-1.5 ಶತಕೋಟಿ (ರೂ. 11,600-12,500 ಕೋಟಿ) ಪಾವತಿಸಿತ್ತು. ಫ್ಲಿಪ್‌ಕಾರ್ಟ್‌ನ ಪಾವತಿಗಳಲ್ಲಿ ಕಂಪನಿಯು ಜುಲೈ 2023 ರಲ್ಲಿ 17,000 ಪ್ರಸ್ತುತ ಮತ್ತು ಮಾಜಿ ಉದ್ಯೋಗಿಗಳಿಗೆ 5,800 ಕೋಟಿ ರೂಪಾಯಿ ($700 ಮಿಲಿಯನ್) ಪಾವತಿಸಿದೆ.

Latest Videos

undefined

ವಾಲ್‌ಮಾರ್ಟ್-ಮಾಲೀಕತ್ವದ ದೈತ್ಯಕ್ಕೆ ಇದು ಏಕೈಕ ಅತಿದೊಡ್ಡ ESOP ಪಾವತಿಗಳಲ್ಲಿ ಒಂದಾಗಿದ್ದರೂ, ಕಂಪನಿಯು ಕಳೆದ ವರ್ಷಗಳಲ್ಲಿ ಒಟ್ಟಾರೆಯಾಗಿ $1.4-1.5 ಶತಕೋಟಿ (Rs 12,000 ಕೋಟಿ) ಮೌಲ್ಯದ ಐದು ಷೇರುಗಳ ಮರುಖರೀದಿಗಳನ್ನು ಮಾಡಿದೆ. ಇತರ ಸ್ಟಾರ್ಟ್‌ಅಪ್‌ಗಳು ಸಹ ಉದ್ಯೋಗಿಗಳ ಕೈಯಲ್ಲಿ ಹಣವನ್ನು ಹಾಕಿದರೆ, ಕೆಲವೇ ಕೆಲವರು ಫ್ಲಿಪ್‌ಕಾರ್ಟ್ ಮತ್ತು ಸ್ವಿಗ್ಗಿ ರೀತಿ ಉದ್ಯೋಗಿಗಳಿಗೆ ಸಂಪತ್ತು ಸೃಷ್ಟಿ ಮಾಡಿದ್ದಾರೆ.

ಲುಫ್ತಾನ್ಸ ಫ್ಲೈಟ್‌ನಲ್ಲಿ ಕನ್ನಡದಲ್ಲಿ ಅನೌನ್ಸ್‌ಮೆಂಟ್‌, ಪ್ರಯಾಣಿಕರು, ನೆಟ್ಟಿಗರ ಮೆಚ್ಚುಗೆ!


ಕಳೆದ ತಿಂಗಳು, ಸ್ವಿಗ್ಗಿ ಸಹ ಸಂಸ್ಥಾಪಕರಾದ ಶ್ರೀಹರ್ಷ ಮೆಜೆಟಿ, ನಂದನ್ ರೆಡ್ಡಿ ಮತ್ತು ಫಣಿ ಕಿಶನ್, ಆಹಾರ ಮಾರುಕಟ್ಟೆಯ ಸಿಇಒ ರೋಹಿತ್ ಕಪೂರ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮುಖ್ಯಸ್ಥ ಅಮಿತೇಶ್ ಝಾ, ಸಿಎಫ್‌ಒ ರಾಹುಲ್ ಬೋತ್ರಾ, ಎಚ್‌ಆರ್‌ ಚಫ್‌ ಗಿರೀಶ್ ಮೆನನ್ ಮತ್ತು ಸಿಟಿಒ ಮಧುಸೂಧನ್ ರಾವ್ ಮತ್ತು ಹಲವರು IPO ಗಿಂತ ಮುಂಚಿತವಾಗಿ ESOP ಗಳಲ್ಲಿ 200 ಮಿಲಿಯನ್‌ ಯುಎಸ್‌ ಡಲರ್‌  (1600 ಕೋಟಿ ರೂಪಾಯಿ) ಪಡೆದಿದ್ದಾರೆ ಎಂದು ವರದಿಯಾಗಿತ್ತು.

ಕೈಯಲ್ಲಿ ಕೊಡಲಿ ಹಿಡಿದು 'ಕಿಲ್ಲರ್' ಆದ ಜ್ಯೋತಿ ರೈ, ಬ್ಯೂಟಿ ಲುಕ್‌ಗೆ ಫ್ಯಾನ್ಸ್‌ ಬೋಲ್ಡ್‌!‌

click me!