ಹೊಸ ಎಫ್‌ಡಿಐ ನೀತಿ: ಫ್ಲಿಪ್ ಕಾರ್ಟ್, ವಾಲ್‌ಮಾರ್ಟ್ ದೋಸ್ತಿಗೆ ಭೀತಿ!

By Web Desk  |  First Published Feb 5, 2019, 12:42 PM IST

ಈಗಷ್ಟೇ ಒಂದಾದವರು ಮತ್ತೆ ಬೇರೆಯಾಗ್ತಿದ್ದಾರೆ| ಇಷ್ಟು ಬೇಗ ಮನಸ್ಸುಗಳು ಬೇರೆ ಬೇರೆಯಾಗಲು ಕಾರಣ?| ಫ್ಲಿಪ್ ಕಾರ್ಟ್ ನಿಂದ ದೂರ ಸರಿಯುತ್ತಿದೆ ವಾಲ್‌ಮಾರ್ಟ್| ಹೂಡಿಲೆ ಹಿ<ಪಡೆಯಲು ಮೊರ್ಗನ್ ಸ್ಟೇನ್ಲಿ ಚಿಂತನೆ| ಕೇಂದ್ರ ಸರ್ಕಾರದ ಹೊಸ ಎಫ್‌ಡಿಐ ನೀತಿ ತಂದಿತ್ತ ಫಜೀತಿ|


ಮುಂಬೈ(ಫೆ.05): ಕೆಲ ತಿಂಗಳ ಹಿಂದಷ್ಟೇ ಒಂದಾಗಿ ಭಾರತದ ಇ-ಕಾಮರ್ಸ್ ಕ್ಷೇತ್ರದಲ್ಲಿ ಮಗದೊಂದು ವಾಣಿಜ್ಯ ಯುದ್ಧಕ್ಕೆ ಶಂಖನಾದ ಮೊಳಗಿಸಿದ್ದ ಫ್ಲಿಪ್ ಕಾರ್ಟ್ ಮತ್ತು ವಾಲ್‌ಮಾರ್ಟ್ ಇದೀಗ ನಾನೊಂದು ತೀರ, ನೀನೊಂದು ತೀರ ಅಂತಾ ಬೆನ್ನು ತಿರುಗಿಸಿವೆ.

ಫ್ಲಿಪ್ ಕಾರ್ಟ್ ನಲ್ಲಿ ಹೂಡಿಕೆ ಮಾಡುವ ಮೂಲಕ ಭಾರತಕ್ಕೆ ಲಗ್ಗೆ ಇಟ್ಟಿದ್ದ ಅಮೆರಿಕದ ವ್ಯಾಪಾರಿ ದಿಗ್ಗಜ, ವಾಲ್‌ಮಾರ್ಟ್ ಮಾಲೀಕ ಮೊರ್ಗನ್ ಸ್ಟೇನ್ಲಿ, ಇದೀಗ ಹೂಡಿಕೆಯಿಂದ ಸರಿಯುವ ಕುರಿತು ಚಿಂತನೆ ನಡೆಸಿದ್ದಾರೆ.

Latest Videos

undefined

ಹೌದು, ಫ್ಲಿಪ್ ಕಾರ್ಟ್ ನಲ್ಲಿ ಮಾಡಿದ್ದ ಹೂಡಿಕೆಯನ್ನು ಹಿಂಪಡೆಯಲು ವಾಲ್‌ಮಾರ್ಟ್ ನಿರ್ಧರಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಇ-ಕಾಮರ್ಸ್ ನೀತಿಯೇ ಕಾರಣ ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರ ಎಫ್‌ಡಿಐ ನೀತಿ ಬದಲಿಸಿದ್ದು, ಇದರಿಂದ ವಾಲ್‌ಮಾರ್ಟ್ ವ್ಯಾಪಾರಕ್ಕೆ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಹೊಸ ನೀತಿಯ ಪರಿಣಾಮ ಫ್ಲಿಪ್ ಕಾರ್ಟ್ ತನ್ನ ೨೫ ವಸ್ತುಗಳನ್ನು ವಾಲ್‌ಮಾರ್ಟ್ ಸೈಟ್‌ನಿಂದ ತೆಗೆಯಬೇಕಾಗುತ್ತದೆ. ಪ್ರಮುಖವಾಗಿ ಸ್ಮಾರ್ಟ್‌ಫೋನ್, ಟಿವಿ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಾಲ್‌ಮಾರ್ಟ್ ಸೈಟ್‌ ಮೂಲಕ ಮಾರಾಟ ಮಾಡಲು ಬರುವುದಿಲ್ಲ.

ಮೂಲಗಳ ಪ್ರಕಾರ ಫ್ಲಿಪ್ ಕಾರ್ಟ್ ನ ಶೇ.50 ರಷ್ಟು ವ್ಯಾಪಾರ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಿಂದಾಗಿಯೇ ಆಗುತ್ತಿದ್ದು, ಇದನ್ನು ವಾಲ್‌ಮಾರ್ಟ್ ಸೈಟ್ ಮೂಲಕ ಮಾರಲು ಹೊಸ ನಿಯಮ ಅಡ್ಡಿಯಾಗಿದೆ.

ಈ ಹಿನ್ನೆಲೆಯಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಮಾಡಿದ ಹೂಡಿಕೆಯನ್ನು ವಾಪಸ್ ಪಡೆಯುವ ಕುರಿತು ಮೊರ್ಗನ್ ಸ್ಟೇನ್ಲಿ ಚಿಂತಿಸುತ್ತಿದ್ದು, ಭಾರತದ ಇ-ಕಾಮರ್ಸ್ ಕ್ಷೇತ್ರದಲ್ಲಿ ಸಣ್ಣದೊಂದು ಕಂಪನ ಶುರುವಾಗಿದೆ.

click me!