
ಇಸ್ಲಾಮಾಬಾದ್(ಫೆ.04): ಇಂತದ್ದೊಂದು ಸುದ್ದಿ ಓದಿ ನೀವು ನಕ್ಕರೆ, ನಮಗೂ ನಿಮ್ಮ ನಗುವಿನಲ್ಲಿ ಪಾಲಿರಲಿ. ಇದು ಒಂದು ಸಾರ್ವಭೌಮ ರಾಷ್ಟ್ರಕ್ಕೆ ಮಾಡುತ್ತಿರುವ ಅಪಮಾನವಲ್ಲ, ಬದಲಿಗೆ ತನ್ನ ಸಾರ್ವಭೌಮತೆಯನ್ನು ತನ್ನ ತಪ್ಪುಗಳಿಂದಲೇ ಕಳೆದುಕೊಳ್ಳುತ್ತಿರುವ ಪಾಕಿಸ್ತಾನದ ಮೇಲಿನ ಅಸಮಾಧಾನ
ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದ್ದು, ವಿದೇಶಿ ವಿನಿಮಯಕ್ಕಾಗಿ ಕತ್ತೆಗಳನ್ನು ರಫ್ತು ಮಾಡುವ ಪರಿಸ್ಥತಿಗೆ ಬಂದಿದೆ.
ಹೌದು, ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿರುವ ಪಾಕ್, ರಫ್ತಿಗೆ ತನ್ನ ಕತ್ತೆಗಳನ್ನು ನೆಚ್ಚಿಕೊಂಡಿದ್ದು, ನೆರೆಯ ಚೀನಾ ಈ ಕತ್ತೆಗಳನ್ನು ಆಮದು ಮಾಡಿಕೊಳ್ಳಲು ಸಿದ್ಧವಾಗಿದೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಎರಡು ಕತ್ತೆ ಫಾರ್ಮ್‌ಗಳನ್ನು ಆರಂಭಿಸಲು ಚೀನಾ ಹಣ ಹೂಡಿಕೆ ಮಾಡಲಿದೆ. ಅಲ್ಲಿ ಕತ್ತೆಗಳನ್ನು ಸಾಕಿ ಬೆಳೆಸಿ ಬಳಿಕ ಚೀನಾಕ್ಕೆ ರಫ್ತು ಮಾಡಲಾಗುತ್ತದೆ.
ಚೀನಾ ಸರ್ಕಾರ ಮತ್ತು ಅಲ್ಲಿನ ನೋಂದಾಯಿತ ಕಂಪನಿಗಳೊಂದಿಗೆ ಪಾಕ್ ಒಪ್ಪಂದ ಮಾಡಿಕೊಂಡಿದ್ದು, ಒಟ್ಟು 3 ಬಿಲಿಯನ್ ಹೂಡಿಕೆ ಮಾಡಲು ಚೀನಾ ಸಮ್ಮತಿಸಿದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಮೂರು ವರ್ಷಗಳಲ್ಲಿ ಪಾಕಿಸ್ತಾನದಿಂದ ನೆರೆಯ ಚೀನಾಗೆ ಸುಮಾರು 30 ಸಾವಿರ ಕತ್ತೆಗಳನ್ನು ರಫ್ತು ಮಾಡಲಾಗುವುದು ಎಂದು ಅಂದಾಜಿಸಲಾಗಿದೆ.
ಪಾಕ್ ಬ್ಯಾಂಕ್‌ಗೆ ಬಂದು ಬಿದ್ದ ಯುಎಇ ಹಣ: ಥ್ಯಾಂಕ್ಸ್ ಆದ್ರೂ ಹೇಳಣ್ಣ!
ಪಾಕ್‌ಗೆ ಯುಎಇ ಹೆಲ್ಪ್: ಕಂತೆ ಕಂತೆ ದುಡ್ಡು ಇಮ್ರಾನ್ ಜೇಬಿಗೆ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.