EPFO ಚಂದಾದಾರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಬಂಪರ್!

By Web Desk  |  First Published Feb 5, 2019, 8:03 AM IST

ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಕಟಿಸಿರುವ ಕೇಂದ್ರ ಸರ್ಕಾರ, ಭವಿಷ್ಯ ನಿಧಿ ಗ್ರಾಹಕರಿಗೂ ಬಂಪರ್‌ ಕೊಡುಗೆಯೊಂದನ್ನು ಪ್ರಕಟಿಸುವ ನಿರೀಕ್ಷೆ ಇದೆ. 


ನವದೆಹಲಿ[ಫೆ.05]: ಅಸಂಘಟಿತ ವಲಯದ ನೌಕರರಿಗೆ 60 ವರ್ಷ ತುಂಬುತ್ತಿದ್ದಂತೆ 3000 ರು. ಮಾಸಿಕ ಪಿಂಚಣಿ ಸಿಗುವಂತೆ ಮಾಡಲು ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಕಟಿಸಿರುವ ಕೇಂದ್ರ ಸರ್ಕಾರ, ಭವಿಷ್ಯ ನಿಧಿ ಗ್ರಾಹಕರಿಗೂ ಬಂಪರ್‌ ಕೊಡುಗೆಯೊಂದನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಸದ್ಯ ಭವಿಷ್ಯ ನಿಧಿಯಡಿ 1000 ರು. ಕನಿಷ್ಠ ಪಿಂಚಣಿ ಸಿಗುತ್ತಿದೆ. ಆ ಮೊತ್ತವನ್ನು ಶ್ರಮಯೋಗಿ ಮಾನಧನ ಯೋಜನೆಯಂತೆ ಕನಿಷ್ಠ 3000 ರು.ಗೆ ಏರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಲೋಕಸಭೆ ಚುನಾವಣೆಗೂ ಮೊದಲೇ ಈ ಕುರಿತು ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Latest Videos

click me!