ಅಂಬಾನಿಗೆ ನಡುಕ ಹುಟ್ಟಿಸಿದ ವೊಡಾಫೋನ್ ಐಡಿಯಾ; ಫ್ರೀ ಇಂಟರ್‌ನೆಟ್‌ನ ಸೂಪರ್ ಹೀರೋ ಪ್ಲಾನ್ ತಂದ Vi

By Mahmad Rafik  |  First Published Dec 12, 2024, 9:25 AM IST

ವೋಡಾಫೋನ್ ಐಡಿಯಾ ತಂದಿರುವ ಸೂಪರ್ ಹೀರೋ ಪ್ಲಾನ್ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು  ಬಿಎಸ್ಎನ್ಎಲ್ ಕಂಪನಿಗಳಿಗೆ ನಡುಕ ಹುಟ್ಟಿಸಿದೆ. 24 ಗಂಟೆಯಲ್ಲಿ ಗ್ರಾಹಕರಿಗೆ ಅರ್ಧ ದಿನ ಉಚಿತ ಇಂಟರ್‌ನೆಟ್ ಲಭ್ಯವಾಗಲಿದೆ.


ನವದೆಹಲಿ: ವೋಡಾಫೋನ್ ಐಡಿಯಾ ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ. ವಲಸೆ ಹೋಗುತ್ತಿರುವ ಬಳಕೆದಾರರನ್ನು  ಉಳಿಸಿಕೊಳ್ಳಲು ಎಲ್ಲಾ  ಖಾಸಗಿ  ಕಂಪನಿಗಳು ಮುಂದಾಗಿದ್ದು, ಅದಕ್ಕಾಗಿ ಹೊಸ ಹೊಸ ಆಫರ್‌ಗಳನ್ನು ಪರಿಚಯಿಸುತ್ತಿವೆ. ಇದೀಗ ರಿಲಯನ್ಸ್  ಜಿಯೋ  ಮತ್ತು ಏರ್‌ಟೆಲ್‌ ರೀತಿ ವೊಡಾಫೋನ್ ಐಡಿಯಾ ಹೊಸ ಆಫರ್  ಲಾಂಚ್ ಮಾಡಿದೆ. ಈ  ಮೂಲಕ ನಂಬರ್  ಒನ್, ಸೆಕೆಂಡ್ ಸ್ಥಾನದಲ್ಲಿರುವ ಕಂಪನಿಗಳಿಗೆ ವೊಡಾಫೋನ್ ಐಡಿಯಾ  ಟಕ್ಕರ್ ನೀಡಿದೆ. ಈ  ಸೂಪರ್ ಹೀರೋ ಪ್ಲಾನ್‌ನಲ್ಲಿ  12 ಗಂಟೆ ಅವಧಿವರೆಗೆ  ಅನ್‌ಲಿಮಿಟೆಡ್ ಡೇಟಾ ನೀಡುತ್ತಿದೆ.

ಅತಿ ಹೆಚ್ಚು ಇಂಟರ್‌ನೆಟ್ ಬಳಕೆ ಮಾಡೋರಿಗೆ ಈ ಪ್ಲಾನ್ ಹೆಚ್ಚು ಲಾಭದಾಯವಾಗಿದೆ. ಕೇವಲ ಒಂದೇ ದಿನ ಅಧಿಕ ಇಂಟರ್‌ನೆಟ್  ಬಳಕೆ ಮಾಡುವ ವರ್ಗದ ಜನಕ್ಕೆ ಇದು ಸೂಪರ್  ಪ್ಲಾನ್ ಆಗಿದೆ. ಬಿಎಸ್ಎನ್ಎಲ್ ಕಡಿಮೆ ಬೆಲೆ ಪ್ಲಾನ್ ನೀಡಿ ಗ್ರಾಹಕರನ್ನು  ತನ್ನತ್ತ ಸೆಳೆಯುತ್ತಿದೆ. ಇದೀಗ ಬಿಎಸ್‌ಎನ್‌ಎಲ್‌ಗೆ ದೊಡ್ಡ ಟಕ್ಕರ್ ಆಗಲಿದೆ. 

Tap to resize

Latest Videos

ವೊಡಾಫೋನ್  ಐಡಿಯಾದಲ್ಲಿನ ಈ ಪ್ಲಾನ್‌ನಲ್ಲಿ ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಗ್ರಾಹಕರಿಗೆ ಅನ್‌ಲಿಮಿಟೆಡ್  ಡೇಟಾ ಸಿಗುತ್ತದೆ. ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುವ ಜನತೆಗೆ ಈ ಪ್ಲಾನ್ ಲಾಭದಾಯಕವಾಗಿದೆ. ಇದರಲ್ಲಿ ಬಳಕೆದಾರರಿಗೆ ಯಾವುದೇ ಡೇಟಾ  ಲಿಮಿಟ್ ಇರಲ್ಲ.  ದಿನದ 12 ಗಂಟೆ ಗ್ರಾಹಕರಿಗೆ ಉಚಿತ ಇಂಟರ್‌ನೆಟ್ ಸೌಲಭ್ಯ ಬಳಕೆದಾರರಿಗೆ ಸಿಗುತ್ತದೆ. ಈ ಫ್ರೀ ಇಂಟರ್‌ನೆಟ್ ಪ್ಲಾನ್‌ನಲ್ಲಿ ಪ್ರತಿದಿನ 2GBಗೂ ಅಧಿಕ ಡೇಟಾ ಸಿಗುತ್ತದೆ. ಈ ಪ್ರಿಪೇಯ್ಡ್ ಪ್ಲಾನ್ 365 ರೂಪಾಯಿಯಿಂದ ಆರಂಭವಾಗುತ್ತದೆ.

ಇದನ್ನೂ ಓದಿ: ವೊಡಾಫೋನ್‌ನಿಂದ ಅತಿ ಕಡಿಮೆ ಬೆಲೆಯ ₹26 ಪ್ಲಾನ್ ರಿಲೀಸ್; ಸಿಗಲಿದೆ 1.5GB extra ಡೇಟಾ

undefined

ವೋಡಾಫೋನ್ ಐಡಿಯಾದ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿನ ಮತ್ತೊಂದು ವೈಶಿಷ್ಟ್ಯ ಏನಂದ್ರೆ  ವಾರದ ದಿನಗಳಲ್ಲಿ ನಿಮ್ಮ ಡೇಟಾ ಬಳಕೆ ಮಾಡದೇ ಇದ್ರೆ, ಅದನ್ನು ಬಳಸಲು ವೀಕೆಂಡ್‌ನಲ್ಲಿ ರೋಲ್‌ಓವರ್ ಆಯ್ಕೆಯನ್ನು ನೀಡಲಾಗುತ್ತದೆ. ಮತ್ತೊಂದು ಪ್ರಯೋಜನೆ ಏನು ಅಂದ್ರೆ ಡೇಟಾ ಡಿಲೈಟ್. ಇದರಡಿಯಲ್ಲಿ ಗ್ರಾಹಕರು  ಹೆಚ್ಚುವರಿ ಹಣ ಪಾವತಿಸದೇ Vi ಅಪ್ಲಿಕೇಶನ್ ಮೂಲಕ 2GB ಡೇಟಾವನ್ನು ಬಳಸಬಹುದು.

365 ರೂಪಾಯಿ ಪ್ರಿಪೇಯ್ಡ್ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. 28 ದಿನಗಳವರೆಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು. ಪ್ರತಿದಿನ  2GB ಡೇಟಾ ಸಿಗುತ್ತದೆ. ರಾತ್ರಿ 12 ರಿಂದ ಬೆಳಗ್ಗೆ 6 ಗಂಟೆವರೆಗೆ ಉಚಿತ  ಇಂಟರ್‌ನೆಟ್  ಬಳಕೆ ಮಾಡುವ ಅವಕಾಶವು ಸಹ ಸಿಗುತ್ತದೆ.  ಹಾಗಾಗಿ ಇಡೀ ದಿನ ನಿಮಗೆ ಡೇಟಾ ಸಿಕ್ಕಂತೆ ಆಗುತ್ತದೆ. 28 ದಿನಗಳಿಗೆ ಒಟ್ಟು 56GB ಗ್ರಾಹಕರಿಗೆ ಸಿಗುತ್ತದೆ.

ಇದನ್ನೂ ಓದಿ: 2025ರಲ್ಲಿ ಟೆನ್ಷನ್ ಬೇಡ! ಟೆಲಿಕಾಂ ಕಂಪನಿಗಳ 1 ವರ್ಷದ ರೀಚಾರ್ಜ್ ಪ್ಲಾನ್‌ಗಳು

click me!