ಯುಕೆಯ 17 ವರ್ಷದ ಹುಡುಗ ಒಂದು ಸಣ್ಣದಾದ ಸ್ಟಿಕ್ಕರ್ ಬ್ಯುಸಿನೆಸ್ ಆರಂಭಿಸಿ ತಿಂಗಳಿಗೆ ಬರೋಬ್ಬರಿ 16 ಲಕ್ಷ ರೂ.ಗಳನ್ನು ಗಳಿಸುತ್ತಿದ್ದಾನೆ. ಕ್ರಿಸ್ಮಸ್ ಉಡುಗೊರೆಯೊಂದಿಗೆ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದ ಈ ಹುಡುಗ ಈಗ ಲಕ್ಷ ಲಕ್ಷ ಆದಾಯ ಗಳಿಸಿದ್ದು ಹೇಗೆ ನೋಡೋಣ.
ನಾವು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಕೆಲವೊಂದು ವೀಡಿಯೊಗಳನ್ನು ನೋಡುತ್ತೇವೆ, ಇದರಲ್ಲಿ ಜನರು ತಮ್ಮ ವ್ಯವಹಾರದ ಬಗ್ಗೆ ಹೇಳುತ್ತಾರೆ, ಜೊತೆಗೆ ಅವರು ಲಕ್ಷ ಲಕ್ಷ ಗಳಿಸೋದನ್ನು ಸಹ ನೀವು ನೋಡಿರುತ್ತೀರಿ ಅಲ್ವಾ? . ಅಂತಹ ಒಂದು ವ್ಯವಹಾರವನ್ನು 17 ವರ್ಷದ ಹುಡುಗ ಮಾಡುತ್ತಿದ್ದಾನೆ. ಇದು ಯುಕೆಯ ಮೆಕ್ಡೊನಾಲ್ಡ್ ಕಥೆ. ಪರ್ಸನಲೈಜ್ಡ್ ಸ್ಟಿಕ್ಕರ್ ಗಳನ್ನು ಮಾರಾಟ ಮಾಡುವ ಮೂಲಕ ಈ ಬಾಲಕ ತಿಂಗಳಿಗೆ 15,000 ಪೌಂಡ್ (ಸುಮಾರು 16 ಲಕ್ಷ ರೂಪಾಯಿ) ಗಳಿಸುತ್ತಿದ್ದಾರೆ. ಅವರು ತಮ್ಮ ಕ್ರಿಸ್ಮಸ್ ಉಡುಗೊರೆಯಿಂದ ಆರಂಭಿಸಿದ ಈ ವ್ಯವಹಾರ ಇದೀಗ ಲಾಭದಾಯಕ ಬ್ಯುಸಿನೆಸ್ ಆಗಿ ಮಾರ್ಪಟ್ಟಿದೆ. .
ಸ್ಟಿಕ್ಕರ್ ಗಳಿಂದ ಲಕ್ಷಾಂತರ ವ್ಯವಹಾರ ಮಾಡಿದ ಬಾಲಕ
ಮೆಕ್ ಡೊನಾಲ್ಡ್ಸ್ ಅವರು ಸ್ಟಿಕ್ಕರ್ ಗಳ ಆನ್ ಲೈನ್ ವ್ಯವಹಾರವನ್ನು ಮಾಡುತ್ತಿದ್ದಾರೆ . ಕ್ಯಾಲನ್ ಮೆಕ್ಡೊನಾಲ್ಡ್ ಅವರ ತಾಯಿ ಕರೆನ್ ನ್ಯೂಸ್ಹ್ಯಾಮ್ ಎರಡು ವರ್ಷಗಳ ಹಿಂದೆ ಕಿಸ್ಮಸ್ ಸಂದರ್ಭದಲ್ಲಿ ಮಗನಿಗೆ 150 ಪೌಂಡ್ (ಸುಮಾರು 16,000 ರೂ.) ಉಡುಗೊರೆಯಾಗಿ ನೀಡಿದಾಗ ಅವರ ಬ್ಯುಸಿನೆಸ್ ಜರ್ನಿ ಪ್ರಾರಂಭವಾಯಿತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಡಿಜಿಟಲ್ ಕ್ರಾಫ್ಟಿಂಗ್ ಮಷಿನ್ ಮೂಲಕ ಈ ಸ್ಟಿಕ್ಕರ್ ಗಳನ್ನು ಮಾಡಲಾಯಿತು. ಆರಂಭದಲ್ಲಿ, ಮ್ಯಾಕ್ಡೊನಾಲ್ಡ್ ಗಾಜು ಮತ್ತು ಅಕ್ರಿಲಿಕ್ ವಸ್ತುಗಳ ಮೇಲೆ ಡಿಸೈನ್ ಮಾಡುವ ತನ್ನ ಪ್ರಾಜೆಕ್ಟ್ ಅನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡರು,ಈ ಪೋಸ್ಟ್ ಸೋಶಿಯಲ್ ಮೀಡೀಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಇವರಿಗೆ ಆರ್ಡರ್ ಬರೋದಕ್ಕೆ ಶುರುವಾಗಿತ್ತು.
ವ್ಯವಹಾರದ ವಿಸ್ತರಣೆ
2024 ರ ಆರಂಭದಲ್ಲಿ, ಮೆಕ್ಡೊನಾಲ್ಡ್ಸ್ ಕಾಲೇಜು ಮತ್ತು ಬ್ಯುಸಿನೆಸ್ ಎರಡನ್ನೂ ಏಕಕಾಲದಲ್ಲಿ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಪ್ರತಿದಿನ ಕೇವಲ ಮೂರು ಗಂಟೆಗಳಲ್ಲಿ 200 ಕಸ್ಟಮೈಸ್ ಮಾಡಿದ ಸ್ಟಿಕ್ಕರ್ ಗಳನ್ನು ರಚಿಸುತ್ತಿತ್ತು. ಆದರೆ ದಿನದಿಂದ ದಿನಕ್ಕೆ ಮೆಕ್ ಡೊನಾಲ್ಡ್ ವ್ಯವಹಾರಕ್ಕೆ ಹೆಚ್ಚಿನ ಸಮಯ ಬೇಕಾಗುತ್ತಿತ್ತು. ಯಾಕಂದ್ರೆ ಬೇಡಿಕೆ ಕೂಡ ಹೆಚ್ಚಾಗಿತ್ತು, ಹಾಗಾಗಿ ಅವರು ಶಾಲೆಯನ್ನು ತೊರೆದರು. ನಂತರ ಇಂಡಸ್ಟ್ರಿಯಲ್ ಗ್ರೇಡ್ ಪ್ರಿಂಟರ್ ಗೆ ಹೂಡಿಕೆ ಮಾಡಿದರು. ಆ ಮೂಲಕ ತಮ್ಮ ವ್ಯವಹಾರವನ್ನು ವಿಸ್ತರಿಸಿದರು. ಜುಲೈನಿಂದ, ಅವರು ಸುಮಾರು 77,000 ಪೌಂಡ್ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ, ಅಂದರೆ ಟಿಕ್ಟಾಕ್ ಶಾಪ್ ಮತ್ತು ಇತರ ಪ್ಲಾಟ್ಫಾರ್ಮ್ಗಳಲ್ಲಿ ಸುಮಾರು 83 ಲಕ್ಷ ರೂ ಗಳಿಕೆ ಮಾಡಿದ್ದಾರೆ. ಅಂದರೆ ಪ್ರತಿ ತಿಂಗಳು ಈ ಯುವಕ ಬರೋಬ್ಬರಿ 16 ಲಕ್ಷ ಆದಾಯ ಗಳಿಸುತ್ತಿದ್ದಾರೆ.