ಸ್ಟಾರ್ಟ್ ಅಪ್ ಗಳಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿರುವ 7 ಭಾರತೀಯ ಕ್ರಿಕೆಟಿಗರು ಇವರೇ ನೋಡಿ!

By Suvarna News  |  First Published Dec 19, 2022, 9:29 PM IST

ವಿರಾಟ್ ಕೊಹ್ಲಿ, ಧೋನಿ ಹಾಗೂ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲ, ಉದ್ಯಮ ಕ್ಷೇತ್ರದಲ್ಲೂ ಕೂಡ  ತಮ್ಮ ಸಾಮರ್ಥ್ಯ ತೋರ್ಪಡಿಸಿದ್ದಾರೆ. ಇವರಷ್ಟೇ ಅಲ್ಲ, ಇನ್ನೂ ಕೆಲವು ಕ್ರಿಕೆಟಿಗರು ಸ್ಟಾರ್ಟ್ ಅಪ್ ಗಳಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡುವ ಮೂಲಕ ಉದ್ಯಮ ರಂಗದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 


Business Desk: ಭಾರತದ ಕೆಲವು ಕ್ರಿಕೆಟ್ ಆಟಗಾರರು ಬ್ಯಾಟ್, ಬಾಲ್ ಹಿಡಿದು ಮೈದಾನದಲ್ಲಿ ಮಾತ್ರ  ಮೋಡಿ ಮಾಡುತ್ತಿಲ್ಲ. ಬದಲಿಗೆ ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟು ತಮ್ಮದೇ ಛಾಪು ಮೂಡಿಸಿದ್ದಾರೆ. ವಿರಾಟ್ ಕೋಹ್ಲಿ, ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ಕೆಲವು ಕ್ರಿಕೆಟಿಗರು ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಿ ಯಶಸ್ಸು ಸಾಧಿಸಿದ್ದಾರೆ ಕೂಡ. ವಿರಾಟ್ ಕೊಹ್ಲಿ ತಮ್ಮ ಹೂಡಿಕೆಯ ಕಾರಣದಿಂದಲೇ ಫೋರ್ಬ್ಸ್ ಅತ್ಯಧಿಕ ಆದಾಯ ಹೊಂದಿರುವ ಕ್ರೀಡಾಪಟುಗಳ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಗೂ ವಿಕೆಟ್ ಕೀಪರ್ ಎಂಎಸ್ ಧೋನಿ ಕೂಡ ಈ ವಿಷಯದಲ್ಲಿ ಹಿಂದೆ ಉಳಿದಿಲ್ಲ. ವಿವಿಧ ಕ್ರೀಡೆಗಳಲ್ಲಿ ಒಂದು ತಂಡವನ್ನು ಖರೀದಿಸಿರುವ ಜೊತೆಗೆ ಟೆಕ್ ಕಂಪನಿಗಳಲ್ಲಿ ಹೂಡಿಕೆ ಮಾಡುವ ತನಕ ಧೋನಿ ಪ್ರತಿ ಕ್ಷೇತ್ರದಲ್ಲೂ ಕೈಯಾಡಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಭಾರತ ತಂಡದ ಪ್ರಸಕ್ತ ಆಟಗಾರರಿಂದ ಹಿಡಿದು ಮಾಜಿ ಆಟಗಾರರ ತನಕ ಅನೇಕರು ಉದ್ಯಮ ರಂಗದಲ್ಲಿ ಹೂಡಿಕೆ ಮಾಡಿ ಯಶಸ್ಸು ಸಾಧಿಸಿದ್ದಾರೆ ಕೂಡ. ಹೀಗಿರುವಾಗ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿರುವ ಪ್ರಮುಖ ಭಾರತೀಯ ಕ್ರಿಕೆಟಿಗರ ಮಾಹಿತಿ ಇಲ್ಲಿದೆ. 

1.ವಿರಾಟ್ ಕೊಹ್ಲಿ
ಉದ್ಯಮ ರಂಗದಲ್ಲಿ ಜನಪ್ರಿಯತೆ ಗಳಿಸಿರುವ ಭಾರತದ ಕ್ರೀಡಾ ಕ್ಷೇತ್ರದ ಒಬ್ಬ ವ್ಯಕ್ತಿ ಯಾರು ಎಂದು ಕೇಳಿದರೆ, ಮೊದಲು ಕೇಳಿಬರುವ ಹೆಸರೇ ವಿರಾಟ್ ಕೊಹ್ಲಿ. ಒನ್ 8 (One8) ಹಾಗೂ ರೋಗನ್ ( Wrogn) ಸ್ವಂತ ಬ್ರ್ಯಾಂಡ್ ಗಳನ್ನು ಹೊಂದಿರುವ ಜೊತೆಗೆ ಕೆಲವು ಸ್ಟಾರ್ಟ್‌ಅಪ್ ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಟೆಕ್ ಸ್ಟಾರ್ಟ್ ಅಪ್ ಸ್ಪೋರ್ಟ್ಸ್ ಕನ್ವೊ ಹಾಗೂ ಛಿಸೆಲ್ ಜಿಮ್ಸ್ ನಲ್ಲಿ ವಿರಾಟ್ ಕೊಹ್ಲಿ ಹೂಡಿಕೆ ಮಾಡಿದ್ದಾರೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್ ಅನ್ವಯ 2015ರಲ್ಲಿ ವಿರಾಟ್ ಕೊಹ್ಲಿ ಉದ್ಯಮವೊಂದರಲ್ಲಿ 90 ಕೋಟಿ ರೂ. ಹೂಡಿಕೆ ಮಾಡಿದ್ದರು. ಇದರೊಂದಿಗೆ ಹಾಂಗ್ ಕಾಂಗ್ ಮೂಲದ ಸ್ಟಾರ್ಟ್ ಅಪ್ ಝೀವಿಯಲ್ಲಿ (Zeeve) ಕೂಡ ಹೂಡಿಕೆ ಮಾಡಿದ್ದಾರೆ.

Tap to resize

Latest Videos

2.ಎಂ.ಎಸ್.ಧೋನಿ
ಕಾರ್ಸ್ 24 ಹಾಗೂ ಖಾತಬುಕ್ ಸ್ಟಾರ್ಟ್ಅಪ್ ಗಳ ಜಾಹೀರಾತುಗಳಲ್ಲಿ ನೀವು  ಎಂ.ಎಸ್.ಧೋನಿ ಅವರನ್ನು ನೋಡಿರಬಹುದು. ಆದರೆ, ಧೋನಿ ಈ ಸ್ಟಾರ್ಟ್ ಅಪ್ ಗಳ ಜಾಹೀರಾತಿಗಷ್ಟೇ ಸೀಮಿತರಾಗಿಲ್ಲ. ಬದಲಿಗೆ ಈ ಎರಡೂ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಎಷ್ಟು ಮೊತ್ತ ಎಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.

ಉತ್ತಮ ರಿಟರ್ನ್ ನೀಡುವ ಎಲ್ಐಸಿಯ 4 ಪಾಲಿಸಿಗಳು ಇವೇ ನೋಡಿ

3.ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್ ಅವರು ಸ್ಮಾಶ್ (Smaash) ಎಂಬ ಸ್ಟಾರ್ಟ್ ಅಪ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಎಕಾನಮಿಕ್ ಟೈಮ್ಸ್ ಪ್ರಕಾರ ಸಚಿನ್ ತೆಂಡೂಲ್ಕರ್ ಬೆಂಬಲಿತ ಸ್ಟಾರ್ಟ್ ಅಪ್ ಇತ್ತೀಚೆಗೆ 25 ಕೋಟಿ ರೂ. ಹೂಡಿಕೆಯನ್ನು ಸಂಗ್ರಹಿಸಿದೆ ಕೂಡ. ಹೈದರಾಬಾದ್ ಮೂಲದ ಸ್ಮಾರ್ಟ್ರೋನ್ ಇಂಡಿಯಾ ಎಂಬ ಸ್ಟಾರ್ಟ್ ಅಪ್ ನಲ್ಲಿ ಕೂಡ ಸಚಿನ್ ತೆಂಡೂಲ್ಕರ್ ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.

4.ಹರ್ಷಾ ಬೋಗ್ಲೆ
ಹರ್ಷಾ ಬೋಗ್ಲೆ ಕ್ರಿಕೆಟಿಗನಾಗಿ ಯಶಸ್ಸು ಗಳಿಸದಿದ್ರೂ ಅತ್ಯುತ್ತಮ ನಿರೂಪಕ ಹಾಗೂ ಕಾಮೆಂಟೇಟರ್ ಆಗಿ ಜನಪ್ರಿಯತೆ ಗಳಿಸಿದ್ದಾರೆ. ChqBook ಎಂಬ ಸ್ಟಾರ್ಟ್ ಅಪ್ ನಲ್ಲಿ ಬೋಗ್ಲೆ ಹೂಡಿಕೆ ಮಾಡಿದ್ದಾರೆ. 

5.ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ ಭಾರತೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿರಬಹುದು. ಆದರೆ, ಬೆಂಗಳೂರು ಮೂಲದ ಈ ಕ್ರಿಕೆಟಿಗ ಹೂಡಿಕೆ ವಿಚಾರದಲ್ಲಿ ಜಾಣತನದ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಫಿನ್ ವೆಂಚರ್ಸ್ ಎಂಬ ಹೆಸರಿನಲ್ಲಿ ಉತ್ತಪ್ಪ ತನ್ನ ಸ್ವಂತ ನಿಧಿ ಹೊಂದಿದ್ದು, ಐ ಟಿಫಿನ್ ಹಾಗೂ ಬೆಂಗಳೂರು ಮೂಲದ ಹೆಲ್ತ್ ಇ ಮೈಂಡ್ಸ್ ಎಂಬ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿದ್ದಾರೆ. 

6.ಉಮೇಶ್ ಯಾದವ್
ಮಹಾರಾಷ್ಟ್ರದ ವಿದರ್ಭ ಪ್ರದೇಶದ ಸಣ್ಣ ಹಳ್ಳಿಯ ಹುಡುಗ ಉಮೇಶ್ ಯಾದವ್  2015ರಿಂದ ತನ್ನ ಹೂಡಿಕೆ ಪ್ರಾರಂಭಿಸಿದರು. ಯುವರ್ ಸ್ಟೋರಿ ಪ್ರಕಾರ ಯಾದವ್ ಕೋಲ್ಕತ್ತ ಮೂಲದ ಫ್ಯಾಷನ್ ಒವ್ ಎಂಬ ಸ್ಟಾರ್ಟ್ ಅಪ್ ನಲ್ಲಿ ಹೂಡಿಕೆ ಮಾಡಿದ್ದಾರೆ.

2022 ಮುಗಿಯೋ ಮುನ್ನ ತಪ್ಪದೇ ಈ ಕೆಲ್ಸ ಮಾಡಿ ಮುಗಿಸಿ

7.ಯುವರಾಜ್ ಸಿಂಗ್
ಯುವರಾಜ್ ಸಿಂಗ್ ಅವರ ಯುವಿಕ್ಯಾನ್ ವೆಂಚರ್ಸ್ ವಿಯೋಮೋ ( Vyomo) ಎಂಬ ಸೌಂದರ್ಯ ಹಾಗೂ ಆರೋಗ್ಯವರ್ಧಕ ಸ್ಟಾರ್ಟ್ ಅಪ್ ನಲ್ಲಿ ಹೂಡಿಕೆ ಮಾಡಲು ನಿರ್ಧರಿಸಿತ್ತು. ಈ ಹೂಡಿಕೆ ಮೂಲಕ ಯುವರಾಜ್ ಸಿಂಗ್ ಹೂಡಿಕೆ ಯಾನ ಪ್ರಾರಂಭಿಸಿದ್ದರು. ಆ ಬಳಿಕ ಜೆಟ್ ಸೆಟ್ ಗೋ (ಪ್ರಯಾಣ), ವಿಯೋಮೋ (Vyomo), ಸ್ಪೋಟಿಬೀನ್ಸ್ (SportyBeans), ಕಾರ್ಟಿಸನ್ (Cartisan) ಹಾಗೂ ಹೆಲ್ತಿಯನ್ಸ್ (Healthians) ಎಂಬ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿದೆ. ನವೆಂಬರ್ ಪ್ರಾರಂಭದಲ್ಲಿ ಸಿಂಗ್ ನ್ಯೂಟ್ರಿಷಿಯನ್ ಆಧಾರಿತ ಹೆಲ್ತ್ ಟೆಕ್ ಸ್ಟಾರ್ಟ್ ಅಪ್ 'ವೆಲ್ ವರ್ಸಡ್' ನಲ್ಲಿ (Wellversed) ಹೂಡಿಕೆ ಮಾಡಿದ್ದಾರೆ. 

click me!