Bengaluru: ವಿಜಯಾನಂದ ಟ್ರಾವೆಲ್ಸ್ ನಿಂದ ಹೊಸ ದಾಖಲೆ: ಸಾರಿಗೆಯಲ್ಲಿ ನೂತನ ಮೈಲಿಗಲ್ಲು

Published : Sep 06, 2026, 03:37 PM IST
VRL

ಸಾರಾಂಶ

ದೇಶದ ಪ್ರಮುಖ ಖಾಸಗಿ ಸಾರಿಗೆ ಸಂಸ್ಥೆಯಾದ ವಿಜಯಾನಂದ ಟ್ರಾವೆಲ್ಸ್, ಹೊಸ ದಾಖಲೆ ನಿರ್ಮಿಸಿದೆ. ಶೌಚಾಲಯ ವ್ಯವಸ್ಥೆ ಹೊಂದಿರುವ ಈ ಬಸ್‌ಗಳು ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುವುದಲ್ಲದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿವೆ.

ಬೆಂಗಳೂರು: ದೇಶದ ಅತಿ ದೊಡ್ಡ ಖಾಸಗಿ ಸಂಸ್ಥೆ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. (ವಿಟಿಪಿಎಲ್) ವೋಲ್ವೋ ಇಂಡಿಯಾ ಸಂಸ್ಥೆ ಮೂಲಕ ಒಂದೇ ಬಾರಿಗೆ 150 ವೋಲ್ವೋ ಬಸ್‌ಗಳನ್ನು ಖರೀದಿಸುವ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದೆ.

ಇತ್ತೀಚೆಗೆ 150 ಬಸ್‌ಗಳು ವೋಲ್ವೋ-9600 ಐಷಾರಾಮಿ ಸ್ಲೀಪರ್ ಕೋಚ್ ಗೋಲ್ಡ್ ಕ್ಲಾಸ್ ಬಸ್‌ಗಳನ್ನು ಸಂಸ್ಥೆ ಹಸ್ತಾಂತರಿಸಿತು. ಈ ಒಪ್ಪಂದವು ಖಾಸಗಿ ಟ್ರಾವೆಲ್ಸ್‌ವೊಂದು ವೋಲ್ವೋ ಬಸ್‌ಗೆ ನೀಡಿದ ಅತಿದೊಡ್ಡ ಆರ್ಡರ್ ಆಗಿದೆ

ವೋಲ್ವೋ ಸಂಸ್ಥೆ

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ವೋಲ್ವೋ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬಿ.ಶ್ರೀನಿವಾಸ್ ಅವರು ವಿಆರ್‌ಎಲ್ ಮೀಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವಾ ಸಂಕೇಶ್ವರ ಅವರಿಗೆ ಕೀ ಹಸ್ತಾಂತರಿಸುವ ಮೂಲಕ ಬಸ್‌ಗಳನ್ನು ನೀಡಿದರು. ವೋಲ್ವೋ ಸಂಸ್ಥೆಯ ವಿಇ ವಾಣಿಜ್ಯ ವಾಹನಗಳು ವಿಭಾಗದ ಮುಖ್ಯ ವಾಣಿಜ್ಯ ಅಧಿಕಾರಿ ಎಸ್.ಎಸ್.ಗಿಲ್ ಮತ್ತು ವಿಇ ವಾಣಿಜ್ಯ ವಾಹಗಳ ಇವಿಪಿ ಬಸ್ ವಿಭಾಗದ ಸುರೇಶ್ ಚೆಟ್ಟಿಯಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

2007ರಿಂದ ವೋಲ್ವೋ ಜೊತೆ ವ್ಯವಹಾರ

ಈ ವೇಳೆ ಮಾತನಾಡಿದ ಆನಂದ ಸಂಕೇಶ್ವರ, 1996ರಲ್ಲಿ ವಿಜಯಾನಂದ ಟ್ರಾವೆಲ್ಸ್ ಆರಂಭವಾಯಿತು. 2007ರಿಂದ ವೋಲ್ವೋ ಕಂಪನಿ ಜತೆ ಸಂಸ್ಥೆ ಒಪ್ಪಂದವಿದೆ. ಮೊದಲು 20 ಬಸ್‌ಗಳನ್ನು ಸಂಸ್ಥೆ ಖರೀದಿಸಿತ್ತು. 2012ರ ವೇಳೆ 100 ಬಸ್‌ಗಳಿಗೆ ಆರ್ಡರ್ ಮಾಡಿದ್ದೆವು. ಈಗ 150 ಬಸ್‌ಗಳನ್ನು ಖರೀದಿಸಿದ್ದೇವೆ. ರಾಜ್ಯ ಮತ್ತು ದೇಶಾದ್ಯಂತ ನಮ್ಮ ನೆಟ್‌ವರ್ಕ್ ಇರುವುದರಿಂದ ಪ್ರಯಾಣಿಕರಿಗೆ ಅತಿ ಉತ್ತಮವಾದುದನ್ನು ನೀಡಲು ಬಯಸುತ್ತೇವೆ ಎಂದರು.

ಪ್ರಯಾಣದ ಸಮಯ ಉಳಿತಾಯ

ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು ಬಸ್ ಬುಕ್ ಮಾಡುವ ವೇಳೆ ಶೌಚಾಲಯ ವ್ಯವಸ್ಥೆ ಇದೆಯೇ ಎಂಬುದನ್ನು ಕೇಳಿ ಬುಕ್ ಮಾಡುತ್ತಿದ್ದಾರೆ. ಶೌಚಾಲಯ ವ್ಯವಸ್ಥೆ ಇರುವುದರಿಂದ ಪ್ರಯಾಣದ ಅವಧಿ ಕೂಡ ಕಡಿಮೆಯಾಗಲಿದೆ. ಶೌಚಕ್ಕಾಗಿ ಒಂದೆಡೆ ಬಸ್ ನಿಲ್ಲಿಸಿದರೆ ಅರ್ಧ ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಈ ಸಮಯ ಉಳಿಯುವುದರಿಂದ ನಿಗದಿತ ಸಮಯಕ್ಕಿಂತ ಮೊದಲೇ ನಿಗದಿತ ಸ್ಥಳ ತಲುಪಿದರೆ ಪ್ರಯಾಣಿಕರಿಗೂ ಅನುಕೂಲ ಎಂದರು.

ಇದನ್ನೂ ಓದಿ: HDFC ಬಳಿಕ ICICI Bank ಮೇಲೆ LIC ಕಣ್ಣು; ನಾಳೆ ಈ ಎರಡೂ ಷೇರುಗಳ ಮೇಲೆ ಹೂಡಿಕೆದಾರರ ಗಮನ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

HDFC ಬಳಿಕ ICICI Bank ಮೇಲೆ LIC ಕಣ್ಣು; ನಾಳೆ ಈ ಎರಡೂ ಷೇರುಗಳ ಮೇಲೆ ಹೂಡಿಕೆದಾರರ ಗಮನ!
ಟಾಟಾ ಸಾಮ್ರಾಜ್ಯದ ಮುಂದಿನ ಚುಕ್ಕಾಣಿ ಹಿಡಿಯೋದು ಯಾರು?: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮೂವರು ದೈತ್ಯರು