ಜಿಯೋ, ಏರ್‌ಟೆಲ್‌ಗೆ ಬಿಗ್ ಶಾಕ್ ಕೊಟ್ಟ Vi; 4 ಹೊಸ ಪ್ಲಾನ್‌ಗಳ ಬೆಲೆ ಇಷ್ಟೊಂದು ಕಮ್ಮಿನಾ!

Published : Oct 31, 2026, 11:35 AM IST
Vi voice only recharge plans

ಸಾರಾಂಶ

Vi Launches Voice Only Prepaid Plans ವೊಡಾಫೋನ್ ಐಡಿಯಾ (Vi) ದೀಪಾವಳಿ ಹಬ್ಬದ ಪ್ರಯುಕ್ತ ಕೇವಲ ಧ್ವನಿ ಕರೆಗಳಿಗೆ ಸೀಮಿತವಾದ 4 ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. 179 ರೂ. ನಿಂದ 206 ರೂ. ವರೆಗಿನ ಈ ಪ್ಲಾನ್‌ಗಳು ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಂಎಸ್ ಸೌಲಭ್ಯಗಳನ್ನು ನೀಡುತ್ತವೆ.

ಭಾರತೀಯ ಟೆಲಿಕಾಂ ಕಂಪನಿಯಾದ ವೊಡಾಫೋನ್ ಐಡಿಯಾ (Vi) ದೀಪಾವಳಿ ಹಬ್ಬಕ್ಕೆ ಮೊದಲೇ 4 ಹೊಸ ರೀಚಾರ್ಜ್ ಪ್ಲಾನ್ ಪರಿಚಯಿಸುವ ಮೂಲಕ ತನ್ನ ಬಳಕೆದಾರರಿಗೆ ಭರ್ಜರಿ ಉಡುಗೊರೆ ನೀಡಿದೆ.

ಕೇವಲ ಧ್ವನಿ ಕರೆಗಳಿಗೆ (voice-only) ಸೀಮಿತವಾದ 4 ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ನೀಡಿರುವ ಸೂಚನೆಗಳನುಸಾರವಾಗಿ ಕಂಪನಿಯು ಈ ಹೊಸ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಹೊಸ ಪ್ಲಾನ್‌ಗನ್ನು ಕಂಪನಿಯ ವೆಬ್‌ಸೈಟ್‌ನಲ್ಲಿಯೂ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಹೊಸ ಪ್ಲಾನ್‌ಗಳಲ್ಲಿ ಅತಿ ಕಡಿಮೆ ಬೆಲೆಯ ಅಂದರೆ ಕೇವಲ 179 ರೂಪಾಯಿಗಳ ರಿಚಾರ್ಜ್ ಆಗಿದ್ದರೆ, ಅತಿ ಹೆಚ್ಚು ಬೆಲೆಯ ಪ್ಲಾನ್ 206 ರೂಪಾಯಿಗಳಷ್ಟಿದೆ.

179 ರೂ. ರಿಚಾರ್ಜ್‌ಗೆ ವಾಯ್ಸ್‌ ಓನ್ಲಿ(voice-only)

Vi ಕಂಪನಿಯು ಬಿಡುಗಡೆ ಮಾಡಿರುವ 'ಸರ್ವಸ್ ಸ್ವಸ್ತ್' (Sarvas Swast) ಹೆಸರಿನ voice-only ಸೇವೆಗೆ ಮೀಸಲಾದ ರೀಚಾರ್ಜ್ ಯೋಜನೆಯ ಬೆಲೆ ರೂ. 179 ಆಗಿದೆ. ಈ ಯೋಜನೆಯಲ್ಲಿ ನೀವು ಅನ್‌ಲಿಮಿಟೆಡ್ ಕರೆ, 25 ದಿನಗಳ ವ್ಯಾಲಿಡಿಟಿ (validity) ಜೊತೆಗೆ ಒಟ್ಟು 300 SMS ಸೌಲಭ್ಯ ಸಿಗುತ್ತದೆ. ಇದರೊಂದಿಗೆ 'Vi ಮೂವೀಸ್ ಅಂಡ್ ಟಿವಿ' (Vi Movies and TV) ಸೌಲಭ್ಯವೂ ಸಿಗಲಿದ್ದು, ಇದರ ಮೂಲಕ ಚಂದಾದಾರರು ಉಚಿತ ಕಂಟೆಂಟ್ ಅನ್ನು ವೀಕ್ಷಿಸಬಹುದಾಗಿದೆ.

ಉಚಿತ ಕಂಟೆಂಟ್ ಅನ್ನು ವೀಕ್ಷಿಸಬಹುದಾಗಿದೆ.

Vi 189 ರೀಚಾರ್ಜ್ ಆಫರ್‌ಗಳೇನು?

ಎರಡನೇ ರೀಚಾರ್ಜ್ ಪ್ಲಾನ್ ಬೆಲೆ 189 ರೂಪಾಯಿ ಆಗಿದೆ. ಈ ಪ್ಲಾನ್‌ನಲ್ಲಿ ರಿಚಾರ್ಜ್ ಮಾಡಿಸಿದರೆ ಇದರಲ್ಲಿ ಅನ್‌ಲಿಮಿಟೆಡ್ ಕಾಲ್, 300 SMS ಪಡೆಯಬಹುದು ಜೊತೆಗೆ ಇದು 28 ದಿನಗಳವರೆಗೆ ವ್ಯಾಲಿಡಿಟಿ ಇರುತ್ತದೆ. ಇದ ಪ್ಲಾನ್‌ನಲ್ಲಿ'Vi Movies and TV' ಸೌಲಭ್ಯವೂ ಸಿಗಲಿದೆ.

203 ರೂಪಾಯಿ ರೀಚಾರ್ಜ್‌ನ ಮೂರನೇ ಪ್ಲಾನ್

ಮೂರನೇ ರೀಚಾರ್ಜ್ ಯೋಜನೆಯ ಬೆಲೆ 203 ರೂಪಾಯಿ ಆಗಿದೆ. ಇದು 30 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಲ್ಲಿ ನೀವು ಅನ್‌ಲಿಮಿಟೆಡ್ ವಾಯ್ಸ್ ಕರೆ ಜೊತೆಗೆ ಎಸ್ಎಂಎಸ್ ಸೌಲಭ್ಯ ಪಡೆಯಬಹುದು.

ಇನ್ನು ನಾಲ್ಕನೇ ಪ್ಲಾನ್ ಹೇಗಿದೆ? ರಿಚಾರ್ಜ್ ಮಾಡಿಸಬೇಕು?

Vi ಕಂಪನಿಯ ಅತ್ಯಂತ ದುಬಾರಿ ರೀಚಾರ್ಜ್ ಪ್ಲಾನ್‌ ಎಂದರೆ ಅದು 206 ರೂಪಾಯಿ ರಿಚಾರ್ಜ್ ಪ್ಲಾನ್ ಆಗಿದೆ. ಇದರಲ್ಲಿ ನಿಮಗೆ ಒಂದು ತಿಂಗಳ ಪೂರ್ತಿ ವ್ಯಾಲಿಡಿಟಿ ಸಿಗುತ್ತದೆ. ಅಲ್ಲದೆ ಈ ಪ್ಲಾನ್‌ನಲ್ಲಿ ನೀವು ಅನ್‌ಲಿಮಿಟೆಡ್ ವಾಯ್ಸ್ ಕರೆ ಮಾಡಬಹುದು, ಮುನ್ನೂರು ಎಸ್‌ಎಂಎಸ್ ಸೌಲಭ್ಯವೂ ಇರಲಿದೆ. ಆದರೆ ಇದು 189, 203 ರೂಪಾಯಿಗಳ ಪ್ಲಾನ್‌ನಂತೆ 206 ಪ್ಲಾನ್‌ನಲ್ಲಿ 'Vi Movies & TV'ಗೆ ಪ್ರವೇಶ ಇಲ್ಲ ಎಂಬುದು ಗಮನಿಸಬೇಕು.

ನಿಮ್ಮ ಮೊಬೈಲ್‌ನಲ್ಲಿ ಇಂಟರ್‌ನೆಟ್ ಅಥವಾ ಡಾಟಾ ಬಳಸದೇ ಕೇವಲ ಕರೆಗಳಿಗೆ ಮಾತ್ರ ಮೊಬೈಲ್ ಬಳಸುವವರಾಗಿದ್ದರೆ ಈ ನಾಲ್ಕು ರೀಚಾರ್ಜ್ ಪ್ಲಾನ್‌ಗಳಿಂದ ತುಂಬಾ ಪ್ರಯೋಜನ ಪಡೆಯಬಹುದು.

ಇಂಟರ್ನೆಟ್ ಬೇಡ ಬರೀ ಕರೆ ಸಾಕು! ಜಿಯೋ-ಏರ್‌ಟೆಲ್‌ಗೆ ಸೆಡ್ಡು ಹೊಡೆದ Vi; 4 ಹೊಸ ಪ್ಲಾನ್‌ಗಳ ಬೆಲೆ ಇಷ್ಟೊಂದು ಕಡಿಮೆನಾ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಡೇಟಾ ಬೇಡ ಬರಿ ಕಾಲ್ ಸಾಕು ಎನ್ನುವವರಿಗೆ ಭಾರಿ ಸಿಹಿ ಸುದ್ದಿ!: Jio, Airtel, Vi ಕಂಪನಿಗಳಿಂದ ಅಗ್ಗದ ವಾಯ್ಸ್‌ ಓನ್ಲಿ ರಿಚಾರ್ಜ್!
ದೀಪಾವಳಿ ಹತ್ತಿರವಾಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಮಹಾಪತನ; ಕಳೆದೆರಡು ದಿನದಲ್ಲಿ ₹5,070 ಕುಸಿತ..! ಬಂಗಾರ ಕೊಳ್ಳಲು ಇದೇ ಸರಿಯಾದ ಟೈಮ್?