282 ಲಕ್ಷ ಕೋಟಿ ವಿತ್‌ಡ್ರಾ, 48 ಗಂಟೆಗಳಲ್ಲೇ ಬಂದ್‌ ಆದ ಅಮೆರಿಕದ 2ನೇ ಅತಿದೊಡ್ಡ ಬ್ಯಾಂಕ್‌!

Published : Mar 11, 2023, 01:44 PM IST
282 ಲಕ್ಷ ಕೋಟಿ ವಿತ್‌ಡ್ರಾ, 48 ಗಂಟೆಗಳಲ್ಲೇ ಬಂದ್‌ ಆದ ಅಮೆರಿಕದ 2ನೇ ಅತಿದೊಡ್ಡ ಬ್ಯಾಂಕ್‌!

ಸಾರಾಂಶ

ಕೇವಲ 48 ಗಂಟೆಗಳಲ್ಲೇ ಅಮೆರಿಕದ 2ನೇ ಅತಿದೊಡ್ಡ ಬ್ಯಾಂಕ್‌ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ತನ್ನ ವ್ಯವಹಾರಗಳನ್ನು ಬಂದ್‌ ಮಾಡಿದೆ. 2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಅಮೆರಿಕದ ಬ್ಯಾಂಕ್‌ವೊಂದರ ಅತೀದೊಡ್ಡ ವೈಫಲ್ಯ ಇದು ಎಂದು ಹೇಳಲಾಗಿದೆ.

ನ್ಯೂಯಾರ್ಕ್‌ (ಮಾ.11): ಅಮೆರಿಕದ ಅತೀದೊಡ್ಡ ಸಾಲದಾತ ಬ್ಯಾಂಕ್‌ ಸಿಲಿಕಾನ್‌ ವ್ಯಾಲಿ ಬ್ಯಾಂಕ್ (ಎಸ್‌ವಿಬಿ), ಕೇವಲ 48 ಗಂಟೆಗಳಲ್ಲೇ ತನ್ನ ವ್ಯವಹಾರವನ್ನು ಬಂದ್‌ ಮಾಡಿದೆ. ಇದು 2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಅಮೆರಿಕದ 2ನೇ ಅತಿದೊಡ್ಡ ಬ್ಯಾಂಕಿಂಗ್‌ ವೈಫಲ್ಯ ಎನ್ನಲಾಗಿದೆ. ಟೆಕ್‌ಸ್ಪಾರ್ಟ್‌ಅಪ್‌ಗಳಿಗೆ ಮೂಲ ಕಂಪನಿಯಾಗಿದ್ದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನ ಠೇವಣಿದಾರರು ಹಾಗೂ ಹೂಡಿಕೆದಾರರು ಬರೋಬ್ಬರಿ 282 ಲಕ್ಷ ಕೋಟಿ ರೂಪಾಯಿ (42 ಬಿಲಿಯನ್‌ ಯುಎಸ್‌ ಡಾಲರ್‌) ಬೃಹತ್‌ ಮೊತ್ತದ ಹಣವನ್ನು ಹಿಂಪಡೆಯಲು ಯತ್ನಿಸಿದ್ದ ಪರಿಣಾಮ ಬ್ಯಾಂಕ್‌ನ ನಗದು ವ್ಯವಹಾರದಲ್ಲಿ ಕೊರತೆ ಕಂಡುಬಂದಿತ್ತು. ಈ ಕಾರಣದಿಂದಾಗಿ ಬ್ಯಾಂಕ್‌ ವ್ಯವಹಾರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸೋಮವಾರ ಎಂದಿನಂತೆ ವ್ಯವಹಾರ ಆರಂಭಿಸಲಾಗುವುದು ಎಂದು ಬ್ಯಾಂಕ್‌ ತಿಳಿಸಿದ್ದರೂ, ಇದು ಅಮೆರಿಕದ ಆರ್ಥಿಕ ವಹಿವಾಟಿನ 2ನೇ ಅತೀದೊಡ್ಡ ಬ್ಯಾಂಕ್‌ ವೈಫಲ್ಯ ಎಂದು ಜಗತ್ತಿನ ಪತ್ರಿಕೆಗಳು ವರದಿ ಮಾಡಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವಂಥ ಕಂಪನಿಗಳಿಗೆ ಹಾಗೂ ವೆಂಚರ್‌ ಕ್ಯಾಪಿಟಲಿಸ್ಟ್‌ ಹೊಂದಿರುವ ಕಂಪನಿಗಳಿಗೆ ಈ ಬ್ಯಾಂಕ್‌ ಬೆಂಬಲ ನೀಡಿದೆ. ಅದಲ್ಲದೆ, ಪ್ರಸ್ತುತ ಉದ್ಯಮದ ಪ್ರತಿಷ್ಠಿತ ಬ್ರ್ಯಾಂಡ್‌ ಆಗಿರುವ ಕಂಪನಿಯನ್ನೂ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಬೆಂಬಲಿಸಿದೆ.

ತನ್ನ ಬ್ಯಾಲೆನ್ಸ್ ಶೀಟ್ ಅನ್ನು ಹೆಚ್ಚಿಸಲು $2.25 ಶತಕೋಟಿ ಸಂಗ್ರಹಿಸುವ ಅಗತ್ಯವಿದೆ ಎಂದು ಬ್ಯಾಂಕ್‌ ಘೋಷಣೆ ಮಾಡಿದಾಗ, ಎಸ್‌ವಿಬಿಯ ಇಳಿಮುಖ ಆರಂಭವಾಯಿತು. ಇದು ವೆಂಚರ್‌ ಕ್ಯಾಪಿಟಲಿಸ್ಟ್‌ ಕಂಪನಿಗಳಲ್ಲಿ ಆತಂಕಕ್ಕೆ ಕಾರಣವಾಗಿದ್ದು ಮಾತ್ರವಲ್ಲದೆ, ಬ್ಯಾಂಕ್‌ನಿಂದ ಹಣವನ್ನು ಹಿಂಪಡೆಯುವಂತೆ ಕಂಪನಿಗೆ ಸಲಹೆ ನೀಡಿದ್ದವು ಎಂದು ಸಿಎನ್‌ಎನ್‌ ವರದಿ ಮಾಡಿದೆ. ಐಪಿಓ ಹಾಗೂ ಖಾಸಗಿ ಫಂಡ್‌ರೈಸಿಂಗ್‌ ವಾತಾವರಣದಲ್ಲಿ ಉಳಿಯಬೇಕು ಎನ್ನುವ ಕಾರಣಕ್ಕೆ ಬ್ಯಾಂಕ್‌ನ ಸ್ಟಾರ್ಟ್‌ಅಪ್‌ ಕ್ಲೈಂಟ್‌ಗಳು ತಮ್ಮ ಠೇವಣಿಯನ್ನು ವಿತ್‌ಡ್ರಾ ಮಾಡಲು ಆರಂಭ ಮಾಡಿದ್ದವು. ಇದರಿಂದಾಗಿ ಎಸ್‌ವಿಬಿಯಲ್ಲಿ ಮೂಲ ಹಣದ ಕೊರತೆ ಉಂಟಾಗಿತ್ತು. ಇದರಿಂದಾಗಿ ತನ್ನ ಲಭ್ಯವಿರುವ ಎಲ್ಲಾ ಮಾರಾಟ ಬಾಂಡ್‌ಗಳನ್ನು $1.8 ಶತಕೋಟಿ ನಷ್ಟಕ್ಕೆ ಮಾರಾಟ ಮಾಡುವಂತೆ ಮಾಡಲಾಯಿತು ಎಂದು ಬ್ಯಾಂಕ್ ಬುಧವಾರ ಹೇಳಿದೆ.

ಅದರೊಂದಿಗೆ ಎಸ್‌ವಿಬಿಯ ಮೂಲ ಸಂಸ್ಥೆಯಾಗಿರುವ ಎಸ್‌ವಿಬಿ ಫೈನಾನ್ಶಿಯಲ್‌ ಗ್ರೂಪ್‌, ಬ್ಯಾಂಕ್‌ನಲ್ಲಿ ತನ್ನ ಭಾಗವಾಗಿ ಇರುವ  21 ಬಿಲಿಯನ್‌ ಡಾಲರ್‌ನಷ್ಟು ಬೆಲೆಯ ಬಾಂಡ್ಸ್‌ ಮತ್ತು ಡಿಬೆಂಚರ್ಸ್‌ಗಳನ್ನು ಮಾರಾಟ ಮಾಡುವುದಾಗಿ ಘೋಷಣೆ ಮಾಡಿದ್ದು, ಬ್ಯಾಂಕ್‌ ಮೇಲಿನ ಹೂಡಿಕೆದಾರರು ಹಾಗೂ ಠೇವಣಿದಾರರ ಆತಂಕಕಕ್ಕೆ ಕಾರಣವಾಗಿತ್ತು. ಇದರಿಂದಾಗಿ ಬ್ಯಾಂಕ್‌ನ ಗ್ರಾಹಕರು ಠೇವಣಿ ಹಿಂಪಡೆಯಲು ಮುಗಿಬಿದ್ದಿದ್ದಾರೆ. ಇದು ಸ್ಟಾರ್ಟ್‌ಅಪ್‌ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು.

ಕಂಪನಿಯ ಷೇರುಗಳು ಗುರುವಾರ ದೊಡ್ಡ ಮಟ್ಟದಲ್ಲಿ ಕುಸಿಯಿತು, ನಿಯಮಿತ ವಹಿವಾಟಿನ ಅಂತ್ಯದ ವೇಳೆಗೆ ಶೇಕಡಾ 60 ಕ್ಕೆ ತಲುಪಿದೆ. ಸಾಂಟಾ ಕ್ಲಾರಾ ಮೂಲದ ಎಸ್‌ಸಿಬಿಯಲ್ಲಿ  ನಗದು ಸಮಸ್ಯೆಯು ಗುರುವಾರ ರಾತ್ರಿ ಬೆಳಕಿಗೆ ಬಂದಿದೆ. ಅದರ ನಂತರ ಅದರ ಷೇರು ಬೆಲೆ ಅರ್ಧಕ್ಕಿಂತ ಹೆಚ್ಚು ಮತ್ತು ಶುಕ್ರವಾರದ ಪೂರ್ವ-ಮಾರುಕಟ್ಟೆ ವಹಿವಾಟಿನಲ್ಲಿ 69% ರಷ್ಟು ಕುಸಿದಿದೆ. ಕುಸಿತ ದಾಖಲಾಗುವ ಸಮಯದಲ್ಲಿ ಬ್ಯಾಂಕ್ $ 209 ಶತಕೋಟಿ ಆಸ್ತಿಯನ್ನು ಮತ್ತು $ 175 ಶತಕೋಟಿ ಠೇವಣಿಗಳನ್ನು ಹೊಂದಿತ್ತು ಎಂದು ಎಫ್‌ಡಿಐಸಿ ಹೇಳಿದೆ.

2022ರ ಆರ್ಥಿಕ ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ, ಸಂಭಾವನೆ, ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ?

ಆರ್ಥಿಕ ಬಿಕ್ಕಟ್ಟಿನ ಕೇವಲ 24 ಗಂಟೆಗಳ ಮೊದಲು, ಕುಸಿದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗ್ರೆಗ್ ಬೆಕರ್ ಅವರು ಬ್ಯಾಂಕ್‌ನಲ್ಲಿರುವ ತಮ್ಮ ಹಣ ಸುರಕ್ಷಿತವಾಗಿದೆ ಎಂದು ತಿಳಿಸಲು ಗ್ರಾಹಕರಿಗೆ ವೈಯಕ್ತಿಕವಾಗಿ ಕರೆ ಮಾಡಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ. ತಮ್ಮ ಗ್ರಾಹಕರಿಗೆ ಯಾವುದೇ ಸಮಸ್ಯೆಯಿಲ್ಲ ಶಾಂತವಾಗಿರಿ ಎಂದು ಹೇಳಿದರೂ, ಹಣ ಭದ್ರವಾಗಿರುವ ಬಗ್ಗೆ ಯಾವುದೇ ಆತ್ಮವಿಶ್ವಾಸ ತುಂಬಲಿಲ್ಲ ಎಂದು ತಿಳಿಸಿದ್ದಾರೆ.

ಹತ್ತೇ ದಿನದಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 13 ಸ್ಥಾನ ಜಿಗಿದ ಗೌತಮ್‌ ಅದಾನಿ

ಕ್ಯಾಲಿಫೋರ್ನಿಯಾ ನಿಯಂತ್ರಕ ಫೈಲಿಂಗ್ ಪ್ರಕಾರ, ಬ್ಯಾಂಕ್‌ನ ಡೋಲಾಯಮಾನ ಸ್ಥಿತಿಯಿಂದಾಗಿ ಗ್ರಾಹಕರು ಗುರುವಾರ ಅಂತ್ಯದ ವೇಳೆಗೆ $42 ಶತಕೋಟಿ ಠೇವಣಿಗಳನ್ನು ಹಿಂತೆಗೆದುಕೊಂಡಿದ್ದಾರೆ. ಇದರಿಂದಾಗಿ ಬ್ಯಾಂಕ್‌ನಲ್ಲಿ ನಗದು ಕೊರತೆ ಉಂಟಾದ ಕಾರಣ, ತಾತ್ಕಾಲಿಕವಾಗಿ ಬ್ಯಾಂಕ್‌ ಮುಚ್ಚುವಂತೆ ಎಫ್‌ಡಿಐಸಿ ಸಲಹೆ ನೀಡಿದೆ. ಸೋಮವಾರ ಎಂದಿನಂತೆ ಬ್ಯಾಂಕ್‌ ತೆರೆಯಲಿದ್ದು,  ವಿಮೆ ಹೊಂದಿರುವ ಠೇವಣಿದಾರರ ಹಣ ವಾಪಾಸ್‌ ನೀಡುವುದಾಗಿ ತಿಳಿಸಿದೆ. ಮೂಲಗಳ ಪ್ರಕಾರ 2022ರ ಅಂತ್ಯದ ವೇಳೆ ಬ್ಯಾಂಕ್‌ನ 175 ಶತಕೋಟಿ ಡಾಲರ್‌ ಠೇವಣಿಗಳ ಪೈಕಿ ಶೇ. 89ರಷ್ಟು ಠೇವಣಿಗೆ ವಿಮೆ ಇಲ್ಲ. ಈ ಹಣದ ಗತಿಯೇನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!