ಓಯೋ ರೂಮ್ಸ್ ಸಂಸ್ಥಾಪಕನ ತಂದೆ ದುರಂತ ಅಂತ್ಯ, 20ನೇ ಮಹಡಿಯಿಂದ ಬಿದ್ದು ಸಾವು!

By Suvarna News  |  First Published Mar 10, 2023, 7:32 PM IST

ಇತ್ತೀಚೆಗಷ್ಟೇ ಹೊಸ ಬದುಕಿಗೆ ಕಾಲಿಟ್ಟಿರುವ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಕುಟುಂಬಕ್ಕೆ ಆಘಾತ ಎದುರಾಗಿದೆ. ಕಣ್ಣೆರೆದುರಲ್ಲೇ ರಿತೇಶ್ ತಂದೆಯ ದುರಂತ ಅಂತ್ಯವಾಗಿದೆ. 20ನೇ ಮಹಡಿಯಿಂದ ಕೆಳಕ್ಕೆ ಬಿದ್ದು ರಿತೇಶ್ ಅಗರ್ವಾಲ್ ತಂದೆ ಮೃತಪಟ್ಟಿದ್ದಾರೆ.
 


ನವದೆಹಲಿ(ಮಾ.10):  ಓಯೋ ರೂಮ್ಸ್ ಮೂಲಕ ದೇಶದಲ್ಲಿ ಆತಿಥ್ಯ ಹಾಗೂ ಪ್ರವಾಸಿ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆದಿರುವ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಇತ್ತೀಚೆಗಷ್ಟೇ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಅಗರ್ವಾಲ್ ಕುಟುಂಬದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಇಂದು ನಡೆದ ಘಟನೆ ಅಗರ್ವಾಲ್ ಕುಟುಂಬದ ಸಂತೋಷವನ್ನು ಕಸಿದುಕೊಂಡಿದೆ. ಗುರುಗಾಂವ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ 20ನೇ ಮಹಡಿಯಿಂದ ರಿತೇಶ್ ಅಗರ್ವಾಲ್ ತಂದೆ ರಮೇಶ್ ಅಗರ್ವಾಲ್ ಮೃತಪಟ್ಟಿದ್ದಾರೆ. ರಿತೇಶ್ ಅಗರ್ವಾಲ್, ಪತ್ನಿ ಹಾಗೂ ತಾಯಿ ಮನೆಯೊಳಗಿರುವಾಗಲೇ ಈ ಘಟನೆ ನಡೆದಿದೆ.

ಡಿಎಲ್‌ಎಫ್ ಸೆಕ್ಟರ್ 54 ನಲ್ಲಿರುವ ಡಿಎಲ್ಎಫ್ ದಿ ಕ್ರೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ರಿತೇಶ್ ಅಗರ್ವಾಲ್ ವಾಸವಾಗಿದ್ದಾರೆ. ಇದೇ ಮನೆಯಲ್ಲಿ ರಿತೇಶ್ ತಂದೆ ತಾಯಿ ಕೂಡ ವಾಸವಾಗಿದ್ದಾರೆ. ಎಲ್ಲರೂ ಮನೆಯಲ್ಲಿರುವ ವೇಳೆ ಈ ಘಟನೆ ನಡೆದಿದೆ. ತಂದೆ ರಮೇಶ್ ಅಗರ್ವಾಲ್ ಬಾಲ್ಕನಿಗೆ ಬಂದಿದ್ದಾರೆ. ಇತ್ತ ಮನೆಯೊಳಗಿದ್ದ ಕುಟುಂಬ ತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಇತ್ತ ರಮೇಶ್ ಅಗರ್ವಾಲ್ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ.

Tap to resize

Latest Videos

 

ಪದವಿ ಪೂರ್ಣಗೊಳಿಸದ ಹುಡುಗ ಇಂದು 8000 ಕೋಟಿ ರೂ. ಒಡೆಯ; ಇದು ಓಯೋ ಸಂಸ್ಥಾಪಕನ ಸಕ್ಸಸ್ ಸ್ಟೋರಿ

20ನೇ ಮಹಡಿ ಮೇಲಿಂದ ಕೆಳಕ್ಕೆ ಬಿದ್ದ ರಮೇಶ್ ಅಗರ್ವಾಲ್ ದೇಹ ಛಿದ್ರಗೊಂಡಿದೆ. ಈ ಅವಘಡದಿಂದ ಸ್ಥಳದಲ್ಲೇ ರಮೇಶ್ ಅಗರ್ವಾಲ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಪೋಸ್ಟ್‌ಮಾರ್ಟಮ್ ನಡೆಸಿ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ. 

ತಂದೆ ಅಗಲಿಕೆ ಕುರಿತು ಸ್ವತಃ ರಿತೇಶ್ ಅಗರ್ವಾಲ್ ಟ್ವೀಟ್ ಮೂಲಕ ದುಃಖ ತೋಡಿಕೊಂಡಿದ್ದಾರೆ. ನನ್ನ ಹಾಗೂ ಕುಟಂಬದ ಶಕ್ತಿ, ಮಾರ್ಗದರ್ಶಕರಾಗಿರುವ  ನನ್ನ ತಂದೆ ರಮೇಶ್ ಅಗರ್ವಾಲ್ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರು ಸಂಪೂರ್ಣ ಬದುಕು ಜೀವಿಸಿದ್ದಾರೆ. ಪ್ರತಿ ದಿನ ನನಗೆ ಹಾಗೂ ನನ್ನಂತೆ ಹಲವರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು. ತಂದೆಯ ಅಗಲಿಕೆ ನನಗೆ ಹಾಗೂ ಕುಟುಂಬಕ್ಕೆ ತುಂಬಲಾರದ ನಷ್ಟ. ತಂದೆಯವ ಪ್ರತಿ ಮಾತು, ನಡೆತೆ, ಸಂಕಷ್ಟದ ಸಮಯದಲ್ಲಿ ಮುನ್ನಡೆ ರೀತಿ ನಮಗೆ ಮಾರ್ಗದರ್ಶನವಾಗಿದೆ. ಅವರ ಪ್ರತಿ ಮಾತುಗಳು ನಮ್ಮ ಹೃದಯಲ್ಲಿ ಅಚ್ಚಳಿಯದೇ ಉಳಿದಿದೆ. ಈ ಕಠಿಣ ಸಂದರ್ಭದಲ್ಲಿ ನಮ್ಮ ಖಾಸಗಿ ಸಮಯಕ್ಕೆ ಗೌರವ ನೀಡಿ ಎಂದು ಈ ಮೂಲಕ ನಾನು ಎಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ರಿತೇಶ್ ಅಗರ್ವಾಲ್ ಮನವಿ ಮಾಡಿದ್ದಾರೆ. 

OYO Founder Wedding: 'ಕಂಜ್ಲಾಜುಲೇಷನ್‌ ಬ್ರದರ್‌..' ವೈವಾಹಿಕ ಜೀವನಕ್ಕೆ ಕಾಲಿಟ್ರು ಓಯೋ ಬಾಸ್‌!

ಸುಮಾರು 1 ಗಂಟೆಗೆ ಹೊತ್ತಿಗೆ ಠಾಣೆಗೆ ಅವಘಡದ ಕುರಿತು ಮಾಹಿತಿ ಬಂದಿದೆ. ತಕ್ಷಣವೇ ತಂಡ ಸ್ಥಳಕ್ಕೆ ಧಾವಿಸಿದೆ. ರಿತೇಶ್ ಅಗರ್ವಾಲ್ ಮನೆ ಸೇರಿದಂತೆ ಇಡೀ ಸ್ಥಳ ಪರಿಶೀಲನೆ ನಡೆಸಲಾಗಿದೆ. ರಮೇಶ್ ಅಗರ್ವಾಲ್ 20ನೇ ಮಹಡಿಯಲ್ಲಿರುವ ಮನೆಯ ಬಾಲ್ಕನಿಯಿಂದ ಬಿದ್ದಿದ್ದಾರೆ. ಮನೆಯಲ್ಲಿ ಅವರ ಡೈರಿ, ಮೊಬೈಲ್ ಫೋನ್ ಪರಿಶೀಲನೆ ನಡೆಸಲಾಗಿದೆ.ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಇಷ್ಟೇ ಅಲ್ಲ ಕುಟುಂಬ ಯಾವುದೇ ದೂರು ದಾಖಲಿಸಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ನಡೆದಿರುವ ಸಂದರ್ಭದಲ್ಲಿ ರಮೇಶ್ ಅಗರ್ವಾಲ್ ಪತ್ನಿ, ಪುತ್ರ ರಿತೇಶ್ ಅಗರ್ವಾಲ್ ಹಾಗೂ ಸೊನೆ ಮನೆಯಲ್ಲೇ ಇದ್ದರು ಎಂದು ಗುರುಗಾಂವ್ ಪೂರ್ವ ವಿಭಾಗದ ಡಿಸಿಪಿ ಮಾಹಿತಿ ನೀಡಿದ್ದಾರೆ

click me!