ಭೇಟಿಗೂ ಮುನ್ನವೇ ಟ್ರಂಪ್ ಷರತ್ತು: ಮೋದಿ ತೋರಿಸಲಿದ್ದಾರೆ ತಾಕತ್ತು!

By Web Desk  |  First Published Jun 27, 2019, 12:41 PM IST

ಜಪಾನ್’ನ ಬಂದರು ನಗರಿ ಒಸಾಕಾದಲ್ಲಿ ನಾಳೆ(ಜೂ.28) ಜಿ20 ಶೃಂಗಸಭೆ| ಭಾರತದ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭೇಟಿ| ಅಮೆರಿಕದ ವಸ್ತುಗಳ ಮೇಲಿನ ಅಧಿಕ ಸುಂಕ ನೀತಿ ಕೈಬಿಡುವಂತೆ ಟ್ರಂಪ್ ಒತ್ತಾಯ| ಭೇಟಿ ವೇಳೆ ಅಧಿಕ ಸುಂಕ ನೀತಿ ಕುರಿತು ಚರ್ಚಿಸುವುದಾಗಿ ಹೇಳಿದ ಟ್ರಂಪ್| ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ತಲುಪಿರುವ ಪ್ರಧಾನಿ ನರೇಂದ್ರ ಮೋದಿ|


ಒಸಾಕಾ(ಜೂ.27): ಅಮೆರಿಕದ ವಸ್ತುಗಳ ಮೇಲೆ ಅಧಿಕ ಆಮದು ಸುಂಕ ವಿಧಿಸುವ ತನ್ನ ನಿರ್ಣಯವನ್ನು ಭಾರತ ಮರುಪರಿಶೀಲಿಸಬೇಕೆಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ. 

ಜಪಾನ್’ನ ಬಂದರು ನಗರಿ ಒಸಾಕಾದಲ್ಲಿ ನಾಳೆ(ಜೂ.28) ಜಿ20 ಶೃಂಗಸಭೆ ಆರಂಭವಾಗಲಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

Latest Videos

undefined

ಜಪಾನ್’ಗೆ ಹೊರಡುವ ಮೊದಲು ಈ ಕುರಿತು ಟ್ವೀಟ್ ಮಾಡಿರುವ ಟ್ರಂಪ್, ಅಮೆರಿಕದ ವಸ್ತುಗಳ ಮೇಲಿನ ಅಧಿಕ ಸುಂಕ ನೀತಿ ಕೈಬಿಡುವಂತೆ ಮೋದಿ ಅವರನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.

I look forward to speaking with Prime Minister Modi about the fact that India, for years having put very high Tariffs against the United States, just recently increased the Tariffs even further. This is unacceptable and the Tariffs must be withdrawn!

— Donald J. Trump (@realDonaldTrump)

ನಿನ್ನೆಯಷ್ಟೇ ಭಾರತಕ್ಕೆ ಆಗಮಿಸಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ವಾಣಿಜ್ಯ ಕ್ಷೇತ್ರದಲ್ಲಿ ಎರಡೂ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದರು. 
 
ಈ ಮಧ್ಯೆ ಇಂದು ಜಪಾನ್ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರಧಾನಿ ಶಿಂಜೊ ಅಬೆ ಜೊತೆಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
 

click me!