ಮುಂಬೈನ 3 ಎಕರೆ ಜಾಗಕ್ಕೆ ಜಪಾನ್ ಸಂಸ್ಥೆ 2238 ಕೋಟಿ ರೂ. ಬಿಡ್‌!

Published : Jun 27, 2019, 09:20 AM IST
ಮುಂಬೈನ 3 ಎಕರೆ ಜಾಗಕ್ಕೆ ಜಪಾನ್ ಸಂಸ್ಥೆ 2238 ಕೋಟಿ ರೂ. ಬಿಡ್‌!

ಸಾರಾಂಶ

ಮುಂಬೈ: 3 ಎಕರೆ ಜಾಗಕ್ಕೆ 2238 ಕೋಟಿ ರೂಪಾಯಿ ಬಿಡ್‌ ಮಾಡಿದ ಜಪಾನ್‌ ಕಂಪನಿ| ಸೆಂಟ್ರಲ್‌ ಮುಂಬೈನ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್‌ನ ಜಾಗ

ಮುಂಬೈ[ಜೂ.27]: ಜಪಾನ್‌ ಮೂಲದ ಬಹುರಾಷ್ಟ್ರೀಯ ಕಂಪನಿ ಸುಮಿಟಾಮೊ ಕಾರ್ಪೊರೇಷನ್‌, ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 3 ಎಕರೆ ಭೂಮಿಗೆ ಖರೀದಿಗೆ ನಿರ್ಧರಿಸಿದೆ. ಇದಕ್ಕಾಗಿ ಅದು ಭರ್ಜರಿ 2238 ಕೋಟಿ ರು. ಬಿಡ್‌ ಮಾಡಿದೆ.

ಸೆಂಟ್ರಲ್‌ ಮುಂಬೈನ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಈ ಜಾಗವಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮುಂಬೈ ಮೆಟ್ರೋಪಾಲಿಟನ್‌ ಪ್ರಾಂತ್ಯದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕಾರಿ ದಿಲೀಪ್‌ ಕವತ್ಕಾರ್‌ ಅವರು, ‘ಜಮೀನು ಖರೀದಿಗೆ ಜಪಾನ್‌ ಕಂಪನಿ ಬಿಡ್‌ ಸಲ್ಲಿಕೆ ಮಾಡಿದೆ.

ಆದಾಗ್ಯೂ, ಈ ಬಗ್ಗೆ ಪರಿಶೀಲನೆ ಕೈಗೊಂಡು, ಮುಂದಿನ ಪ್ರಕ್ರಿಯೆ ಕೈಗೊಳ್ಳುತ್ತೇವೆ. ಇದಕ್ಕೆ ನಿರ್ದಿಷ್ಟಕಾಲಮಿತಿ ಇರುವುದಿಲ್ಲ’ ಎಂದು ತಿಳಿಸಿದ್ದಾರೆ. ಈ ಪ್ರಕಾರ ಒಂದು ವೇಳೆ ಜಪಾನ್‌ ಕಂಪನಿ ಈ ಜಮೀನನ್ನು ಖರೀದಿಸಿದ್ದೆ ಆದಲ್ಲಿ, ಪ್ರತೀ ಎಕರೆ ಭೂಮಿಗೆ ಕನಿಷ್ಠ 745 ಕೋಟಿ ರು. ನೀಡಿ ಖರೀದಿಸಿದಂತಾಗಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಭಾರತೀಯರ ಬಳಿ ಇದೆ ವಿಶ್ವದ ಟಾಪ್ 10 ಬ್ಯಾಂಕ್‌ಗಳಲ್ಲಿ ಇರುವುದಕ್ಕಿಂತ ಹೆಚ್ಚು ಚಿನ್ನ: ಬಲಿಷ್ಠ ರಾಷ್ಟ್ರಗಳ ಜಿಡಿಪಿಯನ್ನೂ ಮೀರಿಸಿದ ಸಂಪತ್ತು
Post Office Scheme: ದಿನಕ್ಕೆ ₹300 ಉಳಿಸಿ, 10 ವರ್ಷದಲ್ಲಿ ₹15 ಲಕ್ಷ ನಿಮ್ಮದಾಗಿಸಿಕೊಳ್ಳಿ!