
ನವದೆಹಲಿ(ಏ.18): ಆನ್‌ಲೈನ್ ಗೇಮ್ ಆ್ಯಪ್‌ಗಳಿಗೆ ಯುಪಿಐ ವ್ಯವಸ್ಥೆ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಮೇಲೆ ಕಡಿವಾಣ ಹೇರಲು ಎನ್‌ಪಿಸಿಐ (ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಲಿ.) ಮುಂದಾಗಿದೆ. ಆನ್‌ಲೈನ್ ಆ್ಯಪ್‌ಗಳಗೆ ಭಾರೀ ಪ್ರಮಾಣದ ಹಣ ಪಾವತಿಯಿಂದಾಗಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವ್ಯವಸ್ಥೆ ಮೇಲೆ ಭಾರೀ ಸಂಚಾರ ದಟ್ಟಣೆ ಒತ್ತಡ ಹೇರಿದೆ. ಪರಿಣಾಮ ಇತ್ತೀಚಿನ ದಿನಗಳಲ್ಲಿ ಯುಪಿಐ ವ್ಯವಸ್ಥೆಯಲ್ಲಿ ಹಲವು ಬಾರಿ ವ್ಯತ್ಯಯ ಉಂಟಾಗಿದೆ.
ಅಕ್ರಮ ಆನ್‌ಲೈನ್ ಗೇಮ್ ನಿಷೇಧಕ್ಕೆ ಶೀಘ್ರ ಕಾನೂನು!
ಹೀಗಾಗಿ ಈ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ ಯುಪಿಐ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಗೇಮಿಂಗ್ ಆ್ಯಪ್‌ಗಳಿಗೆ 50 ರು.ಗಿಂತ ಕಡಿಮೆ ಮೊತ್ತದ ಹಣ ಪಾವತಿಯನ್ನು ಯುಪಿಐ ವ್ಯವಸ್ಥೆ ಮೂಲಕ ನಿರಾಕರಿಸಲು ಎನ್‌ಪಿಸಿಐ ಮುಂದಾಗಿದೆ. ಇದರ ಬದಲು ಗೇಮಿಂಗ್ ಆ್ಯಪ್‌ಗಳು ಸ್ಟ್ಯಾಂಡಿಂಗ್ ಇನ್ಟ್ರಕ್ಷಷನ್ಸ್ (ಎಸ್‌ಐ) ಆಧರಿತ ಪಾವತಿ ವ್ಯವಸ್ಥೆಗಳಾದ ನೆಟ್ ಬ್ಯಾಂಕಿಂಗ್ ಬಳಸಿಕೊಳ್ಳಬಹುದು.
ಕೊರೋನಾ ಲಾಕ್ಡೌನ್ ಬಳಿಕ ಆನ್‌ಲೈನ್ ಮೂಲಕವೇ ಹಣ ಪಾವತಿ ವ್ಯವಸ್ಥೆಯಾದ ಯುಪಿಐ ಭಾರೀ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಆದರೆ ಐಪಿಎಲ್ ಮೊದಲಾದ ಪಂದ್ಯಗಳು ಆರಂಭವಾದ ಬಳಿಕ ಆನ್‌ಲೈನ್ ಗೇಮಿಂಗ್‌ಗಳಲ್ಲಿ ಹಣದ ಚಲಾವಣೆ ಭಾರೀ ಹೆಚ್ಚಿದ್ದು, ಯುಪಿಐ ಮೇಲಿನ ಒತ್ತಡ ಹೆಚ್ಚಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.