
ನವದೆಹಲಿ(ಏ.17): ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಕನಿಷ್ಠ ಹಣವನ್ನೂ ನಿರ್ವಹಣೆ ಮಾಡಿರದ ಖಾತೆದಾರರಿಗೆ ಕೇಂದ್ರ ಸರ್ಕಾರ ಸಮಾಧಾನದ ಸುದ್ದಿ ನೀಡಿದೆ.
ಇಂಥ ಖಾತೆಗಳಿಗೆ ವಿಧಿಸುತ್ತಿದ್ದ ದಂಡವನ್ನು 100 ರು. ನಿಂದ 50 ರು. (ಜಿಎಸ್‌ಟಿ ಸೇರಿ)ಗೆ ತಗ್ಗಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ.
ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಕನಿಷ್ಠ 500 ರು. ಇರಲೇಬೇಕು. ಇಲ್ಲದಿದ್ದರೆ ಪ್ರತಿ ತಿಂಗಳು ದಂಡ ವಿಧಿಸಲಾಗುತ್ತದೆ. ಒಂದು ವೇಳೆ 500 ರು. ಗಿಂತ ಕಡಿಮೆ ಇದ್ದ ಖಾತೆಯಲ್ಲಿ ಇರುವ ಹಣವನ್ನೇ ದಂಡವಾಗಿ ಮುರಿದುಕೊಳ್ಳುತ್ತಾ ಖಾತೆಯ ಉಳಿತಾಯ ಶೂನ್ಯಕ್ಕೆ ಬಂದರೆ ಅಂಥ ಖಾತೆಗಳು ಸ್ವಯಂ ರದ್ದಾಗಲಿವೆ.
ಅಲ್ಲದೆ ತಿಂಗಳಿಗೆ ನಾಲ್ಕು ಬಾರಿಗಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಿದಲ್ಲಿ ಪ್ರತಿ ವಿತ್ ಡ್ರಾಗೆ 25 ರು. ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.