ಆಗಸ್ಟ್ ನಲ್ಲಿ ದಾಖಲೆ ಬರೆದ ಯುಪಿಐ; ಸುಮಾರು 11ಲಕ್ಷ ಕೋಟಿ ರೂ. ವಹಿವಾಟು

Published : Sep 01, 2022, 03:15 PM IST
ಆಗಸ್ಟ್ ನಲ್ಲಿ ದಾಖಲೆ ಬರೆದ ಯುಪಿಐ; ಸುಮಾರು 11ಲಕ್ಷ ಕೋಟಿ ರೂ. ವಹಿವಾಟು

ಸಾರಾಂಶ

*ಜುಲೈನಲ್ಲಿ 628 ಕೋಟಿ ಯುಪಿಐ ವಹಿವಾಟುಗಳು *ಟೋಲ್ ಗೇಟ್ ಗಳಲ್ಲಿ ಫಾಸ್ಟ್ ಟ್ಯಾಗ್ ಮೂಲಕ ಕಡಿತವಾದ ಹಣದ ಮೊತ್ತ 4,245ಕೋಟಿ ರೂ. *ಯುಪಿಐ, ಯುಪಿಐ ಲೈಟ್ ಹಾಗೂ ಯುಪಿಐ 123ಪೇಗಳಲ್ಲಿ ವಹಿವಾಟು ಇನ್ನಷ್ಟು ಹೆಚ್ಚುವ ನಿರೀಕ್ಷೆ   

ನವದೆಹಲಿ (ಸೆ.1):  ಈ ವರ್ಷ ಆಗಸ್ಟ್ ನಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ ಡಿಜಿಟಲ್ ಪಾವತಿ ವಹಿವಾಟಿನ ಮೌಲ್ಯ 10.73ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ. ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (ಎನ್ ಪಿಸಿಐ)  ಸೆ.1ರಂದು ಬಿಡುಗಡೆಗೊಳಿಸಿರುವ ಮಾಹಿತಿಯಲ್ಲಿ ಇದು ಬಹಿರಂಗವಾಗಿದೆ. ಈ ವರ್ಷದ ಜುಲೈನಲ್ಲಿ ಯುಪಿಐ ಆಧಾರಿತ ಡಿಜಿಟಲ್ ವಹಿವಾಟಿನ ಮೌಲ್ಯ 10.63ಲಕ್ಷ ಕೋಟಿ ರೂ. ಆಗಿತ್ತು. ಈ ವರ್ಷದ ಆಗಸ್ಟ್ ನಲ್ಲಿ ಒಟ್ಟು 657 ಕೋಟಿ ಯುಪಿಐ ವಹಿವಾಟುಗಳು ನಡೆದಿದ್ದವು. ಇದು ಅದರ ಹಿಂದಿನ ತಿಂಗಳು ಅಂದ್ರೆ ಜುಲೈಗಿಂತ ಹೆಚ್ಚು. ಜುಲೈನಲ್ಲಿ 628 ಕೋಟಿ ಯುಪಿಐ ವಹಿವಾಟುಗಳು ನಡೆದಿದ್ದವು. ಎನ್ ಸಿಪಿಐ ಚೌಕಟ್ಟಿನಲ್ಲಿರುವ ಇತರ ಮಾಹಿತಿ ಅನ್ವಯ ಆಗಸ್ಟ್ ನಲ್ಲಿ 4.46ಲಕ್ಷ ಕೋಟಿ ರೂ. ಮೌಲ್ಯದ ಐಎಂಪಿಎಸ್ ಆಧಾರಿತ ತಕ್ಷಣದ ವರ್ಗಾವಣೆ ಆಧಾರಿತ ವಹಿವಾಟುಗಳು ನಡೆದಿವೆ. ಇದಕ್ಕೆ ಸಂಬಂಧಿಸಿ ಒಟ್ಟು 46.69 ಕೋಟಿ ವಹಿವಾಟುಗಳು ನಡೆದಿವೆ. ಜುಲೈನಲ್ಲಿ 4.45ಲಕ್ಷ ಕೋಟಿ ರೂ. ಮೌಲ್ಯದ  ಒಟ್ಟು 46.08 ಕೋಟಿ ವಹಿವಾಟುಗಳು ನಡೆದಿವೆ.

ಆಗಸ್ಟ್ ನಲ್ಲಿ ಹೆದ್ದಾರಿಗಳ ಟೋಲ್ ಗೇಟ್ ಗಳಲ್ಲಿ ಎನ್ ಇಟಿಸಿ ಫಾಸ್ಟ್ ಟ್ಯಾಗ್ ಮೂಲಕ ಕಡಿತವಾದ ಹಣದ ಮೊತ್ತ 4,245ಕೋಟಿ ರೂ. ಜುಲೈನಲ್ಲಿ ಇದು 4,162 ಕೋಟಿ ರೂ. ಆಗಿತ್ತು. ಇನ್ನು ವಹಿವಾಟುಗಳ ಸಂಖ್ಯೆಯ ಆಧಾರದಲ್ಲಿ ನೋಡಿದ್ರೆ ಆಗಸ್ಟ್ ನಲ್ಲಿ 27 ಕೋಟಿ ಆಗಿದ್ರೆ ಜುಲೈನಲ್ಲಿ 26.5 ಕೋಟಿ ಆಗಿತ್ತು. ಯುಪಿಐ, ಯುಪಿಐ ಲೈಟ್ ಹಾಗೂ ಯುಪಿಐ 123ಪೇಗಳಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಗಳ ಮುಖಾಂತರ ನಡೆದ ವಹಿವಾಟುಗಳ ಮೌಲ್ಯ ಮುಂದಿನ ದಿನಗಳಲ್ಲಿಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. 

ಡೀಸೆಲ್, ಜೆಟ್ ಇಂಧನ ಮೇಲಿನ ವಿಂಡ್ ಫಾಲ್ ಪ್ರಾಫಿಟ್ ತೆರಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ

ಯಾವುದೇ ಶುಲ್ಕ ಇಲ್ಲ
ಯುಪಿಐ ಮೂಲಕ ಪಾವತಿ ಮಾಡಲು ಯಾವುದೇ ಶುಲ್ಕ ವಿಧಿಸುವ ಆಲೋಚನೆ ಇಲ್ಲ ಎಂದು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ ವಿಭಿನ್ನ ಮೊತ್ತದ ಬ್ಯಾಂಡ್‌ಗಳ ಆಧಾರದ ಮೇಲೆ UPI ಮೂಲಕ ಮಾಡಿದ ಪಾವತಿಗಳ ಮೇಲೆ ಕ್ರಮೇಣ ಶುಲ್ಕವನ್ನು ವಿಧಿಸುವ ಸಾಧ್ಯತೆಯ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಧ್ಯಸ್ಥಗಾರರಿಂದ ಪ್ರತಿಕ್ರಿಯೆ ಕೋರಿತ್ತು. ಆದರೆ, ಇದಾದ ಕೆಲವೇ ದಿನಗಳಲ್ಲಿ ಯುಪಿಐ ಪಾವತಿಗೆ ಶುಲ್ಕ ವಿಧಿಸುವ ಪ್ರಸ್ತಾವನೆ ಇಲ್ಲ ಎಂದು ಸರ್ಕಾರ ಹೇಳಿತ್ತು. ಪ್ರಸ್ತುತ, UPI ಮೂಲಕ ಮಾಡಿದ ಪಾವತಿಗಳ ಸಂದರ್ಭದಲ್ಲಿ ಬಳಕೆದಾರರು ಅಥವಾ ವ್ಯಾಪಾರಿಗಳಿಂದ ಯಾವುದೇ ವೆಚ್ಚವನ್ನು ಪಡೆಯುವುದಿಲ್ಲ. 

ಇಂಟರ್ನೆಟ್ ಬೇಕಾಗಿಲ್ಲ 
ಯುಪಿಐ ಪ್ರಾರಂಭವಾದ ದಿನದಿಂದ ಈ ತನಕ ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಾಗೂ ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (NPCI) ಹೊಸ ಯುಪಿಐ 123 ಪೇ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದ್ರಿಂದ 40 ಕೋಟಿ ಫೀಚರ್ ಫೋನ್ ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕವಿಲ್ಲದೆ  ಡಿಜಿಟಲ್ ಪಾವತಿಗಳನ್ನು ಮಾಡಲು ಅವಕಾಶ ಸಿಕ್ಕಿದೆ. ಯುಪಿಐ ಸೇವೆ ಬಳಸಿಕೊಂಡು ಬಳಕೆದಾರರು (Users)ತಕ್ಷಣ ಹಣ ವರ್ಗಾವಣೆ ಮಾಡಬಹುದು. ಯುಪಿಐ 123 ಪೇ (UPI 123 Pay) ಬಳಸಿಕೊಂಡು ಅನೇಕ ವಹಿವಾಟುಗಳನ್ನು ನಡೆಸಬಹುದು. 

ಮುಕೇಶ್ ಅಂಬಾನಿ ಪತ್ನಿ ನೀತಾಗೆ ಈ ಅಭ್ಯಾಸಗಳೆಲ್ಲ ಇವೆಯಂತೆ!

ಯುಪಿಐ 123 ಪೇ ಬಳಸಿಕೊಂಡು ಯಾರು ಬೇಕಾದರೂ ಕಾರುಗಳಿಗೆ (Cars) ಫಾಸ್ಟ್ ಟ್ಯಾಗ್ಸ್  (Fast Tag) ಹಾಗೂ ಇತರ ಬಿಲ್ ಗಳನ್ನು ಪಾವತಿಸಬಹುದು. ನೋಂದಾಯಿತ ಮೊಬೈಲ್ ಸಂಖ್ಯೆ ಬಳಸಿಕೊಂಡು ಯುಪಿಐ ಖಾತೆ ಬ್ಯಾಲೆನ್ಸ್ ಚೆಕ್ ಮಾಡಬಹುದು. ದಿನದಲ್ಲಿ 24 ಗಂಟೆಗಳ ಕಾಲ ಲಭ್ಯವಿರುವ ಸಂಖ್ಯೆಯನ್ನು ಎನ್ ಪಿಸಿಐ (NPCI) ಒದಗಿಸಿದೆ. www.digisaathi.info ಭೇಟಿ ನೀಡುವ ಮೂಲಕ ಅಥವಾ 14431 ಹಾಗೂ 1800 891 3333 ಸಂಖ್ಯೆಗೆ ಕರೆ ಮಾಡುವ ಮೂಲಕ ಡಿಜಿಟಲ್ ಪಾವತಿಗಳು ಹಾಗೂ ಇತರ ಮಾಹಿತಿಗಳನ್ನು ಸುಲಭವಾಗಿ ಚೆಕ್ ಮಾಡಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!