LPG Cylinder Price: ತಿಂಗಳ ಮೊದಲ ದಿನವೇ ಗುಡ್‌ ನ್ಯೂಸ್‌ ನೀಡಿದ ಕೇಂದ್ರ ಸರ್ಕಾರ!

By Santosh NaikFirst Published Sep 1, 2022, 10:39 AM IST
Highlights

LPG Cylinder Price Today: ತೈಲ ಕಂಪನಿಗಳು ಪ್ರತಿ ತಿಂಗಳ 1 ರಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಈ ತಿಂಗಳ ಮೊದಲ ದಿನವೇ ಆಗಿರುವ ಪರಿಷ್ಕರಣೆಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆ ಮಾಡಲಾಗಿದ್ದರೆ, ಗೃಹಬಳಕೆಯ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ನವದೆಹಲಿ (ಸೆ. 1): ದೇಶದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ನಲ್ಲಿ (Commercial Gas Price) ದೊಡ್ಡಇಳಿಕೆ ಮಾಡಲಾಗಿದೆ. ಅದೇ, ಮನೆಗಳಲ್ಲಿ ಬಳಸಲಾಗುವ ದಿನನಿತ್ಯದ ಗೃಹಬಳಕೆ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಇದರಿಂದಾಗಿ ಪ್ರತಿದಿನ ಅಡುಗೆ ಮನೆಯಲ್ಲಿ ಬಳಸುವ ಸಿಲಿಂಡರ್‌ಗಳಿಗೆ (LPG cooking gas price) ಗ್ರಾಹಕರು ಎಂದಿನ ದರವನ್ನೇ ನೀಡಿ ಖರೀದಿಸಬೇಕಾಗುತ್ತದೆ. ಸೆಪ್ಟೆಂಬರ್‌ 1 ರಿಂದ ದೆಹಲಿಯಲ್ಲಿ ಇಂಡೇನ್‌ನ 19 ಕೆಜಿ ಗೃಹಬಳಕೆ ಸಿಲಿಂಡರ್‌ಗಳ ಬೆಲೆಯಲ್ಲಿ 91.50 ರೂಪಾಯೊ, ಕೋಲ್ಕತದಲ್ಲಿ 100 ರೂಪಾಯಿ, ಮುಂಬೈಯಲ್ಲಿ 92.50 ರೂಪಾಯಿ, ಚೆನ್ನೈನಲ್ಲಿ 96 ರೂಪಾಯಿ ಕಡಿಮೆಯಾಗಿದೆ.  ಗೃಹಬಳಕೆಯ 14.2 ಕೆಜಿ ಸಿಲಿಂಡರ್‌ಗಳು ಕಳೆದ ತಿಂಗಳ ದರದಲ್ಲಿಯೇ ಸಿಗಲಿದೆ. ದೇಶದ ಗ್ಯಾಸ್ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು ನಿಗದಿಪಡಿಸುತ್ತವೆ. ಆಗಸ್ಟ್ 1 ರಂದು, ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 36 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿತ್ತು. ವಾಣಿಜ್ಯ LPG ಗ್ಯಾಸ್ ಅನ್ನು ಹೆಚ್ಚಾಗಿ ಹೋಟೆಲ್‌ಗಳು, ಆಹಾರ ಅಂಗಡಿಗಳು ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ಇದು ಬೆಲೆ ಇಳಿಕೆಯಿಂದ ಅವರಿಗೆ ದೊಡ್ಡ ಪರಿಹಾರವನ್ನು ನೀಡುತ್ತದೆ. ಇದು ಸತತ ನಾಲ್ಕನೇ ತಿಂಗಳು ವಾಣಿಜ್ಯ ಅನಿಲ ಬೆಲೆ ಇಳಿಕೆಯಾಗಿದೆ. ಈ ವರ್ಷದ ಏಪ್ರಿಲ್‌ 1 ರಂದು ಈ ಸಿಲಿಂಡರ್‌ಗಳ ಬೆಲೆಯಲ್ಲಿ 249.50 ರೂಪಾಯಿ ಏರಿಕೆ ಮಾಡಲಾಗಿತ್ತು.

ಇದರ ನಡುವೆ ಜುಲೈನಿಂದ ದೇಶದಲ್ಲಿ ಗೃಹಬಳಕೆಯ ಸಿಲಿಂಡರ್‌ಗಳ (Domestic LPG cylinder) ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೇಶೀಯ ಸಿಲಿಂಡರ್ ದೆಹಲಿಯಲ್ಲಿ ರೂ 1053, ಕೋಲ್ಕತ್ತಾದಲ್ಲಿ ರೂ 1079, ಮುಂಬೈನಲ್ಲಿ ರೂ 1052 ಮತ್ತು ಚೆನ್ನೈನಲ್ಲಿ ರೂ 1068 ಕ್ಕೆ ಲಭ್ಯವಿದೆ. ಬೆಂಗಳೂರಿನಲ್ಲಿ (Bengaluru) 19 ಕೆಜಿಯ ವಾಣಿಜ್ಯ ಸಿಲಿಂಡರ್‌ಗೆ (Commercial LPG cylinder)2100 ರೂಪಾಯಿ ಆಗಿದೆ. ಇನ್ನು ಗೃಹಬಳಕೆಯ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 1055 ರೂಪಾಯಿ ಆಗಿದೆ.

LPG Cylinder Price: ಎಲ್ ಪಿಜಿ ಗ್ರಾಹಕರಿಗೆ ಶುಭಸುದ್ದಿ; ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 36ರೂ. ಇಳಿಕೆ

ತೈಲ ಕಂಪನಿಗಳು ಪ್ರತಿ ತಿಂಗಳು ಎರಡು ಬಾರಿ ದರವನ್ನು ಪರಿಷ್ಕರಣೆ ಮಾಡುತ್ತವೆ. ತಿಂಗಳ ಮೊದಲ ದಿನ ಹಾಗೂ ತಿಂಗಳ ಮಧ್ಯದಲ್ಲಿ ದರಗಳನ್ನು ಪರಿಷ್ಕರಿಸುತ್ತವೆ. ಆಗಸ್ಟ್‌ 1 ರಂದು 19 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 36 ರೂಪಾಯಿ ಕಡಿಮೆ ಮಾಡಲಾಗಿತ್ತು.ಇನ್ನು ಜುಲೈನಲ್ಲೂ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 198 ರೂಪಾಯಿ ಕಡಿತ ಮಾಡಲಾಗಿತ್ತು. ಜೂನ್‌ 1 ರಂದು ಈ ದರದಲ್ಲಿ 135 ರೂಪಾಯಿ ಕಡಿತ ಮಾಡಲಾಗಿತ್ತು.

LPG Cylinder:ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಬಿಡಿ, ಹೊಸ ಕನೆಕ್ಷನ್ ಪಡೆಯೋದು ಕೂಡ ದುಬಾರಿ ಆಗೋಯ್ತು ಈಗ!

ಆದರೆ, ವ್ಯಾಟ್‌ ಹಾಗೂ ಇತರ ತೆರಿಗೆಗಳ ಕಾರಣದಿಂದಾಗಿ ರಾಜ್ಯದಿಂದ ರಾಜ್ಯಕ್ಕೆ ಸಿಲಿಂಡರ್‌ಗಳ ದರದಲ್ಲಿ ಬದಲಾವಣೆ ಆಗುತ್ತಿರುತ್ತವೆ. ಹೆಚ್ಚಿನ ತರಿಗೆ ಇರುವ ರಾಜ್ಯಗಳಲ್ಲಿ ಸಿಲಿಂಡರ್‌ಗಳ ದರದಲ್ಲಿ ಏರಿಕೆ ಇರುತ್ತದೆ. ಈಗ ಇರುವ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಎಲ್‌ಪಿಜಿ ದರಗಳು ಅಂತಾರಾಷ್ಟ್ರೀಯ ಕಚ್ಚಾ ದರಗಳ ಏರಿಕೆ ಹಾಗೂ ಇಳಿಕೆಯ ಮೇಲೆ ನಿರ್ಧಾರವಾಗಿರುತ್ತದೆ. ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾದಲ್ಲಿ, ಸಿಲಿಂಡರ್‌ಗಳ ಬೆಲೆಯಲ್ಲೂ ಏರಿಕೆ ಆಗುತ್ತದೆ. ಆದರೆ, ತೀರಾ ಕಡುಬಡುತನದ ಕುಟುಂಬಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿಯಲ್ಲಿ ಎಲ್‌ಪಿಜಿಯನ್ನು ಪೂರೈಕೆ ಮಾಡುತ್ತದೆ.

ನಾಲ್ಕು ಮಹಾನಗರಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಹೊಸ ಬೆಲೆಗಳು
* ದೆಹಲಿಯಲ್ಲಿ ಇಂಡೇನ್‌ನ 19 ಕೆಜಿ ಸಿಲಿಂಡರ್ 1976.50 ರ ಬದಲಿಗೆ 1885 ರೂ.ಗೆ ಲಭ್ಯವಿರುತ್ತದೆ.
* ವಾಣಿಜ್ಯ ಸಿಲಿಂಡರ್ ಕೋಲ್ಕತ್ತಾದಲ್ಲಿ ರೂ 1995.5 ಕ್ಕೆ ಲಭ್ಯವಿರುತ್ತದೆ. ಮೊದಲು 2095 ರೂ.ಗೆ ಲಭ್ಯವಿತ್ತು.
* ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ 1844 ರೂ.ಗೆ ಲಭ್ಯವಾಗಲಿದೆ.
* ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್ 2045 ರೂ.ಗೆ ಲಭ್ಯವಾಗಲಿದೆ.

click me!