ಯುಪಿಐ Lite ಪಾವತಿಯಲ್ಲಿ ಮಹತ್ವದ ಬದಲಾವಣೆ, ಟ್ರಾನ್ಸಾಕ್ಷನ್‌ಗೂ ಮೊದಲು ತಿಳಿದುಕೊಳ್ಳಿ

Published : Mar 02, 2025, 04:50 PM ISTUpdated : Mar 02, 2025, 05:20 PM IST
ಯುಪಿಐ Lite ಪಾವತಿಯಲ್ಲಿ ಮಹತ್ವದ ಬದಲಾವಣೆ, ಟ್ರಾನ್ಸಾಕ್ಷನ್‌ಗೂ ಮೊದಲು ತಿಳಿದುಕೊಳ್ಳಿ

ಸಾರಾಂಶ

ಇದೀಗ ಬಹುತೇಕ ಹಣ ಪಾವತಿ, ಬಿಲ್ ಪಾವತಿ ಸೇರಿದಂತೆ ಹಲವು ಪಾವತಿಗಳು ಯುಪಿಐ ಮೂಲಕವೇ ನಡೆಯುತ್ತಿದೆ. ಇದೀಗ NPCI ಮಹತ್ವದ ಅಪ್‌ಡೇಟ್ ನೀಡಿದೆ. ಯುಪಿಐ ಲೈಟ್ ಪಾವತಿ ವ್ಯವಸ್ಥೆಯಲ್ಲಿನ ಬದಲಾವಣೆ ನೀವು ಪಾವತಿಗೂ ಮೊದಲೇ ತಿಳಿದುಕೊಳ್ಳಿ.

ನವದೆಹಲಿ(ಮಾ.2) ಭಾರತದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುತೇಕರು ಇದೀಗ ಪಾವತಿಗಳನ್ನು ಯುಪಿಐ ಮೂಲಕವೇ ಮಾಡುತ್ತಾರೆ. ಅದು ಗೂಗಲ್ ಪೇ, ಪೇಟಿಎಂ, ಫೋನ್‌ಪೇ ಸೇರಿದಂತೆ ಹಲವು ಆ್ಯಪ್ ಮೂಲಕ ಯುಪಿಐ ಪಾವತಿಗಳನ್ನು ಮಾಡುತ್ತಿದ್ದಾರೆ. ಇದೀಗ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ಕೆಲ ಅಪ್‌ಡೇಟ್ ಮಾಡಿದೆ. ಈ ಪೈಕಿ ಯುಪಿಐ ಲೈಟ್ ಪಾವತಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಪ್ರಮುಖವಾಗಿ ಪಾವತಿ ಮಿತಿ ಹೆಚ್ಚಳ, ಬ್ಯಾಲೆನ್ಸ್ ಮಿತಿ ಹೆಚ್ಚಳ ಸೇರಿದಂತೆ ಹಲವು ಬದಲಾವಣೆ ಮಾಡಲಾಗಿದೆ. ಹೀಗಾಗಿ ಮುಂದಿನ ಪಾವತಿ ಮಾಡುವ ಮೊದಲು ಬದಲಾವಣೆ ಬಗ್ಗೆ ತಿಳಿದುಕೊಳ್ಳಿ.

ಕಳೆದ ವರ್ಷದ ಅಂತ್ಯದಲ್ಲಿ NPCI ಈ ಕುರಿತ ಬದಲಾವಣೆಗೆ ಸೂಚಿಸಿತ್ತು. ಇದೀಗ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಮಾರ್ಚ್ ತಿಂಗಳಿನಿಂದಲೇ ಹೊಸ ಅಪ್‌ಡೇಟ್ ಜಾರಿಯಾಗಿದೆ. ಈ ಬದಲಾವಣೆ ಪ್ರಕಾರ,  ಪ್ರತಿ ಟ್ರಾನ್ಸಾಕ್ಷನ್ ಮಿತಿಯನ್ನು 1,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ಒಟ್ಟು ಬ್ಯಾಲೆನ್ಸ್ ಮಿತಿಯನ್ನು 5,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಫೆಬ್ರವರಿ 27 ರಂದು NPCI ಅಧಿಸೂಚನೆ ಹೊರಡಿಸಲಾಗಿದೆ. 

ಗೂಗಲ್ ಪೇ ಮೂಲಕ ಟ್ರಾನ್ಸಾಕ್ಷನ್ ಮಾಡುತ್ತೀರಾ? ಕೆಲ ಪಾವತಿಗೆ ಶುಲ್ಕ ಅನ್ವಯ

ಈ ಹಿಂದೆ ಯುಪಿಐ ಲೈಟ್‌ನಲ್ಲಿ ಒಂದೊಂದು ಟ್ರಾನ್ಸಾಕ್ಷನ್ ಲಿಮಿಟ್ ₹500 ಆಗಿತ್ತು. ಇದೀಗ 1,000 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಹೊಸ ‘ಟ್ರಾನ್ಸ್‌ಫರ್ ಔಟ್’, ‘ಆಟೋ ಟಾಪ್-ಅಪ್’ ಫೀಚರ್‌ಗಳನ್ನು ಲಾಂಚ್ ಮಾಡಲಾಗಿದೆ
ಪಿನ್ ಇಲ್ಲದೆ ₹1,000 ವರೆಗೆ ಟ್ರಾನ್ಸಾಕ್ಷನ್ ಇದರಿಂದ ಸಾಧ್ಯ.
NPCI ಈ ಬದಲಾವಣೆಗಳನ್ನು ಫೆಬ್ರವರಿ 27, 2025 ರಂದು ಅಧಿಸೂಚನೆ ಮೂಲಕ ಕಡ್ಡಾಯ ಮಾಡಿದೆ. ಎಲ್ಲಾ ಬ್ಯಾಂಕುಗಳು, ಯುಪಿಐ ಆ್ಯಪ್‌ಗಳು ಮಾರ್ಚ್ 31, 2025 ರವರೆಗೆ ಒಳಗೆ ಈ ನಿಯಮ ಜಾರಿಗೊಳಿಸಬೇಕು

ಯುಪಿಐ ಲೈಟ್ ಹೊಸ 'ಟ್ರಾನ್ಸ್‌ಫರ್ ಔಟ್' ಫೀಚರ್ ಏನು?
ಈಗ ಯುಪಿಐ ಲೈಟ್ ಯೂಸರ್ಸ್ ಉಳಿದ ದುಡ್ಡನ್ನು ವಾಪಸ್ ಬ್ಯಾಂಕ್ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿಕೊಳ್ಳಬಹುದು. ಇದಕ್ಕಾಗಿ ಯುಪಿಐ ಲೈಟ್ ಡಿಸೇಬಲ್ ಮಾಡಬೇಕಾದ ಅವಶ್ಯಕತೆ ಇಲ್ಲ. ಇದರಿಂದ ಸಣ್ಣ ಪೇಮೆಂಟ್‌ಗಳನ್ನು ಮ್ಯಾನೇಜ್ ಮಾಡುವುದು ಇನ್ನೂ ಸುಲಭ ಆಗುತ್ತದೆ.

ಯುಪಿಐ ಲೈಟ್ ಆಟೋ ಟಾಪ್-ಅಪ್ ಫೀಚರ್: ಏನಿದೆ ಸ್ಪೆಷಲ್?
ಈಗ ಯುಪಿಐ ಲೈಟ್ ಬ್ಯಾಲೆನ್ಸ್ ಆಟೋಮ್ಯಾಟಿಕ್ ಆಗಿ ರೀಚಾರ್ಜ್ ಆಗುತ್ತದೆ.
ಬ್ಯಾಲೆನ್ಸ್ ಒಂದು ಲಿಮಿಟ್ ಗಿಂತ ಕಡಿಮೆ ಹೋದರೆ ಆಟೋಮ್ಯಾಟಿಕ್ ಆಗಿ ಫಂಡ್ ಟ್ರಾನ್ಸ್‌ಫರ್ ಆಗುತ್ತದೆ. ಇದರಿಂದ ಪೇಮೆಂಟ್ ನಿಲ್ಲುವುದಿಲ್ಲ.
ಯುಪಿಐ ಲೈಟ್‌ನಲ್ಲಿ ಟ್ರಾನ್ಸಾಕ್ಷನ್ ಲಿಮಿಟ್ ಹೆಚ್ಚಾಗಿದೆ
ಡಿಸೆಂಬರ್ 4, 2024 ರಂದು RBI ಕೊಟ್ಟ ನೋಟಿಫಿಕೇಶನ್ ಪ್ರಕಾರ ಯುಪಿಐ ಲೈಟ್‌ಗೆ ಹೊಸ ಲಿಮಿಟ್ಸ್ ಹೀಗಿವೆ:
ಒಂದೊಂದು ಟ್ರಾನ್ಸಾಕ್ಷನ್ ಲಿಮಿಟ್    ₹500 (ಹಿಂದೆ ₹100)
ಹೊಸ ಮ್ಯಾಕ್ಸ್ ಟ್ರಾನ್ಸಾಕ್ಷನ್ ಲಿಮಿಟ್    ₹1,000
ಒಟ್ಟು ಬ್ಯಾಲೆನ್ಸ್ ಲಿಮಿಟ್    ₹5,000

6 ತಿಂಗಳಿನಿಂದ ಇನಾಕ್ಟಿವ್ ಯುಪಿಐ ಲೈಟ್ ಅಕೌಂಟ್ಸ್‌ ಮೇಲೆ ಹೊಸ ರೂಲ್
ಯಾವ ಯುಪಿಐ ಲೈಟ್ ಅಕೌಂಟ್‌ನಿಂದ ಆದರೂ 6 ತಿಂಗಳವರೆಗೆ ಟ್ರಾನ್ಸಾಕ್ಷನ್ ಆಗದಿದ್ದರೆ ಆ ಅಕೌಂಟ್ ಅನ್ನು ಇನಾಕ್ಟಿವ್ ಆಗಿ ಭಾವಿಸಿ ಉಳಿದ ದುಡ್ಡನ್ನು ಯೂಸರ್ ಬ್ಯಾಂಕ್ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡುತ್ತದೆ. ಈ ರೂಲ್ ಅನ್ನು ಜೂನ್ 30, 2025 ರವರೆಗೆ ಜಾರಿ ಮಾಡ್ತಾರೆ.

ಯುಪಿಐ ಲೈಟ್‌ನಿಂದ ದುಡ್ಡು ಹೇಗೆ ಕಳುಹಿಸುವುದು?
Step 1: ನಿಮಗೆ ಇಷ್ಟವಾದ ಯುಪಿಐ ಲೈಟ್ ಆ್ಯಪ್ (Google Pay, PhonePe, Paytm ಇತ್ಯಾದಿ) ಓಪನ್ ಮಾಡಿ.
Step 2: ಯುಪಿಐ ಲೈಟ್ ಸೆಕ್ಷನ್‌ನಲ್ಲಿ ಪೇಮೆಂಟ್ ಆಪ್ಷನ್ ಮೇಲೆ ಟ್ಯಾಪ್ ಮಾಡಿ.
Step 3: ರಿಸೀವರ್ ಯುಪಿಐ ಐಡಿ ಎಂಟರ್ ಮಾಡಿ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.
Step 4: ₹500 ವರೆಗೆ ಅಮೌಂಟ್ ಎಂಟರ್ ಮಾಡಿ.
Step 5: ಪಿನ್ ಎಂಟರ್ ಮಾಡದೆ ತಕ್ಷಣ ಪೇಮೆಂಟ್ ಪೂರ್ತಿ ಮಾಡಿ.

ಎಸ್‌ಬಿಐ ಯುಪಿಐ ಮಿತಿ ಹೆಚ್ಚಿಸುವುದು/ಕಡಿಮೆ ಮಾಡುವುದು ಹೇಗೆ?
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ