ಬೆಂಗಳೂರಿನಲ್ಲಿ 80 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನು ವಶ! ಭೂಗಳ್ಳರಿಗೆ ವಿಷಕಂಠನಾದ ಡಿಸಿ ಜಗದೀಶ್!

Published : Mar 01, 2025, 08:32 PM ISTUpdated : Mar 01, 2025, 08:37 PM IST
ಬೆಂಗಳೂರಿನಲ್ಲಿ 80 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನು ವಶ! ಭೂಗಳ್ಳರಿಗೆ ವಿಷಕಂಠನಾದ ಡಿಸಿ ಜಗದೀಶ್!

ಸಾರಾಂಶ

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 80.69 ಕೋಟಿ ರೂ. ಮೌಲ್ಯದ 14 ಎಕರೆ 15 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ. ವಿವಿಧ ತಾಲ್ಲೂಕುಗಳಲ್ಲಿನ ಗೋಮಾಳ, ಸ್ಮಶಾನ, ದೇವಸ್ಥಾನದ ಜಾಗಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು (ಮಾ.01): ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ. 80.69 ಕೋಟಿ ಅಂದಾಜು ಮೌಲ್ಯದ  ಒಟ್ಟು 14 ಎಕರೆ 15 ಗುಂಟೆ ಸರ್ಕಾರಿ ಜಮೀನುಗಳನ್ನು ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್ ನೇತೃತ್ವದಲ್ಲಿ  ತೆರವುಗೊಳಿಸಲಾಯಿತು.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದ  ಸ.ನಂ. 93/1, ಸಂತೆ ಮೇಳ ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1.12 ಎಕರೆ/ ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 15.00 ಕೋಟಿಗಳಾಗಿರುತ್ತದೆ. ಕೆಂಗೇರಿ ಹೋಬಳಿಯ ಹಲಗೇವಡೇರಹಳ್ಳಿ ಗ್ರಾಮದ, ಹದ್ದುಗಿಡ್ಡದಹಳ್ಳ ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.02.08 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 3.00 ಕೋಟಿಗಳಾಗಿರುತ್ತದೆ. 

ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಕಲ್ಕೆರೆ ಗ್ರಾಮದ  ಸ.ನಂ. 9,10 & 11, ಪಿಳ್ಳಗಾಲುವೆ  ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ  0.10 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 2.00 ಕೋಟಿ ಕೋಟಿಗಳಾಗಿರುತ್ತದೆ. ಸರ್ಜಾಪುರ ಹೋಬಳಿಯ ತಿಗಳಚೌಡೇನಹಳ್ಳಿ ಗ್ರಾಮದ  ಸ.ನಂ. 69& 70 ರ ಮಧ್ಯ ಇರುವ ರಾಜುಕಾಲುವೆ ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.06 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 0.85 ಲಕ್ಷ ಕೋಟಿಗಳಾಗಿರುತ್ತದೆ. 

ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಗೊಲ್ಲಹಳ್ಳಿ ಗ್ರಾಮದ  ಸ.ನಂ. 42, ಗೋಮಾಳ  ಒಟ್ಟು ವಿಸ್ತೀರ್ಣ 3.0 ಎಕರೆ/ ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 20.00 ಕೋಟಿಗಳಾಗಿರುತ್ತದೆ. ಹೆಸರುಘಟ್ಟ ಹೋಬಳಿಯ ತರಬನಹಳ್ಳಿ ಗ್ರಾಮದ  ಸ.ನಂ. 26 ಗೋಮಾಳ ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.08 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 0.90 ಲಕ್ಷ ಗಳಲಾಗಿರುತ್ತದೆ. ಯಲಹಂಕ ಹೋಬಳಿಯ ತಿರುಮೇನಹಳ್ಳಿ ಗ್ರಾಮದ  ಸ.ನಂ. 47,  ಸ್ಮಶಾನ  ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.06  ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 5.80 ಕೋಟಿಗಳಾಗಿರುತ್ತದೆ.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರತ್ಯೇಕ ಕೃಷಿ ನಿರ್ದೇಶಕರ ಕಚೇರಿ ಮಂಜೂರು; ಇಲ್ಲಿದೆ ಹೊಸ ಆಫೀಸ್ ವಿಳಾಸ!

ಬೆಂಗಳೂರು ಉತ್ತರ ತಾಲ್ಲೂಕಿನ  ದಾಸನಪುರ ಹೋಬಳಿಯ ಶಿವನಪುರ  ಗ್ರಾಮದ  ಸ.ನಂ. 21 ರ, ಗೋಮಾಳ  ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.30 ಎಕರೆ/ ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ. 1.50 ಕೋಟಿಗಳಾಗಿರುತ್ತದೆ. ದಾಸನಪುರ ಹೋಬಳಿಯ ಆಲೂರು ಗ್ರಾಮದ  ಸ.ನಂ. 77 ರ, ಗೋಮಾಳ  ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.10 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ. 0.10 ಲಕ್ಷ ಗಳಾಗಿರುತ್ತದೆ. ದಾಸನಪುರ ಹೋಬಳಿಯ ಆಲೂರು ಗ್ರಾಮದ  ಸ.ನಂ. 78 ರ, ದೇವಸ್ಥಾನದ ತೋಪು ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.08 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ. 0.08 ಲಕ್ಷ ಗಳಾಗಿರುತ್ತದೆ. ದಾಸನಪುರ ಹೋಬಳಿಯ ಆಲೂರು ಗ್ರಾಮದ  ಸ.ನಂ. 84 ರ, ಸ್ಮಶಾನ  ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.12 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ. 0.12 ಲಕ್ಷ ಗಳಾಗಿರುತ್ತದೆ .  ದಾಸನಪುರ ಹೋಬಳಿಯ ಆಲೂರು ಗ್ರಾಮದ  ಸ.ನಂ. 85 ರ, ಸ್ಮಶಾನ  ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.04 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ. 0.04 ಲಕ್ಷ ಗಳಾಗಿರುತ್ತದೆ. ಕಸಬ ಹೋಬಳಿಯ ನೀಲಸಂದ್ರ ಗ್ರಾಮದ  ಸ.ನಂ. 79 ರ,  ಧರ್ಮರಾಯಸ್ವಾಮಿ ದೇವಸ್ಥಾನದ ಜಾಗ  ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 6.0 ಎಕರೆಗಳಾಗಿದ್ದು, ಅಂದಾಜು ಮೌಲ್ಯ ರೂ. 25.00 ಕೋಟಿ ಗಳಾಗಿರುತ್ತದೆ.

ಇದನ್ನೂ ಓದಿ: BIFFES: ಉತ್ತಮ ಸಾಹಿತ್ಯ, ಸಂಗೀತ, ಸಿನಿಮಾ,ಸಂಸ್ಕೃತಿಯೇ ನಮ್ಮ ಆಸ್ತಿ: ಡಿಕೆ ಶಿವಕುಮಾರ ಮಾತು

ಬೆಂಗಳೂರು ಪೂರ್ವ ತಾಲ್ಲೂಕಿನ  ಬಿದರಹಳ್ಳಿ ಹೋಬಳಿಯ ಯರಪ್ಪನಹಳ್ಳಿ  ಗ್ರಾಮದ  ಸ.ನಂ. 20 ರ, ಗೋಮಾಳ  ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1. 20 ಎಕರೆ/ ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ. 6.00 ಕೋಟಿ ಗಳಾಗಿರುತ್ತದೆ. ವರ್ತೂರು ಹೋಬಳಿಯ ದೊಡ್ಡನೆಕ್ಕುಂದಿ ಗ್ರಾಮದ  ಸ.ನಂ. 40 ರ, ಗುಂಡು ತೋಪು  ಒಟ್ಟು  ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.06  ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ. 0.30 ಲಕ್ಷ ಗಳಾಗಿರುತ್ತದೆ. ಕೆ.ಆರ್.ಪುರ ಹೋಬಳಿಯ ಕೊಡಿಗೆಹಳ್ಳಿ  ಗ್ರಾಮದ  ಸ.ನಂ. 32 ರ ಗುಂಡು ತೋಪು,  ಒಟ್ಟು ವಿಸ್ತೀರ್ಣ   1. 08 ಎಕರೆ/ ಗುಂಟೆ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳನ್ನು  ತೆರವುಗೊಳಿಸಲಾಗಿರುತ್ತದೆ.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಜಗದೀಶ ಕೆ.ನಾಯಕ್ ಹಾಗೂ ವಿವಿಧ ತಾಲ್ಲೂಕಿನ ತಹಶೀಲ್ದಾರ್ ರು ಹಾಗೂ ಮುಜರಾಯಿ ತಹಶೀಲ್ದಾರ್ ರು ಉಪಸ್ಥಿತರಿದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ