ಈ ವರ್ಷದಿಂದ ನಾಗರೀಕರಿಗೆ ಇ-ಪಾಸ್ ಪೋರ್ಟ್ ವಿತರಣೆ !

Published : Apr 07, 2022, 08:34 PM IST
ಈ ವರ್ಷದಿಂದ ನಾಗರೀಕರಿಗೆ ಇ-ಪಾಸ್ ಪೋರ್ಟ್ ವಿತರಣೆ !

ಸಾರಾಂಶ

ಇ-ಪಾಸ್‌ಪೋರ್ಟ್ ಸಂಯೋಜಿತ ಕಾಗದ ಮತ್ತು ಎಲೆಕ್ಟ್ರಾನಿಕ್ ಪಾಸ್‌ಪೋರ್ಟ್ ಆಗಿರುತ್ತದೆ, ಎಂಬೆಡೆಡ್ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಚಿಪ್ ಮತ್ತು ಆಂಟೆನಾವನ್ನು ಹಿಂಬದಿಯ ಕವರ್‌ನಲ್ಲಿ ಅಳವಡಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ನವದೆಹಲಿ (ಏ.7): 2022-23ರಿಂದ ತನ್ನ ನಾಗರಿಕರಿಗೆ ಇ-ಪಾಸ್‌ಪೋರ್ಟ್‌ಗಳನ್ನು (E-Passports) ನೀಡಲು ಸರ್ಕಾರ ಯೋಜಿಸುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (Union Minister of State for External Affairs) ವಿ ಮುರಳೀಧರನ್  ( V Muraleedharan)ಗುರುವಾರ ರಾಜ್ಯಸಭೆಯಲ್ಲಿ (Rajya Sabha ) ಹೇಳಿದ್ದಾರೆ.

2022 ರ ಕ್ಯಾಲೆಂಡರ್ ವರ್ಷದಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ವಿತರಿಸುವ ಸರ್ಕಾರದ ಯೋಜನೆಗಳು ಮತ್ತು ಅದರ ವಿವರಗಳ ಕುರಿತ ಪ್ರಶ್ನೆಗೆ ಉತ್ತರವಾಗಿ ಮುರಳೀಧರನ್ ಅವರು ರಾಜ್ಯಸಭೆಯಲ್ಲಿ ಉತ್ತರ ನೀಡಿದರು. ಇ-ಪಾಸ್‌ಪೋರ್ಟ್ ಸಂಯೋಜಿತ ಕಾಗದ ಮತ್ತು ಎಲೆಕ್ಟ್ರಾನಿಕ್ ಪಾಸ್‌ಪೋರ್ಟ್ ಆಗಿರುತ್ತದೆ, ಎಂಬೆಡೆಡ್ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಚಿಪ್ ಮತ್ತು ಆಂಟೆನಾವನ್ನು ಹಿಂಬದಿಯ ಕವರ್‌ನಲ್ಲಿ ಅಳವಡಿಸಲಾಗಿದೆ ಎಂದುವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

'ಪಾಸ್‌ಪೋರ್ಟ್‌ನ ನಿರ್ಣಾಯಕ ಮಾಹಿತಿಯನ್ನು ಅದರ ಡೇಟಾ ಪುಟದಲ್ಲಿ ಮುದ್ರಿಸಲಾಗುತ್ತದೆ ಮತ್ತು ಚಿಪ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಡಾಕ್ಯುಮೆಂಟ್ ಮತ್ತು ಚಿಪ್‌ನ ಗುಣಲಕ್ಷಣಗಳನ್ನು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಡಾಕ್ಯುಮೆಂಟ್ 9303 ರಲ್ಲಿ ನಿರ್ದಿಷ್ಟಪಡಿಸಲಾಗಿದೆ,' ಮುರಳೀಧರನ್ ಹೇಳಿದರು. ಇ-ಪಾಸ್‌ಪೋರ್ಟ್‌ಗಳ ವಿತರಣೆಯ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಾಂತ್ರಿಕ ಜವಾಬ್ದಾರಿಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ (ಎನ್‌ಐಸಿ) ವಹಿಸಿದೆ ಎಂದು ತಿಳಿಸಿದರು. 

ನಾಸಿಕ್‌ನ ಇಂಡಿಯಾ ಸೆಕ್ಯುರಿಟಿ ಪ್ರೆಸ್‌ನಿಂದ ಇ-ಪಾಸ್‌ಪೋರ್ಟ್‌ಗಳನ್ನು ತಯಾರಿಸಲಾಗುವುದು, ಇದು 4.5 ಕೋರ್ ಐಸಿಎಒ-ಕಂಪ್ಲೈಂಟ್ ಎಲೆಕ್ಟ್ರಾನಿಕ್ ಚಿಪ್‌ಗಳನ್ನು ಅದರ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಸಂಗ್ರಹಿಸಲು ಲೆಟರ್ ಆಫ್ ಇಂಟೆಂಟ್ ನೀಡಿದೆ ಎಂದಿದ್ದಾರೆ. ಮಾದರಿ ಇ-ಪಾಸ್‌ಪೋರ್ಟ್‌ಗಳನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದೆ ಮತ್ತು ತಾಂತ್ರಿಕ ಪರಿಸರ ವ್ಯವಸ್ಥೆ ಮತ್ತು ಮೂಲಸೌಕರ್ಯವನ್ನು ಪೂರ್ಣಗೊಳಿಸುವುದರೊಂದಿಗೆ ಪೂರ್ಣ ಪ್ರಮಾಣದ ತಯಾರಿಕೆ ಮತ್ತು ವಿತರಣೆಯನ್ನು ಪ್ರಾರಂಭಿಸಲಾಗುವುದು ಎಂದು ವಿದೇಶಾಂಗ ಸಚಿವ (ರಾಜ್ಯ) ಸಂಸತ್ತಿನ ಮೇಲ್ಮನೆಗೆ ತಿಳಿಸಿದರು.

ಇ-ಪಾಸ್ ಪೋರ್ಟ್ ಹೇಗಿರಲಿದೆ? ವಿಶೇಷತೆಯೇನು?: ಪ್ರಸ್ತುತ ಭಾರತೀಯ ನಾಗರಿಕರಿಗೆ ವಿತರಿಸುತ್ತಿರೋ ಪಾಸ್ ಪೋರ್ಟ್ ಪುಸ್ತಕ (booklets)ರೂಪದಲ್ಲಿದೆ. ಇದನ್ನು  ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ನಿಗದಿಪಡಿಸಿರೋ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇ-ಪಾಸ್ ಪೋರ್ಟ್ ಅನ್ನು ಕೂಡ ಎರಡು ವಿಧದಲ್ಲಿ ವಿತರಿಸಲಾಗೋದು. ಒಂದು ಸಾಂಪ್ರದಾಯಿಕ ಪುಸ್ತಕ ರೂಪದಲ್ಲಿರೋ ಪಾಸ್ ಪೋರ್ಟ್ ಗೆ ಎಲೆಕ್ಟ್ರಾನಿಕ್ ಚಿಪ್ (electronic chip) ಅಳವಡಿಸೋದು.ಇದು ಪಾಸ್ ಪೋರ್ಟ್ ಪುಟ 2ರಲ್ಲಿರೋ ವೈಯಕ್ತಿಕ ಮಾಹಿತಿಗಳು ಹಾಗೂ ಡಿಜಿಟಲ್ ಸುರಕ್ಷೆ ವೈಶಿಷ್ಟ್ಯಗಳನ್ನು ಸಂಗ್ರಹಿಸಿರುತ್ತದೆ.

E-Passport: ಶೀಘ್ರದಲ್ಲಿಯೇ ಭಾರತದಲ್ಲಿ ಬರಲಿದೆ ಇ-ಪಾಸ್ ಪೋರ್ಟ್, ಏನಿದರ ವಿಶೇಷ?

ಈ ಡಿಜಿಟಲ್ ಸುರಕ್ಷತಾ ಗುಣಲಕ್ಷಣಗಳು 'ಡಿಜಿಟಲ್ ಸಹಿ' ಆಗಿದ್ದು, ಪ್ರತಿ ರಾಷ್ಟ್ರಕ್ಕೂ ವಿಶಿಷ್ಟವಾಗಿರುತ್ತವೆ.  ಎಲೆಕ್ಟ್ರಾನಿಕ್ ಮೈಕ್ರೋ ಪ್ರೊಸೇಸರ್ ಚಿಪ್ ಅಳವಡಿಸಿರೋ  20,000  ಇ-ಪಾಸ್ ಪೋರ್ಟ್ ಗಳನ್ನು ಭಾರತ ಪ್ರಾಯೋಗಿಕವಾಗಿ ಸರ್ಕಾರಿ ಹಾಗೂ ರಾಜತಾಂತ್ರಿಕ ಅಧಿಕಾರಿಗಳಿಗೆ ಈಗಾಗಲೇ  ವಿತರಿಸಿದೆ. ಇನ್ನೊಂದು ಸಂಪೂರ್ಣ ಡಿಜಿಟಲ್ ಪಾಸ್ ಪೋರ್ಟ್ ಆಗಿದ್ದು, ಅದನ್ನು ಮೊಬೈಲ್ ಫೋನ್ ನಲ್ಲೇ ಸಂರಕ್ಷಿಸಿಟ್ಟುಕೊಳ್ಳಬಹುದು. 

e-passports: ಯಾವೆಲ್ಲ ರಾಷ್ಟ್ರಗಳಲ್ಲಿ ಇ-ಪಾಸ್ ಪೋರ್ಟ್ ಜಾರಿಯಲ್ಲಿದೆ? ಭಾರತದಲ್ಲಿ ಯಾವಾಗ ಇದನ್ನು ಪರಿಚಯಿಸಲಾಗುತ್ತೆ?

ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO)ನೀಡಿರೋ ಮಾಹಿತಿ ಪ್ರಕಾರ ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಇ-ಪಾಸ್ ಪೋರ್ಟ್ ಬಳಕೆಯಲ್ಲಿದೆ. ಜಗತ್ತಿನಾದ್ಯಂತ  490 ಮಿಲಿಯನ್ ಗೂ ಅಧಿಕ ಇ-ಪಾಸ್ ಪೋರ್ಟ್ ಗಳು ಬಳಕೆಯಲ್ಲಿವೆ. ಭಾರತದ ನೆರೆಯ ರಾಷ್ಟ್ರ ನೇಪಾಳ 2021ರ ನವೆಂಬರ್ ನಿಂದ ತನ್ನ ನಾಗರಿಕರಿಗೆ ಇ-ಪಾಸ್ ಪೋರ್ಟ್ ವಿತರಿಸಲು ಪ್ರಾರಂಭಿಸಿದೆ. ಇನ್ನು ಬಾಂಗ್ಲಾದೇಶ ಇ-ಪಾಸ್ ಪೋರ್ಟ್ ವಿತರಣೆ ಉದ್ದೇಶದಿಂದ ಹಳೆಯ ಮಾದರಿಯ ಪಾಸ್ ಪೋರ್ಟ್ ವಿತರಣೆಯನ್ನು ಸ್ಥಗಿತಗೊಳಿಸಿದೆ.  

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!