BBMP Budget: ಪಾಲಿಕೆ ಬಜೆಟ್‌ ಶೇ.85 ಅನುಷ್ಠಾನ: ದಾಖಲೆ..!

Published : Apr 07, 2022, 08:53 AM IST
BBMP Budget: ಪಾಲಿಕೆ ಬಜೆಟ್‌ ಶೇ.85 ಅನುಷ್ಠಾನ: ದಾಖಲೆ..!

ಸಾರಾಂಶ

*  10,294 ಕೋಟಿಯಲ್ಲಿ .8,799 ಕೋಟಿ ವೆಚ್ಚ *  ಜನಪ್ರತಿನಿಧಿಗಳ ಅವಧಿಯಲ್ಲಿನ ನ್ಯೂನತೆಗಳು *  ಹಣ ಇಲ್ಲದಿದ್ದರೂ ಯೋಜನೆ ಘೋಷಣೆ  

ಬೆಂಗಳೂರು(ಏ.07):  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಕಳೆದ 2021-22ನೇ ಸಾಲಿನಲ್ಲಿ ಮಂಡಿಸಲಾದ ಆಯವ್ಯಯದಲ್ಲಿ ಘೋಷಿಸಿದ ವಿವಿಧ ಯೋಜನೆ, ಕಾರ್ಯಕ್ರಮಗಳು ದಾಖಲೆ ಪ್ರಮಾಣದಲ್ಲಿ ಅನುಷ್ಠಾನಗೊಂಡಿವೆ ಎಂದು ಪಾಲಿಕೆ ಹಣಕಾಸು ವಿಭಾಗ ತಿಳಿಸಿದೆ.

ಕಳೆದ ಬಾರಿ 9286.80 ಕೋಟಿ ವೆಚ್ಚದ ಆಯವ್ಯಯವನ್ನು ಮಂಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿತ್ತು. ರಾಜ್ಯ ಸರ್ಕಾರ(Government of Karnataka) ಬಜೆಟ್‌(Budget) ಪರಿಷ್ಕರಿಸಿ .10,294.80 ಕೋಟಿಗೆ ಏರಿಕೆ ಮಾಡಿ ಅನುಮೋದನೆ ನೀಡಿತ್ತು. ಆರ್ಥಿಕ ವರ್ಷದ ಅಂತ್ಯಕ್ಕೆ ಬಿಬಿಎಂಪಿ .8,799.28 ಕೋಟಿ ವೆಚ್ಚ (ಶೇ.85) ಅನುಷ್ಠಾನ ಮಾಡಲಾಗಿದೆ. ಜನಪ್ರತಿನಿಧಿಗಳ ಆಡಳಿತ ಅವಧಿಯಲ್ಲಿಯೂ ಸಹ ಈ ಪ್ರಮಾಣದ ಅನುಷ್ಠಾನ ಈ ಹಿಂದೆ ಆಗಿಲ್ಲ ಎನ್ನಲಾಗಿದೆ.

BBMP Budget: ನಿರೀಕ್ಷಿತ ಸುಧಾರಣೆ ಇಲ್ಲ.. ಬಿಬಿಎಂಪಿ ಬಜೆಟ್‌ಗೆ NBF ಪ್ರತಿಕ್ರಿಯೆ

ಪಾಲಿಕೆಯಲ್ಲಿ ಜನ ಪ್ರತಿನಿಧಿಗಳ ಆಡಳಿತ ಅವಧಿಯಲ್ಲಿ ಬಿಬಿಎಂಪಿಗೆ ವಾರ್ಷಿಕವಾಗಿ ಬರುವ ಆದಾಯಕ್ಕಿಂತ ಅಧಿಕ ಗಾತ್ರದ ಬಜೆಟ್‌ ಮಂಡನೆ ಮಾಡಲಾಗುತ್ತಿತ್ತು. ಇದರಿಂದಾಗಿ ಪ್ರತಿ ಆರ್ಥಿಕ ವರ್ಷ ಪೂರ್ಣಗೊಂಡ ನಂತರ ಮಂಡಿಸಲಾದ ಬಜೆಟ್‌ನಲ್ಲಿ ಕೇವಲ ಶೇ.60ರಷ್ಟು ಮಾತ್ರ ಅನುಷ್ಠಾನಗೊಳ್ಳುತ್ತಿತ್ತು. ಆದರೆ ಉಳಿದ ಯೋಜನೆಗಳು ಅನುಷ್ಠಾನ ಆಗುತ್ತಿರಲಿಲ್ಲ. ಜತೆಗೆ, ಪಾಲಿಕೆಗೆ ಹೆಚ್ಚುವರಿಯಾಗಿ 2ರಿಂದ 4 ಸಾವಿರ ಕೋಟಿ ಆರ್ಥಿಕ ಹೊರೆ ಬೀಳುತ್ತಿತ್ತು.

ಆರೋಗ್ಯಕ್ಕೆ ಹೆಚ್ಚು ವೆಚ್ಚ

ಕಳೆದ 2021-22ನೇ ಸಾಲಿನ ಬಜೆಟ್‌ನಲ್ಲಿ ಸಾರ್ವಜನಿಕ ಆರೋಗ್ಯ (ಸಾಮಾನ್ಯ) ವಿಭಾಗಕ್ಕೆ .252.43 ಕೋಟಿ ಹಾಗೂ ಸಾರ್ವಜನಿಕ ಆರೋಗ್ಯ (ವೈದ್ಯಕೀಯ) ವಿಭಾಗಕ್ಕೆ .84.20 ಕೋಟಿ ಸೇರಿದಂತೆ .336.63 ಕೋಟಿ ಅನುದಾನ ನೀಡಲಾಗಿತ್ತು. ಕೋವಿಡ್‌ ಸಾಂಕ್ರಾಮಿಕ ರೋಗ ನಿರ್ವಹಣೆ ಮತ್ತು ನಿಯಂತ್ರಣ ಕಾರ್ಯಕ್ರಮಗಳು ಹಾಗೂ ಸರ್ಕಾರ ಘೋಷಣೆ ಮಾಡಿದ ಕೋವಿಡ್‌ ಸಾವು ಪರಿಹಾರ ವಿತರಣೆ ಕಾರ್ಯಕ್ರಮಗಳು ಸೇರಿ ಬರೋಬ್ಬರಿ .775 ಕೋಟಿ ಖರ್ಚು ಮಾಡಲಾಗಿದೆ. ಪಾಲಿಕೆ ಅನುದಾನ(Grants) ಮೀಸಲಿಟ್ಟಿದ್ದಕ್ಕಿಂತ ಶೇ.120 ಪಟ್ಟು ಹಣ ಪಾವತಿ ಆಗಿದೆ.

Bengaluru: ಅನಿರೀಕ್ಷಿತ ಆದಾಯ ನಂಬಿದ BBMP ಬಜೆಟ್‌..!

ಸಾರ್ವಜನಿಕ ಕಾಮಗಾರಿಯಲ್ಲಿ ಹಿನ್ನೆಡೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಕಾಮಗಾರಿಗೆ 2021-22ನೇ ಸಾಲಿನಲ್ಲಿ ಒಟ್ಟು .5,941 ಕೋಟಿ ಮೀಸಲಿಡಲಾಗಿತ್ತು. ಆದರೆ, ಕೋವಿಡ್‌ ಮತ್ತು ಇತರೆ ಕಾರಣಗಳಿಂದ ಆರ್ಥಿಕ ಸಂಕಷ್ಟದ ಹಿನ್ನೆಲೆ ಕೇವಲ .4,830 ಕೋಟಿ ವೆಚ್ಚ ಮಾಡಲಾಗಿದೆ. ಸಾಮಾಜಿಕ ಕಲ್ಯಾಣ ಕಾರ್ಯಕ್ರಮಕ್ಕೆ ಮೀಸಲಿಟ್ಟ.460 ಕೋಟಿ ಪೈಕಿ .205 ಕೋಟಿ (ಶೇ.44) ಖರ್ಚು ಮಾಡಲಾಗಿದೆ. ಘನತ್ಯಾಜ್ಯ ವಿಭಾಗಕ್ಕೆ ಬರೊಬ್ಬರಿ .1,643.57 ಕೋಟಿ ಖರ್ಚು ಮಾಡಿದ್ದು, ಇದು ಒಟ್ಟಾರೆ ಬಜೆಟ್‌ನ ಶೇ.18 ವೆಚ್ಚವಾಗಿದೆ. ಆದರೆ, ಘನತ್ಯಾಜ್ಯ ವಿಭಾಗದಿಂದ ಪಾಲಿಕೆಗೆ ಕೇವಲ .115 ಕೋಟಿ ಮಾತ್ರ ಆದಾಯ ಸ್ವೀಕೃತಿಯಾಗಿದೆ.

ಕಳೆದ 4 ವರ್ಷಗಳ ಬಜೆಟ್‌ ಅನುಷ್ಠಾನ ವಿವರ (ಕೋಟಿ ರು.)

ವರ್ಷ ಬಜೆಟ್‌ ಗಾತ್ರ ಅನುಷ್ಠಾನ ಶೇಕಡ

2018-19 .10,132 .7,380 72.83
2019-20 .11,649 .7,066 60.65
2020-21 .10,715 .6,795 63.41
2021-22 .10,294 .8,799 85.47

ಬಿಬಿಎಂಪಿ ಬಜೆಟ್‌ ಹಿಂಪಡೆಯಿರಿ ಇಲ್ಲವೇ ಹೊಸದಾಗಿ ಮಂಡಿಸಿ: ರಾಮಲಿಂಗಾ ರೆಡ್ಡಿ

ಬೆಂಗಳೂರು: ರಾತ್ರೋರಾತ್ರಿ ಬಿಬಿಎಂಪಿ ಬಜೆಟ್‌ ಮಂಡಿಸಿರುವುದು ಪಾಲಿಕೆ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿದೆ. ಕಳೆದ ವರ್ಷ ಕೋವಿಡ್‌(Covid-19) ಇದ್ದರೂ ಆನ್‌ಲೈನ್‌ ಮೂಲಕ ಬಜೆಟ್‌ ಮಂಡಿಸಲಾಗಿತ್ತು. ಪಾಲಿಕೆ ಸದಸ್ಯರು, ಶಾಸಕರು ಚರ್ಚೆ ಮಾಡಿದ್ದರು. ಆದರೆ ಈ ಬಾರಿ ಅದೂ ಆಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ(Ramalinga Reddy) ಆಕ್ರೋಶ ವ್ಯಕ್ತಪಡಿಸಿದರು.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!