
ನವದೆಹಲಿ (ಜ.1): ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಯೋಜನೆಯಾದ ಜಲ್‌ಜೀವನ್ ವಿಷನ್ ಯೋಜನೆಯನ್ನು 2028ರವರೆಗೂ ವಿಸ್ತರಣೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರೊಂದಿಗೆ ರಾಜ್ಯಗಳಿಗೆ ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯಕ್ಕಾಗಿ 50 ವರ್ಷಗಳ ಬಡ್ಡಿರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ಘೋಷಣೆ ಮಾಡಿದ್ದಾರ.ನಗರಗಳನ್ನು ಬೆಳವಣಿಗೆಯ ಕೇಂದ್ರಗಳನ್ನಾಗಿ ಮಾಡುವ ಪ್ರಸ್ತಾಪಗಳನ್ನು ಕಾರ್ಯಗತಗೊಳಿಸಲು ಸರ್ಕಾರವು 1 ಲಕ್ಷ ಕೋಟಿ ರೂ.ಗಳ ನಗರ ಸವಾಲು ನಿಧಿಯನ್ನು ಸ್ಥಾಪನೆ ಮಾಡಲಿದೆ ಎಂದು ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
Union Budget 2025 Live Updates: ಐಐಟಿ ವಿಸ್ತರಣೆ, ಹೆಚ್ಚುವರಿ 5 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ
ಮೂಲಸೌಕರ್ಯ ಸಂಬಂಧಿತ ಪ್ರತಿಯೊಂದು ಸಚಿವಾಲಯವು 3 ವರ್ಷಗಳ ಪಿಪಿಪಿ ಮೂಲಸೌಕರ್ಯ ಯೋಜನೆಗಳನ್ನು ರೂಪಿಸಲಿದೆ. ಹೊಸ ಯೋಜನೆಗಳಲ್ಲಿ 10 ಲಕ್ಷ ಕೋಟಿ ಯೂರೋ ಬಂಡವಾಳವನ್ನು ಮರುಪಡೆಯಲು 2025-30ರ ಎರಡನೇ ಆಸ್ತಿ ಹಣಗಳಿಸುವ ಯೋಜನೆಯನ್ನು ಘೋಷಿಸಲಾಗುವುದು. ಬ್ಯಾಂಕಬಲ್ ಯೋಜನೆಗಳಲ್ಲಿ 25% ರಷ್ಟು ಹಣಕಾಸು, 50% ರಷ್ಟು ಬಾಂಡ್‌ಗಳು, ಬ್ಯಾಂಕ್‌ಗಳು ಮತ್ತು ಪಿಪಿಪಿಯಿಂದ ಹಣವನ್ನು ಒದಗಿಸಬೇಕು. "ಹೆಚ್ಚಿನ ಒಟ್ಟು ವೆಚ್ಚದೊಂದಿಗೆ ಜಲ ಜೀವನ್ ಮಿಷನ್ ಅನ್ನು 2028 ರವರೆಗೆ ವಿಸ್ತರಿಸುವುದಾಗಿ ಘೋಷಿಸಲು ನನಗೆ ಸಂತೋಷವಾಗಿದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಾರೆ.
Budget 2025: ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಏರಿಕೆ, ಪ್ರಧಾನಮಂತ್ರಿ ಧನಧಾನ್ಯ ಯೋಜನೆ ಘೋಷಣೆ!
ಬಿಹಾರದಲ್ಲಿ ಗ್ರೀನ್‌ಫೀಲ್ಡ್ ಏರ್‌ಪೋರ್ಟ್: ಉಡಾನ್ 88 ವಿಮಾನ ನಿಲ್ದಾಣಗಳನ್ನು 619 ಮಾರ್ಗಗಳೊಂದಿಗೆ ಸಂಪರ್ಕಿಸುವ 1.5 ಕೋಟಿ ಮಧ್ಯಮ ವರ್ಗದ ಜನರಿಗೆ ಅವಕಾಶ ನೀಡಿದೆ. 120 ಹೊಸ ತಾಣಗಳಿಗೆ ಮಾರ್ಪಡಿಸಿದ ಉಡಾನ್ ಅನ್ನು ಪ್ರಾರಂಭಿಸಲಾಗುವುದು. 4 ಕೋಟಿ ಹೆಚ್ಚುವರಿ ಪ್ರಯಾಣಿಕರಿಗಾಗಿ ಬಿಹಾರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.