
ನವದೆಹಲಿ (ಫೆ.1): ಬಜೆಟ್‌ನ ಆರಂಭದಲ್ಲಿಯೇ ಕೃಷಿ ವಲಯವನ್ನು ನೆನಪಿಸಿಕೊಂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತೆರಿಗೆ, ಹಣಕಾಸು ವಲಯ, ವಿದ್ಯುತ್ ವಲಯ, ನಗರಾಭಿವೃದ್ಧಿ, ಗಣಿಗಾರಿಕೆ, ನಿಯಂತ್ರಕ ಸುಧಾರಣೆಗಳು ಸೇರಿದಂತೆ 6 ಕ್ಷೇತ್ರಗಳಲ್ಲಿ 'ಪರಿವರ್ತನಾತ್ಮಕ' ಸುಧಾರಣೆಗಳ ಗುರಿಯನ್ನು ಬಜೆಟ್ ಹೊಂದಿದೆ ಎಂದು ಹೇಳಿದ್ದಾರೆ. ಕೃಷಿ ಎನ್ನುವುದು ಭಾರತದ ಅಭಿವೃದ್ಧಿಯ ಮೊದಲ ಇಂಜಿನ್ ಎಂದು ಹೇಳಿದ ಅವರು, ಪ್ರಧಾನಮಂತ್ರಿ ಧನಧಾನ್ಯ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸುವ ಯೋಜನೆಯಲ್ಲಿ ತೊಗರಿ, ಉದ್ದು, ಮಸೂರ್ ಬೇಳೆಗಳಿಗೆ ವಿಶೇಷ ಗಮನ ನೀಡಲಾಗುವುದು. ಧನ್ ಧಾನ್ಯ ಯೋಜನೆಯ ಭಾಗವಾಗಿ ರೈತರಿಂದ ನಾಫೆಡ್ ಮತ್ತು ಎನ್‌ಸಿಸಿಎಫ್ ದ್ವಿದಳ ಧಾನ್ಯಗಳನ್ನು ಸಂಗ್ರಹಿಸಲಿವೆ ಎಂದು ಮಾಹಿತಿ ನೀಡಿದರು. ಅದರೊಂದಿಗೆ ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪನೆಯಾಗಲಿದ್ದ, ಹೆಚ್ಚಿನ ಇಳುವರಿ ನೀಡುವ ಬೀಜಗಳ ಮೇಲಿನ ರಾಷ್ಟ್ರೀಯ ಮಿಷನ್ ಆರಂಭವಾಗಲಿದೆ ಎಂದು ತಿಳಿಸಿದರು.
ಯೂರಿಯಾ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲು ಅಸ್ಸಾಂನಲ್ಲಿ ಯೂರಿಯಾ ಸ್ಥಾವರವನ್ನು ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಅಸ್ಸಾಂನ ನಮ್ರಪ್‌ನಲ್ಲಿ ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಸ್ಥಾವರವನ್ನು ಸರ್ಕಾರ ಸ್ಥಾಪಿಸಲಿದೆ. ಅದರೊಂದಿಗೆ ದೇಶದ ಪೂರ್ವ ಪ್ರದೇಶದಲ್ಲಿ 3 ನಿಷ್ಕ್ರಿಯ ಯೂರಿಯಾ ಸ್ಥಾವರಗಳನ್ನು ಮತ್ತೆ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು. ಗುಣಮಟ್ಟದ ಹತ್ತಿಗಾಗಿ ಹೆಚ್ಚುವರಿ ಉದ್ದವಾದ ಪ್ರಧಾನ ಹತ್ತಿ ಪ್ರಭೇದಗಳಿಗೆ ಸಹಾಯ ಮಾಡಲು ಐದು ವರ್ಷಗಳ ಕಾಲ ಹತ್ತಿ ಉತ್ಪಾದಕತೆಗಾಗಿ ಮಿಷನ್ ಘೋಷಣೆಯಾಗಿದೆ. ಇದು ಭಾರತದ ಸಾಂಪ್ರದಾಯಿಕ ಜವಳಿ ವಲಯವನ್ನು ಪುನರುಜ್ಜೀವನಗೊಳಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಈಗಾಗಲೇ ಇರುವ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡುವ ಘೋಷಣೆಯನ್ನು ಕೆಂದ್ರ ಬಜೆಟ್‌ನಲ್ಲಿ ಮಾಡಲಾಗಿದೆ. ಬಿಹಾರದಲ್ಲಿ ಆಹಾರ ಸಂಸ್ಕರಣೆಗಾಗಿ ರಾಷ್ಟ್ರೀಯ ಉತ್ಪಾದನಾ ಮಿಷನ್ ಅನ್ನು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.
Union Budget 2025 Live Updates: ಸಿರಿ ಧಾನ್ಯಗಳ ಬೆಳೆಗೆ ವಿಶೇಷ ಆದ್ಯತೆ
ಕೃಷಿ ಕ್ಷೇತ್ರದ ಕುರಿತು ಹಣಕಾಸು ಸಚಿವರ ಭಾಷಣ
- 100 ಕಡಿಮೆ ಉತ್ಪಾದಕತೆ ಜಿಲ್ಲೆಗಳ ಮೇಲೆ ಕೇಂದ್ರೀಕರಿಸಲಿರುವ ಧನ ಧಾನ್ಯ ಕೃಷಿ ಯೋಜನೆ
- 1.7 ಕೋಟಿ ರೈತರಿಗೆ ಸಹಾಯ ಮಾಡುವ ಕೃಷಿ ಕಾರ್ಯಕ್ರಮ
- ಕಡಿಮೆ ಉತ್ಪಾದಕತೆ ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುವ ಕೃಷಿ ಯೋಜನೆ
- ಖಾದ್ಯ ತೈಲ ಮತ್ತು ಬೀಜಗಳ ರಾಷ್ಟ್ರೀಯ ಮಿಷನ್ ಈ ವಲಯದಲ್ಲಿ ಆತ್ಮನಿರ್ಭರತೆಯನ್ನು ಗುರಿಯಾಗಿರಿಸಿಕೊಂಡಿದೆ
- ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರವಾಗಲು 6 ವರ್ಷಗಳ ಮಿಷನ್ ಅನ್ನು ಪ್ರಾರಂಭಿಸಲಿದೆ
- ಮುಂದಿನ 4 ವರ್ಷಗಳಲ್ಲಿ ತುರ್, ಉರಾದ್, ಮಸೂರ್ ಅನ್ನು ಸಂಗ್ರಹಿಸಲು ಕೇಂದ್ರ ಸಂಸ್ಥೆಗಳು
- ಸಂಸ್ಕರಣೆ, ಮೌಲ್ಯವರ್ಧನೆಯನ್ನು ಸುಧಾರಿಸಲು ಬಿಹಾರದಲ್ಲಿ ಮಖಾನಾ ಮಂಡಳಿಯನ್ನು ರಚಿಸಲಾಗುವುದು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.