Union Budget 2024 ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು, 6.25 ಲಕ್ಷ ಕೋಟಿ ರೂಪಾಯಿ ಹಂಚಿಕೆ!

By Suvarna News  |  First Published Feb 1, 2024, 2:04 PM IST

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅತೀ ಹೆಚ್ಚಿನ ಮೊತ್ತ ಹಂಚಿಕೆ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇಕಡಾ 1.5 ರಷ್ಟು ಹೆಚ್ಚಳ ಮಾಡಲಾಗಿದೆ. ಬರೋಬ್ಬರಿ 6.25  ಲಕ್ಷ ಕೋಟಿ ರೂಪಾಯಿ ಹಣದಲ್ಲಿ ಗಡಿಯಲ್ಲಿ ಫೆನ್ಸಿಂಗ್, ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಬಾರಿಯ ರಕ್ಷಣಾ ಕ್ಷೇತ್ರಕ್ಕೆ ಬಜೆಟ್ ಕೊಡುಗೆ ಏನು?
 


ನವದೆಹಲಿ(ಫೆ.01) ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಪ್ರತಿ ಬಜೆಟ್‌ನಲ್ಲಿ ಮೀಸಲಿಟ್ಟಂತೆ ಈ ಬಾರಿಯೂ ರಕ್ಷಣಾ ಕ್ಷೇತ್ರಕ್ಕೆ ಗರಿಷ್ಠ ಮೊತ್ತ ಹಂಚಿಕೆ ಮಾಡಲಾಗಿದೆ. ಬರೋಬ್ಬರಿ 6.25 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ರಕ್ಷಣಾ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿದೆ. ಈ ಪೈಕಿ ಗಡಿಯಲ್ಲಿ ಉಗ್ರರ ಒಳನಸುಳುವಿಕೆ ತಡೆಯಲು ಫೆನ್ಸಿಂಗ್, ಗಡಿಯಲ್ಲಿನ ಸೈನಿಕರಿಗೆ ಮೂಲಭೂತ ಸೌರ್ಯ, ರಸ್ತೆ ಸೇರಿದಂತೆ ಹಲವು ಅಭಿವೃದ್ಧಿಗಳಿಗೆ ಒತ್ತು ನೀಡಲಾಗಿದೆ. ರಕ್ಷಣಾ ಕ್ಷೇತ್ರದ ಮೂಲಭೂತ ಸೌಕರ್ಯ ಅಭಿವದ್ಧಿಗೆ 1.63 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. 2023ರ ಸಾಲಿನಲ್ಲಿ 5.94  ಲಕ್ಷ ಕೋಟಿ ರೂಪಾಯಿ ರಕ್ಷಣಾ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿತ್ತು. ಈ ಬಾರಿ 6.25 ಲಕ್ಷ ಕೋಟಿ ನೀಡುವ ಮೂಲಕ ರಕ್ಷಣಾ ಕ್ಷೇತ್ರದ ಬಜೆಟನ್ನು ಶೇಕಡಾ 1.5 ರಷ್ಟು ಏರಿಕೆ ಮಾಡಲಾಗಿದೆ. ಬಜೆಟ್‌ನ ಒಟ್ಟಾರೆ ಹಣಕಾಸಿನಲ್ಲಿ ಶೇಕಡಾ 13.2 ರಷ್ಟು ಹಣವನ್ನು ರಕ್ಷಣಾ ಇಲಾಖೆಗೆ ಮೀಸಲಿಡಲಾಗಿದೆ. 

2023ರ ಅಕ್ಟೋಬರ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೇಶದ ರಕ್ಷಣಾ ಕ್ಷೇತ್ರವನ್ನು ಆಧುನಿಕರಣಗೊಳಿಸುವ ಕುರಿತು ಮಹತ್ವದ ಯೋಜನೆಗಳ ಮಾಹಿತಿ ನೀಡಿದ್ದರು. ಈ ಪೈಕಿ ಅತ್ಯಾಧುನಿಕ ಶಸ್ತ್ರಾಸ್ತ್ರ, ತಂತ್ರಜ್ಞಾನ ಬಳಕೆ ಕುರಿತು ರಾಜನಾಥ್ ಹೇಳಿದ್ದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ರಕ್ಷಣಾ ವ್ಯವಸ್ಥೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ತಂತ್ರಜ್ಞಾನದ ಬಳಕೆ ಅತೀ ಅವಶ್ಯಕವಾಗಿದೆ. ಆಧುನಿಕ ಜಗತ್ತಿನಲ್ಲಿ ಎದುರಾಗುವ ಸವಾಲು ಮೆಟ್ಟಿನಿಲ್ಲಲು ರಕ್ಷಣಾ ವ್ಯವಸ್ಥೆಯನ್ನ  ಬಲಪಡಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯ ಎಲ್ಲಾ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದರು. ಇದೀಗ ಕೇಂದ್ರ ಬಜೆಟ್‌ನಲ್ಲಿ 5.94 ಲಕ್ಷ ಕೋಟಿ ರೂಪಾಯಿ ಹಂಚಿಕೆ ಮಾಡುವ ಮೂಲಕ ಭಾರತದ ರಕ್ಷಣಾ ವ್ಯವಸ್ಥೆಯನ್ನು ಆಧುನಿಕರಣಗೊಳಿಸವು ಜೊತೆಗೆ ವಿಶ್ವದ ಬಲಿಷ್ಠ ಶಕ್ತಿಯಾಗಿ ರೂಪಿಸಲು ಯೋಜನೆ ರೂಪಿಸಲಾಗಿದೆ.

Tap to resize

Latest Videos

undefined

ಸಂಪೂರ್ಣ ಎಲೆಕ್ಟ್ರಿಕ್ ವಾಹನ ಗುರಿ, ಬಜೆಟ್‌ನಲ್ಲಿ ಇವಿ ಉತ್ಪಾದನೆ, ಚಾರ್ಜಿಂಗ್‌ಗೆ ಉತ್ತೇಜನ!

ರಕ್ಷಣಾ ಬಜೆಟ್ ಪ್ರಮುಖಾಂಶ:
ರಕ್ಷಣಾ ಬಜೆಟ್‌ನ ಒಟ್ಟು ಮೊತ್ತದಲ್ಲಿ ಶೇಕಡಾ 27.67 ರಷ್ಟು ಅಂದರೆ 1.72 ಲಕ್ಷ ಕೋಟಿ ರೂಪಾಯಿ ಬಂಡವಾಳ ಸ್ವಾಧೀನ ಹಂಚಿಕೆ ಮಾಡಲಾಗಿದೆ. ಇನ್ನು 92,088 ಕೋಟಿ ರೂಪಾಯಿ ಮೊತ್ತವನ್ನು ಸಂಬಳ ಹೊರತುಪಡಿಸಿ ಆದಾಯ ವೆಚ್ಚಕ್ಕಾಗಿ ಸಶಸ್ತ್ರ ಪಡೆಗಳ ಆದಾಯ ವೆಚ್ಚಕ್ಕಾಗಿ ಮೀಸಲಿಡಲಾಗಿದೆ. ಸೈನಿಕರು, ರಕ್ಷಣಾ ಪಡೆಗಳ ಪಿಂಚಣಿಗಾಗಿ 1.41 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. 

ಗಡಿ ಮೂಲಸೌಕರ್ಯ ಅಭಿವೃದ್ಧಿಪಡಿಲು 6,500 ಕೋಟಿ ರೂಪಾಯಿ, ಭಾರತೀಯ ಕೋಸ್ಟ್‌ಗಾರ್ಡ್‌ಗೆ 7,651.80 ಕೋಟಿ ರೂಪಾಯಿ ನೀಡಲಾಗಿದೆ. ರಕ್ಷಣಾ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಹೀಗಾಗಿ DRDOಗೆ 23,855 ಕೋಟಿ ರೂಪಾಯಿ ಮೀಸಲಿಡಲಾಗಿದೆ.  

click me!