Union Budget 2024: ಪಿಎಂ ಗತಿ ಶಕ್ತಿಗೆ ಇನ್ನಷ್ಟು ಪವರ್‌, ಮೂರು ಪ್ರಮುಖ ರೈಲ್ವೆ ಕಾರಿಡಾರ್‌!

By Santosh Naik  |  First Published Feb 1, 2024, 1:23 PM IST

ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಗೆ 2.55 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ. ಅದರೊಂದಿಗೆ ಮೂರು ಪ್ರಮುಖ ರೈಲ್ವೆ ಕಾರಿಡಾರ್‌ ಯೋಜನೆಗಳನ್ನು ಪ್ರಕಟ ಮಾಡಿದೆ.
 


ನವದೆಹಲಿ (ಫೆ.1): ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ 2.55 ಲಕ್ಷ ಕೋಟಿ ಹಣ ಮೀಸಲಿಟ್ಟಿದೆ. ಕಳೆದ ವರ್ಷ ರೈಲ್ವೆ ಇಲಾಖೆಗೆ ಮೀಸಲಿಟ್ಟಿದ್ದ ಹಣದ ಪೈಕಿ ಶೇ. 75ರಷ್ಟು ಹಣ ವಿನಿಯೋಗವಾಗಿದೆ. ಕೆಲವೊಂದು ವಿಭಾಗಗಳಲ್ಲಿ ರೈಲ್ವೆ ಕಾರಿಡಾರ್‌ಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರೊಂದಿಗೆ ಹೊಸ ವಂದೇ ಭಾರತ್‌ ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ ಆರಂಭಿಸಲಾಗಿದೆ. ಈ ಬಾರಿ ಮೂರು ಪ್ರಮುಖ ಆರ್ಥಿಕ ರೈಲ್ವೆ ಕಾರಿಡಾರ್‌ ಯೋಜನೆಗಳನ್ನು ಆರಂಭ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದಿದ್ದಾರೆ. ಇಂಧನ, ಖನಿಜ ಹಾಗೂ ಸಿಮೆಂಟ್‌ಗೆ ವಿಶೇಷವಾದ ರೈಲ್ವೆ ಕಾರಿಡಾರ್‌ಗಳು, ರೈಲ್ವೆ ಕಾರಿಡಾರ್‌ ಮೂಲಕ ಬಂದರುಗಳಿಗೆ ಸಂಪರ್ಕ.  ಹೆಚ್ಚಿನ ಸಂಚಾರ ದಟ್ಟಣೆಯ ಕಾರಿಡಾರ್‌ಗಳನ್ನು ಆರಂಭ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಬಹು-ಮಾದರಿ ಸಂಪರ್ಕವನ್ನು ಸಕ್ರಿಯಗೊಳಿಸಲು ಪಿಎಂ ಗತಿ ಶಕ್ತಿ ಅಡಿಯಲ್ಲಿ ಈ ಯೋಜನೆಗಳನ್ನು ಗುರುತಿಸಲಾಗಿದೆ. ಈ ಕಾರಿಡಾರ್‌ಗಳು ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುವುದು ಮಾತ್ರವಲ್ಲದೆ, ವೆಚ್ಚವನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಲಿದೆ.

ಇನ್ನು ಹೆಚ್ಚಿನ ದಟ್ಟಣೆಯ ಕಾರಿಡಾರ್‌ಗಳ ನಿರ್ಮಾಣದಿಂದ ಉಂಟಾಗುವ ಪ್ರಯಾಣಿಕರ ದಟ್ಟಣೆಯ ರೈಲುಗಳು ಕಾರ್ಯಾಚರಣೆ ಸುಧಾರಿಸಲು ಸಹಾಯ ಮಾಡಲಿದೆ. ಇದರ ಪರಿಣಾಮವಾಗಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಮತ್ತು ಪ್ರಯಾಣದ ವೇಗ ಗಣನೀಯವಾಗಿ ಸಿಗಲಿದೆ ಎಂದು ತಿಳಿಸಲಾಗಿದೆ.

Tap to resize

Latest Videos

undefined

ಈಗಾಗಲೇ ಇರುವ ಸರಕು ಸಾಗಣೆ ಕಾರಿಡಾರ್‌ಗಳ ಮೂಲಕ ಈ ಮೂರು ಆರ್ಥಿಕ ಕಾರಿಡಾರ್ ಕಾರ್ಯಕ್ರಮಗಳು ನಮ್ಮ ದೇಶದ ಜಿಡಿಪಿ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಮತ್ತು ಲಾಜಿಸ್ಟಿಕ್ ವೆಚ್ಚಗಳನ್ನು ಕಡಿಮೆ ಮಾಡುತ್ತದೆ. ಪ್ರಯಾಣಿಕರ ಸುರಕ್ಷತೆ, ಅನುಕೂಲತೆ ಮತ್ತು ಸೌಕರ್ಯವನ್ನು ಹೆಚ್ಚಿಸಲು ನಲವತ್ತು ಸಾವಿರ ಸಾಮಾನ್ಯ ರೈಲು ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಪರಿವರ್ತನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Live Blog ಕೇಂದ್ರ ಬಜೆಟ್‌ 2024: ಜನಪ್ರಿಯ ಬಜೆಟ್ ಅಲ್ಲ, ಜುಲೈನಲ್ಲಿ ವಿಕಸಿತ ಭಾರತದ ನೀಲಿನಕ್ಷೆ ಘೋಷಣೆ 

ಮೆಟ್ರೋ ಹಾಗೂ ನಮೋ ಭಾರತ್‌ ರೈಲುಗಳು: ದೇಶವು ಅತ್ಯಂತ ವೇಗವಾಗಿ ವಿಸ್ತರಣೆ ಆಗುತ್ತಿರುವ ಮಧ್ಯಮ ವರ್ಗವನ್ನು ಹೊಂದಿದ್ದೇವೆ ಮತ್ತು ತ್ವರಿತ ನಗರೀಕರಣವು ನಡೆಯುತ್ತಿದೆ. ಮೆಟ್ರೋ ರೈಲು ಮತ್ತು ನಮೋ ಭಾರತ್ ಅಗತ್ಯವಿರುವ ನಗರ ಪರಿವರ್ತನೆಗೆ ನೆರವು ನೀಡಲಿದೆ. ಸಾರಿಗೆ-ಆಧಾರಿತ ಅಭಿವೃದ್ಧಿಯನ್ನು ಕೇಂದ್ರೀಕರಿಸುವ ದೊಡ್ಡ ನಗರಗಳಲ್ಲಿ ಈ ವ್ಯವಸ್ಥೆಗಳ ವಿಸ್ತರಣೆಯನ್ನು ಕೇಂದ್ರ ಸರ್ಕಾರ ಬೆಂಬಲಿಸಲಿದೆ.

Union Budget 2024: ಪ್ರವಾಸೋದ್ಯಮಕ್ಕೆ ಶುರುವಾದ ಬೇಡಿಕೆ, ಲಕ್ಷದ್ವೀಪಕ್ಕೆ ಸರ್ಕಾರದ ಹೂಡಿಕೆ!

click me!