Union Budget 2024: ಮೂಲಸೌಕರ್ಯ ವಲಯಕ್ಕೆ 11.11 ಲಕ್ಷ ಕೋಟಿ: ಮಹಿಳಾ, ಮಕ್ಕಳ ಕಲ್ಯಾಣಕ್ಕೆ 26092 ಕೋಟಿ ಅನುದಾನ

By Kannadaprabha News  |  First Published Jul 24, 2024, 7:28 AM IST

ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಕೇಂದ್ರ ಸರ್ಕಾರ 1.5 ಲಕ್ಷ ಕೋಟಿ ರು. ದೀರ್ಘಾವಧಿ ಬಡ್ಡಿರಹಿತ ಸಾಲ ನೀಡಿಕೆಯನ್ನು ಮುಂದುವರಿಸಲಿದೆ. ಆದರೆ ಇದಕ್ಕೆ ರಾಜ್ಯಗಳು ಕೇಂದ್ರ ವಿಧಿಸಿದ ಕೆಲವು ಷರತ್ತುಗಳಿಗೆ ಬದ್ಧವಾಗಿರಬೇಕು. 


ಕಳೆದ 5 ವರ್ಷ ಹೆದ್ದಾರಿ ನಿರ್ಮಾಣದಂಥ ಮೂಲಸೌಕರ್ಯ ಯೋಜನೆಗಳ ಮೇಲೆ ಭಾರಿ ಹಣ ವ್ಯಯಿಸಿದ್ದ ಮೋದಿ ಸರ್ಕಾರ ಮುಂದಿನ 5 ವರ್ಷದಲ್ಲಿ ಅದಕ್ಕಿಂತ ಹೆಚ್ಚು ವೆಚ್ಚ ಮಾಡಲು ನಿರ್ಧರಿಸಿದೆ. ವಿಕಸಿತ ಭಾರತ ನಿರ್ಮಾಣಕ್ಕೆ ಮೂಲಸೌಕರ್ಯ ಅಗತ್ಯ ವಲಯವಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚು ಒತ್ತು ನೀಡಿದೆ.

ಹಣಕಾಸು ಸಚಿವರು 2024ರ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕಾಗಿ 11.11 ಲಕ್ಷ ಕೋಟಿ ರು. ಖರ್ಚು ಮಾಡುವುದಾಗಿ ಪ್ರಕಟಿಸಿದ್ದಾರೆ. ಇದು ಜಿಡಿಪಿಯ ಶೇ.3.4ರಷ್ಟಾಗುತ್ತದೆ. ಇದು ಕಳೆದ ವರ್ಷಗಳ ಪರಿಷ್ಕೃತ ಅಂದಾಜು 9.5 ಲಕ್ಷ ಕೋಟಿ ರು.ಗಿಂತ ಅಧಿಕವಾಗಿದೆ. ಹಿಂದಿನ ವರ್ಷದಲ್ಲಿ ಶೇ.3.2ರಷ್ಟು ಜಿಡಿಪಿ ಮೊತ್ತವನ್ನು ಮೂಲಸೌಕರ್ಯ ಬಂಡವಾಳ ವೆಚ್ಚವಾಗಿ ತೆಗೆದಿರಿಸಲಾಗಿತ್ತು. ಆದರೆ ಈ ಸಲ ಶೇ.3.4ರಷ್ಟು ತೆಗೆದಿರಿಸಲಾಗಿದ್ದು, 5 ವರ್ಷಗಳ ಹಿಂದೆ ಖರ್ಚು ಮಾಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು.

Latest Videos

undefined

Union Budget 2024: ಸ್ಟಾಂಡರ್ಡ್‌ ಡಿಡೆಕ್ಷನ್, ತೆರಿಗೆ ಸ್ಲ್ಯಾಬ್‌ ಏರಿಕೆ: 17500 ತೆರಿಗೆ ಉಳಿತಾಯ

ರಾಜ್ಯಗಳಿಗೆ 1.5 ಲಕ್ಷ ಕೋಟಿ ರು. ಸಾಲ: ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಕೇಂದ್ರ ಸರ್ಕಾರ 1.5 ಲಕ್ಷ ಕೋಟಿ ರು. ದೀರ್ಘಾವಧಿ ಬಡ್ಡಿರಹಿತ ಸಾಲ ನೀಡಿಕೆಯನ್ನು ಮುಂದುವರಿಸಲಿದೆ. ಆದರೆ ಇದಕ್ಕೆ ರಾಜ್ಯಗಳು ಕೇಂದ್ರ ವಿಧಿಸಿದ ಕೆಲವು ಷರತ್ತುಗಳಿಗೆ ಬದ್ಧವಾಗಿರಬೇಕು. ಇದೇ ವೇಳೆ ಖಾಸಗಿ ಕಂಪನಿಗಳಿಗೂ ಮೂಲಸೌಕರ್ಯ ವಲಯದಲ್ಲಿ ಹೂಡಿಕೆಗೆ ಉತ್ತೇಜನ ನೀಡಲಾಗುವುದು.

ಗ್ರಾಮ ಸಡಕ್‌ ಹಂತ -4 ಜಾರಿ: 25 ಸಾವಿರ ಹಳ್ಳಿಗಳಿಗೆ ಉತ್ತಮ ಸರ್ವಋತು ರಸ್ತೆ ಸಂಪರ್ಕ ಕಲ್ಪಿಸಲು ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಹಂತ-4ನ್ನು ಜಾರಿಗೊಳಿಸಲಾಗುವುದು. ಇದರ ಜತೆಗೆ ಬಿಹಾರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂನಂತ ಪ್ರಕೃತಿ ವಿಕೋಪ ಪೀಡಿತ ರಾಜ್ಯಗಳಲ್ಲಿ ರಸ್ತೆ, ಸೇತುವೆಯಂಥ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.

ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರಿಡಾರ್‌ಗಳು: ದೇಶದ ವಿವಿಧ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಶಿ ಮಾದರಿಯಲ್ಲಿ ಕಾರಿಡಾರ್‌ ನಿರ್ಮಾಣ ಸೇರಿ ಮಹತ್ವದ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಶ್ರಾದ್ಧ ಕರ್ಮಾದಿಗಳಿಗೆ ಹೆಸರುವಾಸಿಯಾದ ಬಿಹಾರದ ಗಯಾ ವಿಷ್ಣುಪಾದ ದೇವಾಲಯ ಸುತ್ತಮುತ್ತ ವಿಷ್ಣುಪಾದ ದೇವಾಲಯ ಕಾರಿಡಾರ್ ನಿರ್ಮಿಸಲಾಗುವುದು.

ಇನ್ನು ಬಿಹಾರದ ರಾಜಗೀರ್‌ ಹಿಂದೂ, ಬೌದ್ಧ ಹಾಗೂ ಜೈನ ಧರ್ಮೀಯರ ಯಾತ್ರಾ ಸ್ಥಳ. ಇಲ್ಲಿ 20ನೇ ತೀರ್ಥಂಕರ ಮುನಿಸುವ್ರತರ ಬಸದಿಯಿದೆ. ಸಪ್ತಋಷಿ ಬ್ರಹ್ಮಕುಂಡದ ಪವಿತ್ರ ನೀರಿದೆ. ಹೀಗಾಗಿ ರಾಜಗೀರ್‌ ಸಮಗ್ರ ಅಭವೃದ್ಧಿಗೆ ಕೇಂದ್ರ ಘೋಷಣೆ ಮಾಡಿದೆ. ನಳಂದ ವಿವಿ ಇರುವ ನಳಂದದ ಸಮಗ್ರ ಅಭಿವೃದ್ಧಿ ಹಾಗೂ ಒಡಿಶಾದ ವಿವಿಧ ಕ್ಷೇಗ್ರಗಳ ಅಭಿವೃದ್ಧಿಗೆ ಕ್ರಮ ಘೋಷಿಸಲಾಗಿದೆ.

ಮಹಿಳಾ, ಮಕ್ಕಳ ಕಲ್ಯಾಣಕ್ಕೆ 26092 ಕೋಟಿ ಅನುದಾನ: 2023-24ನೇ ಸಾಲಿನ ಬಜೆಟ್‌ಗೆ ಹೋಲಿಸಿದರೆ ಈ ಬಾರಿಯ ಬಜೆಟ್‌ನಲ್ಲಿ ಶೇ.2.5ರಷ್ಟು ಹೆಚ್ಚಿಗೆ ಅನುದಾನವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮೀಸಲಿರಿಸಲಾಗಿದೆ. ಪ್ರಸ್ತಕ ಸಾಲಿನ ಬಜೆಟ್‌ನಲ್ಲಿ 26,092 ಕೋಟಿ ಅನುದಾನ ಹಂಚಿಕೆಯಾಗಿದೆ. 2023-24ನೇ ಸಾಲಿನ ಬಜೆಟ್‌ನಲ್ಲಿ 25,448 ಕೋಟಿ ಅನುದಾನವನ್ನು ನೀಡಲಾಗಿತ್ತು. 

ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಏಳಿಗೆಗಾಗಿ, ವಿವಿಧ ಇಲಾಖೆಗಳಲ್ಲಿ ಅವರಿಗೆ ಪ್ರಯೋಜನವಾಗಬೇಕು ಎನ್ನುವ ಕಾರಣಕ್ಕಾಗಿ 3 ಲಕ್ಷ ಕೋಟಿ ರು. ಯೋಜನೆಯನ್ನು ವಿತ್ತ ಸಚಿವೆ ಘೋಷಿಸಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಸ್ತ್ರೀಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎನ್ನುವ ಕಾರಣಕ್ಕೆ ಉದ್ಯೋಗಿ ವಸತಿ ನಿಲಯಗಳನ್ನು ಸ್ಥಾಪಿಸುವುದಕ್ಕೆ ಮುಂದಾಗಿದೆ. ಮಹಿಳಾ ವಸತಿ ನಿಲಯ ,ಸ್ವಾಧರ್ ಗ್ರೇಹ್‌ ಮತ್ತು ಪ್ರಧಾನಿ ಮಂತ್ರಿ ಮಾತೃ ಯೋಜನೆಗೆ ಬಜೆಟ್‌ನಲ್ಲಿ 2.5ಸಾವಿರ ಕೋಟಿ ಹಣವನ್ನು ನೀಡಲಾಗಿದೆ.

ಸಕ್ಷಮ್ ಅಂಗನವಾಡಿ ಮತ್ತು ಪೋಷಣ್‌ 2.0 , ವಾತ್ಸಲ್ಯ ಮತ್ತು ಶಕ್ತಿ ಮಿಷನ್‌ ಯೋಜನೆಯಡಿಯಲ್ಲಿ ಅಪೌಷ್ಠಿಕತೆ ತಡೆಗಟ್ಟಲು, ಮಕ್ಕಳ ರಕ್ಷಣೆ ಮತ್ತು ಸ್ತ್ರೀ ಸ್ವಾವಲಂಬನೆಗೆ ಅನುದಾನ ನೀಡಲಾಗಿದೆ.ಸಕ್ಷಮ್ ಅಂಗನವಾಡಿ ಮತ್ತು ಪೋಷಣ್‌ 2.0 ಯೋಜನೆಗೆ 21 ಸಾವಿರ ಕೋಟಿ, ವಾತ್ಸಲ್ಯ ಯೋಜನೆಗೆ 1.4 ಸಾವಿರ ಕೋಟಿ ಹಾಗೂ ಶಕ್ತಿ ಮಿಷನ್‌ಗೆ 3.1 ಸಾವಿರ ಕೋಟಿ ರು. ಹಣ ನೀಡಲಾಗಿದೆ. ಉಳಿದಂತೆ ಬೇಟಿ ಬಚಾವೋ ಬೇಟಿ ಫಡಾವೋ ಯೋಜನೆ ಮತ್ತು ಮಹಿಳಾ ಸುರಕ್ಷತೆಗೆ 629 ಕೋಟಿ ರು ಅನುದಾನವನ್ನು ನೀಡಲಾಗಿದೆ.

Union Budget 2024 ಬಜೆಟ್ ಮಂಡನೆ ಬೆನ್ನಲ್ಲೇ ಕುಸಿದ ಷೇರು ಮಾರುಕಟ್ಟೆ, ಹೂಡಿಕೆದಾರರಿಗೆ ನಿರಾಸೆ!

ಇದರ ಜೊತೆಗೆ ಕೇಂದ್ರ ಆಯವ್ಯಯದಲ್ಲಿ ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ,ಕೇಂದ್ರ ದತ್ತು ನಿಧಿಗೆ ಬಜೆಟ್‌ನಲ್ಲಿ ಅನುದಾನವನ್ನು ಹೆಚ್ಚಿಸಲಾಗಿದೆ,ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಮಸ್ಥೆಗೆ 88.8 ಕೋಟಿ, ಸಂಸ್ಥೆ, ದತ್ತು ನಿಧಿಗೆ 11.4 ಕೋಟಿ ಅನುದಾನ ಹಂಚಿಕೆಯಾಗಿದೆ. ಉಳಿದಂತೆ ಯೂನಿಸೆಫ್‌ ಯೋಜನೆಗೆ 5.60 ಕೋಟಿ, ನಿರ್ಭಯಾ ನಿಧಿಗೆ 500 ಕೋಟಿ ರು. ನೀಡಲಾಗಿದೆ.

click me!