ಸರ್ಕಾರಿ ಆಡಳಿತಕ್ಕೆ ಚುರುಕು ನೀಡಲು ಹೊಸ ಯುಗದ ಸುಧಾರಣೆ: ಉದ್ಯೋಗ ಸೃಷ್ಟಿಗೆ ಹೊಸ ನೀತಿ ಜಾರಿಗೆ

Published : Jul 24, 2024, 09:43 AM IST
ಸರ್ಕಾರಿ ಆಡಳಿತಕ್ಕೆ ಚುರುಕು ನೀಡಲು ಹೊಸ ಯುಗದ ಸುಧಾರಣೆ: ಉದ್ಯೋಗ ಸೃಷ್ಟಿಗೆ ಹೊಸ ನೀತಿ ಜಾರಿಗೆ

ಸಾರಾಂಶ

ಹಾಲಿ ಸರ್ಕಾರವು ಕಾರ್ಮಿಕರಿಗೆ ಉದ್ಯೋಗ ಮತ್ತು ಕೌಶಲ್ಯಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಸೇವೆಗಳನ್ನು ನೀಡುತ್ತಿದೆ. ಇದರ ಭಾಗವಾಗಿರುವ ಇ- ಶ್ರಮ್‌ ಪೋರ್ಟಲ್‌ ಅನ್ನು ಇತರೆ ಪೋರ್ಟಲ್‌ನೊಂದಿಗೆ ಜೋಡಿಸುವ ಮೂಲಕ, ಎಲ್ಲಾ ಸೇವೆಗಳು ಒಂದೇ ಕಡೆಯಿಂದಲೂ ಸಿಗುವಂತೆ ಮಾಡಲಾಗುವುದು.

ಅಭಿವೃದ್ಧಿಗೆ ಅಡ್ಡಿಯುಂಟು ಮಾಡುವ ಕಾನೂನು ತಡೆ ನಿವಾರಿಸುವ, ಇನ್ನಷ್ಟು ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸುವ, ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪ್ರತಿಯೊಂದು ಹಂತದಲ್ಲೂ ಹೊಸ ಯುಗದ ಸುಧಾರಣೆಗಳನ್ನು ತರುವ ಭರವಸೆಯನ್ನು ಸರ್ಕಾರ ಬಜೆಟ್‌ನಲ್ಲಿ ನೀಡಿದೆ.

ರಾಜ್ಯ ಸರ್ಕಾರಗಳ ಮೂಲಕ ಭೂ ಆಧರಿತ ಸುಧಾರಣೆ
ನಗರ ಮತ್ತು ಗ್ರಾಮೀಣ ಎರಡೂ ಪ್ರದೇಶಗಳಲ್ಲಿ ಭೂಮಿ ಆಧರಿತ ಸುಧಾರಣೆ ಮತ್ತು ಕಾರ್ಯಗಳನ್ನು ಜಾರಿಗೊಳಿಸಲಾಗುವುದು. ಇವು 1) ಭೂ ಆಡಳಿತ, ಯೋಜನೆ ಮತ್ತು ನಿರ್ವಹಣೆ ಮತ್ತು 2) ನಗರ ಯೋಜನೆ, ಬಳಕೆ ಮತ್ತು ಕಟ್ಟಡ ಬೈಲಾಗಳನ್ನು ಒಳಗೊಂಡಿರಲಿದೆ. ಈ ಯೋಜನೆಗಳನ್ನು ಮುಂದಿನ 3 ವರ್ಷದಲ್ಲಿ ಪೂರ್ಣಗೊಳಿಸಲು ಹಣಕಾಸಿನ ನೆರವು ನೀಡಲಾಗುವುದು

Union Budget 2024 ಬಜೆಟ್ ಮಂಡನೆ ಬೆನ್ನಲ್ಲೇ ಕುಸಿದ ಷೇರು ಮಾರುಕಟ್ಟೆ, ಹೂಡಿಕೆದಾರರಿಗೆ ನಿರಾಸೆ!

ಗ್ರಾಮೀಣ ಭೂಮಿ ಆಧರಿತ ಕಾರ್ಯಗಳು
1) ವಿಶಷ್ಠ ಭೂಮಿ ಗುರುತಿನ ನಂಬರ್‌ (ಯುಎಲ್‌ಪಿಐಎನ್‌) ವಿತರಣೆ ಅಥವಾ ಎಲ್ಲಾ ಭೂಮಿಗೆ ಭೂ ಆಧಾರ್‌ ವಿತರಣೆ.
2) ಕ್ಯಾಡಸ್ಟ್ರಲ್‌ ನಕ್ಷೆಗಳ ಡಿಜಿಟಲೀಕರಣ
3) ಹಾಲಿ ಮಾಲೀಕತ್ವದ ಅನ್ವಯ ಉಪವಲಯಗಳ ಸರ್ವೇ ಮ್ಯಾಪ್‌ ಮಾಡುವುದು
4) ಭೂಮಿ ನೋಂದಣಿ ರಿಜಿಸ್ಟ್ರಿ ಸ್ಥಾಪನೆ
5) ರೈತರ ರಿಜಿಸ್ಟ್ರಿಯೊಂದಿಗೆ ಜೋಡಣೆ

ನಗರ ಭೂಮಿ ಸಂಬಂಧಿತ ಕಾರ್ಯಗಳು
1) ನಗರ ಪ್ರದೇಶದ ಎಲ್ಲಾ ಭೂಮಿಗಳ ದಾಖಲೆಯನ್ನು ಜಿಐಎಸ್‌ ಮ್ಯಾಪಿಂಗ್‌ ಮೂಲಕ ಡಿಜಿಟಲೀಕರಣಗೊಳಿಸಲಾಗುವುದು.
2) ಮಾಹಿತಿ ತಂತ್ರಜ್ಞಾನ ಆಧರಿತ ಆಸ್ತಿ ದಾಖಲೆ ಆಡಳಿತ, ಹೊಸ ಮಾಹಿತಿ ಸೇರ್ಪಡೆ ಮತ್ತು ತೆರಿಗೆ ಆಡಳಿತ ವ್ಯವಸ್ಥೆ ಜಾರಿ.

ಕಾರ್ಮಿಕ ಸಂಬಂಧಿ ಸುಧಾರಣೆಗಳು
ಹಾಲಿ ಸರ್ಕಾರವು ಕಾರ್ಮಿಕರಿಗೆ ಉದ್ಯೋಗ ಮತ್ತು ಕೌಶಲ್ಯಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಸೇವೆಗಳನ್ನು ನೀಡುತ್ತಿದೆ. ಇದರ ಭಾಗವಾಗಿರುವ ಇ- ಶ್ರಮ್‌ ಪೋರ್ಟಲ್‌ ಅನ್ನು ಇತರೆ ಪೋರ್ಟಲ್‌ನೊಂದಿಗೆ ಜೋಡಿಸುವ ಮೂಲಕ, ಎಲ್ಲಾ ಸೇವೆಗಳು ಒಂದೇ ಕಡೆಯಿಂದಲೂ ಸಿಗುವಂತೆ ಮಾಡಲಾಗುವುದು. ಈ ಮೂಲಕ ಕೌಶಲ್ಯದ ಬೇಡಿಕೆ, ಲಭ್ಯವಿರುವ ಉದ್ಯೋಗಿಗಳು, ಉದ್ಯೋಗಿಗಳು ಮತ್ತು ಉದ್ಯೋಗದಾತರ ನಡುವೆ ಸಂಪರ್ಕ. ಹೀಗೆ ಎಲ್ಲಾ ಸೇವೆಗಳು ಒಂದೇ ಕಡೆ ಲಭ್ಯವಾಗಲಿದೆ.

ಶ್ರಮ ಸುವಿಧಾ ಮತ್ತು ಸಮಾಧಾನ್‌ ಪೋರ್ಟಲ್‌
ಶ್ರಮ ಸುವಿಧಾ ಮತ್ತು ಸಮಾಧಾನ್‌ ಪೋರ್ಟಲ್‌ಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಮೂಲಕ ಉದ್ಯಮ ಮತ್ತು ವ್ಯಾಪಾರಿಗಳಿಗೆ ಅನುಸರಣೆಯನ್ನು ಇನ್ನಷ್ಟು ಸುಗಮಗೊಳಿಸಲಾಗುವುದು.

ಬಂಡವಾಳ, ಉದ್ಯಮಶೀಲತಾ ಸುಧಾರಣೆ
ಆರ್ಥಿಕತೆಯ ಹಣಕಾಸಿನ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಸರ್ಕಾರವು, ಈ ವಲಯದ ಗಾತ್ರ, ಸಾಮರ್ಥ್ಯ ಮತ್ತು ಕೌಶಲ್ಯದ ಬೇಡಿಕೆಗೆ ಅನುಗುಣವಾಗಿ ನೀಲನಕ್ಷೆ ಮತ್ತು ವ್ಯಾಹಾತ್ಮಕ ವರದಿ ಸಿದ್ಧಪಡಿಸಲಿದೆ. ಇದು ಮುಂದಿನ 5 ವರ್ಷಗಳ ಕಾರ್ಯಸೂಚಿ ರೂಪಿಸುವುದರ ಜೊತೆಗೆ ಸರ್ಕಾರ, ನಿಯಂತ್ರಕರು, ಹಣಕಾಸು ಸಂಸ್ಥೆಗಳಿಗೆ ಮಾರ್ಗಸೂಚಿಯಾಗಲಿದೆ.

ವೇರಿಯಬಲ್‌ ಕ್ಯಾಪಿಟಲ್‌ ಕಂಪನಿ ಚೌಕಟ್ಟು
ವಿಮಾನ, ಹಡಗು ಲೀಸ್‌ ಮೇಲೆ ಪಡೆಯಲು ಅಗತ್ಯವಾದ ಸಾಲದ ಸೌಲಭ್ಯವು ಸರಳ ರೀತಿಯಲ್ಲಿ ಲಭ್ಯವಾಗುವಂತೆ ಮಾಡಲು ಅಗತ್ಯ ಕಾಯ್ದೆ ರೂಪಿಸಲಾಗುವುದು. ವೇರಿಯಬಲ್‌ ಕಂಪನಿ ಚೌಕಟ್ಟಿನ ಮೂಲಕ ಖಾಸಗಿ ಬಂಡವಾಳ ಸ್ವೀಕರಿಸಲಾಗುವುದು.

ಎಫ್‌ಡಿಐ, ಸಾಗರೋತ್ತರ ಹೂಡಿಕೆ
ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಸಾಗರೋತ್ತರ ಹೂಡಿಕೆ ಸಂಬಂಧಿತ ನಿಯಮಗಳನ್ನು ಇನ್ನಷ್ಟು ಸರಳಗೊಳಿಸಲಾಗುವುದು. ವಿದೇಶಿ ಹೂಡಿಕೆ ವೇಳೆ ಭಾರತದ ರುಪಾಯಿ ಮೂಲಕ ಹೂಡಿಕೆಗೆ ಉತ್ತೇಜನ ನೀಡಲಾಗುವುದು.

ಎನ್‌ಪಿಎಸ್‌ ವಾತ್ಸಲ್ಯ
ಅಪ್ರಾಪ್ತ ಹೆಸರಲ್ಲಿ ಪೋಷಕರು ಅಥವಾ ಪಾಲಕರು ದೇಣಿಗೆ ನೀಡಲು ಅವಕಾಶ ಕಲ್ಪಿಸುವ ಎನ್‌ಪಿಎಸ್‌ ವಾತ್ಸಲ್ಯ ಯೋಜನೆಯನ್ನು ಶೀಘ್ರ ಜಾರಿಗೊಳಿಸಲಾಗುವುದು. ಒಮ್ಮೆ ಅಪ್ರಾಪ್ತರು ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ಈ ಖಾತೆಯನ್ನು ಸಾಮಾನ್ಯ ಎನ್‌ಪಿಎಸ್‌ ಖಾತೆಗೆ ಬದಲಾಯಿಸಿಕೊಳ್ಳಬಹುದು.

ಬಜೆಟ್‌ನಲ್ಲಿ ತೆರಿಗೆ ಏರಿಕೆನಾ? ಇಳಿಕೆನಾ? ಇಲ್ಲಿದೆ ಸಂಪೂರ್ಣ ಸ್ಪಷ್ಟ ಉತ್ತರ

ಉದ್ಯಮ ಸ್ನೇಹಿ ವಾತಾವರಣ
ಉದ್ಯಮ ಸ್ನೇಹಿ ವಾತಾವರಣವನ್ನು ಇನ್ನಷ್ಟು ಹೆಚ್ಚಿಸಲು ಈಗಾಗಲೇ ಸರ್ಕಾರ ಜನ ವಿಶ್ವಾಸ್‌ ಮಸೂದೆ 2.0 ಜಾರಿಗೆ ಮುಂದಾಗಿದೆ. ಇದರ ಜೊತೆಗೆ ರಾಜ್ಯಗಳಿಗೂ ಉದ್ಯಮ ಸುಧಾರಣೆ ಮತ್ತು ಡಿಜಿಟಲೀಕರಣ ಕ್ರಮಗಳನ್ನು ಜಾರಿಗೊಳಿಸಿದ್ದಕ್ಕಾಗಿ ಆರ್ಥಿಕ ಪ್ರೋತ್ಸಾಹಧನ ನೀಡಲಾಗುವುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!