
ಮನೆ ಕಟ್ಟಿ ನೋಡು, ಮದುವೆ (marriage) ಮಾಡಿ ನೋಡು ಎನ್ನುವ ಗಾದೆಯೇ ಇದೆ. ಈ ಎರಡೂ ಕೆಲಸ ಸುಲಭವಲ್ಲ. ಜೀವನದಲ್ಲಿ ಒಮ್ಮೆ ಬರುವ ಈ ಮದುವೆ ಸಂಭ್ರಮ ಅವಿಸ್ಮರಣೀಯವಾಗಿರಬೇಕು ಅಂತ ಎಲ್ಲರೂ ಬಯಸೋದು ತಪ್ಪೇನಿಲ್ಲ. ಕೆಲ ಬಾರಿ ಮದುವೆ ಸಮಯದಲ್ಲಿ ಅನಾಹುತ ಸಂಭವಿಸುತ್ತದೆ. ಅಂತ ಸಂದರ್ಭದಲ್ಲಿ ಸಮಸ್ಯೆ ಆಗ್ದಿರಲಿ ಎನ್ನುವ ಕಾರಣಕ್ಕೆ ಕೆಲ ವಿಮಾ ಕಂಪನಿ (Insurance company)ಗಳು ವಿವಾಹ ವಿಮೆಯ ಸೌಲಭ್ಯವನ್ನು ಒದಗಿಸುತ್ತವೆ. ವಿವಾಹ ವಿಮೆಯು ವೈಯಕ್ತಿಕ ಅಪಘಾತಗಳು, ಕಾರ್ಯಕ್ರಮ ರದ್ದತಿ ಮತ್ತು ಕಾರ್ಯಕ್ರಮದ ಸ್ಥಳಕ್ಕೆ ಹಾನಿ ಸೇರಿದಂತೆ ಇತರ ಘಟನೆಗಳನ್ನು ಒಳಗೊಳ್ಳುತ್ತದೆ. ನಾವಿಂದು ಮ್ಯಾರೇಜ್ ಇನ್ಶೂರೆನ್ಸ್ ಅಂದ್ರೆ ಏನು ಎಂಬುದನ್ನು ಹೇಳ್ತೇವೆ.
ಮದುವೆ ವಿಮೆ ಎಂದರೇನು? : ಇದು ವಿಶೇಷ ರೀತಿಯ ವಿಮೆ. ಮದುವೆಗೆ ಸಂಬಂಧಿಸಿದ ಆರ್ಥಿಕ ನಷ್ಟಗಳನ್ನು ಸರಿದೂಗಿಸಲು ಈ ವಿಮೆ ಅಗತ್ಯವಿದೆ. ಮದುವೆ ಸಮಯದಲ್ಲಿ ದುರಾದೃಷ್ಟಕರ ಘಟನೆ, ಅಪಘಾತ ಸಂಭವಿಸಿದಾಗ ಮದುವೆ ಸ್ಥಗಿತಗೊಳ್ಳುತ್ತದೆ. ಆದ್ರೆ ಮದುವೆಗಾಗಿ ಸಾಕಷ್ಟು ಹಣ ಈಗಾಗಲೇ ಖರ್ಚಾಗಿರುತ್ತದೆ. ಅಲಂಕಾರ, ಬೆಳಕು, ಸಂಗೀತ, ಅಡುಗೆ, ಅತಿಥಿ ವಸತಿ ಮತ್ತು ಸಾರಿಗೆಗೆ ಹಣ ವ್ಯರ್ಥವಾಗಿರುತ್ತದೆ. ಈ ಆರ್ಥಿಕ ನಷ್ಟವನ್ನು ವಿವಾಹ ವಿಮೆಯ ಮೂಲಕ ಸರಿದೂಗಿಸಬಹುದು.
ಕೇವಲ 1,000 ರೂಪಾಯಿ ಇದ್ದರೆ ಸಾಕು; ಕೊನೆಗಾಲದಲ್ಲಿ ಕೋಟಿಗಟ್ಟ
ಮದುವೆ ವಿಮೆ ಯಾವಾಗ ಸಿಗುತ್ತದೆ? : ವಿಮಾ ಕಂಪನಿಗಳು ತಮ್ಮದೇ ಆದ ಪಾಲಿಸಿಯನ್ನು ಹೊಂದಿವೆ. ವಿವಿಧ ಕಂಪನಿ ನೀತಿ- ನಿಯಮ ಭಿನ್ನವಾಗಿದೆ. ಮದುವೆಗೆ ಒಂದು ದಿನ ಮೊದಲು ಈ ವಿಮೆ ಖರೀದಿ ಮಾಡಬಹುದು. ಮದುವೆಗೆ 15 ದಿನ ಮೊದಲೂ ಈ ವಿಮೆ ಖರೀದಿ ಮಾಡಬಹುದು. ಮೆಹಂದಿ ಹಾಗೂ ಸಂಗೀತದ ವಿಮೆಗಳು 24 ಗಂಟೆ ಮೊದಲು ಲಭ್ಯವಾಗುತ್ತವೆ.
ಈ ಪಾಲಿಸಿ ತೆಗೆದುಕೊಳ್ಳಲು ಯಾರು ಅರ್ಹರು? : ವಧು, ವರ ಮಾತ್ರವಲ್ಲ ಮದುವೆ ವಿಮೆ ಪಾಲಿಸಿಯನ್ನು ಮದುವೆ ಆಯೋಜಕರು ಹಾಗೂ ವಧು – ವರರ ಪಾಲಕರು, ಕುಟುಂಬಸ್ಥರು ಖರೀದಿ ಮಾಡಬಹುದು.
ಯಾವೆಲ್ಲ ಕಂಪನಿ ವಿವಾಹ ವಿಮೆ ನೀಡುತ್ತದೆ? : ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್, ಫ್ಯೂಚರ್ ಜನರಲಿ, ಎಚ್ಡಿಎಫ್ಸಿ ಎರ್ಗೊ ಮತ್ತು ಐಸಿಐಸಿಐ ಲೊಂಬಾರ್ಡ್ ವಿವಾಹ ವಿಮಾ ಪಾಲಿಸಿ ನೀಡುತ್ತದೆ.
ಯಾವೆಲ್ಲ ಘಟನೆಗಳಿಗೆ ವಿಮೆ ಲಭ್ಯ? : ನೈಸರ್ಗಿಕ ವಿಕೋಪ, ಅನಾರೋಗ್ಯ, ಕುಟುಂಬ ಸದಸ್ಯರ ಸಾವಿನಿಂದ ಮದುವೆ ರದ್ದಾದರೆ ಅಥವಾ ಮುಂದೂಡಲ್ಪಟ್ಟರೆ, ವಿಮಾ ರಕ್ಷಣೆ ಲಭ್ಯವಿದೆ. ಮದುವೆ ಸಂದರ್ಭದಲ್ಲಿ ಅಡುಗೆಯವರು, ಟೆಂಟ್ ಹೌಸ್ ಮಾಲೀಕರು ಕೈ ಎತ್ತಿದಾಗ, ಬೇರೆಯವರನ್ನು ಸಂಪರ್ಕಿಸಬೇಕಾಗುತ್ತದೆ. ಅವರಿಗೆ ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ. ಆ ಸಂದರ್ಭದಲ್ಲೂ ವಿಮೆ ಲಭ್ಯವಿದೆ. ಮದುವೆಯ ದಿನದಂದು ವಧು ಅಥವಾ ವರ ಗಾಯಗೊಂಡರೆ ಅಥವಾ ಯಾವುದೇ ದೊಡ್ಡ ಅಪಘಾತ ಸಂಭವಿಸಿದರೆ ವಿಮಾ ರಕ್ಷಣೆ ಪಡೆಯಬಹುದು. ಮದುವೆ ಸ್ಥಳದಲ್ಲಿ ಯಾವುದೇ ಅಪಘಾತ ಸಂಭವಿಸಿದಲ್ಲಿ, ಬ್ಯಾಂಕ್ವೆಟ್ ಹಾಲ್ ಬುಕಿಂಗ್ ರದ್ದುಗೊಳಿಸಿದರೂ ವಿಮೆ ಹಣ ಸಿಗುತ್ತದೆ. ಮದುವೆ ಟೈಂನಲ್ಲಿ ಯಾವುದೇ ಆಭರಣ ಹಾನಿಗೊಳಗಾದರೆ ಅಥವಾ ಕಳೆದುಹೋದರೆ,ಫೋಟೋ ಗ್ರಾಫರ್ ಅಥವಾ ವಿಡಿಯೋಗ್ರಾಫರ್ ಸೇವೆ ಒದಗಿಸದೆ ಹೋದರೆ ಅದರಿಂದ ಉಂಟಾಗುವ ನಷ್ಟವನ್ನು ವಿಮೆಯಿಂದ ಸರಿದೂಗಿಸಿಕೊಳ್ಳಬಹುದು.
ಅಂಟಿಲಿಯಾ ಖಾಲಿ ಮಾಡ್ತಾರಾ ಅಂಬಾನಿ? 15 ಸಾವಿರ ಕೋಟಿ
ವಿಮಾ ಮೊತ್ತ ಎಷ್ಟು? : ವಿವಾಹ ಬಜೆಟ್ನ ಶೇಕಡಾ 1 ರಿಂದ ಶೇಕಡಾ 1.5 ರ ನಡುವೆ ಇರಬೇಕು. ಉದಾಹರಣೆಗೆ, ನಿಮ್ಮ ಮದುವೆಯ ಬಜೆಟ್ 20 ಲಕ್ಷ ರೂಪಾಯಿಗಳಾಗಿದ್ದರೆ, ನೀವು 20,000 ರಿಂದ 30,000 ರೂಪಾಯಿಗಳವರೆಗಿನ ವಿಮಾ ರಕ್ಷಣೆಯನ್ನು ತೆಗೆದುಕೊಳ್ಳಬೇಕು.
ಮದುವೆ ಸಂದರ್ಭದಲ್ಲಿ ಹಾನಿಯಾದ್ರೆ ಮೊದಲು ಪೊಲೀಸರಿಗೆ ತಿಳಿಸಿ, ಎಫ್ ಐಆರ್ ನಕಲನ್ನು ವಿಮಾ ಕಂಪನಿಗೆ ನೀಡಬೇಕಾಗುತ್ತದೆ. ಕೆಲ ಬಾರಿ ವಿಮಾ ಕಂಪನಿ ವಿಮೆ ಕ್ಲೈಮ್ ಮಾಡೋದನ್ನು ನಿರಾಕರಿಸುತ್ತದೆ. ನೀವು ವಿಮೆ ಪಾವತಿ ವೇಳೆ ಸರಿಯಾದ ಮಾಹಿತಿ ನೀಡಿಲ್ಲವೆಂದಾದ್ರೆ ನಿಮಗೆ ವಿಮೆ ಹಣ ಲಭ್ಯವಾಗುವುದಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.