ಆಮದಾಗುವ ಔಷಧಿಗಳಿಗೆ ಶೇ.100 ತೆರಿಗೆ ವಿಧಿಸಿದ ಟ್ರಂಪ್: ಭಾರತದ ಫಾರ್ಮಾ ಕಂಪನಿಗಳಿಗೆ ಸಂಕಷ್ಟ

Published : Sep 26, 2025, 09:36 AM IST
Trumps 100% Tariff on Imported Drugs

ಸಾರಾಂಶ

US drug import tariffs: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿದೇಶಗಳಿಂದ ಆಮದಾಗುವ ಔಷಧಿಗಳ ಮೇಲೆ ಶೇಕಡಾ 100ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಅಮೆರಿಕ ಮಾರುಕಟ್ಟೆಯನ್ನೇ ಹೆಚ್ಚು ಅವಲಂಬಿಸಿರುವ ಭಾರತದ ಫಾರ್ಮಾ ಕಂಪನಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ.

ಆಮದಾಗುವ ಔಷಧಿಗೆ ಶೇಕಡಾ 100 ತೆರಿಗೆ ಹೇರಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್‌: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಸಮರದಿಂದ ಭಾರತ ಈಗಾಗಲೇ ಸಂಕಷ್ಟಕ್ಕೀಡಾಗಿದೆ. ಈಗ ಟ್ರಂಪ್‌ ಅವರ ಮತ್ತೊಂದು ಘೋಷಣೆ ಭಾರತದದ ಫಾರ್ಮಾ ಕಂಪನಿಗಳಿಗೆ ತೀವ್ರ ಸಂಕಷ್ಟ ಉಂಟು ಮಾಡಲಿದೆ. ದೇಶಕ್ಕೆ ವಿದೇಶಗಳಿಂದ ಆಮದಾಗುತ್ತಿರುವ ಔಷಧಿಗಳಿಗೇ ಶೇಕಡಾ 100 ತೆರಿಗೆ ವಿಧಿಸುವುದಾಗಿ ಟ್ರಂಪ್ ಘೋಷಣೆ ಮಾಡಿದ್ದಾರೆ. ಇದು ಆಕ್ಟೋಬರ್ 1 ರಿಂದಲೇ ಜಾರಿಗೆ ಬರಲಿದೆ. ಟ್ರಂಪ್ ಈ ತೆರಿಗೆ ಯುದ್ಧದಿಂದಾಗಿ ಅಮೆರಿಕದೊಂದಿಗಿನ ವ್ಯಾಪಾರದ ಮೇಲೆ ಹೆಚ್ಚು ಅವಲಂಬಿತವಾದ ದೇಶೀಯ ಕೈಗಾರಿಕೆಗಳಲ್ಲಿ ಒಂದಾದ ಭಾರತದ ಔಷಧ ವಲಯದ ಮೇಲೆ ಇದು ವ್ಯಾಪಕ ಪರಿಣಾಮ ಬೀರಲಿದೆ.

ಅಕ್ಟೋಬರ್ 1, 2025 ರಿಂದ ನಾವು ಬ್ರಾಂಡೆಂಡ್ ಅಥವಾ ಪೇಟೆಂಟ್ ಪಡೆದ ಔಷಧ ಉತ್ಪನ್ನದ ಮೇಲೆ 100 ಪ್ರತಿಶತ ತೆರಿಗೆ ವಿಧಿಸುತ್ತೇವೆ. ಅಮೆರಿಕದಲ್ಲಿ ತನ್ನ ಔಷಧ ಉತ್ಪಾದನಾ ಘಟಕವನ್ನು ನಿರ್ಮಿಸದ ಯಾವುದೇ ಕಂಪನಿಗೂ ಈ ತೆರಿಗೆ ಅನ್ವಯವಾಗಲಿದೆ ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಹೇಳಿದ್ದಾರೆ. ಟ್ರಂಪ್ ಅವರ ಈ ಪೋಸ್ಟ್ ಟ್ರಂಪ್ ಆಗಸ್ಟ್‌ನಲ್ಲಿ ಆರಂಭಿಸಿದ ತಮ್ಮ ತೆರಿಗೆ ನೀತಿಯಿಂದ ಸ್ವಲ್ಪವೂ ಹಿಂದೆ ಸರಿದಿಲ್ಲ ಎಂಬುದು ಸ್ಪಷ್ಟವಾಗಿದೆ. ದೇಶೀಯವಾಗಿ ಉತ್ಪಾದನೆಯನ್ನು ಹೆಚ್ಚಿಸುವಾಗ ಸರ್ಕಾರದ ಬಜೆಟ್ ಕೊರತೆಯನ್ನು ಕಡಿಮೆ ಮಾಡಲು ಈ ತೆರಿಗೆಗಳು ಸಹಾಯ ಮಾಡುತ್ತವೆ ಎಂಬುದು ಟ್ರಂಪ್ ವಿಶ್ವಾಸವಾಗಿದೆ.

ಕಟ್ಟಡ ನಿರ್ಮಾಣವಾಗುತ್ತಿದೆ ಎಂಬುದನ್ನು ಫೌಂಡೇಶನ್ ಹಾಕುವುದರಿಂದ ಅಥವಾ ನಿರ್ಮಾಣ ಕಾರ್ಯದಿಂದ ಗುರುತಿಸಬಹುದು. ಆದ್ದರಿಂದ, ನಿರ್ಮಾಣ ಕಾರ್ಯ ಪ್ರಾರಂಭವಾದರೆ ಈ ಔಷಧೀಯ ಉತ್ಪನ್ನಗಳ ಮೇಲೆ ಯಾವುದೇ ಸುಂಕವಿರುವುದಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

ಟ್ರಂಪ್ ತಮ್ಮ ಇತ್ತೀಚಿನ ತೆರಿಗೆ ನಿಯಮದಂತೆ, ಅಡುಗೆಮನೆ ವಸ್ತುಗಳು ಮತ್ತು ಸ್ನಾನಗೃಹದ ವ್ಯಾನಿಟಿಗಳ ಆಮದಿನ ಮೇಲೆ ಶೇ 50 ರಷ್ಟು, ಸಜ್ಜುಗೊಳಿಸಿದ ಪೀಠೋಪಕರಣಗಳ ಮೇಲೆ ಶೇ 30 ರಷ್ಟು ಮತ್ತು ಭಾರೀ ಟ್ರಕ್‌ಗಳ ಮೇಲೆ ಶೇ 25 ರಷ್ಟು ಸುಂಕವನ್ನು ವಿಧಿಸಿದ್ದಾರೆ. ಟ್ರಂಪ್ ಸುಂಕಗಳಿಗೆ ಕಾನೂನು ಸಮರ್ಥನೆ ನೀಡದಿದ್ದರೂ, ರಾಷ್ಟ್ರೀಯ ಭದ್ರತೆ ಮತ್ತು ಇತರ ಕಾರಣಗಳಿಗಾಗಿ ತೆರಿಗೆಗಳು ಅಗತ್ಯವಿದೆ ಎಂದು ಹೇಳುವ ಮೂಲಕ ಅವರು ತಮ್ಮ ಮಿತಿಗಳನ್ನು ವಿಸ್ತರಿಸಿದ್ದಾರೆ.

ಭಾರತ ಮೇಲೆ ಪರಿಣಾಮ ಏನು?

ಭಾರತದ ಔಷಧೀಯ ಸರಕುಗಳಿಗೆ ಅಮೆರಿಕ ಭಾರತದ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ. ಹಣಕಾಸು ವರ್ಷ 2024 ರಲ್ಲಿ, ಭಾರತ 27.9 ಶತಕೋಟಿ ಡಾಲರ್‌ ಮೌಲ್ಯದ ಔಷಧವನ್ನು ವಿದೇಶಕ್ಕೆ ರಪ್ತು ಮಾಡಿದೆ. ಇದರಲ್ಲಿ, ಶೇಕಡಾ 31 ಅಥವಾ 8.7 ಶತಕೋಟಿ ಡಾಲರ್ ಅಂದರೆ 7,72,31 ಕೋಟಿ ಮೌಲ್ಯದ ಔಷಧಿ ಕೇವಲ ಅಮೆರಿಕಕ್ಕೆ ಹೋಗಿದೆ ಎಂದು ಕೈಗಾರಿಕಾ ಸಂಸ್ಥೆಯಾದ ಫಾರ್ಮಾಸ್ಯುಟಿಕಲ್ಸ್ ಎಕ್ಸ್‌ಪೋರ್ಟ್ ಪ್ರಮೋಷನ್ ಕೌನ್ಸಿಲ್ ಆಫ್ ಇಂಡಿಯಾ ತಿಳಿಸಿದೆ. 2025 ರ ಮೊದಲಾರ್ಧದಲ್ಲಿ ಮಾತ್ರ $3.7 ಶತಕೋಟಿ (ರೂ. 32,505 ಕೋಟಿ) ಮೌಲ್ಯದ ಔಷಧ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ.

ವರದಿಗಳ ಪ್ರಕಾರ, ಅಮೆರಿಕದಲ್ಲಿ ಬಳಸುವ ಜೆನೆರಿಕ್ ಔಷಧಿಗಳಲ್ಲಿ ಶೇ.45 ಕ್ಕಿಂತ ಹೆಚ್ಚು ಮತ್ತು ಬಯೋಸಿಮಿಲರ್ ಔಷಧಿಗಳಲ್ಲಿ ಶೇ.15 ಕ್ಕಿಂತ ಹೆಚ್ಚು ಔಷಧಿಯನ್ನು ಭಾರತವೇ ಪೂರೈಸುತ್ತದೆ. ಡಾ. ರೆಡ್ಡೀಸ್, ಅರಬಿಂದೋ ಫಾರ್ಮಾ, ಜೈಡಸ್ ಲೈಫ್ ಸೈನ್ಸಸ್, ಸನ್ ಫಾರ್ಮಾ ಮತ್ತು ಗ್ಲಾಂಡ್ ಫಾರ್ಮಾದಂತಹ ಸಂಸ್ಥೆಗಳು ತಮ್ಮ ಒಟ್ಟು ಆದಾಯದ ಶೇ.30ರಿಂದ 50 ರಷ್ಟು ಹಣವನ್ನು ಅಮೆರಿಕನ್ ಮಾರುಕಟ್ಟೆಯಿಂದಲೇ ಗಳಿಸುತ್ತಿವೆ ಎಂದು ವರದಿಯಾಗಿದೆ.

ಅಮೆರಿಕದ ಇತ್ತೀಚಿನ ಈ ಸುಂಕಗಳು ಮುಖ್ಯವಾಗಿ ಬಹುರಾಷ್ಟ್ರೀಯ ದೈತ್ಯ ಕಂಪನಿಗಳಿಂದ ಪ್ರಾಬಲ್ಯ ಹೊಂದಿರುವ ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಿಗಳನ್ನು ಗುರಿಯಾಗಿಸಿಕೊಂಡಂತೆ ಕಂಡುಬಂದರೂ ಭಾರತದ ಸಂಕೀರ್ಣ ಜೆನೆರಿಕ್ ಮತ್ತು ವಿಶೇಷ ಔಷಧಿಗಳು ಕೂಡ ಈ ತೆರಿಗೆ ವಾರ್ ಅಡಿಯಲ್ಲಿ ಬರುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಅಮೆರಿಕದ ಗ್ರಾಹಕರು ಭಾರತದಲ್ಲಿ ತಯಾರಾಗುವ ಕಡಿಮೆ ಬೆಲೆಯ ಜೆನೆರಿಕ್‌ ಔಷಧಿಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ ಅಮೆರಿಕಾ ಔಷಧಿ ಕಂಪನಿಗಳ ಮೇಲೆ ವಿಧಿಸುತ್ತಿರುವ ಹೆಚ್ಚಿನ ಸುಂಕಗಳು ದೇಶದಲ್ಲಿ ಬೆಲೆ ಏರಿಕೆ, ಹಣದುಬ್ಬರ ಮತ್ತು ಔಷಧ ಕೊರತೆಗೆ ಕಾರಣವಾಗಬಹುದು. ಈ ಮಧ್ಯೆ ಅಮೆರಿಕದ ಜೆನೆರಿಕ್ ಕ್ಷೇತ್ರದಲ್ಲಿ ಕಡಿಮೆ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಭಾರತೀಯ ಕಂಪನಿಗಳು ವೆಚ್ಚಗಳನ್ನು ಭರಿಸಲು ಹೆಣಗಾಡಬಹುದು ಮತ್ತು ಅಂತಿಮವಾಗಿ ಅವುಗಳನ್ನು ಅಮೆರಿಕದ ಗ್ರಾಹಕರು ಅಥವಾ ವಿಮಾದಾರರಿಗೆ ವರ್ಗಾಯಿಸಬಹುದು. ಟ್ರಂಪ್ ಈಗಾಗಲೇ ಭಾರತೀಯ ವಸ್ತುಗಳ ಆಮದಿನ ಮೇಲೆ ಶೇ. 50 ರಷ್ಟು ಸುಂಕವನ್ನು ವಿಧಿಸಿದ್ದಾರೆ, ಇದರಲ್ಲಿ ರಷ್ಯಾದ ತೈಲವನ್ನು ನಿರಂತರವಾಗಿ ಖರೀದಿಸುವುದಕ್ಕೆ ಶೇ. 25 ರಷ್ಟು ದಂಡವೂ ಸೇರಿದೆ.

ಇದನ್ನೂ ಓದಿ: 15 ದಿನದ ಮಗುವಿನ ತುಟಿಗೆ ಗಮ್ ಅಂಟಿಸಿ ಕಾಡಲ್ಲಿ ಬಿಟ್ಟ ಕಟುಕರು

ಇದನ್ನೂ ಓದಿ: ಪ್ಲೇಹೋಮ್‌ನಲ್ಲಿ 3 ವರ್ಷದ ಕಂದನ ಮೇಲೆ ಶಿಕ್ಷಕಿಯ ಹಲ್ಲೆ: ವೀಡಿಯೋ ವೈರಲ್ ಬಳಿಕ ಪೋಷಕರ ಗಮನಕ್ಕೆ ಘಟನೆ

ಇದನ್ನೂ ಓದಿ: ನೋವೆಂದು ಬಂದವನ ಸ್ಕ್ಯಾನ್ ಮಾಡಿದ ವೈದ್ಯರಿಗೆ ಶಾಕ್: ಒಳಗಿತ್ತು 29 ಚಮಚ, 19 ಬ್ರಶ್, 2 ಪೆನ್

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!