20 ರೂಪಾಯಿ ರೀಚಾರ್ಜ್‌, 4 ತಿಂಗಳ ವ್ಯಾಲಿಡಿಟಿ; ಗ್ರಾಹಕರು ಫುಲ್ ಜಿಂಗಾ ಲಾಲಾ

Published : Jan 20, 2025, 12:18 PM IST
20 ರೂಪಾಯಿ ರೀಚಾರ್ಜ್‌, 4 ತಿಂಗಳ ವ್ಯಾಲಿಡಿಟಿ; ಗ್ರಾಹಕರು ಫುಲ್ ಜಿಂಗಾ ಲಾಲಾ

ಸಾರಾಂಶ

TRAI ಹೊಸ ನಿಯಮದ ಪ್ರಕಾರ, ಕೇವಲ ₹20 ರೀಚಾರ್ಜ್‌ನಲ್ಲಿ 4 ತಿಂಗಳ ವ್ಯಾಲಿಡಿಟಿ ಪಡೆಯಬಹುದು. 4 ತಿಂಗಳ ಬಳಿಕ ಗ್ರಾಹಕರಿಗೆ ಹೆಚ್ಚುವರಿಯಾಗಿ 15 ದಿನದ ಕಾಲಾವಕಾಶ ನೀಡಲಾಗುತ್ತದೆ.

ನವದೆಹಲಿ: ಇಂದು ಎಲ್ಲರೂ ಎರಡು ಸಿಮ್ ಕಾರ್ಡ್ ಬಳಕೆ ಮಾಡುತ್ತಾರೆ.  ಆದ್ರೆ 2024-ಜುಲೈನಿಂದ ಬೆಲೆ ಏರಿಕೆಯಾಗಿದ್ದರಿಂದ ಬಳಕೆದಾರರು ಒಂದು ಸಿಮ್‌ನ್ನು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡಿಕೊಳ್ಳಲು ಆರಂಭಿಸಿದರು. ಒಂದಿಷ್ಟು ಮಂದಿ ಒಂದು ಸಿಮ್ ಕಾರ್ಡ್ ಬ್ಲಾಕ್ ಸಹ ಮಾಡಿಕೊಂಡರು. ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ TRAI ಗುಡ್‌ನ್ಯೂಸ್ ನೀಡಿದೆ. TRAI ನಿಯಮದ ಪ್ರಕಾರ, ಇನ್ಮುಂದೆ ಗ್ರಾಹಕರು ಕಡಿಮೆ ಬೆಲೆಯಲ್ಲಿ ದೀರ್ಘಾವಧಿಯವರೆಗೆ ಸಿಮ್ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. 

ಸಾಮಾನ್ಯವಾಗಿ ಎಲ್ಲರೂ ಸೆಕೆಂಡರಿ ಸಿಮ್‌ ತಮ್ಮ ಖಾಸಗಿಯಾಗಿರಿಸಿಕೊಂಡಿರುತ್ತಾರೆ. ಅತ್ಯಾಪ್ತರೊಂದಿಗೆ ಮಾತ್ರ ಈ ನಂಬರ್ ಶೇರ್ ಮಾಡಿಕೊಂಡಿರುತ್ತಾರೆ. ಬೆಲೆ ಏರಿಕೆಯಾಗಿದ್ದರಿಂದ ಬಹುತೇಕರು ಎರಡನೇ ಸಿಮ್ ನಿಷ್ಕ್ರಿಯಗೊಳಿಸಲು ಮುಂದಾಗಿದ್ದರು. ಸಿಮ್ ಆಕ್ಟಿವ್ ಮಾಡಿಕೊಳ್ಳಲು ಕನಿಷ್ಠ  200 ರೂಪಾಯಿ ರೀಚಾರ್ಜ್ ಮಾಡಿಕೊಳ್ಳುವ ಕಾಲ ಬಂದಾಗಿತ್ತು. ಆದ್ರೆ ಇದೀಗ ಟೆಲಿಕಾಂ ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ, ಜಿಯೋ, ಏರ್‌ಟೈಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ ಗುಡ್‌ನ್ಯೂಸ್ ನೀಡಿದೆ. TRAI ಹೊಸ ನಿಯಮದಿಂದಾಗಿ ಗ್ರಾಹಕರಿಗೆ ಬೆಲೆ ಏರಿಕೆ ಸಂಕಷ್ಟದಿಂದ ನಿರಾಳತೆ ಅನುಭವಿಸುವಂತಾಗಲಿದೆ. 

ರೀಚಾರ್ಜ್ ಪ್ಲಾನ್ ಮುಕ್ತಾಯವಾದ ಬಳಿಕ ಸಿಮ್ ನಿಷ್ಕ್ರಿಯ ಮಾಡಲಾಗುತ್ತೆ ಎಂಬ ಭಯದಿಂದ ಜನರು ಹೆಚ್ಚುವರಿ  ಬೆಲೆಯ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುತ್ತಿದ್ದರು. ನೀವು ತ್ವರಿತ ರೀಚಾರ್ಜ್‌ನ ಒತ್ತಡವನ್ನು ತಪ್ಪಿಸಲು ಬಯಸಿದರೆ, TRAI ಮೊಬೈಲ್ ಬಳಕೆದಾರರ ಗ್ರಾಹಕ ಹ್ಯಾಂಡ್‌ಬುಕ್ (TRAI consumer handbook) ಪ್ರಕಾರ, ರೀಚಾರ್ಜ್ ಮುಗಿದ ನಂತರ ನಿಮ್ಮ SIM 90 ದಿನಗಳವರೆಗೆ ಸಕ್ರಿಯವಾಗಿರುತ್ತದೆ. 90 ದಿನಗಳ ಬಳಿಕ ನಿಮಗೆ ಆಯಾ ನೆಟ್‌ವರ್ಕ್ ಸಿಬ್ಬಂದಿಯಿಂದ ಕರೆ ಮಾಡಲಾಗುತ್ತದೆ. ನಿಮ್ಮ ಪ್ಲಾನ್ ಮುಕ್ತಾಯವಾದ  ಬಳಿಕ ಅಂದ್ರೆ  3 ತಿಂಗಳು ಕಾಲ ಸಿಮ್ ಆಕ್ಟಿವ್ ಆಗಿರುತ್ತದೆ.  

20 ರೂಪಾಯಿಗೆ 4 ತಿಂಗಳ ವ್ಯಾಲಿಡಿಟಿ
ಟೆಲಿಕಾಂ ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ ನಿಯಮಗಳ ಪ್ರಕಾರ, ಯಾವುದೇ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳದಿದ್ದರೂ ನಿಮ್ಮ ಸಿಮ್ 90 ದಿನ ಚಾಲ್ತಿಯಲ್ಲಿರುತ್ತದೆ. 90 ದಿನದ ನಂತರವೂ ಯಾವುದೇ ರೀಚಾರ್ಜ್ ಮಾಡಿಕೊಳ್ಳದಿದ್ದಾಗ, ಒಂದು ವೇಳೆ ನಿಮ್ಮ ಸಿಮ್‌ ನಲ್ಲಿ 20 ರೂಪಾಯಿ ಪ್ರೀಪೇಯ್ಡ್ ಬ್ಯಾಲೆನ್ಸ್ ಇದ್ರೆ ಕಂಪನಿ ಆ ಹಣವನ್ನು ಕಡಿತಗೊಳಿಸುತ್ತದೆ. 20 ರೂಪಾಯಿ ಕಡಿತದ ಬಳಿಕ ಸಿಮ್ ವ್ಯಾಲಿಡಿಟಿಯನ್ನು 30 ದಿನಕ್ಕೆ ಏರಿಕೆ ಮಾಡಲಾಗುತ್ತದೆ.  ಅಂದರೆ ಯಾವುದೇ ಪ್ಲಾನ್ ಇರದಿದ್ರೂ ನಿಮ್ಮ ಸಿಮ್ 120 ದಿನ ಅಂದ್ರೆ 4 ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಕೇವಲ 20 ರೂಪಾಯಿಯಲ್ಲಿ 4 ತಿಂಗಳ ವ್ಯಾಲಿಡಿಟಿ ನಿಮ್ಮದಾಗುತ್ತದೆ. 

ಇದನ್ನೂ ಓದಿ: ಕೇವಲ 10 ರೂಪಾಯಿಯಲ್ಲಿ ಇಡೀ ವರ್ಷ ಸಿಮ್ ಆಕ್ಟಿವ್ ಮಾಡಿಕೊಳ್ಳಿ - TRAI ಹೊಸ ನಿಯಮ

ಹೆಚ್ಚುವರಿ 15 ದಿನದ ಅವಕಾಶ
TRAI ಪ್ರಕಾರ, ಈ 120 ದಿನಗಳ ನಂತರ, ಸಿಮ್ ಕಾರ್ಡ್ ಬಳಕೆದಾರರಿಗೆ ತಮ್ಮ ಸಂಖ್ಯೆಯನ್ನು ಪುನಃ ಆಕ್ಟಿವ್ ಮಾಡಿಕೊಳ್ಳಲು 15 ದಿನಗಳನ್ನು ನೀಡಲಾಗುತ್ತದೆ. ಆದಾಗ್ಯೂ, ಈ 15 ದಿನಗಳೊಳಗೆ ಬಳಕೆದಾರರು ತಮ್ಮ ಸಂಖ್ಯೆಯನ್ನು ಸಕ್ರಿಯಗೊಳಿಸದಿದ್ದರೆ, ನಂತರ ಅವರ ಸಂಖ್ಯೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ. ಒಮ್ಮೆ ನಿಮ್ಮ ಸಂಖ್ಯೆ ನಿಷ್ಕ್ರಿಯಗೊಂಡ ನಂತರ ಆ ನಂಬರ್ ಮತ್ತೊಬ್ಬರಿಗೆ ವರ್ಗಾಯಿಸಲಾಗುತ್ತದೆ.

ಜನವರಿ 23ರಿಂದ ಎಲ್ಲಾ ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಲಿವೆ. ಈಗಾಗಲೇ ಟೆಲಿಕಾಂ ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ ಭಾರತದ ನಾಲ್ಕು ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೈಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್‌ಗೆ ಖಡಕ್ ಸೂಚನೆಯನ್ನು ನೀಡಿದೆ.

ಇದನ್ನೂ ಓದಿ: BSNL ಬಳಕೆದಾರರಿಗೆ ಗುಡ್‌ನ್ಯೂಸ್ ಶೀಘ್ರದಲ್ಲೇ ಬರಲಿದೆ 4G ಇ-ಸಿಮ್! ಏನಿದರ ವಿಶೇಷತೆ?

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ