
ಮುಂಬೈ (ಜ.19): ಬಾಂಬೆ ಷೇರುಪೇಟೆಯಲ್ಲಿ ಶುಕ್ರವಾರ ಇನ್ಫೋಸಿಸ್ ಷೇರುಬೆಲೆ ಶೇ.6ರಷ್ಟು ಭಾರೀ ಕುಸಿತ ಕಂಡ ಪರಿಣಾಮ, ಕಂಪನಿಯ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಕುಟುಂಬಕ್ಕೆ ಒಂದೇ ದಿನದಲ್ಲಿ 1850 ಕೋಟಿ ರು.ನಷ್ಟು ಭಾರೀ ನಷ್ಟ ಸಂಭವಿಸಿದೆ.
ಕಂಪನಿಯಲ್ಲಿ ನಾರಾಯಣ ಮೂರ್ತಿ ಕುಟುಂಬ ಶೇ.4.02ರಷ್ಟು ಷೇರು ಪಾಲು ಹೊಂದಿದೆ. ಇದರ ಮೌಲ್ಯ ಅಂದಾಜು 30300 ಕೋಟಿ ರು.ನಷ್ಟಿದೆ. ಆದರೆ ಕಂಪನಿಯ ತ್ರೈಮಾಸಿಕ ವರದಿ ನಿರೀಕ್ಷೆಗಿಂತ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಶುಕ್ರವಾರ ಇನ್ಫೋಸಿಸ್ ಷೇರು ಮೌಲ್ಯ ಶೇ.6ರಷ್ಟು ಭಾರೀ ಇಳಿಕೆ ಕಂಡಿತ್ತು. ಪರಿಣಾಮ ನಾರಾಯಣ ಮೂರ್ತಿ ಅವರ ಕುಟುಂಬದ ಹೊಂದಿರುವ ಷೇರುಗಳ ಮೌಲ್ಯ 1850 ಕೋಟಿ ರು.ನಷ್ಟು ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ₹50 ಕೋಟಿ ಅಪಾರ್ಟ್‌ಮೆಂಟ್ ಖರೀದಿಸಿ ವ್ಯಾಪಕ ಟೀಕೆಗೆ ಗುರಿಯಾದ ನಾರಾಯಣಮೂರ್ತಿ
ಸಹ-ಸಂಸ್ಥಾಪಕ ಮತ್ತು ಪ್ರವರ್ತಕ ಎನ್‌ಆರ್ ನಾರಾಯಣ ಮೂರ್ತಿ (ಎನ್‌ಆರ್‌ಎನ್) ಅವರು ಇನ್ಫೋಸಿಸ್‌ನಲ್ಲಿ ಶೇಕಡಾ 0.40 ರಷ್ಟು ಷೇರುಗಳನ್ನು ಹೊಂದಿದ್ದಾರೆ, ಆದರೆ ಅವರ ಪತ್ನಿ ಸುಧಾ ಎನ್ ಮೂರ್ತಿ ಅವರು ಸೆಪ್ಟೆಂಬರ್ ತ್ರೈಮಾಸಿಕದ ಕೊನೆಯಲ್ಲಿ ಐಟಿ ಮೇಜರ್‌ನಲ್ಲಿ ಶೇಕಡಾ 0.92 ರಷ್ಟು ಪಾಲನ್ನು ಹೊಂದಿದ್ದರು. ಅವರ ಮಗ ರೋಹನ್ ಮೂರ್ತಿ ಮತ್ತು ಮಗಳು ಅಕ್ಷತಾ ಮೂರ್ತಿ ಅವರು ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ಅವರ ಪತ್ನಿಯೂ ಆಗಿದ್ದು, ಎರಡನೇ ಅತಿ ದೊಡ್ಡ ಐಟಿ ಸಂಸ್ಥೆಯಲ್ಲಿ ಕ್ರಮವಾಗಿ ಶೇ 1.62 ಮತ್ತು ಶೇ 1.04 ಷೇರುಗಳನ್ನು ಹೊಂದಿದ್ದಾರೆ. ಎನ್‌ಆರ್‌ಎನ್‌ನ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿ ಅವರು ಇನ್ಫೋಸಿಸ್‌ನಲ್ಲಿ 0.04 ಶೇಕಡಾ ಪಾಲನ್ನು ಹೊಂದಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.